ವಿದ್ಯಾಧರ ಕನ್ನಡ ಪ್ರತಿಷ್ಠಾನದಿಂದ ಅಕ್ಷರ ಶ್ರದ್ಧಾಂಜಲಿ 


Team Udayavani, Jan 2, 2018, 3:22 PM IST

29-Mum03b.jpg

ಮುಂಬಯಿ: ವಿದ್ಯಾಧರ ಕನ್ನಡ ಪ್ರತಿಷ್ಠಾನ  ಠಾಕುರ್ಲಿ ಥಾಣೆ  ಧಾರವಾಡ ವತಿಯಿಂದ ಅಕ್ಷರ ಶ್ರದ್ಧಾಂಜಲಿ ಕಾರ್ಯಕ್ರಮವು ಡಿ. 10ರಂದು  ಸಂಜೆ 5ರಿಂದ  ಗೋರೆಗಾಂವ್‌ ಕರ್ನಾಟಕ ಸಂಘದಲ್ಲಿ ಆಯೋಜಿಸಲಾಗಿತ್ತು.

ಇತ್ತೀಚೆಗೆ ನಿಧನ ಹೊಂದಿದ ಮುಂಬಯಿ ಕನ್ನಡ ಸಾರಸ್ವತ ಲೋಕದ ತಾರೆಗಳಾದ ಮಧುರ ಕವಿ, ಕಾವ್ಯಶಿಲ್ಪಿ ದಿ| ಬಿ. ಎಸ್‌. ಕುರ್ಕಾಲ್‌, ವೈಚಾರಿಕ ಸಾಹಿತಿ ದಿ| ರವಿ ರಾ. ಅಂಚನ್‌, ರಂಗತಜ್ಞ ದಿ| ಎಚ್‌. ಕೆ. ಕರ್ಕೇರ ಅವರ ಕೃತಿ ಸಮೀಕ್ಷೆ ನಡೆಸುವ ಮೂಲಕ ಅಕ್ಷರಾಂಜಲಿ ಅರ್ಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌. ಕೆ. ಸುಂದರ್‌ ಅವರು ವಹಿಸಿದ್ದರು.

ಗೋರೆಗಾಂವ್‌ ಕನ್ನಡ ಸಂಘದ ಅಧ್ಯಕ್ಷರಾದ ರಮೇಶ ಪಯ್ನಾರು ಉಪಸ್ಥಿತರಿದ್ದು ಮಾರ್ಗದರ್ಶನ ಮಾಡಿದರು. ಮೂವರು ದಿವಂಗತರಿಗೂ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಡಾ| ಜಿ. ಪಿ. ಕುಸುಮಾ ಅವರು,  ದಿ| ಎಚ್‌.  ಕೆ.  ಕರ್ಕೇರ ಅವರ ನಾಟಕ ಕೃತಿ ಹಾಗೂ ಅವರ ಸಾಧನೆಗಳ ಬಗೆಗೆ ಶೋತೃಗಳಿಗೆ ಮನದಟ್ಟಾಗುವಂತೆ ವಿವರಿಸಿದ್ದಲ್ಲದೆ ಮುಂಬಯಿಯಲ್ಲಿ ಎಲೆಯ ಮರೆಕಾಯಿಯಾಗಿ ರಂಗಭೂಮಿಗೂ ಹಾಗೂ ಸಾಹಿತ್ಯಕ್ಕೂ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಸಾಹಿತಿ ಡಾ| ಕರುಣಾಕರ ಶೆಟ್ಟಿ ಅವರು, ಹಿರಿಯ ಕವಿ ದಿ| ಕುರ್ಕಾಲರ ಸಾಹಿತ್ಯ ಕವಿತ್ವ ಶಕ್ತಿ, ಮಾನವೀಯ ಸಂಬಂಧಗಳ ಬೆಸುಗೆ, ಭಾವ ಮಾಧುರ್ಯ, ಕಾವ್ಯಗಳ ಮುಖಾಂತರ ಕವಿ ಸಮಾಜ, ನಿಸರ್ಗಾದಿಗಳ ದರ್ಶನ ಮಾಡಿಸಿದ್ದನ್ನು ವಿವರಿಸಿದರು. ಅವರ ಮೊದಲ ಮಕ್ಕಳ ಸಂಕಲನ ಚಿಲಿಪಿಲಿ ಕೃತಿಯನ್ನು ಸಮೀಕ್ಷೆ ಮಾಡಿದರು. ಕವಿ ಸಾ. ದಯಾ ಅವರು, ದಿ| ರವಿ ರಾ. ಅಂಚನ್‌ ಅವರ ಮನೋಧರ್ಮ ಕೃತಿದರ್ಶನ ಮಾಡಿಸಿ, ತಮ್ಮ ಕೃತಿಗಳ ಮುಖಾಂತರ ಸಮಾಜದ, ದೇಶದ ವ್ಯವಸ್ಥೆಗಳ ಮೇಲೆ ಬೀರಿದ ಪ್ರಭಾವ ಎಲ್ಲವನ್ನೂ ಸಮರ್ಥವಾಗಿ ವಿವರಿಸಿದರು.

ಲಲಿತಾ ಪಭು ಅಂಗಡಿ ಅವರು ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು   ಹೇಳುವ ಪತ್ರಿಕಾ ರಂಗದವರನ್ನೂ ಸಹ ಹತ್ಯೆಗೈದದ್ದು, ಇದು ಪ್ರಜಾಪ್ರಭುತ್ವದ ಪ್ರಜ್ಞೆಯೇ ಎಂದ ಪ್ರಶ್ನಿಸಿದರು. ಪಕ್ಷಸ್ಥಿತ   ಪ್ರಜಾಪ್ರಭುತ್ವ ದಲ್ಲಿ ವ್ಯಕ್ತಿಗಿಂತ   ಪಕ್ಷ ದೊಡ್ಡದು. ಪಕ್ಷಕ್ಕಿಂತ ದೇಶದ ಸಂವಿಧಾನ ದೊಡ್ಡದು ಎಂದು ತಿಳಿದು ನಡೆಯುವುದು ವಿವೇಕವಾಗಿದೆ.  ಇದಕ್ಕೆ ಭಿನ್ನವಾದುದ್ದೇ ಅವಿವೇಕ ಎಂದು ಹೇಳುವ ರವಿ ಅಂಚನ್‌ ಅವರ ಮಾತನ್ನು ಮನದಟ್ಟಾಗುವ ರೀತಿಯಲ್ಲಿ ತಿಳಿಯಪಡಿಸಿದರು.

ಆರಂಭದಲ್ಲಿ  ಕವಿ ದಿ|  ಕುರ್ಕಾಲರ ಗೀತೆಯ ಪ್ರಾರ್ಥನೆಯನ್ನು ವಾಸಂತಿ ಕೋಟೆಕಾರ್‌, ಸ್ನೇಹಾ ಕುಲಕರ್ಣಿ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ವಿದ್ಯಾಧರ ಕನ್ನಡ ಪ್ರತಿಷ್ಠಾನದ ಸಂಚಾಲಕಿ ಹೇಮಾ ಸದಾನಂದ ಅಮೀನ್‌ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಷ್ಠಾನದ ಈವರೆಗಿನ ಕಾರ್ಯ ಹಾಗೂ ಧ್ಯೇಯ ಧೋರಣೆಗಳನ್ನು ಕನ್ನಡ ಕಾರ್ಯಕ್ಕೆ ಪ್ರತಿಷ್ಠಾನ ನಿರಂತರ ಬದ್ಧವಾಗಿದೆ ಎಂದು ಪ್ರತಿಷ್ಠಾನದ ಕಾರ್ಯವೈಖರಿ ವಿವರಿಸಿದರು. ಡಾ| ಲಿಗಾಡೆ ಪ್ರಶಸ್ತಿ, ಪ್ರತಿಭಾ ಗೌರವ, ಸಾಧಕರನ್ನು ಗುರುತಿಸುವ, ಹೀಗೆ ಪ್ರತಿಭೆಗಳಿಗೆ ವೇದಿಕೆ ನೀಡುವುದೂ ಇದರ ಉದ್ದೇಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ ಎಸ್‌. ಕೆ. ಸುಂದರ್‌ ಅವರು ಕವಿ ಬಿ. ಎಸ್‌. ಕುರ್ಕಾಲರ ತಮ್ಮ ಒಡನಾಟ ಸ್ಮರಿಸಿ, ದಿ| ರವಿ ರಾ. ಅಂಚನ್‌ ದಿ| ಕರ್ಕೇರ ಅವರ ಬಗೆಗೆ ಅವರ ಸಾಹಿತ್ಯ ರಚನೆಗಳ ಬಗೆಗೆ ತಮ್ಮ ಅನುಭವದ ಕಥನಗಳನ್ನು ತಿಳಿಸುತ್ತ, ಈ ಮೂವರ ಅಗಲುವಿಕೆ ಮುಂಬಯಿ ಕನ್ನಡ ಸಾರಸ್ವತ ಲೋಕಕ್ಕೆ ಹಾನಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ರಮೇಶ ಶೆಟ್ಟಿ ಪಯ್ನಾರು ಅವರು ಮಾತನಾಡಿ, ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ.  ಬರಿದೇ ಮೌನ ಪ್ರಾರ್ಥನೆ ಸಲ್ಲಿಸುವುದಕ್ಕಿಂತ ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲುವುದೇ ನಿಜವಾದ ಶ್ರದ್ಧಾಂಜಲಿಯಾಗಿದೆ. ವಿದ್ಯಾಧರ ಕನ್ನಡ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಿದರು. ಮೀನಾ ಕಾಳಾವರ ಅವರು ಈ ಸಂದರ್ಭದಲ್ಲಿ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಮಂಡ್ಯ ಕಾರ್ಯಕ್ರಮದ ತಮ್ಮ  ಸವಿ ನೆನಪುಗಳನ್ನು ನೆನಪಿಸಿಕೊಂಡರು.

ಬಿ. ಎಸ್‌. ಕುರ್ಕಾಲ್‌ ಅವರ ಅಳಿಯ ಜಯರಾಮ್‌  ಶೆಟ್ಟಿ, ಜೆ. ಎಂ. ಕೋಟ್ಯಾನ್‌, ಕೇಶವ್‌ ಕೋಟ್ಯಾನ್‌, ಚಿತ್ರಾಪು ಕೋಟ್ಯಾನ್‌,  ಎಸ್‌. ಎಂ. ಶೆಟ್ಟಿ ಹಾಗೂ ಇನ್ನಿತರ ಹಿರಿಯ ವ್ಯಕ್ತಿಗಳ ಉಪಸ್ಥಿತರಿದ್ದರು.   ವಾಣಿ ಶೆಟ್ಟಿ ಅವರು ಕಾರ್ಯಕ್ರಮದ ನಿರ್ವಹಿಸಿದರು. ಪ್ರೇಮಾ ಪೂಜಾರಿ ವಂದಿಸಿದರು.

ಟಾಪ್ ನ್ಯೂಸ್

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.