ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಪೂಜಾ ಸಮಿತಿ:  ವಜ್ರ ಮಹೋತ್ಸವ

Team Udayavani, Dec 26, 2018, 2:27 PM IST

2512mum08.jpg

ಮುಂಬಯಿ: ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಪೂಜಾ ಸಮಿತಿಯ ವಜ್ರ ಮಹೋತ್ಸವಕ್ಕೆ ಹರಿಕಥಾ ಕಾಲಕ್ಷೇಪದ‌ ಮೂಲಕ ಡಿ. 22ರಂದು ಚಾಲನೆ ನೀಡಲಾಯಿತು. ಫೋರ್ಟ್‌ನ ಅಲೆಗಾÕಂಡರ್‌ ಶಾಲಾ ಸಭಾಂಗಣದಲ್ಲಿ ಜರಗಿದ ಈ ಪ್ರಥಮ ಸರಣಿ ಕಾಯಕ್ರಮವನ್ನು ಭಾರತ್‌ ಬ್ಯಾಂಕಿನ ನಿರ್ದೇಶಕ ಪುರುಷೋತ್ತಮ ಎಸ್‌. ಕೋಟ್ಯಾನ್‌, ಅಮೀನ್‌ ಬೇರಿಂಗ್‌ನ ಮುಖ್ಯ ಆಡಳಿತ ನಿರ್ದೇಶಕ ಡಿ. ಬಿ. ಅಮೀನ್‌, ಬಪ್ಪನಾಡು ಕ್ಯಾಟರರ್ನ ಬಿ. ಕೂಸಪ್ಪ, ಜನರಲ್‌ ಇನ್ಶೂರೆನ್ಸ್‌ ನ ಪ್ರಬಂಧಕ ಪ್ರಕಾಶ್‌ ಮೂಡಬಿದ್ರೆ, ಸಮಿತಿಯ ಅಧ್ಯಕ್ಷ ಜೆ.ಜೆ. ಕೋಟ್ಯಾನ್‌, ಪದಾಧಿಕಾ ರಿಗಳು,  ಹರಿದಾಸ ದನಂಜಯ ಶಾಂತಿ ಮೊದಲಾದವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ದ್ವಿತೀಯ ಸರಣಿ ಕಾರ್ಯಕ್ರಮವನ್ನು ಭಾಯಂದರ್‌ ಪೂರ್ವದ ಗೋಡ್‌ದೇವ್‌ ನಾಕಾದ ಶುಭಂ ಹಾಲ್‌ನಲ್ಲಿ ಯಕ್ಷಗಾನ ವೈಭವದ ಕಾರ್ಯಕ್ರಮದೊಂದಿಗೆ ಆಚರಿಸ ಲಾಗುವುದು ಎಂದು ಸಭೆಗೆ ಘೋಷಿಸಲಾಯಿತು.

ದಾಸಭಾರ್ಗವ ಬಿರುದಾಂಕಿತ ಎಸ್‌. ಧನಂಜಯ್‌ ಶಾಂತಿ ಅವರ ಹರಿಹರ ಸುತ ಸ್ವಾಮಿ ಅಯ್ಯಪ್ಪ ಎಂಬ ತುಳು ಹರಿಕಥೆಯು ಸಮಿತಿಯ ಸದಸ್ಯ ಮೋಹನ್‌ ಡಿ. ಪೂಜಾರಿ ಮತ್ತು ಪರಿವಾರದವರ ಪ್ರಾಯೋಜಕತ್ವದಿಂದ ನಡೆಯಿತು.

ಅನಂತರ ನಡೆದ ಸಭಾ ಕಾರ್ಯ ಕ್ರಮದಲ್ಲಿ ಸಂಸ್ಥೆಗೆ ದೇಣಿಗೆ ನೀಡಿದ ಚೆಂಬೂರ್‌ನ ಆರ್‌. ಕೆ. ಕೋಟ್ಯಾನ್‌ ದಂಪತಿ, ಹರಿಕಥೆ ಪ್ರಾಯೋಜಕರಾದ ಮೋಹನ್‌ ಡಿ. ಪೂಜಾರಿ ದಂಪತಿ ಹಾಗೂ ಸಮಿತಿಗೆ ನಿರಂತರ ಭಜನಾ ಕಾರ್ಯಕ್ರಮ ನೀಡುತ್ತಿರುವ ವಿದ್ಯಾ ದಾಯಿನಿ ಭಜನ ಮಂಡಳಿ. ತ್ರಿಭುವನೇಶ್ವರಿ ಶನಿ ಮಹಾತ್ಮಾ ಭಜನ ಮಂಡಳಿ, ನ್ಯೂ ಇಂಡಿಯಾ ಇನ್ಶೂÂರೆನ್ಸ್‌ ಭಜನಾ ಮಂಡಳಿ ಹಾಗೂ ಸ್ಟಾÂಂಡರ್ಡ್‌ ಚಾರ್ಟರ್ಡ್‌ ಬ್ಯಾಂಕ್‌ ಭಜನಾ ಮಂಡಳಿಯ ಮುಖ್ಯಸ್ಥರನ್ನು ಸಮ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಹೂಗುತ್ಛ ನೀಡಿ ಗೌರವಿಸಲಾಯಿತು.

ಸಮಿತಿಯ ಅಧ್ಯಕ್ಷ ಜೆ. ಜೆ. ಕೋಟ್ಯಾನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ವಜ್ರ ಮಹೋತ್ಸವವು 2019ರ ಡಿಸೆಂಬರ್‌ನಲ್ಲಿ ನಡೆಯಲಿದ್ದು ಈಗಾಗಲೇ ಸ್ಮರಣ ಸಂಚಿಕೆಯ ಜಾಹೀರಾತು ಪತ್ರಿಕೆಗಳಲ್ಲಿ ಬಿಡುಗಡೆ ಆಗಿದೆ. ಪ್ರತಿ ತಿಂಗಳು ವಿವಿಧ ಸ್ಥಳಗಳಲ್ಲಿ ಸರಣಿ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳಿಗೆ ಶನಿ ಭಕ್ತರ, ಕಲಾ ಪೋಷಕರ ಸಹಕಾರ  ಅಗತ್ಯವಿದೆ ಎಂದರು.

ಅತಿಥಿ ಡಿ. ಬಿ. ಅಮೀನ್‌ ಮಾತನಾಡಿ, 74 ವರ್ಷಗಳ ಹಿಂದೆ ನಿಸ್ವಾರ್ಥ ಸೇವೆಯಿಂದ ಈ ಸಂಸ್ಥೆಯನ್ನು ಸ್ಥಾಪಿಸಿದ ಸ್ಥಾಪಕರನ್ನು ನೆನಪಿಸುವುದು ಅಗತ್ಯವಾಗಿದೆ. ಅವರ ಒಗ್ಗಟ್ಟಿನ, ಒಮ್ಮನಸ್ಸಿನ ಸೇವೆಯೇ  ಸಂಸ್ಥೆಯ ಏಳಿಗೆಗೆ ಕಾರಣವಾಗಿದೆ. ನಾವೆಲ್ಲರೂ ಕೂಡಿ ವಿಜೃಂಭಣೆಯಿಂದ ಅಮೃತ ಮಹೋತ್ಸವವನ್ನು ಆಚರಿಸೋಣ ಎಂದು ನುಡಿದರು.

ಅತಿಥಿಗಳು ಸಂದಭೋìಚಿತವಾಗಿ ಮಾತನಾಡಿ ಸಮಿತಿಯ ಸರ್ವ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷ ಪುರುಷೋತ್ತಮ ಎನ್‌. ಕೋಟ್ಯಾನ್‌ ಮಾತನಾಡಿ, ಹೊಟ್ಟೆಪಾಡಿಗಾಗಿ ಮುಂಬಯಿ ಮಹಾನಗರಕ್ಕೆ ಆಗಮಿಸಿದ ನಮ್ಮ ಹಿರಿಯ ತುಳು ಕನ್ನಡಿಗರು ವೆಸ್ಟರ್ನ್ ಇಂಡಿಯಾ ಶನಿ ಮಹಾತ್ಮಾ ಪೂಜಾ ಸಮಿತಿಯಂತೆ ಹಲವಾರು ಸಂಘ ಸಂಸ್ಥೆಗಳನ್ನು ಹುಟ್ಟಿ ಬೆಳೆಸಿದ್ದಾರೆ. ಆಧ್ಯಾತ್ಮಿಕವಾಗಿ ಬಹಳ ಸಮಾಜಸೇವೆಯನ್ನು ಮಾಡಿದ್ದಾರೆ. ಇಂತಹ ಸಂಸ್ಥೆಯ ಅಮೃತ ಮಹೋತ್ಸವಕ್ಕೆ ನಾವೆಲ್ಲ ಒಟ್ಟಾಗಿ ಅಣಿಯಾಗುವ ಎಂದು ಹೇಳಿ ಅಲ್ಲಲ್ಲಿ ನಡೆಯಲಿರುವ ಎಲ್ಲ ಸರಣಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸಬೇಕೆಂದರು.

ಈ ಸಂದರ್ಭದಲ್ಲಿ ಪತ್ರಕರ್ತ ಮತ್ತು ಛಾಯಾಚಿತ್ರಗಾರ ಉಮೇಶ್‌ ಕೆ. ಅಂಚನ್‌ ಅವರ ವೀಡಿಯೋ ಸಂಯೋಜನೆ ಮತ್ತು ತಾಂತ್ರಿಕ ನಿರ್ದೇಶನದಲ್ಲಿ ಚಿತ್ರೀಕರಿಸಲ್ಪಟ್ಟ ಧನಂಜಯ್‌ ಶಾಂತಿ ಅವರ ಹರಿಹರ ಸುತ ಸ್ವಾಮಿ ಅಯ್ಯಪ್ಪ ಹರಿಕಥೆಯನ್ನು 3ನೇ ಬಾರಿ ಪುನರ್ಬಿಡುಗಡೆ ಮಾಡಲಾಯಿತು.

ಅತಿಥಿಗಳನ್ನು ಸಮಿತಿಯ ಕೋಶಾಧಿಕಾರಿ ಶರತ್‌ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವನಾಥ ಭಂಡಾರಿ ವಂದಿಸಿದರು. ಕಾರ್ಯಕ್ರಮವನ್ನು ಹರೀಶ್‌ ಶಾಂತಿ ನಿರೂಪಿಸಿದರು.ಸಮಿತಿಯ ಸದಸ್ಯರು, ಹರಿಕಥಾ ಪ್ರೇಮಿಗಳು, ಪರಿಸರದ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್‌’ ರಾಜಕೀಯ!

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

k

Udupi: ಆರೆಸ್ಸೆಸ್‌ ಹಿರಿಯ ಪ್ರಚಾರಕ್‌ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ

Bagalakote-Dryer

Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.