ಭಾಷೆ, ಸಂಸ್ಕೃತಿಯ ರಕ್ಷಣೆ ನಮ್ಮಿಂದಾಗಬೇಕು: ಸುಬ್ರಹ್ಮಣ್ಯ ಶ್ರೀ
Team Udayavani, Dec 26, 2018, 12:42 PM IST
ಮುಂಬಯಿ: ತುಳುನಾಡಿನ ಸಂಸ್ಕೃತಿ ಯನ್ನು ಉಳಿಸುವಲ್ಲಿ ಮುಂಬಯಿಗರ ಕೊಡುಗೆ ಅಪಾರ. ತುಳು ಭಾಷೆ ಹಾಗೂ ಸಂಸ್ಕೃತಿಯ ರಕ್ಷಣೆ ಯು ನಮ್ಮಿಂದಾಗಬೇಕಾಗಿದೆ. ನಮ್ಮ ಮಕ್ಕಳಿಗೆ ನಾವು ನಮ್ಮೂರಿನ ಮೂಲಸ್ಥಾನಗಳು ಹಾಗೂ ದೈವದೇವರುಗಳ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಮುಂದೆ ಅದು ಬೆಳೆಯಲು ಸಾಧ್ಯವಾಗಿದೆ ಎಂದು ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥರು ನುಡಿದರು.
ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ವತಿಯಿಂದ ದೈವಜ್ಞ ವಿದ್ವಾನ್ ಹೆರ್ಗ ರವೀಂದ್ರ ಭಟ್ ಇವರ ಸಂಯೋಜನೆಯಲ್ಲಿ ಡಿ.23ರಂದು ಸಂಜೆ ಮಾಟುಂಗಾದಲ್ಲಿನ ಮೈಸೂರು ಅಸೋ. ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ತುಳು ಸತ್ಸಂಗ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ನಮ್ಮ ನಾಡಿ ಭಾಷೆ, ಸಂಸ್ಕೃತಿ ಬೆಳೆದು ಮುಂದಿನ ಪೀಳಿಗೆಗೆ ಉಪಯೋಗಬೇಕು ಮತ್ತು ತುಳು ಭಾಷೆಗೆ ಉತ್ತಮ ಸ್ಥಾನಮಾನ ದೊರೆಯಬೇಕು ಎಂಬ ಉದ್ದೇಶದಿಂದ ವಿದ್ವಾನ್ ಹೆರ್ಗ ರವೀಂದ್ರ ಭಟ್ ಅವರ ಸಂಯೋಜನೆಯಲ್ಲಿ ಮೊದಲ ಬಾರಿಗೆ ಮುಂಬ ಯಿಯಲ್ಲಿ ಆಯೋಜಿಸಲಾಯಿತು. ಇಂತಹ ಕಾರ್ಯಕ್ರಮಗಳು ನಿರಂತರ ನಡೆ ಯುತ್ತಿರಲಿ ಎಂಬುದೇ ನಮ್ಮ ಆಶಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾದ ಉಪಸ್ಥಿತರಿದ್ದ ಎಸ್.ಎಂ. ಶೆಟ್ಟಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ್ ಶೆಟ್ಟಿ ಅವರು ಮಾತನಾಡಿ, ಆಧುನಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನವು ನಮ್ಮ ಮಕ್ಕಳಿಗೆ ಅಗತ್ಯವಾಗಿದೆ. ಆದರೆ ಅದರೊಂದಿಗೆ ನಮ್ಮತನವನ್ನು ನಾವು ಮಕ್ಕಳಿಗೆ ಎಲ್ಲಿಯವರೆಗೆ ಕಲಿಸುವುದಿಲ್ಲವೋ, ಅಲ್ಲಿಯವರೆಗೆ ನಮ್ಮ ಭಾಷೆ-ಸಂಸ್ಕೃತಿಯು ಉಳಿಯುವುದು ಕಷ್ಟವಾಗಿದೆ. ತುಳು ನಾಡಿನ ಯಕ್ಷಗಾನದಂತಹ ಶ್ರೀಮಂತ ಕಲೆಯು ನಮ್ಮ ಭಾಷೆ-ಸಂಸ್ಕೃತಿಯನ್ನು ಉಳಿಸುವಲ್ಲಿ ಉತ್ತಮ ಕೊಡುಗೆ ನೀಡಿದೆ. ಹಿಂದಿನ ಕಾಲದಲ್ಲಿ ಒಂದು ಕಾಲೇಜು ಅಥವಾ ವಿವಿಯಲ್ಲಿ ದೊರೆಯುವುದಕ್ಕಿಂತಲೂ ಹೆಚ್ಚಿನ ಅನುಭವ ಯಕ್ಷಗಾನದಲ್ಲಿ ದೊರೆಯುತ್ತಿತ್ತು ಎಂದರು.
ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರು ಮಾತನಾಡಿ, ಇಂದು ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿದ್ದು ಇದು ಉತ್ತಮವಾದ ಬೆಳವಣಿಗೆಯಾಗಿದೆ. ತುಳು ಭಾಷೆ ಎಂಟನೇ ಪರಿಚ್ಛೇದದಲ್ಲಿ ಬರುವಂತಾಗಬೇಕು ಎಂದು ಶುಭ ಹಾರೈಸಿದರು.
ಲೋಣಾವಲ ನಗರ ಪರಿಷತ್‌ನ ಉಪಾಧ್ಯಕ್ಷ ಶ್ರೀಧರ್ ಎಸ್.ಪೂಜಾರಿ ಅವರು ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯನ್ನು ಉಳಿಸುವ ಉದ್ದೇಶದೊಂದಿಗೆ ಆಯೋಜಿಸುತ್ತಿರುವ ಇಂತಹ ಕಾರ್ಯಕ್ರಮವು ಅಭಿನಂದನೀಯ. ನಾನು ಮರಾಠಿ ಮಣ್ಣಿನಲ್ಲಿ ಹುಟ್ಟಿ ಬೆಳೆದಿರುವೆನು. ಇಲ್ಲಿನ ಸಂಸ್ಕೃತಿಯನ್ನು ಗೌರವಿಸುವುದರೊಂದಿಗೆ ತುಳು ಭಾಷೆ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ತುಳು ಭಾಷೆ ಹಾಗೂ ಸಂಸ್ಕೃತಿಗೆ ವಿಶೇಷ ಕೊಡುಗೆಯನ್ನು ನೀಡಿದ ಹಿರಿಯ ಸಾಹಿತಿ ಎಚ್.ಬಿ.ಎಲ್ ರಾವ್ ಹಾಗೂ ಹಿರಿಯ ಹೊಟೇಲ್ ಉದ್ಯಮಿ, ದಾನಿ, ಸಮಾಜಸೇವಕ ಶಿವರಾಮ್ ಜಿ. ಶೆಟ್ಟಿ ಅಜೆಕಾರು ಅವರನ್ನು ಶ್ರೀಗಳ ಹಸ್ತದಿಂದ ತುಳು ರತ್ನ ಪ್ರಶಸ್ತಿ ನೀಡುವುದರೊಂದಿಗೆ ಸಮ್ಮಾನಿಸಲಾಯಿತು.
ಸಮ್ಮಾನಕ್ಕೆ ಉತ್ತರಿಸಿದ ಎಚ್. ಬಿ. ಎಲ್ ರಾವ್ ಅವರು, ಸುಬ್ರಹ್ಮಣ್ಯ ಮಠವು ಮಠ ಸಂಸ್ಕೃತಿಯಿಂದ ಒಂದು ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂಬ ದೃಷ್ಟಿಯಿಂದ ಕಾರ್ಯಕ್ರ ಮವನ್ನು ನೀಡುತ್ತಿರುವುದು ಅಭಿನಂದನೀಯ ಎಂದು ನುಡಿದರು.
ಇನ್ನೋರ್ವ ಸಮ್ಮಾನಿತ ಶಿವರಾಮ್ ಜಿ. ಶೆಟ್ಟಿ ಅಜೆಕಾರು ಅವರು ಮಾತನಾಡಿ, ತುಳುನಾಡಿ ನಲ್ಲಿರುವಂತಹ ಸಂಸ್ಕೃತಿ-ಸಂಸ್ಕಾರ ಬೇರೆಲ್ಲಿಯೂ ನಮಗೆ ದೊರೆಯದು. ಇಂತಹ ಉತ್ತಮ ತುಳು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ನಾವೆಲ್ಲರೂ ಕ್ರಿಯಾಶೀಲರಾಗಬೇಕು ಎಂದರು. ಪ್ರಾರಂಭ ದಲ್ಲಿ ವಿದ್ವಾನ್ ಹರಿದಾಸ್ ಭಟ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾಕಾರ್ಯಕ್ರಮಕ್ಕಿಂತ ಮೊದಲು ತುಳು ಸತ್ಸಂಗದ ಸಂಯೋಜಕರಾದ ದೈವಜ್ಞ ವಿದ್ವಾನ್ ಹೆರ್ಗ ರವೀಂದ್ರ ಭಟ್ ಅವರಿಂದ ವಿಶೇಷ ರೀತಿಯಲ್ಲಿ ತುಳು ನಾಡಿನ ಸಂಸ್ಕೃತಿ, ಭಾಷೆ, ಭೂತಾರಾಧನೆ, ನಾಗಾರಾಧನೆ ಕುರಿತು ಪ್ರವಚನ ಕಾರ್ಯಕ್ರಮವು ಜರಗಿತು. ಅದರೊಂದಿಗೆ ಉಡುಪಿಯ ವಿದೂಷಿ ಶಾಲಿನಿ ಆಚಾರ್ಯ ಅವರ ನೇತೃತ್ವದ ನರ್ತಕಿ ಕಲಾ ತಂಡದವರಿಂದ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯರೂಪಕವು ಪ್ರದರ್ಶನಗೊಂಡಿತು.
ಶ್ರೀಗಳನ್ನು ಸುಬ್ರಹ್ಮಣ್ಯ ಮಠದ ಮುಂಬಯಿ ಶಾಖೆಯ ವ್ಯವಸ್ಥಾಪಕರಾದ ವಿಷ್ಣು ಕಾರಂತ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಹಾರಾ ರ್ಪಣೆಗೈದು ಫಲಪುಷ್ಪ ನೀಡಿ ಗೌರವಿಸಿದರು. ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಕಾರ್ಯಕ್ರಮದ ನಿರೂಪಣೆಗೈದರು.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.