![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Mar 26, 2019, 8:10 PM IST
ಮುಂಬಯಿ: ಸಂಘಟನೆ ಯಿಂದ ಬಲಯುತರಾಗಿರಿ ಎನ್ನುವಂಥ ಧ್ಯೇಯೋದ್ದೇಶದಿಂದ ವಸಾಯಿ ಪರಿಸರದ ಸರ್ವ ಜಾತೀಯ ಬಂಧುಗಳನ್ನು ಒಂದುಗೂಡಿಸಿ ಪರಿಸರದಲ್ಲಿ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಮಾಡುತ್ತಿರುವ ವಸಾಯಿ ಕರ್ನಾಟಕ ಸಂಘ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 18ರಂದು ಸೈಂಟ್ ಗೊನ್ಸಾಲೊ ಗಾರ್ಸಿಯ ಆಶ್ರಮಕ್ಕೆ ಮಹಿಳಾ ವಿಭಾಗದ ಸದಸ್ಯೆಯರು ಭೇಟಿ ನೀಡಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ವೈವಿಧ್ಯಮಯ ಕಾರ್ಯ ಕ್ರಮಗಳೊಂದಿಗೆ ಆಚರಿಸಿದರು.
ಪ್ರಸ್ತುತ ವಸಾಯಿ ಪರಿಸರದ ಯಶಸ್ವಿ ಹೊಟೇಲ್ ಉದ್ಯಮಿ, ಹಿರಿಯರಾದ ಪಾಂಡು ಎಲ್. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಸಂಜೀವ ಮಲ್ಪೆಯವರ ನೇತೃತ್ವದಲ್ಲಿ ಅಧ್ಯಕ್ಷ ಪಾಂಡು ಎಲ್. ಶೆಟ್ಟಿ ಅವರ ಉಪಸ್ಥಿಯಲ್ಲಿ ಸೈಂಟ್ ಗೊನ್ಸಾಲೊ ಗಾರ್ಸಿಯ ಆಶ್ರಮದಲ್ಲಿರುವ ಮಕ್ಕಳಿಗೆ ಉಟೋಪಚಾರದ ವ್ಯವಸ್ಥೆ ಹಾಗೂ ದಿನೋಪಯೋಗಿ ವಸ್ತುಗಳನ್ನು ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಪೂರೈಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಸಂಜೀವ ಮಲ್ಪೆ, ಕಾರ್ಯದರ್ಶಿ ಪ್ರಮೀಳಾ ಎನ್ ಅಮೀನ್, ಕೋಶಾಧಿಕಾರಿ ರೇಖಾ ಆರ್. ಶೆಟ್ಟಿ ಮತ್ತು ಮಹಿಳಾ ವಿಭಾಗದ ಸರ್ವ ಕಾರ್ಯಕಾರಿ ಸಮಿತಿ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಸಹಕರಿಸಿದರು.
You seem to have an Ad Blocker on.
To continue reading, please turn it off or whitelist Udayavani.