ವಿದ್ವಾನ್ ವಿಶ್ವನಾಥ್ ಭಟ್ ಅವರ ಹರಿಕಥಾ ಸಪ್ತೋತ್ಸವ ಸಮಾರೋಪ
Team Udayavani, Sep 4, 2018, 4:03 PM IST
ಮುಂಬಯಿ: ನಗರದ ಧಾರ್ಮಿಕ ಸಂಸ್ಥೆಯಾಗಿರುವ ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನ ಮುಂಬಯಿ ಸಂಸ್ಥಾಪಕ ಕೈರಬೆಟ್ಟು ವಿಶ್ವನಾಥ್ ಭಟ್ ಅವರಿಂದ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ನಡೆದ ಹರಿಕಥಾ ಸಪೊ¤àತ್ಸವವು ಆ. 19ರಂದು ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದ ಅಂಗವಾಗಿ ಭಕ್ತ ಕುಂಬಾರ ಹರಿಕಥಾ ಕಾಲಕ್ಷೇಪ ನಡೆಯಿತು. ಹರಿಕಥೆಯ ಮಂಗಳಾರತಿಯ ಮೊದಲು ನಡೆದ ಸಭಾಕಾರ್ಯಕ್ರಮದಲ್ಲಿ ಹರಿಕಥಾ ವಿದ್ವಾನ್ ಕೈರಬೆಟ್ಟು ವಿಶ್ವನಾಥ್ ಭಟ್ ದಂಪತಿಯನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಪೇಜಾವರ ಮಠದ ಪ್ರಬಂಧಕ ವಿದ್ವಾನ್ ಪ್ರಕಾಶ್ ಆಚಾರ್ಯ ಅವರು ಮಾತನಾಡಿ, ಶ್ರಾವಣ ತಿಂಗಳಲ್ಲಿ ಹರಿಕಥಾ ಸಪೊ¤àತ್ಸವವನ್ನು ನಡೆಸಿ ಜನರಲ್ಲಿ ಭಕ್ತಿ ಭಾವ ಮೂಡುವಂತೆ ಮಾಡು ತ್ತಿರುವುದು ಅಭಿನಂದನೀಯ. ಅವರ ಈ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಹರಿಕೀರ್ತನೆಯ ವಿದ್ವತ್ತನ್ನು ಸಂಪೂರ್ಣ ಹೊಂದಿರುವ ವಿಶ್ವನಾಥ್ ಭಟ್ ಅವರು, ಪೇಜಾವರ ಶ್ರೀಗಳು ಹರಸಿದಂತೆ ವಿಶ್ವೇಶ್ವರದಾಸರಾಗಿ ಜನಜನಿತರಾಗಲಿ ಎಂದು ಹಾರೈಸಿದರು.
ಕುರ್ಲಾ ಪೂರ್ವ ಬಂಟರ ಭವನದಲ್ಲಿರುವ ಜ್ಞಾನ ಮಂದಿರದ ಪ್ರಧಾನ ಅರ್ಚಕ ಬನ್ನಿಂತಾಯ ಅವರು ಮಾತನಾಡಿ, ಹರಿಕಥೆ ಯಜ್ಞ ನಡೆಸಿದಂತೆ. ಭಗವಂತನ ಬಗ್ಗೆ ಜ್ಞಾನವನ್ನು ವೃದ್ಧಿಸುವ ಕಾರ್ಯವಾಗಿದೆ. ಹರಿಕಥೆಯ ಪರಂಪರೆಯನ್ನು ವಿಶ್ವನಾಥ್ ಭಟ್ ಅವರು ಉಳಿಸುವಲ್ಲಿ ಅಪಾರ ಸೇವೆ ಮಾಡಿದ್ದಾರೆ. ಹರಿದಾಸ ಪರಂಪರೆ ಉಳಿಯಬೇಕಾದಲ್ಲಿ ನಗರದಲ್ಲೆಡೆಯೂ ನಡೆಯುವ ಕಾರ್ಯಕ್ರಮ ಇದಾಗಬೇಕು ಎಂದರು.
ಮೊಗವೀರ ಬ್ಯಾಂಕಿನ ನಿರ್ದೇಶಕ ಸುರೇಶ್ ಕಾಂಚನ್ ಅವರು ಮಾತನಾಡಿ, ಬಾಲ್ಯದ ದಿನಗಳಲ್ಲಿ ಹರಿಕಥೆಯ ಬಗ್ಗೆ ಅಪಾರ ಹರಿಕಥೆಯನ್ನು ಆಲಿಸಿ, ಸಂತೋಷಭರಿತನಾಗಿದ್ದೇನೆ. ಹರಿಕಥೆಯೇ ಆಲಿಸಲು ಸಮಯ ಇಲ್ಲದ ಈ ಸಂದರ್ಭದಲ್ಲಿ ಜ್ಞಾನದ ಭಂಡಾರವನ್ನು ಹೊಂದಿರುವ ವಿಶ್ವನಾಥ್ ಭಟ್ ಅವರ ಹರಿಕಥೆ ಇಂದಿನ ಜನಾಂಗವನ್ನು ಆಧ್ಯಾತ್ಮಿಕದ ದಾರಿಯಲ್ಲಿ ಕೊಂಡೊಯ್ಯುತ್ತಿದೆ ಎಂದು ನುಡಿದರು.
ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಹೆಗ್ಡೆ ಮಾತನಾಡಿ, ಹಿಂದೊಮ್ಮೆ ವಿಶ್ವನಾಥ್ ಭಟ್ ಅವರ ಹರಿಕಥೆಯನ್ನು ಆಲಿಸಿದ್ದೆ. ಅವರ ಹರಿಕಥೆಯಲ್ಲಿ ಸಾಧನೆಯ ಫಲವಿದೆ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಸಹಕಾರ ನೀಡುವಂತಾಗಬೇಕು ಎಂದರು.
ಸಮಾಜ ಸೇವಕಿ ಶಾರದಾ ಸೂರು ಕರ್ಕೇರ ಮಾತನಾಡಿ, ಇಂದು ಪ್ರಥಮ ಬಾರಿ ಹರಿಕಥೆಯನ್ನು ಆಲಿಸಿದ್ದೇನೆ. ನಮ್ಮ ಜ್ಞಾನ ಮನಸ್ಸಿನ ಸಮತೋಲನಕ್ಕೆ ಹರಿಕಥೆ ಪೂರಕವಾಗಿದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ದಯಾನಂದ ಪೂಜಾರಿ ಕಲ್ವಾ ಅವರು ಮಾತನಾಡಿ, ವಿಶ್ವನಾಥ್ ಭಟ್ ಅವರ ಹರಿಕಥೆಯಲ್ಲಿ ನಮ್ಮನ್ನು ಆಧ್ಯಾತ್ಮಿಕತೆಯತ್ತ ಕೊಂಡೊಯ್ಯುವ ವಿದ್ವತ್ ಶಕ್ತಿಯಿದೆ. ಇವರ ಈ ಧಾರ್ಮಿಕ ಕಾರ್ಯಕ್ಕೆ ನಾವು ಸಹಕಾರ ನೀಡಬೇಕು ಎಂದರು.
ವೇದಿಕೆಯಲ್ಲಿ ಶ್ರೀ ಕೃಷ್ಣ ವಿಟ್ಠಲ ಪ್ರತಿಷ್ಠಾನದ ಟ್ರಸ್ಟಿ ಗೋಪಾಲ ಪುತ್ರನ್, ಅವಿನಾಶ್ ಶಾಸಿŒ, ಸುಮಾ ವಿ. ಭಟ್, ಕಾರ್ಯದರ್ಶಿ ಅಶೋಕ್ ಶೆಟ್ಟಿ ಪೆರ್ಮುದೆ ಉಪಸ್ಥಿತರಿದ್ದರು.
ಗೌರವ ಸ್ವೀಕರಿಸಿ ಮಾತನಾಡಿದ ಕೈರಬೆಟ್ಟು ವಿಶ್ವನಾಥ್ ಭಟ್ ಅವರು ಮಾತನಾಡಿ, ಪ್ರತಿಷ್ಠಾನದ ಮೂಲಕ ನಡೆಸುವ ಎಲ್ಲ ಕಾರ್ಯಕ್ಕೆ ದಾನಿಗಳು ಸಹಕಾರ
ನೀಡಿದ್ದಾರೆ. ಹರಿಕಥಾ ಸಪೊ¤àತ್ಸವ ಸಂಗ್ರಹಗೊಂಡ ದೇಣಿಗೆಯನ್ನು ಶಿಕ್ಷಣ ಕಾರ್ಯಕ್ಕೆ ಮೀಸಲಿಡಲಾಗುವುದು ಎಂದರು.
ಕರ್ನೂರು ಮೋಹನ್ ರೈ ಮತ್ತು ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಅಶೋಕ್ ಶೆಟ್ಟಿ ಪೆರ್ಮುದೆ ಸ್ವಾಗತಿಸಿದರು. ಜಗನ್ನಾಥ್ ಪುತ್ರನ್, ಅಶೋಕ್ ಶೆಟ್ಟಿ ಪೆರ್ಮುದೆ, ಗೋಪಾಲ್ ಪುತ್ರನ್, ಅವಿನಾಶ್ ಶಾಸ್ತ್ರೀ, ಶಶಿಧರ್ ಶೆಟ್ಟಿ ಕುಕ್ಕೆಹಳ್ಳಿ, ಸದಾನಂದ ಶೆಟ್ಟಿ, ನವೀನ್ ಪಡುಇನ್ನ, ಬಾಲಚಂದ್ರ ಭಟ್ ಅವರು ಅತಿಥಿಗಳನ್ನು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.