ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣ ಪ್ರಮಾಣದ ಪ್ರತಿಕೃತಿ ಅನಾವರಣ

Team Udayavani, Jun 1, 2023, 9:05 PM IST

ಅಮೇರಿಕ-ಭಾರತ ಬಾಂಧವ್ಯದಿಂದ ಯುವಕರಿಗೆ ಒಳಿತು: ಜುಡಿತ್‌ ರೇವಿನ್

ಬೆಂಗಳೂರು: ಎರಡು ದಶಕಗಳ ಹಿಂದೆ ಕೆಂಪು ಗ್ರಹದಲ್ಲಿ ನೀರಿನ ಕುರುಹಿದೆಯೇ ಎಂಬುದನ್ನು ಪತ್ತೆ ಹಚ್ಚಲು ನಾಸಾ ಮಾರ್ಸ್‌ ಆಪರ್ಚುನಿಟಿ ರೋವರ್‌ ಅನ್ನು ಕಳುಹಿಸಿತು. ಇಂದು ಅದರ ಪೂರ್ಣ ಪ್ರಮಾಣದ ಪ್ರತಿಕೃತಿಯು ಮುಂದಿನ ಪೀಳಿಗೆಯ ಬಾಹ್ಯಾಕಾಶ ಪರಿಶೋಧಕರಿಗೆ ಪ್ರೇರಣೆ ನೀಡಲು ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯಕ್ಕೆ ಬಂದಿಳಿದಿದೆ.

ಯು.ಎಸ್‌. ಅಂಡರ್‌ ಸೆಕ್ರೆಟರಿ ಆಫ್‌ ಕಾಮರ್ಸ್‌ ಫಾರ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಮರಿಸಾ ಲಾಗೊ, ಚೆನ್ನೈನ ಯು.ಎಸ್‌. ಕಾನ್ಸಲ್‌ ಜನರಲ್‌ ಜುಡಿತ್‌ ರೇವಿನ್, ಬೆಂಗಳೂರಿನಲ್ಲಿರುವ ಯು.ಆರ್‌. ರಾವ್‌ ಸ್ಯಾಟಲೈಟ್‌ ಸೆಂಟರ್‌ನ ಡೈರೆಕ್ಟರ್‌ ಡಾ.ಎಂ. ಶಂಕರನ್‌, ಮತ್ತು ಜೆಟ್‌ ಪ್ರೊಪಲ್ಶನ್‌ ಲ್ಯಾಬೊರೆಟರಿಯ ನಿಸಾರ್‌ ಮಿಷನ್‌ ಸಿಸ್ಟಂ ಮ್ಯಾನೇಜರ್‌ ಆನ ಮರಿಯ ಗುರ್ರೆರೊ ಅವರು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ಸ್ಪೇಸ್‌ ಗ್ಯಾಲರಿಯಲ್ಲಿ ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣ ಪ್ರಮಾಣದ ಪ್ರತಿಕೃತಿಯನ್ನು ಗುರುವಾರ, ಜೂನ್‌ 1 ರಂದು ಅನಾವರಣ ಮಾಡಿದರು.

ಯು.ಎಸ್‌. ಅಂಡರ್‌ ಸೆಕ್ರೆಟರಿ ಆಫ್‌ ಕಾಮರ್ಸ್‌ ಫಾರ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಮರಿಸಾ ಲಾಗೊ, “ಅತ್ಯಂತ ಕೀಲಕ ವಲಯಗಳಲ್ಲಿ ಅಮೇರಿಕ ಮತ್ತು ಭಾರತಗಳ ಸಹಕಾರ ಇನ್ನಷ್ಟು ನಿಕಟವಾಗಿದೆ. ಬಾಹ್ಯಾಕಾಶ ವಲಯವು ನಮ್ಮ ಸಹಭಾಗಿತ್ವಕ್ಕೆ ಮತ್ತೊಂದು ಉದಾಹರಣೆ. ಇಂದಿನ ಅನಾವರಣ ಸಮಾರಂಭವು ಪರಸ್ಪರರ ಬದ್ಧತೆಯ ಸಂಕೇತವಾಗಿದೆ.” ಎಂದರು.

ಇದಕ್ಕೂ ಮುನ್ನ ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣಪ್ರಮಾಣದ ಮಾದರಿಯನ್ನು ಅಮೇರಿಕದ ಕಾರ್ನೆಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ರೂಪಿಸಿದ್ದಾರೆ. ಅಮೇರಿಕದಲ್ಲಿನ ವರ್ಜಿನಿಯದ ಡಲ್ಲಾಸ್‌ನಲ್ಲಿರುವ ಸ್ಮಿತ್‌ಸೋನಿಯನ್‌ ಅವರ ಏರ್‌ ಅಂಡ್‌ ಸ್ಪೇಸ್‌ ಮ್ಯೂಸಿಯಂನಲ್ಲಿ, 2020ರ ದುಬೈ ವರ್ಲ್ಡ್‌ ಎಕ್ಸ್‌ಪೊದಲ್ಲಿ, ಮತ್ತು ಚೆನ್ನೈ ದೂತಾವಾಸದಲ್ಲಿನ ಅಮೆರಿಕನ್‌ ಸೆಂಟರ್‌ನಲ್ಲಿ ಪ್ರದರ್ಶಿಸಲಾಗಿತ್ತು.

ಯುವ ಜನಾಂಗಕ್ಕೆ ಸ್ಫೂರ್ತಿ ತುಂಬುವಲ್ಲಿ ಬಾಹ್ಯಾಕಾಶ ಪರಿಶೋಧನೆಯ ಬಗ್ಗೆ ಮಾತನಾಡಿದ ಚೆನ್ನೈನಲ್ಲಿನ ಯು.ಎಸ್‌. ಕಾನ್ಸಲ್‌ ಜನರಲ್‌ ಜುಡಿತ್‌ ರೇವಿನ್, “ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌, ಮತ್ತು ಗಣಿತ (STEM) ಶಿಕ್ಷಣವನ್ನು ಪ್ರೋತ್ಸಾಹಿಸಲು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ನಡೆಸುತ್ತಿರುವ ಪ್ರಯತ್ನಗಳನ್ನು ಬೆಂಬಲಿಸಲು ಯು.ಎಸ್‌ ಕಾನ್ಸಲೇಟ್‌ ಜನರಲ್‌ ಹೆಮ್ಮೆ ಪಡುತ್ತದೆ. ಮಾರ್ಸ್‌ ಆಪರ್ಚುನಿಟಿ ರೋವರ್‌ನ ಪೂರ್ಣಪ್ರಮಾಣದ ಮಾದರಿಯ ಪ್ರದರ್ಶನದ ಮೂಲಕ ಮುಂದಿನ ಪೀಳಿಗೆಯ ಸಂಶೋಧಕರಿಗೆ ಸ್ಫೂರ್ತಿ ನೀಡುವ ಆಶಯ ನಮ್ಮದು.”

ಮಾತು ಮುಂದುವರಿಸಿದ ರೇವಿನ್‌ ಅವರು, “ಭಾರತಕ್ಕೆ ಮಾರ್ಸ್‌ರೋವರ್‌ ಆಪರ್ಚುನಿಟಿಯ ಪೂರ್ಣ ಪ್ರಮಾಣದ ಪ್ರತಿಕೃತಿಯ ಆಗಮನವು  ಭಾರತ ಮತ್ತು ಅಮೇರಿಕಗಳ ನಡುವಣ ದೀರ್ಘಕಾಲೀನ ಬಾಹ್ಯಾಕಾಶ ಸಹಕಾರದ ಪ್ರತೀಕವಾಗಿದೆ. ಅಮೇರಿಕಕ್ಕೆ ಬಾಹ್ಯಾಕಾಶ ವಲಯದಲ್ಲಿ ಭಾರತವು ಬಹುಮುಖ್ಯ ಸಹಭಾಗಿ. 2005 ರಲ್ಲಿ ಆರಂಭವಾದ ಅಮೇರಿಕ ಭಾರತ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆಯು ನಾಗರಿಕ ಬಾಹ್ಯಾಕಾಶ ಸಹಕಾರಕ್ಕಾಗಿ ಹೊಸ ಮತ್ತು ವಿಸ್ತೃತ ಕ್ಷೇತ್ರಗಳ ಕುರಿತು ರಚನಾತ್ಮಕ ದೃಷ್ಟಿಕೋನ ಮತ್ತು ಚರ್ಚೆಯ ವಿನಿಮಯದ ಸ್ಥಳವಾಗಿದೆ. ಈ ವಿಷಯದ ಸಂಬಂಧ ಉಭಯ ದೇಶಗಳ ನಡುವಿನ ಮಾತುಕತೆಯ ಆಧಾರದಲ್ಲಿ ನಾಲ್ಕು ಕಾರ್ಯಪಡೆಗಳನ್ನು ಮಾಡಲಾಗಿದೆ: ಭೂವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆ, ಹಿಲಿಯೊಫಿಸಿಕ್ಸ್‌, ಮತ್ತು ಮಾನವನ ಬಾಹ್ಯಾಕಾಶ ಯಾತ್ರೆ. ಎರಡೂ ದೇಶಗಳ ನಡುವಣ ಸಹಕಾರದಲ್ಲಿ ಅಭಿವೃದ್ದಿ ಪಡಿಸಿದ ಬಾಹ್ಯಾಕಾಶ ಸಂಶೋಧನೆಗಳು ನಿಜಜೀವನದಲ್ಲಿ ಅಳವಡಿಸಿಕೊಳ್ಳಬಹುದಾಗಿದ್ದು, ದೂರಸಂಪರ್ಕ ಮತ್ತು ಉಪಗ್ರಹ ನ್ಯಾವಿಗೇಷನ್‌ನಲ್ಲಿನ ಪ್ರಗತಿಯಿಂದ ಕೃಷಿ ಮೇಲ್ವಿಚಾರಣೆ ಮತ್ತು ಹವಾಮಾನ ಮುನ್ಸೂಚನೆಯವರೆಗೆ ನಮ್ಮೆಲ್ಲರ ದೈನಂದಿನ ಬದುಕಿನ ಮೇಲೆ ಪ್ರಭಾವ ಬೀರುತ್ತವೆ. ನಮ್ಮ ಅಮೇರಿಕ ಮತ್ತು ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಜಗತ್ತನ್ನು ಬದಲಾಯಿಸಲು ಒಟ್ಟಾಗಿ ಕೆಲಸ ಮಾಡುವ ಅವಕಾಶವನ್ನು ಹೊಂದಿದ್ದಾರೆ.”

ಇದೇ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ನಿರ್ದೇಶಕಿ ಕೆ.ಎ. ಸಾಧನ, “ವಿಐಟಿಎಂನ ಬಾಹ್ಯಾಕಾಶ ಗ್ಯಾಲರಿಯಲ್ಲಿ ನಾಸಾದ ಮಾರ್ಸ್‌ ರೋವರ್‌ ಆಪರ್ಚುನಿಟಿಯ ಪೂರ್ಣ ಪ್ರಮಾಣದ ಪ್ರತಿಕೃತಿಯ ಪ್ರದರ್ಶನ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಿ, ಬಾಹ್ಯಾಕಾಶ ಪರಿಶೋಧನೆಯ ಅದ್ಭುತಗಳನ್ನು ಕಲಿಯಲು ಮತ್ತು ಸ್ಫೂರ್ತಿ ಪಡೆಯಲು ಸಮುದಾಯಕ್ಕೆ ಒಂದು ಅನನ್ಯ ಅವಕಾಶವನ್ನು ಸೃಷ್ಟಿಸುತ್ತದೆ,” ಎಂದರು.

ಇದನ್ನೂ ಓದಿ: Writer ಬಂಜಗೆರೆ ಜಯಪ್ರಕಾಶ್ ಅವರಿಗೆ ಮತ್ತೊಂದು ಜೀವ ಬೆದರಿಕೆ ಪತ್ರ

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.