“ವ್ಹಾಯ್ಸ್ ಆಫ್ ಬಿಲ್ಲವ’ ಅಂತಿಮ ಸುತ್ತಿನ ಸ್ಪರ್ಧೆಗೆ ಚಾಲನೆ
Team Udayavani, Jul 3, 2018, 4:40 PM IST
ಮುಂಬಯಿ: ಸಂಗೀತವು ಮನಸ್ಸನ್ನು ಶುದ್ಧಿಕರಿಸುವ ಶಕ್ತಿ ಯನ್ನು ಹೊಂದಿದೆ. ವಿಶೇಷವಾಗಿ ಭಾರತೀಯರಲ್ಲಿ ಸಂಗೀತ ಪ್ರಭಾವ ಬಹಳಷ್ಟಿದೆ. ಸಂಗೀತದೊಂದಿಗೆ ಆಧ್ಯಾತ್ಮಿಕತೆಯ ಸಾರವನ್ನು ಆನಂ ದಿಸುವ ಜನತೆ ನೆಮ್ಮದಿಯನ್ನು ಅನುಭವಿತ್ತಾರೆ. ಆದ್ದರಿಂದ ಸಂಗೀತ ಅಸ್ವಾದಿಸುವ ಮನಸ್ಸುಗಳು ಭೇದವನ್ನು ಮರೆಸುತ್ತವೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಬಿಲ್ಲವರ ಅಸೋಸಿ ಯೇಶನ್ ಇಂತಹ ಯೋಜನೆಯನ್ನು ರೂಪಿಸಿರುವುದು ಬಹಳ ಸಂತಸ ದಾಯಕ ಎಂದು ಗುಜರಾತ್ ಬಿಲ್ಲವ ಸಂಘದ ಅಧ್ಯಕ್ಷ ಮನೋಜ್ ಸಿ. ಪೂಜಾರಿ ತಿಳಿಸಿದರು.
ಜು. 1 ರಂದು ಅಪರಾಹ್ನ ಸಾಂತಾ ಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾ ಭ್ಯುದಯ ಉಪ ಸಮಿತಿ ಆಯೋ ಜಿಸಿದ್ದ “ವ್ಹಾಯ್ಸ್ ಆಫ್ ಬಿಲ್ಲವ’ ಕಾರ್ಯಕ್ರಮದ ಅಂತಿಮ ಸುತ್ತಿನ ಸ್ಪರ್ಧೆ ಮತ್ತು ಪಾರಿತೋಷಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಅವರು ಮಾತನಾಡಿ ಶುಭಹಾರೈಸಿದರು.
ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನೆರವೇರಿದ ಕಾರ್ಯ ಕ್ರಮವನ್ನು ಮನೋಜ್ ಪೂಜಾರಿ ಮತ್ತು ಸಮಾಜ ಸೇವಕಿ ಶಾರದಾ ಸೂರು ಕರ್ಕೇರ ದೀಪ ಬೆಳಗಿಸಿ ಉದ್ಘಾಟಿಸಿದರು. ಅಂತಿಮ ಸುತ್ತಿನಲ್ಲಿ 26 ಸ್ಪರ್ಧಿಗಳು ಕಣದಲ್ಲಿದ್ದರು. ಮನೋಜ್ ಆನಂದ್, ರಾಜೇಶ್ವರಿ ಕೆ., ಶ್ರುತಿ ನಾಯಕ್, ಅವಿನಾಶ್ ಕಾಮತ್ ಅವರು ತೀರ್ಪುಗಾರರಾಗಿ ಸಹಕರಿಸಿದರು.
ಗೌರವ ಅತಿಥಿಗಳಾಗಿ ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿ, ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‌ಕುಮಾರ್ ಕಾರ್ನಾಡ್, ಸೂರತ್ ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕುರಿಯಾಳ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ್ ಜೆ. ಪೂಜಾರಿ, ಅಸೋಸಿಯೇಶನ್‌ನ ಉಪಾಧ್ಯಕ್ಷರುಗಳಾದ ರಾಜ ವಿ. ಸಾಲ್ಯಾನ್, ಶಂಕರ ಡಿ. ಪೂಜಾರಿ, ಡಾ| ಯು. ಧನಂಜಯ ಕುಮಾರ್, ಪುರುಷೋತ್ತಮ ಎಸ್. ಕೋಟ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ಮಹೇಶ್ ಸಿ. ಕಾರ್ಕಳ, ಮಹಿಳಾ ವಿಭಾಗಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್, ಸಂಗೀತಕಾರ ರಂಜನ್ ಎನ್. ಸುವರ್ಣ ಉಪಸ್ಥಿತರಿದ್ದರು. ಸಂಗೀತ ಕ್ಷೇತ್ರದ ದಿಗ್ಗಜ ನವೀನ್ ಎನ್. ಸುವರ್ಣ ಅವರನ್ನು ಸಮ್ಮಾನಿಸಲಾಯಿತು.
ರಾಜ್‌ಕುಮಾರ್ ಕಾರ್ನಾಡ್ ಅವರು ಮಾತನಾಡಿ, ಇದೊಂದು ಒಳ್ಳೆಯ ಕಾರ್ಯಕ್ರಮ. ಪ್ರತಿಭೆಗಳಿಗೆ ಉತ್ತಮ ಅವಕಾಶವಾಗಿದೆ. ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳನ್ನು ಅಭಿನಂದಿಸಿ ತನ್ನ ಕಂಠದಲ್ಲಿ ಸಂಗೀತವನ್ನಾಡಿ ನೆರೆದ ಸಂಗೀತ ಪ್ರೇಮಿಗಳ ಮನಸೂರೆಗೊಂಡರು. ರೂಪಿಣಿ ಪ್ರಸಿದ್ಧ ಚಿತ್ರನಟಿ ಕೋಮಲ್ ಮಹುವಕರ್ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನ ಪ್ರದಾನಿಸಿ ಶುಭಹಾರೈಸಿದರು.
ಸಂತೋಷ್ ಪೂಜಾರಿ ಮತ್ತು ಬಳಗ ಪ್ರಾರ್ಥನೆಗೈದರು. ಯುವಾಭ್ಯುದಯ ಸಮಿತಿಯ ಮುಖ್ಯಸ್ಥ ನಿಲೇಶ್ ಪೂಜಾರಿ ಪಲಿಮಾರ್ ಸ್ವಾಗತಿಸಿದರು. ಅಕ್ಷಯ್ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿದರು. ಲತೇಶ್ ಎಂ. ಪೂಜಾರಿ ಸ್ಪರ್ಧಾ ಕಾರ್ಯಕ್ರಮ ನಿರೂಪಿಸಿದರು. ಯಜ್ಞೆàಶ್ ಸಾಲ್ಯಾನ್ ಸ್ಪರ್ಧಿಗಳ ಯಾದಿ ವಾಚಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಯುವಾಭ್ಯುದಯದ ಗೌರವ ಕಾರ್ಯದರ್ಶಿ ಉಮೇಶ್ ಎನ್. ಕೋಟ್ಯಾನ್ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
ESI ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸಂಕಷ್ಟ:ಸಂಸದ ಬ್ರಿಜೇಶ್ ಚೌಟ ಭೇಟಿ;ಅಧಿಕಾರಿಗಳಿಗೆ ತಾಕೀತು
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.