ಸೆಂಟ್ರಲ್ ರೈಲ್ವೇ ತಂಡಕ್ಕೆ ಪ್ರಶಸ್ತಿ
Team Udayavani, Feb 12, 2019, 4:23 PM IST
ಮುಂಬಯಿ: ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಕೆಎಸ್‌ಎ ಕಾರ್ಯಕಾರಿ ಸಮಿತಿಯ ಸದಸ್ಯ ದಿ| ವಿಶ್ವನಾಥ ಅಂಚನ್ ಅವರ ಸಹೋದರ ರವಿ ಅಂಚನ್ ಪ್ರಾಯೋಜಿದ ದ್ವಿತೀಯ ವರ್ಷದ ವಿಶ್ವನಾಥ್ ಅಂಚನ್ ಸ್ಮಾರಕ ಹಿರಿಯ ಫುಟ್ಬಾಲ್ ಪಂದ್ಯಾಟದಲ್ಲಿ ಸೆಂಟ್ರಲ್ ರೈಲ್ವೇ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಫೆ. 9 ರಂದು ಸಂಜೆ ಚರ್ಚ್‌ಗೇಟ್ ಪರಿಸರದ ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಸೆಂಟ್ರಲ್ ರೈಲ್ವೇ ತಂಡವು ಬಾಂದ್ರಾ ಪ್ಯಾಕರ್ ತಂಡದೊಂದಿಗೆ ಸೆಣಸಾಡಿದ್ದು. ಸೆಂಟ್ರಲ್ ರೈಲ್ವೇ ತಂಡವು 3-0 ಅಂತರಗಳಿಂದ ಗೆದ್ದು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ವಿಜೇತ ತಂಡದ ಪರವಾಗಿ ಕಾಸಿಪ್ ಜಮಾಲ್, ಅರಿಫ್ ಅನ್ಸಾರಿ ಹಾಗೂ ಅಮರ್ ಪರದೇಶಿ ಅವರು ತಲಾ ಒಂದು ಗೋಲು ಹೊಡೆದು ತಂಡಕ್ಕೆ ಜಯ ತಂದುಕೊಟ್ಟರು.
ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಕೆಎಸ್‌ಎ ತಂಡವು ಏರ್ ಇಂಡಿಯಾ ತಂಡವನ್ನು 1-0 ಅಂತರದಿಂದ ಬಗ್ಗುಬಡಿಯಿತು. ಕೆಎಸ್‌ಎ ತಂಡದ ಪರವಾಗಿ ವೆಲ್ವಿನ್ ವಾಜ್ ಗೋಲು ಹೊಡೆದರು. ವಿಶೇಷ ವೈಯಕ್ತಿಕ ಬಹುಮಾನವನ್ನು ಶ್ಯಾಮ್ ಸಾವಂತ್ ಗೋಲ್ ಕೀಪರ್, ತಬರೇಜ್ ಸಯ್ನಾದ್ ಡಿಫೆಂಡರ್, ಸವಿಯೋ ರೊಡ್ರಿಗಸ್ ಮಿಡ್ ಫೀಲ್ಡ್, ಮೆಲ್ವಿನ್ ವಾಜ್ ಸೆಂಟರ್ ಫಾರ್‌ವರ್ಡ್ ಹಾಗೂ ಪಂದ್ಯಾಟದ ಸರ್ವೋತ್ತಮ ಆಟಗಾರರಾಗಿ ಸೆಂಟ್ರಲ್ ರೈಲ್ವೆಯ ಕಾಸಿಫ್ ಜಮಾಲ್ ಅವರು ಪಡೆದರು.
ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 35 ಸಾವಿರ ರೂ. ನಗದು ಮತ್ತು ಟ್ರೋಫಿ ಹಾಗೂ ಮೂರನೇ ಸ್ಥಾನ ಪಡೆದ ತಂಡಕ್ಕೆ 15 ಸಾವಿರ ರೂ. ನಗದು ಮತ್ತು ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ನಗದು ಮತ್ತು ಟ್ರೋಫಿಯನ್ನು ಗಣ್ಯರು ಪ್ರದಾನಿಸಿ ಗೌರವಿಸಿದರು. ರಾಷ್ಟ್ರೀಯ ಫುಟ್ಬಾಲ್ ಆಟಗಾರ, ಟಾಟಾ ಉದ್ಯೋಗ ಸಮೂಹದ ಸುರೇಂದ್ರ ಕುಮಾರ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ವಿಜೇತರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಪಂದ್ಯಾಟದ ಆಯೋಜಕರಾದ ರವಿ ಅಂಚನ್, ಕರ್ನಾಟಕ ನ್ಪೋರ್ಟಿಂಗ್ ಅಸೋಸಿಯೇಶನ್ ಪದಾಧಿಕಾರಿಗಳಾದ ಜಯ ಎ. ಶೆಟ್ಟಿ, ಎಂ. ಪಿ. ಶೆಟ್ಟಿ, ಕೃಷ್ಣ ಶೆಟ್ಟಿ, ಸಾಲ್ಪಡೋರ್ ಡಿಸೋಜಾ, ಜಯಂತ್ ಕುಂದರ್, ಸುಕುಮಾರ್ ಹತ್ತಂಗಡಿ, ಸುರೇಂದ್ರ ಕರ್ಕೇರ, ಪ್ರೇಮನಾಥ್ ಪುತ್ರನ್, ಸದಾ ಉಚ್ಚಿಲ್, ದಯಾ ಅಂಚನ್, ಅಶೋಕ್ ಶೆಟ್ಟಿ, ಹಿರಿಯ ಆಟಗಾರ ಶೇಖರ್ ಬಂಗೇರ, ಹರೀಶ್ ಶೆಟ್ಟಿ, ಚೇರೊಮ ಉಪಸ್ಥಿತರಿದ್ದು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಹೊಸ ಸೇರ್ಪಡೆ
Threat: ಹೆಬ್ಬಾಳ್ಕರ್ ಕ್ಷಮೆ ಕೇಳದೆ ಹೋದ್ರೆ ಹತ್ಯೆ: ಸಿ.ಟಿ.ರವಿಗೆ ಬೆದರಿಕೆ ಪತ್ರ ರವಾನೆ
Daily Horoscope: ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಆರೋಗ್ಯ ತಕ್ಕಮಟ್ಟಿಗೆ ಉತ್ತಮ
Naxal Surrender: ‘ಶರಣಾಗುವಾಗ ಬಂದೂಕು ಹಿಡಿದುಕೊಂಡು ಬರುತ್ತಾರಾ?’: ಡಿ.ಕೆ.ಶಿವಕುಮಾರ್
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.