ಕನ್ನಡ ಸಂಘ ವೀಕೇಸ್ ಇಂಗ್ಲಿಷ್ ಹೈಸ್ಕೂಲ್: 72 ನೇ ಸ್ವಾತಂತ್ರ್ಯ ದಿನ
Team Udayavani, Aug 19, 2018, 5:34 PM IST
ಮುಂಬಯಿ: ಮಕ್ಕಳಿಗೆ ಶಿಕ್ಷಣದೊಂದಿಗೆ ರಾಷ್ಟ್ರಪ್ರೇಮದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು. ಕೇವಲ ಸ್ವಾತಂತ್ರ್ಯಚರಣೆಯ ಮೂಲಕ ದೇಶಪ್ರೇಮವನ್ನು ತಿಳಿಸುವುದರಲ್ಲಿ ಅರ್ಥವಿಲ್ಲ. ಗಡಿಕಾಯುವ ಯೋಧರ ಬಗ್ಗೆ ಚಿಂತನೆ ನಡೆಸುವಲ್ಲೂ ನಾವು ಮುಂದಾಗಬೇಕು. ಇಂದಿನ ವಿದ್ಯಾರ್ಥಿಗಳು ಸಾಮಾ ಜಿಕ ಜಾಲತಾಣಗಳಲ್ಲಿ ಹೆಚ್ಚು ಕಾಲಕಳೆಯುತ್ತಿದ್ದು ಆತಂಕಕಾರಿ ವಿಷಯ ವಾಗಿದೆ. ಆದ್ದರಿಂದ ಮಕ್ಕಳನ್ನು ಕೇವಲ ಉದ್ಯೋಗದ ದೃಷ್ಟಿಯಿಂದ ಬೆಳೆಸದೆ, ಸುಸಂಸ್ಕೃತರಾಗಿ ಬೆಳೆಸುವುದು ಪಾಲಕರು ಮತ್ತು ಶಿಕ್ಷಕರ ಕರ್ತವ್ಯವಾಗಬೇಕು. ಎಳವೆಯಲ್ಲಿಯೇ ರಾಷ್ಟ್ರಪ್ರೇಮ, ಸ್ವಾತಂತ್ರÂಕ್ಕಾಗಿ ಹೋರಾಡಿದ ನಾಯಕ ಜೀವನ ಸಾಧನೆ, ಸಂದೇಶಗಳನ್ನು ಮಕ್ಕಳು ತಿಳಿದು ರಾಷ್ಟ್ರ ನಾಯಕರಾಗಿ ಬೆಳೆಯಬೇಕು ಎಂದು ವಿಕ್ರೋಲಿ ಕನ್ನಡ ಸಂಘದ ಅಧ್ಯಕ್ಷ ಶ್ಯಾಂಸುಂದರ್ ಶೆಟ್ಟಿ ನುಡಿದರು.
ಆ. 15 ರಂದು ವಿಕ್ರೋಲಿ ಪೂರ್ವದ ಠಾಕೂರ್ ನಗರದ ವಿಕ್ರೋಲಿ ಕನ್ನಡ ಸಂಘ ಸಂಚಾಲಕತ್ವದ ವೀಕೇಸ್ ಇಂಗ್ಲಿಷ್ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ 72 ನೇ ಸ್ವಾತಂತ್ರÂ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣಗೈದು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಮಕ್ಕಳ ವಿವಿಧ ಕಾರ್ಯಕ್ರಮಗಳನ್ನು ಕಂಡು ಬಹಳಷ್ಟು ಸಂತೋಷವಾಯಿತು. ಇದರಲ್ಲಿ ಶಿಕ್ಷಕರ ಪಾಲು ಬಹಳಷ್ಟಿದೆ. ಸಂಸ್ಥೆಯು ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಪ್ರಾಧಾನ್ಯತೆಯನ್ನು ನೀಡುತ್ತಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಸವಲತ್ತುಗಳ ಉಪಯೋಗವನ್ನು ಪಡೆದು ಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ರುವ ಪ್ರತಿಭೆಯನ್ನು ಹೊರತಂದು ರಾಷ್ಟ್ರದ ಶಕ್ತಿಯಾಗಿ ಅವರನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನುಡಿದು ಎಲ್ಲರಿಗೂ ಶುಭಹಾರೈಸಿದರು.
ಪ್ರಾರಂಭದಲ್ಲಿ ಶಾಲಾ ಸಭಾಂಗಣದಲ್ಲಿ ಅಧ್ಯಕ್ಷ ಶ್ಯಾಂ ಸುಂದರ್ ಶೆಟ್ಟಿ ಅವರು ಧ್ವಜಾರೋಹಣಗೈದು ಧ್ವಜವಂದನೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಂದ ರಾಷ್ಟ್ರಪ್ರೇಮವನ್ನು ಬಿಂಬಿಸುವ ಪಥಸಂಚಲನ, ವಿವಿಧ ಕವಾಯತ್ತುಗಳು, ಪ್ರಾತ್ಯಕ್ಷಿಕೆಗಳ ಮೆರವಣಿಗೆ ನಡೆಯಿತು. ಅತಿಥಿ-ಗಣ್ಯರು ಧ್ವಜವಂದನೆ ಸ್ವೀಕರಿಸಿದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಉದಯ್ ಎಲ್. ಶೆಟ್ಟಿ, ಉಪಾಧ್ಯಕ್ಷ ಆನಂದ ಶೆಟ್ಟಿ, ಜತೆ ಕಾರ್ಯದರ್ಶಿ ಸತೀಶ್ ಐಲ್, ಜೊತೆ ಕೋಶಾಧಿಕಾರಿಗಳಾದ ಉಮೇಶ್ ಪೂಜಾರಿ ಮತ್ತು ಪ್ರವೀಣ್ ಶೆಟ್ಟಿ ಅವರು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಣೇಶ್ ಎಂ. ಶೆಟ್ಟಿ, ಯುಗಾನಂದ ಶೆಟ್ಟಿ, ಪುಷ್ಪಲತಾ ನಾಯಕ್, ರಾಘವ ಕುಂದರ್ ಮೊದಲಾದವರು ಉಪಸ್ಥಿತ ರಿದ್ದರು. ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ-ಶಿಕ್ಷಕಿಯರು, ಶಿಕ್ಷಕ-ಶಿಕ್ಷಕಿ ವೃಂದದವರು, ಶಿಕ್ಷಕೇತರ ಸಿಂಬಂದಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಂದ ದೇಶಭಕ್ತಿಗೀತೆಗಳ ಗಾಯನ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಷ್ಟ್ರಧ್ವಜ ವಂದನೆ ಕಾರ್ಯಕ್ರಮವನ್ನು ಶಿಕ್ಷಕಿ ಜೆಸ್ಲಿàನ್ ನಿರ್ವಹಿಸಿದರು.
ಸಭಾ ಕಾರ್ಯಕ್ರಮವನ್ನು ಶಿಕ್ಷಕಿ ಅರ್ಚನಾ ಮೋಕಲ್ ಅವರು ನಿರ್ವಹಿಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.