ವಸಾಯಿರೋಡ್ ಜಿಎಸ್‌ಬಿ ಶಾಂತಿಧಾಮ ಸೇವಾ ಸಮಿತಿ: ಮಹಾಶಿವರಾತ್ರಿ
Team Udayavani, Mar 7, 2019, 12:50 AM IST
ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಮಾ. 4ರಂದು ಮಹಾಶಿವರಾತ್ರಿ ಉತ್ಸವವು ಅದ್ದೂರಿಯಾಗಿ ನಡೆಯಿತು.
ಪೂರ್ವಾಹ್ನ ಶಿವನ ಲಿಂಗಕ್ಕೆ ಭಸ್ಮಲೇಪನ, ಬಿಲ್ವಾರ್ಚನೆ, ಲಿಂಗಾಷ್ಟಕ, ಅಷ್ಟೋತ್ತರ, ವಿವಿಧ ಬಗೆಯ ಅಭಿಷೇಕ, ಸಮಿತಿಯ ವಿಶ್ವಸ್ತರಾದ ಅಭಿಜಿತ್ ನರಸಿಂಹ ಪ್ರಭು ಅವರ ಹಸ್ತದಿಂದ ಜರಗಿತು. ಸಂಜೆ ರುದ್ರಾಭಿಷೇಕ, ಪಂಚಾಮೃತ, ಹಾಲು, ಕಬ್ಬಿನ ರಸ, ಸೀಯಾಳ ಅಭಿಷೇಕ, ಬಿಲ್ವಾರ್ಚನೆ ಮತ್ತು ವಿವಿಧ ಪೂಜೆ ಸಮಿತಿಯ ವಿಶ್ವಸ್ತರಾದ ನರಸಿಂಹ ಅನಂತ ಪ್ರಭು ಅವರ ಹಸ್ತದಿಂದ ಜರಗಿತು.
ಸಮಿತಿಯ ವಿಶ್ವಸ್ತರಾದ ಲಕ್ಷ್ಮೀ ನರಸಿಂಹ ಪ್ರಭು ಅವರು ಶಿವನ ಅಷ್ಟೋತ್ತರ, ಮಹಾ ಮೃತ್ಯುಂಜಯ ಮಂತ್ರವನ್ನು ಸಾಮೂಹಿಕವಾಗಿ ಪಠಿಸಿ ಶಿವ
ರಾತ್ರಿಯ ಮಹಿಮೆಯ ಬಗ್ಗೆ ಭಕ್ತಾದಿಗಳಿಗೆ ವಿಸ್ತಾರವಾಗಿ ಹೇಳಿದರು. ಸಮಿತಿಯವರಿಂದ ಭಜನ ಕಾರ್ಯಕ್ರಮ ನಡೆಯಿತು.
ಮಂಡಳಿಯ ಸದಸ್ಯರು, ಶಿವನ ಭಜನೆಗಳನ್ನು ಹಾಡಿದರು. ತಬಲಾದಲ್ಲಿ ಅಭಿಜಿತ್ ಪ್ರಭು, ಪಖ್ವಾಜ್‌ನಲ್ಲಿ ಸನತ್ ಕುಮಾರ್ ಪ್ರಭು ಸಹಕರಿಸಿದರು. ಶಿವನ ಪ್ರತಿಮೆಗೆ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಲಾಯಿತು. ಪ್ರಸಾದ ರೂಪದಲ್ಲಿ ಮಧ್ಯಾಹ್ನ ಮತ್ತು ಸಂಜೆ ಫಲಾಹಾರದ ವ್ಯವಸ್ಥೆ ಯನ್ನು ಆಯೋಜಿಸಲಾಗಿತ್ತು.
ಅಭಿಜಿತ್ ಪ್ರಭು ಅವರನೇತೃತ್ವದಲ್ಲಿ ಅಲಂಕರಿಸಿದ ಶಿವನ ಮಂಟಪ ನೆರೆದ ಭಕ್ತಾದಿಗಳನ್ನು ಆಕರ್ಷಿಸಿತು. ಕಾರ್ಯಕ್ರಮದಲ್ಲಿ ಜಿಎಸ್‌ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು
BBK11: ಬಿಗ್ ಬಾಸ್ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ
Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್ ಮದುವೆ?
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.