“ಮನೆ ಬಾಗಿಲಿಗೆ ವ್ಯಾಕ್ಸಿನೇಶನ್’ ಬಿಎಂಸಿ ಅಭಿಯಾನಕ್ಕೆ ಹಲವು ಸವಾಲುಗಳು
Team Udayavani, Jul 8, 2021, 12:55 PM IST
ಮುಂಬಯಿ: ಮನಪಾ ಆಡಳಿತವು ಹಾಸಿಗೆ ಹಿಡಿದಿರುವ ರೋಗಿಗಳು, ಹಿರಿಯ ನಾಗರಿಕರು ಅಥವಾ ಅಂಗವಿಕಲರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿದೆ. ಮನೆಗಳಿಂದ ಹೊರಬರಲಾಗದ ನಾಗರಿಕರಿಗೆ ಲಸಿಕೆ ಹಾಕಲು ನಿರ್ಧರಿಸಿದ್ದು, ಬಿಎಂಸಿ ಅದಕ್ಕೆ ಸಿದ್ಧತೆ ನಡೆಸುತ್ತಿದೆ. ಆದರೂ ನಿಜವಾದ ಅನುಷ್ಠಾನವು ರಾಜ್ಯ ಸರಕಾರದ ಅನುಮೋದನೆ ಬಳಿಕವೇ ನಡೆಯಲಿದೆ.
ಸಂಚರಿಸಲು ಸಾಧ್ಯವಾಗದ ಅಥವಾ ತಿಂಗಳುಗಟ್ಟಲೆ ಮಲಗಿದ್ದಲ್ಲೇ ಇರುವವರಿಗೆ ಮನೆಯಲ್ಲಿ ಲಸಿಕೆ ನೀಡಬಹುದೇ ಎಂದು ರಾಜ್ಯ ಸರಕಾರ ಚಿಂತನೆ ನಡೆಸುತ್ತಿತ್ತು. ಅದರಂತೆ ಇತ್ತೀಚೆಗೆ ಪುಣೆಯಲ್ಲಿ ಮನೆ ಬಾಗಿಲಿಗೆ ವ್ಯಾಕ್ಸಿನೇಶನ್ ಅನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಗಿದೆ. ಸದ್ಯದಲ್ಲಿಯೇ ಮನೆಗೆ ಹೋಗಿ ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಲಸಿಕೆ ಹಾಕಲು ಬಿಎಂಸಿ ಆರೋಗ್ಯ ಇಲಾಖೆ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಮುಂಬಯಿಯಲ್ಲಿ ಪ್ರಸ್ತುತ ಅಂತಹ ರೋಗಿಗಳ ಸಂಖ್ಯೆ ಮಾಹಿತಿ ಇಲ್ಲ. ಆದ್ದರಿಂದ ಈ ರೋಗಿಗಳ ಮಾಹಿತಿಯನ್ನು ಸಂಗ್ರಹಿಸಲು ಬಿಎಂಸಿ ನಿರ್ಧರಿಸಿದೆ.
ಆರೋಗ್ಯ ಕಾರ್ಯಕರ್ತರ ಸಹಕಾರ
ಹಾಸಿಗೆ ಹಿಡಿದ ರೋಗಿಗಳಿಂದ ಅಥವಾ ವೈದ್ಯರಿಂದ ಮಾಹಿತಿಯನ್ನು ಪಡೆಯಲಾಗುತ್ತಿದೆ. ಇದಕ್ಕಾಗಿ ಆರೋಗ್ಯ ಕಾರ್ಯಕರ್ತರ ಸಹಾಯವನ್ನು ತೆಗೆದುಕೊಳ್ಳ ಲಾಗು ವುದು. ಆರೋಗ್ಯ ಕಾರ್ಯಕರ್ತರು ನಾಗರಿಕರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವು ದರಿಂದ ರೋಗಿಗಳು ಎಲ್ಲಿದ್ದಾರೆ ಮತ್ತು ಯಾರೆಂದು ಅವರಿಗೆ ತಿಳಿದಿದೆ. ಈ ಮಾಹಿತಿಯನ್ನು ಅವರಿಂದ ತೆಗೆದುಕೊಳ್ಳಲಾಗುವುದು. ಮಾಹಿತಿ ಪಡೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಸಿ ಅಧಿಕಾರಿ ಗಳು ತಿಳಿಸಿದ್ದಾರೆ.
ರಾಜ್ಯ ಸರಕಾರದ ನಿಯಮದ ಬಳಿಕ ಚಾಲನೆ
ಮಾಹಿತಿಯನ್ನು ಸಂಗ್ರಹಿಸಿದ ಬಳಿಕ ಎಷ್ಟು ರೋಗಿಗಳು ಮತ್ತು ಅವರು ಎಲ್ಲಿದ್ದಾರೆ ಎಂದು ಅಂದಾಜು ಮಾಡಲು ಸಾಧ್ಯವಾಗುತ್ತದೆ. ಆ ಆಧಾರದ ಮೇಲೆ ಯೋಜನೆ ಮಾಡಬಹುದು. ಅಲ್ಲಿಯವರೆಗೆ ರಾಜ್ಯ ಸರಕಾರದ ನಿಯಮಗಳು ಜಾರಿಗೆ ಬಂದ ಬಳಿಕವೇ ಗೃಹಾಧಾರಿತ ವ್ಯಾಕ್ಸಿನೇಶನ್ ಜಾರಿಗೆ ತರಲು ಸಾಧ್ಯವಾಗುತ್ತದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಾಕಾನಿ ಹೇಳಿದರು.
ಆರೋಗ್ಯ ಕಾರ್ಯಕರ್ತರ ಮೇಲೆ ಒತ್ತಡ
ಈ ಮಧ್ಯೆ ಮನೆ ಮನೆಗೆ ವ್ಯಾಕ್ಸಿನೇಶನ್ ಅಭಿಯಾನಕ್ಕೆ ಸವಾಲುಗಳು ಎದುರಾಗುವ ಸಾಧ್ಯತೆಯಿದೆ. ಆದ್ದರಿಂದ ಬಿಎಂಸಿ ಅಭಿಯಾನದ ಯಶಸ್ಸಿಗೆ ಎಚ್ಚರಿಕೆಯಿಂದ ತಯಾರಿ ನಡೆಸುತ್ತಿದೆ.
ರೋಗಿಯ ಮನೆಗೆ ಹೋಗಿ ಲಸಿಕೆ ನೀಡಲು ಲಸಿಕೆ ತೆರೆದರೆ ಉಳಿದ ಒಂಬತ್ತು ಡೋಸ್ ಅನ್ನು ಹೇಗೆ ಯೋಜಿಸುವುದು ಎಂಬ ಪ್ರಶ್ನೆ ಉದ್ಭವಿಸಿದೆ. ವ್ಯಾಕ್ಸಿನೇಶನ್ ಬಳಿಕ ರೋಗಿಯು ಅರ್ಧ ಗಂಟೆಯವರೆಗೆ ಕಾಯಬೇಕಾಗಿರುವುದು ಇದಕ್ಕೆ ಕಾರಣವಾಗಿದೆ. ಅಲ್ಲದೆ ಲಸಿಕೆಯನ್ನು ಮನೆಯಲ್ಲಿಯೇ ನೀಡಿದರೆ ಆರೋಗ್ಯ ಕಾರ್ಯಕರ್ತರ ಮೇಲೆ ಒತ್ತಡ ಹೇರುವ ಮೂಲಕ ಇದನ್ನು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.