ವಂದೇ ಭಾರತ್‌ ಮಿಷನ್‌ 1.17 ಲಕ್ಷ ಪ್ರಯಾಣಿಕರು ವಿದೇಶಗಳಿಂದ ಮುಂಬಯಿಗೆ ಆಗಮನ

Team Udayavani, Oct 3, 2020, 8:10 PM IST

ವಂದೇ ಭಾರತ್‌ ಮಿಷನ್‌ 1.17 ಲಕ್ಷ  ಪ್ರಯಾಣಿಕರು ವಿದೇಶಗಳಿಂದ ಮುಂಬಯಿಗೆ ಆಗಮನ

ಸಾಂದರ್ಭಿಕ ಚಿತ್ರ

ಮುಂಬಯಿ, ಅ. 2: ಕೇಂದ್ರ ಸರಕಾರದ ವಂದೇ ಭಾರತ್‌ ಅಭಿ ಯಾನದ ಭಾಗವಾಗಿ ಸೆ. 30ರ ವರೆಗೆ 1,045 ವಿಮಾನ ಯಾನಗಳ ಮೂಲಕ ವಿವಿಧ ದೇಶಗಳಿಂದ 1.17 ಲಕ್ಷ ಪ್ರಯಾಣಿಕರು ಮುಂಬಯಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಈ ಅಭಿಯಾನದಡಿಯಲ್ಲಿ ಅ. 31ರ ವರೆಗೆ 209 ಪ್ರಯಾಣಿಕರನ್ನು ಒಳಗೊಂಡ ಮತ್ತೂಂದು ಗುಂಪುಮುಂಬಯಿಗೆ ಆಗಮಿಸುವ ನಿರೀಕ್ಷೆಯಿದೆ. ಒಟ್ಟು ಪ್ರಯಾಣಿಕರಲ್ಲಿ 38,602 ಮಂದಿ ಮುಂಬಯಿ ಯಲ್ಲಿ ಉಳಿದರೆ, 37,201 ಮಂದಿ ಮುಂಬಯಿಗೆ ಆಗಮಿಸಿ ಮಹಾ ರಾಷ್ಟ್ರದ ಇತರ ಭಾಗಗಳಿಗೆ ತೆರಳಿದ್ದಾರೆ. ಅದೇ, ಉಳಿದ 41,630 ಪ್ರಯಾಣಿಕರು ಇತರ ರಾಜ್ಯಗಳಿಗೆ ಪ್ರಯಾಣಿಸಿದ್ದಾರೆ. ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀ ಯರನ್ನು ಮರಳಿ ಮನೆಗೆ ಕರೆತರಲು ಕೇಂದ್ರ ಸರಕಾರವು ಮೇ 7ರಂದು “ವಂದೇ ಭಾರತ್‌ ಮಿಷನ್‌’ ಅನ್ನು ಪ್ರಾರಂಭಿಸಿದೆ.  ಇತರ ರಾಜ್ಯಗಳ ಪ್ರಯಾಣಿಕರನ್ನು ಆಯಾ ರಾಜ್ಯಗಳಿಗೆ ಕಳುಹಿಸಲು ಅಗತ್ಯ ವ್ಯವಸ್ಥೆ ಮಾಡಲಾಯಿತು ಎಂದು ಮುಖ್ಯಮಂತ್ರಿ ಕಚೇರಿ ಅಧಿಕಾರಿ ತಿಳಿಸಿದ್ದಾರೆ.

ಇತರ ರಾಜ್ಯಗಳ ಪ್ರಯಾಣಿಕರು ಸಂಬಂಧಪಟ್ಟ ರಾಜ್ಯ ಗಳಿಂದ ಪ್ರಯಾಣ ಪಾಸ್‌ಗಳನ್ನು ಸ್ವೀಕರಿಸುವವರೆಗೆ ಮುಂಬಯಿಯ ಕ್ವಾರಂಟೈನ್‌ ಕೇಂದ್ರದಲ್ಲಿ ಉಳಿ ಯುವಂತೆ ಕೇಳಲಾಯಿತು ಎಂದು ಅಧಿಕಾರಿ ಹೇಳಿದ್ದಾರೆ. ಜಿಲ್ಲಾಕಾರಿಗಳು, ಉಪನಗರಗಳು, ಬೃಹನ್ಮುಂಬಯಿ ಮಹಾನಗರ ಪಾಲಿಕೆ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಬೆಸ್ಟ್, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹಯೋಗದೊಂದಿಗೆ ಇದನ್ನು ನಡೆಸಲಾಗುತ್ತಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದ ಬೆಂಬಲದೊಂದಿಗೆ ಮಹಾರಾಷ್ಟ್ರ ಸರಕಾರ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police

Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ

accident

Kasaragod; ಬಸ್‌-ಕಾರು ಢಿಕ್ಕಿ: ಇಬ್ಬರ ಸಾವು

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.