ವಿದ್ಯಾದಾಯಿನಿ ಸಭಾ ಫೋರ್ಟ್: 97ನೇ ವಾರ್ಷಿಕ ಮಹಾಸಭೆ
Team Udayavani, Sep 25, 2018, 4:27 PM IST
ಮುಂಬಯಿ: ವಿದ್ಯಾ ದಾಯಿನಿ ಸಭಾ ಫೋರ್ಟ್ ಮುಂಬಯಿ ಇದರ 97 ನೇ ವಾರ್ಷಿಕ ಮಹಾಸಭೆಯು ಸಭಾದ ಕಚೇರಿಯಲ್ಲಿ ಸೆ. 15 ರಂದು ಸಭಾದ ಅಧ್ಯಕ್ಷ ಜೆ. ಎಂ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ಅವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಆರ್. ಕೆ. ಕೋಟ್ಯಾನ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಮಂಜೂರುಗೊಳಿಸಿದರು. ಜಗನ್ನಾಥ ಆ್ಯಂಡ್ ಕಂಪೆನಿಯನ್ನು ಲೆಕ್ಕ ಪರಿಶೋಧಕರಾಗಿ ಪುನರಾಯ್ಕೆ ಗೊಳಿಸಲಾಯಿತು. ಶತಮಾನೋತ್ಸವ ಸಂಭ್ರಮವು ಇದೇ ಸಮಿತಿಯ ಮುಖಾಂತರ ನಡೆಯಬೇಕು. ಅಲ್ಲದೆ ಸದಸ್ಯತನದ ಮೊತ್ತವನ್ನು 1000 ರೂ. ಗಳಿಗೆ ಏರಿಸುವ ನಿರ್ಣಯವನ್ನು ಸಭೆಯಲ್ಲಿ ಮಾಡಲಾಯಿತು. ಎಲ್ಲಾ ಸದಸ್ಯರು ಕಚೇರಿಯಿಂದ ಹೊಸ ಸದಸ್ಯತನದ ಅರ್ಜಿಯನ್ನು ಪಡೆದು ನವೀಕರಿಸಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಹರೀಶ್ ಶಾಂತಿ ಅವರು ಮಾತ ನಾಡಿ, ಗುರುದೇವರ ಸಂಪೂರ್ಣ ಆಶೀರ್ವಾದದೊಂದಿಗೆ ಉತ್ತಮವಾಗಿ ಸಂಸ್ಥೆಯ ಕೆಲಸ ನಡೆದಿದೆ. ಈ ಸಂಸ್ಥೆಯ ಜಾಗದಲ್ಲಿ ನಿಲ್ಲಲು ಹಾಗೂ ಕೆಲಸ ಮಾಡಲು ನನಗೆ ಅವಕಾಶ ಲಭಿಸಿದೆ. ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಖರ್ಚಾದ ಮೊತ್ತದ ಎರಡು ಪಾಲು ಜಮಾವಣೆಗೊಳಿಸಲು ನಾವು ಪ್ರಯತ್ನಿಸಬೇಕು ಎಂದರು.
ಸದಸ್ಯ ಪ್ರಕಾಶ್ ಮೂಡಬಿದ್ರೆ ಅವರು ಮಾತನಾಡಿ, ಶತಮಾನೋ ತ್ಸವಕ್ಕೆ ಇದೇ ಸಮಿತಿಯು ಕಾರ್ಯಗತವಾಗಬೇಕು. ಅಧಿಕಾರದ ಆಸೆಯಿಂದ ಬಂದವರಿಗೆ ಅವಕಾಶ ನೀಡಬಾರದು. ಈ ತನಕ ಸಂಸ್ಥೆಯ ಅಭಿವೃದ್ಧಿಗೆ ಹೋರಾಡಿದವರನ್ನು ನೆನಪಿಸಬೇಕು ಎಂದು ನುಡಿದರು. ಉಮೇಶ್ ಕುಮಾರ್ ಅವರು ಮಾತನಾಡಿ, ಎಲ್ಲಾ ಸದಸ್ಯರೂ ಸಮಯದಲ್ಲಿ ಕಟ್ಟಡ ನವೀಕರಣಕ್ಕೆ ಸ್ಪಂದಿಸದಿದ್ದರೂ ಗುರುದೇವರ ಅನುಗ್ರಹದಿಂದ ಕೋಟ್ಯಾಂತರ ರೂ. ಗಳಿಗೂ ಹೆಚ್ಚಿನ ಜಾಗವಾಗಿ ಇದು ಮೂಡಿ ಬಂದಿದೆ. ಒಳ್ಳೆಯ ಕೆಲಸ ಮಾಡುವ ಸದಸ್ಯರನ್ನು ಪ್ರೋತ್ಸಾಹಿಸಬೇಕೆ ವಿನ: ಅವಹೇಳನ ಮಾಡಬಾರದು ಎಂದರು.
ಸದಸ್ಯ ಪದ್ಮನಾಭ ಪೂಜಾರಿ ಅವರು ಮಾತನಾಡಿ, ಹಲವಾರು ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದರೂ ವಿದ್ಯಾದಾಯಿನಿ ಸಭಾದ ಬಾಂಧವ್ಯ ಎಲ್ಲೂ ಸಿಗುವುದಿಲ್ಲ. ಕಾಮಧೇನುವಿನಂತಹ ಹಳೆವಿದ್ಯಾರ್ಥಿಗಳಿದ್ದ ಈ ಸಂಸ್ಥೆಗೆ ಆರ್ಥಿಕ ಬಿಕ್ಕಟ್ಟು ಬಂದರೆ ಅದು ವಿಷಾಧನೀಯ ಎಂದು ನುಡಿದರು.
ಭಾರತ್ ಬ್ಯಾಂಕ್‌ನ ಮಾಜಿ ಕಾರ್ಯಾಧ್ಯಕ್ಷ ಡಿ. ಬಿ. ಅಮೀನ್ ಮಾತನಾಡಿ, ಸದಸ್ಯರ ಕಾರ್ಯವೈಖರಿ ಯನ್ನು ಶ್ಲಾಘಿಸಿದರು. ಉತ್ತಮ ಕಾರ್ಯಕ್ಕೆ ಹಣ ಖರ್ಚು ಮಾಡುವುದರಲ್ಲಿ ಅರ್ಥವಿದೆ. ಈ ಸಂಸ್ಥೆಯು ಎಷ್ಟು ಬೆಳೆಯಬೇಕಿತ್ತೋ ಆ ಮಟ್ಟಕ್ಕೆ ಹೋಗಲಿಲ್ಲ. ಎಲ್ಲ ಸದಸ್ಯರು ಉತ್ತಮ ಮನಸ್ಸಿನೊಂದಿಗೆ ಸಂಸ್ಥೆಯನ್ನು ಮುನ್ನಡೆಸಬೇಕು ಎಂದು ಹೇಳಿದರು.
ಡಿ. ಕೆ. ಅಂಚನ್ ಅವರು ಮಾತ ನಾಡಿ, ಪ್ರಚಾರದ ದೃಷ್ಟಿಯಿಂದ ಕೆಲಸ ಮಾಡಬಾರದು. ಸದಸ್ಯತನದ ಮೊತ್ತವನ್ನು ಏರಿಸಿದ್ದು ಸರಿಯಾದ ನಿರ್ಣಯವಾಗಿದೆ. ಎಲ್ಲ ಸದಸ್ಯರನ್ನು ಆದಷ್ಟು ಸಂಪರ್ಕಿಸಿ ಈ ವಿಷಯವನ್ನು ತಿಳಿಯಪಡಿಸಬೇಕು. ಎಲ್ಲರೂ ರಾತ್ರಿ ಶಾಲೆಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.
ಮಹಿಳಾ ಕಾರ್ಯಾಧ್ಯಕ್ಷೆ ವಸಂತಿ ಕೋಟ್ಯಾನ್ ಮಾತನಾಡಿ, ಮಹಿಳಾ ವಿಭಾಗವನ್ನು ಬಲಪಡಿಸಿ ಸದಸ್ಯರನ್ನು ಹೊಂದಿಸಬೇಕು ಎಂದರು.
ಸಭಾದ ಉಪಾಧ್ಯಕ್ಷ ಭಾಸ್ಕರ ಕರ್ನಿರೆ ಅವರು ಮಾತನಾಡಿ, ಸಂಸ್ಥೆಗೆ ಹೊಸಬರಾಗಿ ಬಂದರೂ, ಸಂಸ್ಥೆಯ ಕಾರ್ಯವೈಖರಿಗೆ ಮೆಚ್ಚಿದ್ದೇನೆ. ನವೀಕರಣಗೊಂಡ ಈ ಸಂದರ್ಭದಲ್ಲಿ ಸಭಾದ ಸ್ಥಾಪಕರ ಹೆಸರು ಮತ್ತು ಫೋಟೊಗಳನ್ನು ಅನಾವರಣಮಾಡಿದ್ದು, ಹೆಮ್ಮೆಯ ವಿಷಯವಾಗಿದೆ. ಹಳೆವಿದ್ಯಾರ್ಥಿ ಗಳನ್ನು ಹಾಗೂ ಹಳೆ ಸದಸ್ಯರನ್ನು ಒಟ್ಟುಗೂಡಿಸಿ ಶತಮಾನೋತ್ಸವ ಜರಗಲಿದೆ ಎಂದರು.
ಜತೆ ಕಾರ್ಯದರ್ಶಿ ಶರತ್ ಪೂಜಾರಿ ಮಾತನಾಡಿ, ಇಂದು ನಾವಿದ್ದ ಹಣವನ್ನೇ ಖರ್ಚು ಮಾಡಿದ್ದೇವೆ. ಧನ ಸಂಗ್ರಹದ ಬಗ್ಗೆ ಯೋಚಿಸುವುದು ಅಗತ್ಯವಾಗಿದೆ ಎಂದು ನುಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ಅವರು ಮಾತನಾಡಿ, ಅಪಾಯದ ಪರಿಸ್ಥಿತಿಯಲ್ಲಿದ್ದ ಸಭಾದ ಕಟ್ಟಡವನ್ನು ನಗರ ಪಾಲಿಕೆ ಮತ್ತು ಮಾಡಾದ ಕೈಗೆ ಹೋಗುವುದನ್ನು ಉಳಿಸಿಕೊಳ್ಳಲು ಎರಡು ವರ್ಷದ ಅಂದಿನ ಮಹಾಸಭೆಯಲ್ಲಿ ಮಂಜೂ ರಾದ 25 ಲಕ್ಷ ರೂ. ಗಳ ಒಳಗೆ ಕಟ್ಟಡ ದುರಸ್ಥಿಗೊಳಿಸಲಾಗಿದೆ. ಇನ್ನೂ ಹಲವಾರು ಸಮಸ್ಯೆಗಳಿದ್ದು, ಟೀಕಿಸುವುದನ್ನು ಬಿಟ್ಟು ಸದಸ್ಯರು ಸ್ಪಂದಿಸಬೇಕು. ಸಮಾಜದ ಅಭಿವೃದ್ಧಿಗೆ ಮಾಡುವ ಖರ್ಚು ಹಿತಕರ ಎಂಬ ಸ್ಥಾಪಕರನ್ನು ಮಾತನ್ನು ನೆನಪಿಸಿ ಉತ್ತಮ ಕಾರ್ಯಗಳಿಗೆ ಸಹಕರಿಸಿದವರಿಗೆ ವಂದಿಸಿದರು.
ಅಧ್ಯಕ್ಷ ಜೆ. ಎಂ. ಕೋಟ್ಯಾನ್ ಅವರು ಮಾತನಾಡಿ, ತನ್ನ ಅನುಪಸ್ಥಿತಿ ಯಲ್ಲಿ ಕಟ್ಟಡದ ಕಚೇರಿಯ ನವೀಕರಣ ಕಾಮಗಾರಿ ಇತಿಮಿತಿಯೊಳಗೆ ಬಹಳ ಒಳ್ಳೆಯ ರೀತಿಯಲ್ಲಿ ಆಗಿದೆ. ಕಚೇರಿಯ ವಾತಾವರಣ ಎಲ್ಲರಿಗೂ ಮೆಚ್ಚುಗೆ ಯಾಗಿದೆ.
ಸಭಾದ ಶತಮಾನೋತ್ಸವಕ್ಕೆ ಈಗಾಗಲೇ ಅಣಿಯಾಗಬೇಕು. ಶಾಲಾ ಚಟುವಟಿಕೆಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನುಡಿದರು. ಕಾರ್ಯದರ್ಶಿ ಚಿತ್ರಾಪು ಕೆ. ಎಂ. ಕೋಟ್ಯಾನ್ ವಂದಿಸಿದರು. ಲಕ್ಷ್ಮಣ್ ಕರ್ಕೇರ ವರದಿಯನ್ನು ಮಂಜೂರು ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.