ವಿಜಯ ಕಾಲೇಜು ಮೂಲ್ಕಿ : ಮುಂಬಯಿ ಘಟಕದ ಸ್ನೇಹ ಸಮ್ಮಿಲನ
Team Udayavani, Feb 25, 2019, 1:01 AM IST
ಮುಂಬಯಿ: ಸಮರ್ಥ ಶಿಕ್ಷಕರ ಬೋಧನೆಯಿಂದಲೇ ನಾವು ಈ ಮಟ್ಟಕ್ಕೆ ಬೆಳೆದಿದ್ದೇವೆ ಎನ್ನಲು ತುಂಬಾ ಅಭಿಮಾನ ಅನಿಸುತ್ತಿದೆ. ವಿಜಯ ಕಾಲೇಜು ನಮ್ಮೆಲ್ಲರ ಸಾಧನೆ, ಪ್ರತಿಷ್ಠೆಗೆ ಬುನಾದಿಯಾಗಿದ್ದು ಇಲ್ಲಿ ಓದಿದ ಬಹುತೇಕರು ಬಹಳಷ್ಟು ಧನವಂತರೂ, ಧರ್ಮದ ಪರಿಪಾಲಕರಾಗಿ ಮಾದರಿಯಾ ಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧಕರೆಣಿಸಿ ನಾವು ವಿಜಯ ಕಾಲೇಜ್‌ನ ವಿದ್ಯಾರ್ಥಿಗಳೆಂದು ಹೆಮ್ಮೆಪಡುತ್ತಿರುವುದೇ ಸಂತೋಷದ ಸಂಗತಿ. ಸದ್ಯ ಗುರುಶಿಷ್ಯರ ಸಂಬಂಧಗಳನ್ನು ಬಲಿಷ್ಠ ಪಡಿಸುವಲ್ಲಿ ಹಳೆ ವಿದ್ಯಾರ್ಥಿಗಳ ಈ ಸಂಸ್ಥೆಯ ಪಾತ್ರ ಮಹತ್ತರದ್ದಾಗಿದೆ ಎಂದು ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿ ಮತ್ತು ಫೆಡರೇಶನ್ ಆಫ್ ವರ್ಲ್ಡ್ ಬಂಟ್ಸ್ ಅಸೋ.ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ನುಡಿದರು.
ಫೆ. 23 ರಂದು ಸಂಜೆ ಸಾಕಿನಾಕಾದ ಹೊಟೇಲ್ ಪೆನಿನ್ಸೂಲಾ ಗ್ರಾÂಂಡ್ ಹೊಟೇಲ್‌ನ ಕನ್‌ಕಾರ್x ಸಭಾಗೃಹದಲ್ಲಿ ನಡೆದ ವಿಜಯ ಕಾಲೇಜು ಮುಲ್ಕಿ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಘಟಕದ ವಾರ್ಷಿಕ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನನಗಿಂದು ಬಹಳಷ್ಟು ಸಂತೋಷವಾಗುತ್ತಿದೆ. ನಾನೋರ್ವ ವಿಜಯ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಲು. ನನ್ನಲ್ಲಿ ನಾಯಕತ್ವದ ಗುಣವನ್ನು ಪುಟಿದೇಳಿಸಿದ್ದು ಇದೇ ಶಿಕ್ಷಣ ಸಂಸ್ಥೆ ಬಡವರ ಕಷ್ಟಗಳನ್ನು ಹತ್ತಿರ ದಿಂದ ಬಲ್ಲವನಾಗಿರು ವುದರಿಂದ ಸಮಾಜ ಸೇವೆ ಯಲ್ಲಿ ಮತ್ತಷ್ಟು ಉತ್ಸುಕನಾಗಿದ್ದೇನೆ ಎಂದು ನುಡಿದರು.
ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಘಟಕದ ಅಧ್ಯಕ್ಷ ಆನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭವನ್ನು ವಿಸಿಎಂಎಎ ಮುಂಬಯಿ ಘಟಕದ ಗೌರವಾಧ್ಯಕ್ಷ ಸಿಎ ಸೋಮನಾಥ ಕುಂದರ್ ದೀಪಬೆಳಗಿಸಿ ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ಬಂಟರ ಸಂಘದ ಎಸ್‌ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ ಬಿ. ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಎಸ್‌ಎಂ ಶೆಟ್ಟಿ ಶೈಕ್ಷಣಿಕ ಸಂಸ್ಥೆಯ ಉಪ ಕಾರ್ಯಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ, ವಿಜಯ ಕಾಲೇಜು ಮೂಲ್ಕಿ ಗರ್ವನಿಂಗ್ ಕೌನ್ಸಿಲಿಂಗ್‌ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು.
ಭಾಸ್ಕರ್ ಶೆಟ್ಟಿ ಕಾಶಿಮೀರಾ, ಸಿಎ ಐ. ಆರ್. ಶೆಟ್ಟಿ, ಲಾರೇನ್ಸ್ ಡಿ’ಸೋಜಾ, ಗುಣಪಾಲ್ ಶೆಟ್ಟಿ ಐಕಳ, ಜಯಂತ್ ಪ್ರಭು, ಸಿಎ ಸುಂದರ್ ಜಿ. ಭಂಡಾರಿ, ಅರುಣ್ ಕುಮಾರ್ ಕೋಟ್ಯಾನ್, ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರ್, ರಂಜನ್ ಶೆಟ್ಟಿ, ಲಿಗೋರಿ ಡಿ’ಸೋಜಾ, ಪುಷ್ಪಾ ಶೆಟ್ಟಿ, ಸಿಎ ಅಶ್ವಜಿತ್ ಹೆಜ್ಮಾಡಿ, ತಾರನಾಥ್ ಶೆಟ್ಟಿ ಮತ್ತಿತರರು ವೇದಿಕೆಯಲ್ಲಿದ್ದು ಉಪಸ್ಥಿತರಿದ್ದು, ಕಾಲೇಜ್‌ನ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಚಾರ್ಯ ಪ್ರೊ| ಡಾ| ಯು. ಕೆ. ಶ್ಯಾಮ ಭಟ್ ಮತ್ತು ರಾಜಶ್ರೀ ಎಸ್. ಭಟ್, ಇಂಗ್ಲೀಷ್ ವಿಭಾಗದ ವಿಶ್ರಾಂತ ಪ್ರಾಚಾರ್ಯ ಪ್ರೊ| ಡಾ| ರಘುರಾಮ್ ರಾವ್ ಮತ್ತು ಹೇಮಲತಾ ಆರ್. ರಾವ್ ದಂಪತಿಗಳಿಗೆ ಪದಾಧಿಕಾರಿಗಳು ಮತ್ತು ಹಳೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.
ಅತಿಥಿಗಳು ಮಹಾನಗರದ ಉದ್ಯಮಿ, ರಮೇಶ್ ಶೆಟ್ಟಿ ಮತ್ತು ಹಸ್ಮತಿ ರಮೇಶ್, ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ. ಸಾಲ್ಯಾನ್ ಮತ್ತು ನಯನಾ ಭಾಸ್ಕರ್, ನಗರದ ಪ್ರತಿಷ್ಠಿತ ಲೆಕ್ಕ ಪರಿಶೋಧಕ ಸಿಎ ವಿಶ್ವನಾಥ್ ಶೆಟ್ಟಿ ಮತ್ತು ಪುಷ್ಪಾ ವಿಶ್ವನಾಥ್ ದಂಪತಿಗಳನ್ನು ಸಮ್ಮಾನಿಸಿ ಅಭಿನಂದಿಸಿದರು. ಮಿಸ್ ಬಂಟ್ ವಿಜೇತೆ ಮೇಘಾ ಜಿ. ಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಸಮ್ಮಾನಿತರು ಕಲೇಜು ದಿನಗಳನ್ನು ಸಿಹಿ ನೆನಪುಗಳನ್ನು ಮೆಲುಕು ಹಾಕುತ್ತ ಗೌರವಕ್ಕಾಗಿ ಕೃತಜ್ಞತೆ ಸಲ್ಲಿಸಿದರು.
ಗುರುವಂದನೆ ಸ್ವೀಕರಿಸಿ ಮಾತನಾಡಿದ ಡಾ| ಯು. ಕೆ. ಶ್ಯಾಮ ಭಟ್ ಅವರು, ಮಾಯನಗರಿಯಲ್ಲಿ ಕನ್ನಡದಲ್ಲಿ ಮಾತನಾಡಲು ಸಿಕ್ಕಿದ್ದೇ ನನ್ನ ಭಾಗ್ಯ. ಮಾನವ ಜೀವನ ಎನ್ನುವುದು ಬಹಳ ಶ್ರೇಷ್ಠವಾದುದು. ನಮಗೆಲ್ಲರಿಗೂ ಒಂದೇ ಜನ್ಮವಾಗಿದ್ದು, ಆ ಜನ್ಮದಲ್ಲಿ ಏನಾದರೂ ಸಾಧಿಸಿ ಸಂತೃಪ್ತ ಬದುಕನ್ನು ರೂಪಿಸಿಕೊಳ್ಳಬೇಕು. ನಮ್ಮ ಸೇವಾ ಫಲ ಕೊನೆಗಾದರೂ ಫಲಿಸುವುದು. ವಿದ್ಯೆ ಮತ್ತು ಸಮಾಜಕ್ಕೆ ನೀಡಿದ ಸೇವೆ ಎಂದಿಗೂ ವ್ಯರ್ಥವಾಗದು ಅನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ಗುರುವೃಂದಕ್ಕೆ ಶಿಷ್ಯವರ್ಗದ ಗೌರವಾರ್ಪಣೆ ನಿಜವಾಗಿಯೂ ನಮ್ಮ ಮನಸ್ಸಿಗೆ ಸಮಾಧಾನ ತಂದಿದೆ. ವಿಜಯ ಕಾಲೇಜು ಮೂಲಕ ಒಳ್ಳೆಯ ಮಕ್ಕಳನ್ನು ನೀಡಿದ ಅಭಿಮಾನವೂ ನಮಗಿದೆ. ಗುರು ಶಿಷ್ಯರ ಸಂಬಂಧ ಹಾಲೆjàನಿನಂತೆ ಎನ್ನುತ್ತಾ ಗುರುಶಿಷ್ಯರ ಸಂಬಂಧ ಬಗ್ಗೆ ಸ್ವರಚಿತ ಕವನ ವಾಚಿಸಿದರು.
ಇನ್ನೋರ್ವ ಗುರುವಂದನೆ ಸ್ವೀಕರಿಸಿದ ವಿಶ್ರಾಂತ ಪ್ರಾಚಾರ್ಯ ಪ್ರೊ| ಡಾ| ರಘುರಾಮ್ ರಾವ್ ಅವರು ಮಾತನಾಡಿ, ವಿದ್ಯಾರ್ಥಿ-ಶಿಷ್ಯರ ಸಾಧನೆಗಳನ್ನು ಕಂಡು ಖುಷಿ ಪಡುವುದೆ ಗುರುವರ್ಯರ ಬಲುದೊಡ್ಡ ಗುರುವಂದನೆಯಾಗಿದೆ. ಸಹಾಯ ಮಾಡುವುದು, ಓರ್ವ ಮನುಷ್ಯನನ್ನು ಒಳ್ಳೆಯ ಪ್ರಜೆಯನ್ನಾಗಿಸುವುದು ಗುರುಗಳ ಕರ್ತವ್ಯ. ಈ ಹಳೆ ವಿದ್ಯಾರ್ಥಿಗಳ ಸಂಘಟನೆಯಿಂದ ಹಳೆಯ ನೆನಪುಗಳನ್ನು ಹೊಸದಾಗಿಸಿ ಹಂಚಿಕೊಳ್ಳಲು ಸಾಧ್ಯವಾಯಿತು. ಗುರುಗಳಿಗೆ ವಿದ್ಯಾರ್ಥಿಗಳು ಸದಾ ಚಿಗುರೆಲೆಗಳಂತೆ ಕಾಣುತ್ತಿರುವುದು ಪ್ರಕೃತಿಸಹಜವಾಗಿದೆ. ಇಂತಹ ಸಮ್ಮಾನ, ಗುರುವಂದನೆಯಿಂದ ಜೀವನ ಸಾರ್ಥಕವೆಣಿಸಿದಂತಾಗಿದೆ ಎಂದು ನುಡಿದರು.
ಸಂಘದ ಕಾರ್ಯಕಾರಿ ಸಮಿತಿಯ ಲಕ್ಷಿ¾àಶ್ ರಾವ್, ರತ್ನಾಕರ್ ಆರ್. ಸಾಲ್ಯಾನ್, ಸಲಹಾ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಗತ ಸಾಲಿನಲ್ಲಿ ಅಗಲಿದ ಗುರು-ಶಿಷ್ಯರು, ಸಹಪಾಠಿಗಳಿಗೆ ಆರಂಭದಲ್ಲೇ ಶ್ರದ್ಧಾಂಜಲಿ ಅರ್ಪಿಸಲಾಯಿತು. ಶಿರ್ವಾ ನಿತ್ಯಾನಂದ ಹೆಗ್ಡೆ ಮತ್ತು ರತ್ನಾ ಉಮಾನಾಥ ಶೆಟ್ಟಿ ಅವರಿಂದ ಹಾಡುಗಾರಿಕೆ ನಡೆಯಿತು. ಅಮಿತಾ ಜತ್ತಿನ್ ಬಳಗದಿಂದ ನೃತ್ಯ ವೈವಿಧ್ಯ ನೆರವೇರಿತು. ಶಶಿಧರ್ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ಚಿತ್ರಾ ಗಣೇಶ್ ಶೆಟ್ಟಿ ಪ್ರಾರ್ಥನೆಗೈದರು. ಸಿಎ ಸೋಮನಾಥ ಕುಂದರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಉಪಾಧ್ಯಕ್ಷ ವಾಸುದೇವ ಎಂ. ಸಾಲ್ಯಾನ್, ಸಿಎ ಕಿಶೋರ್ ಕುಮಾರ್ ಸುವರ್ಣ, ದಿನೇಶ್ ಸಿ. ಸಾಲ್ಯಾನ್, ಸಿಎ ರೋಹಿತಾಕ್ಷ ದೇವಾಡಿಗ ಸಮ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಅಶೋಕ್ ದೇವಾಡಿಗ ಗತ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ಹರೀಶ್ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನ್ಯಾಯವಾದಿ ಶೇಖರ ಎಸ್. ಭಂಡಾರಿ ವಾರ್ಷಿಕ ವರದಿ ವಾಚಿಸಿ ವಂದಿಸಿದರು. ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.