ವಿಶ್ವಕರ್ಮ ಅಸೋಸಿಯೇಶನ್: ವಾರ್ಷಿಕ ವಿಶ್ವಕರ್ಮ ಮಹೋತ್ಸವ
Team Udayavani, Sep 20, 2017, 12:35 PM IST
ಮುಂಬಯಿ: ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಇದರ ವತಿಯಿಂದ ಶ್ರೀಮದ್ ಜಗದ್ಗುರು ಅನಂತಶ್ರೀ ವಿಭೂಷಿತ ನಾಗಧರ್ಮೇಂದ್ರ ಸರಸ್ವತಿ ಮಹಾಸ್ವಾಮಿ ಮತ್ತು ಶ್ರೀಮದ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸ್ವರಸ್ವತೀ ಪೀಠಾಧೀಶ್ವರ ಜಗದ್ಗುರು ಆಷೊuàತ್ತರಶತ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳ ಶುಭಾನುಗ್ರಹದೊಂದಿಗೆ ವಾರ್ಷಿಕ ವಿಶÕಕರ್ಮ ಮಹೋತ್ಸವವು ವೈವಿಧ್ಯ
ಮಯ ಕಾರ್ಯಕ್ರಮಗಳೊಂದಿಗೆ ಸೆ. 17ರಂದು ಅಂಧೇರಿ ಪಶ್ಚಿಮದ ಜಾನಕಿಭಾç ಸಭಾಗೃಹದಲ್ಲಿ ನಡೆಯಿತು.ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾತಃಕಾಲದಿಂದ ವಿಶ್ವಕರ್ಮ ಹೋಮವು ವಿದ್ವಾನ್ ಶಂಕರನಾಥ್ ಪುರೋಹಿತ್ ಅವರಿಂದ ನಡೆಯಿತು. ಗೋಪಾಲಕೃಷ್ಣ ಪುರೋಹಿತ್, ಪ್ರಶಾಂತ್ ಪುರೋಹಿತ್, ಪ್ರಸನ್ನ ಪುರೋಹಿತ್, ಪವಿತ್ರ ಪುರೋಹಿತ್ ಅವರು ಕಲಶ ಪ್ರತಿಷ್ಠಾಪನೆಗೈದು ಕಲೊ³àಕ್ತಪೂಜೆ ಇತ್ಯಾದಿಗಳನ್ನು ನಡೆಸಿದರು. ಸದಾನಂದ ಎನ್. ಆಚಾರ್ಯ ಕಲ್ಯಾಣು³ರ ಮತ್ತು ಬಿಂದು ಸದಾನಂದ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.
ಬೆಳಗ್ಗೆಯಿಂದ ಶ್ರೀ ವಿಶ್ವಕರ್ಮ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು, ಶ್ರೀ ವಿಶ್ವಕರ್ಮ ಕಾಳಿಕಂಬಾ ಭಜನಾ ವೃಂದ ಮುಂಬಯಿ, ಶ್ರೀ ವಿಶ್ವಕರ್ಮ ಭಜನಾ ಮಂಡಳಿ ಕಾಂದಿವಿಲಿ, ಶ್ರೀ ಲಲಿತಾಂಬಾ ಭಜನಾ ಮಂಡಳಿ ಬೊರಿವಿಲಿ ಅವರಿಂದ ಭಜನಾ ಮಹೋತ್ಸವ ನಡೆಯಿತು. ಸಂಜೆ ಅಸೋಸಿಯೇಶನ್‌ನ ಅಧ್ಯಕ್ಷ ಸದಾನಂದ ಎನ್. ಆಚಾರ್ಯ ಕಲ್ಯಾಣು³ರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಪ್ರೊ| ವಿನಿತಾ ಅಮೃತಾ ಆಚಾರ್ಯ ಮಣಿಪಾಲ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ವಾರ್ಷಿಕ ವಿದ್ಯಾರ್ಥಿ ವೇತನ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಅಸೋಸಿಯೇಶನ್‌ನ ಕೋಶಾಧಿಕಾರಿ ಬಾಬುರಾಜ್ ಎಂ. ಆಚಾರ್ಯ, ಜೊತೆ ಕೋಶಾಧಿಕಾರಿ ಸುಧೀರ್ ಜೆ. ಆಚಾರ್ಯ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಉಪೇಂದ್ರ ಎ.ಆಚಾರ್ಯ, ಪ್ರಭಾಕರ್ ಎಸ್. ಆಚಾರ್ಯ, ಅರುಣ್ ಪಿ. ಆಚಾರ್ಯ, ರಮೇಶ್ ವಿ. ಆಚಾರ್ಯ, ರಾಮದಾಸ್ ಆಚಾರ್ಯ, ಮಧುಕರ್ ಆಚಾರ್ಯ ಮಾಜಿ ಅಧ್ಯಕ್ಷರಾದ ನಿಟ್ಟೆ ದಾಮೋದರ ಆಚಾರ್ಯ, ಜಿ. ಟಿ. ಆಚಾರ್ಯ, ಮಹಾಬಲ ಎ. ಆಚಾರ್ಯ, ಕೆ. ಪಿ. ಚಂದ್ರಯ್ಯ ಆಚಾರ್ಯ, ಮಹಿಳಾ ವಿಭಾಗಾಧ್ಯಕ್ಷೆ ಶುಭಾ ಎಸ್. ಆಚಾರ್ಯ, ಯುವ ವಿಭಾಗಾಧ್ಯಕ್ಷ ಪ್ರದೀಪ್ ಆರ್. ಆಚಾರ್ಯ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಾಸ್ತುತಜ್ಞ ಅಶೋಕ್ ಪುರೋಹಿತ್ ಧಾರ್ಮಿಕ ಉಪನ್ಯಾಸ ನೀಡಿದರು.
ವಾರ್ಷಿಕ ಉತ್ಸವದಲ್ಲಿ ಡಾ| ಕೆ. ಮೋಹನ್, ಶ್ರೀಧರ ವಿ. ಆಚಾರ್ಯ ಬೊರಿವಲಿ, ಕೃಷ್ಣ ವಿ. ಆಚಾರ್ಯ, ಸುಧಾಕರ್ ಎನ್. ಆಚಾರ್ಯ ಮತ್ತಿತರರು ಪ್ರಮುಖರಾಗಿ ಹಾಜರಿದ್ದರು. ಸಂಸ್ಥೆಯ ಸದಸ್ಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನೃತ್ಯ ವೈಭವ, ಶಾಸ್ತ್ರೀಯ ನೃತ್ಯ, ದೂರದರ್ಶನ ಕಲಾವಿದೆ ಮಂಜುಳಾ ಸುಬ್ರಹ್ಮಣ್ಯ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ನಡೆಯಿತು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ನೂರಾರು ವಿಶ್ವಕರ್ಮ ಬಂಧುಗಳು ಮಹೋತ್ಸವದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಅಸೋಸಿಯೇಶನ್‌ನ ಉಪಾಧ್ಯಕ್ಷ ರವೀಶ್ ಜಿ. ಆಚಾರ್ಯ ಅವರು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಹರೀಶ್ ಜಿ. ಆಚಾರ್ಯ ಸ್ಪರ್ಧೆಗಳನ್ನು ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಗಣೇಶ್ ಕುಮಾರ್ ಸಭಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.