ಅಸಲ್ಫಾದಲ್ಲಿ “ನಾನೇಕೆ ಬರೆಯುತ್ತಿದ್ದೇನೆ’ ವಿಚಾರಿತ ಸಂವಾದ ಕಾರ್ಯಕ್ರಮ

Team Udayavani, Oct 9, 2018, 3:42 PM IST

0710mum13.jpg

ಮುಂಬಯಿ: ತಂದೆಯ ಸ್ವಾತಂತ್ರವೇ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ಬರೆದ ಮೇಲೆ ನೋವು ಕಡಿಮೆ ಯಾಗತೊಡಗಿದಂತೆ ನನ್ನಬರವಣಿಗೆಯೇ ಬದುಕನ್ನೇ ಬದ ಲಾಯಿಸಿತು. ಓದಿನಿಂದ ಬದುಕನ್ನು ಬದಲಾಯಿಸಿಕೊಂಡ ನಾನು ಕವಿತೆಯೊಡನೆ ಮನಸೆಳೆದು  ಕಂಕಣ ಭಾಗ್ಯಕ್ಕೆ  ಪ್ರಾಪ್ತಳಾದೆ. ಹೆಣ್ಣಿನ ಪರಿಸ್ಥಿತಿ ಮೇಲೆ ಸಮಾಜದ ಉದ್ದೇಶಗಳು ಏನಿದ್ದರೂ ಅದನ್ನು ಹೆಣ್ಣಾದವಳು ಮೆಟ್ಟಿನಿಂತು ಸದ್ಗುಣಶೀಲಳಾಗಿ ಜಯಿಸಿಕೊಳ್ಳಬೇಕು. ಹೆಣ್ಣಿಗೆ ಹೆಣ್ಣೇ ಅಬಲೆಯಂತೆ ಕಾಣುವುದಕ್ಕಿಂತ ಸ್ವಂತಿಕೆಯ ಛಲದಿಂದ ಸಫಲತೆ ಕಂಡುಕೊಳ್ಳಬೇಕು. ಸಂಪ್ರದಾಯ ಕ್ಕಿಂತ ವ್ಯಕ್ತಿ ಸ್ವಾತಂತ್ರÂ ಮೆಲೆಂದೆಣಿಸಿದ ಈ ಸಮಾಜದಲ್ಲಿ ನಮ್ಮ ನೋವನ್ನು ಬರವಣಿಗೆಯಲ್ಲಿ  ವ್ಯಯಿಸಿ ನಾವು ಶುದ್ಧಿಗಳಾಗಬೇಕು. ಬರಹಗಾರರಿಗೆ ಅನುಕರಣೆ ಅಪಾಯದ ಶಬ್ದವಾ ಗಿದ್ದು ಸ್ವಭಾಷೆಯ ಬರಹಗಳೇ  ಸಮಾಧಾನಕೊಡುತ್ತದೆ. ಆದ್ದರಿಂದ ಪಾತ್ರಕ್ಕೆ ವ್ಯಕ್ತಿತ್ವ ಹುಟ್ಟಿದಂತೆ ಆಗುತ್ತದೆ ಎಂದು ಹುಬ್ಬಳ್ಳಿಯ ಸಾಹಿತಿ, ಕಾದಂಬರಿಗಾರ್ತಿ ಸುನಂದಾ ಪ್ರಕಾಶ ಕಡಮೆ ತಿಳಿಸಿದರು.

ಅ.6 ರಂದು ಸಂಜೆ ಘಾಟ್ಕೊàಪರ್‌ ಪಶ್ಚಿಮದ ಅಸಲ್ಫಾದ ಶ್ರೀ  ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ಸಭಾ ಗೃಹದಲ್ಲಿ ಮುಂಬಯಿ ವಿಶ್ವ ವಿದ್ಯಾ ಲಯದ ಕನ್ನಡ ವಿಭಾಗ ಮತ್ತು ನೃತ್ಯ ಅಭಿನಯ ಕಲಾಕ್ಷೇತ್ರ ಇವುಗಳ ಜಂಟಿ ಆಶ್ರಯದಲ್ಲಿ ನಡೆದ “ನಾನೇಕೆ ಬರೆಯುತ್ತಿದ್ದೇನೆ’ ವಿಚಾರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಹಿನ್ನೆಲೆಯಿಲ್ಲದೆ ಸಾಹಿತ್ಯ ಲೋಕಕ್ಕೆ ಅಂಟಿಕೊಂಡ ನಾನು ಕವಿಯಾಗಿ ಗುರುತಿಸಿಕೊಂಡಿರುವೆ.  ಸಾಹಿತ್ಯಕ ವಾತಾವರಣ ಇಲ್ಲದೇ ಈ ತನಕ ಮುನ್ನಡೆದು ಬಂದು ಸಾಹಿತ್ಯವನ್ನು ಎದೆಯಾಳದಲ್ಲಿ ತಿಳಿದುಕೊಂಡು ಅದರ ಜೊತೆಗೆನೇ ಬದುಕು ಕಟ್ಟಿಕೊಂಡೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಮಾತನಾಡಿ, ಸಾಹಿತ್ಯ ಚೇತನ ನೀಡಿದ ಇವರು ಸಾಹಿತ್ಯದ ಬದುಕನ್ನು ಕಟ್ಟಿಕೊಂಡವರು. ಬರವಣಿಗೆಯಿಂದ ಬದುಕು ಸಾಧ್ಯ ಎಂದು ತೋರಿಸಿಕೊಟ್ಟ  ಸುನಂದಾ ಪ್ರಕಾಶ್‌ ಅವರು ಮಹಿಳಾ ಸಶಕ್ತಿಗೆ ನೀಡಿದ ಧೀಮಂತ ಲೇಖಕಿಯಾಗಿದ್ದಾರೆ ಎಂದರು.
ವೇದಿಕೆಯಲ್ಲಿ ಹಿರಿಯ ಹೆಸರಾಂತ ಕವಿ ಪ್ರಕಾಶ ಕಡಮೆ, ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡ-ಮುಂಬಯಿ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ, ಹಿರಿಯ ಸಾಹಿತಿ ಡಾ| ವಿಶ್ವನಾಥ್‌ ಕಾರ್ನಾಡ್‌, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರು ಉಪಸ್ಥಿತರಿದ್ದರು. ಕಾಳನಾಯಕ ವಿ. ಮೈಸೂರು, ಗಿರಿ ಸೂರ್ಯರಾಮ ಉಡುಪಿ, ಹೇಮಾ ಸದಾನಂದ ಅಮೀನ್‌, ಪತ್ರಕರ್ತ ಸೋಮನಾಥ್‌ ಕರ್ಕೇರ, ಕೆ. ನಾರಾಯಣ,  ಜಯಲಕ್ಷಿ ¾à ಜೋಕಟ್ಟೆ, ರಮಾ ಉಡುಪ, ಕುಮುದಾ ಆಳ್ವ, ಜ್ಯೋತಿ ಶೆಟ್ಟಿ, ವಿನೋದ್‌ ಹುಬ್ಬಳ್ಳಿ, ಚಂದ್ರಶೇಖರ್‌ ಬೆಳಗಾವಿ, ಡಾ| ಕರುಣಾಕರ್‌ ಶೆಟ್ಟಿ, ಸಾ. ದಯಾ, ಅಶೋಕ್‌ ಎಸ್‌. ಸುವರ್ಣ, ನಂದಾ ಶೆಟ್ಟಿ ಕಲ್ಯಾಣ್‌, ಡಾ| ಉಮಾ ರಾವ್‌, ಅನುಪಮಾ ಎನ್‌. ಎಸ್‌. ಗೌಡ, ಸದಾನಂದ ಅಮೀನ್‌, ಲತಾ ಸಂತೋಷ್‌ ಶೆಟ್ಟಿ ಮುದ್ದುಮನೆ, ಸುರೇಖಾ ಶೆಟ್ಟಿ ಪಾಲ್ಗೊಂಡರು. ಲೇಖಕಿ ಹೇಮಾ ಸದಾನಂದ ಅಮೀನ್‌ ಸ್ವಾಗತಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಸಂವಾದ ನಡೆಸಿದರು. ಸುರೇಖಾ ಎಸ್‌. ದೇವಾಡಿಗ ವಂದಿಸಿದರು. 

ಚಿತ್ರ- ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

Real estate businessman shot while traveling in car

Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿ ಮೇಲೆ ಗುಂಡಿನ ದಾಳಿ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

5-bng

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

Renukaswamy Case: All accused including Darshan appear in court; hearing adjourned

RenukaswamyCase: ದರ್ಶನ್‌ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ

4-bng

Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.