ಸ್ತ್ರೀಯಾಗಿ ಜನಿಸುವುದೇ ಆಶೀರ್ವಾದವಾಗಿದೆ: ಮೇಡಂ ಗ್ರೇಸ್‌ ಪಿಂಟೊ

Team Udayavani, Mar 8, 2020, 6:42 PM IST

mumbai-tdy-1

ಮುಂಬಯಿ, ಮಾ. 7: ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿಶ್ವದ ಗಮನ ಸೆಳೆಯುತ್ತದೆ. ಇದೇ ಸ್ತ್ರೀಶಕ್ತಿಯ ಸರ್ವೋತ್ಕೃಷ್ಟತೆ ಎಂದರೂ ತಪ್ಪಾಗಲಾರದು. ಆದ್ದರಿಂದ ಸ್ತ್ರೀಯಾಗಿ ಜನಿಸುವುದೇ ಭಾಗ್ಯವಾಗಿದೆ ಎಂದು ರಾಯಾನ್‌ ಇಂಟರ್‌ನ್ಯಾಷಶನ್‌ ಶೈಕ್ಷಣಿಕ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಡಾ| ಗ್ರೇಸ್‌ ಪಿಂಟೊ ಅವರು ಅಭಿಪ್ರಾಯಿಸಿದರು.

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 7ರಂದು ರಾಯನ್‌ ಇಂಟರ್‌ನ್ಯಾಷನಲ್‌ ಶೈಕ್ಷಣಿಕ ಸಮೂಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜಕ್ಕೆ ಮಹಿಳೆಯರ ಶ್ಲಾಘನೀಯ ಕೊಡುಗೆ ಮನವರಿಸಿ ಆಚರಿಸುವ ಸುದಿನ ಇದಾಗಿದೆ.

ಮಹಿಳೆಯರು ದೌರ್ಜನ್ಯ ಮತ್ತು ತಾರತಮ್ಯವನ್ನು ಎದುರಿಸುತ್ತಿರುವ ಲಿಂಗ ಸಮಾನ ಜಗತ್ತನ್ನು ಸೃಷ್ಟಿಸಲು ಏಕತೆ ಮತ್ತು ಸಮಾನತೆಯನ್ನು ಪ್ರಚಾರ ಮಾಡುವುದರತ್ತ ಗಮನ ಹರಿಸಿ ಯಶಸ್ಸನ್ನು ಸಾಧಿಸಿದ್ದಾರೆ. ಆ ಹಾದಿಯಲ್ಲಿ ಅಪಾರ ಪ್ರಮಾಣದ ಒತ್ತಡ ಮತ್ತು ಅಡೆತಡೆಗಳನ್ನು ಎದುರಿಸುತ್ತಿದ್ದರೂ, ಮಹಿಳೆಯರು ಗಾಜಿನ ಸೀಲಿಂಗ್‌ನ್ನು ಮುರಿದು ವಿಜಯಶಾಲಿಗಳಾಗಿದ್ದಾರೆ. ಎಲ್ಲೆಡೆ ಮಹಿಳಾ ಉದ್ಯಮಿಗಳು ಅಭೂತ ಪೂರ್ವವಾಗಿ ವ್ಯವಹಾರ, ಸ್ವಉದ್ಯಮ ಗಳನ್ನು ಪ್ರಾರಂಭಿಸಿ ಸದೃಢ ರಾಗುತ್ತಿದ್ದಾರೆ ಎಂಬುವುದು ಗಮನ ಸೆಳೆಯುವ ಸಂಗತಿಯಾಗಿದೆ.

ಫೆಡರೇಶನ್‌ ಆಫ್‌ ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರೀ ಇದರ ಮಹಿಳಾ ವಿಭಾಗವು ಸ್ತ್ರೀಯರಿಗೆ ತಮ್ಮ ಪ್ರತಿಭೆ, ಕೌಶಲ, ಅನುಭವಗಳು ಮತ್ತು ಶಕ್ತಿಗಳನ್ನು ಕ್ಷೇತ್ರಗಳಾದ್ಯಂತ ಪ್ರದರ್ಶಿಸಲು ಪ್ರೋತ್ಸಾಹಿಸುತ್ತದೆ ಮತ್ತು ಸುಗಮಗೊಳಿಸುತ್ತಿದೆ. ಸುಮಾರು 6800ಕ್ಕೂ ಅಧಿಕ ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರನ್ನು ಈ ಸಂಸ್ಥೆ ಪ್ರತಿನಿಧಿಸುತ್ತಿದೆ. ನಾವು ಉದ್ಯಮಶೀಲತೆಯಲ್ಲಿ ಮಾತ್ರವಲ್ಲದೆ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಧನಾತ್ಮಕ ಪ್ರವೃತ್ತಿಯನ್ನು ಕಾಣುತ್ತೇವೆ. ಆದಾಗ್ಯೂ ಮಹಿಳಾ ಸಬಲೀಕರಣ ಮತ್ತು ಅವರ ಉನ್ನತಿಗಾಗಿ ಇನ್ನೂ ದೊಡ್ಡ ಅವಕಾಶ ಸದ್ಯ ಮಹಿಳೆಯರಿಗಿದೆ ಎಂದರು.

ಎಲೀನರ್‌ ರೂಸ್ವೆಲ್ಟ್ ಒಬ್ಬ ಮಹಿಳೆ ಹೊಂದಿರುವ ಪ್ರಚಂಡ ಸಾಮರ್ಥ್ಯದ ಬಗ್ಗೆ ಸುಂದರವಾಗಿ ವರ್ಣಿಸಿದ ಅವರು, ಮಹಿಳೆ ಒಂದು ಚಹಾ ಚೀಲದಂತೆ. ನಾವು ಅವಳನ್ನು ಬಿಸಿನೀರಿನಲ್ಲಿ ಹಾಕುವವರೆಗೂ ಅವಳು ಎಷ್ಟು ಬಲಶಾಲಿ ಎಂದು ಹೇಳಲು ಸಾಧ್ಯವಿಲ್ಲ ಅಂದಿದ್ದಾರೆ. ವಾಸ್ತವವಾಗಿ, ಮಹಿಳೆಯರು ಜೀವನ ದಲ್ಲಿ ದೊಡ್ಡದನ್ನು ಸಾಧಿಸಲು ಸಮರ್ಥರಾಗಿದ್ದಾರೆ. ಏಕೆಂದರೆ ಅವರು ಅಂತಃಪ್ರಜ್ಞೆ, ಧೈರ್ಯ, ನಿರಂತರತೆ ಮತ್ತು ಆಲಿಸುವ ಕೌಶಲಗಳಂತಹ ವಿಶಿಷ್ಟ ಗುಣ ಲಕ್ಷಣಗಳಿಂದ ಆಶೀರ್ವದಿಸಲ್ಪಟ್ಟಿದ್ದಾರೆ. ಮಹಿಳೆಯರು ನಿರಂತರವಾಗಿ ಅನೇಕ ಪಾತ್ರಗಳನ್ನು ಪೂರೈಸುತ್ತಿದ್ದು, ನಂಬಲಾಗದ ಬಹು ಕಾರ್ಯ ಮತ್ತು ನೆಟ್‌ವರ್ಕಿಂಗ್‌ ಸಾಮರ್ಥ್ಯ ಹೊಂದಿದ್ದಾರೆ. ಅವರು ಜನರೊಂದಿಗೆ ಹೆಚ್ಚು ಸುಲಭವಾಗಿ ಸಂಪರ್ಕ ಸಾಧಿಸಬಹುದು ಮತ್ತು ಹೆಚ್ಚು ಅನುಭೂತಿ ಹೊಂದಬಹುದು.

ಇಂತಹ ಉಡುಗೊರೆಗಳಿಂದ ಸ್ವತಃ ತಮ್ಮ ಕರಗಳಲ್ಲಿ ಮತ್ತು ಶಿಕ್ಷಣದಿಂದ ಅವರಿಗೆ ಹಲವಾರು ಹೊಸ ಹಾದಿಗಳನ್ನು ತೆರೆಯಲಾಗಿದೆ. ಮಹಿಳೆಯರು ಸಾಧಿಸಿದರೆ ಖಂಡಿತವಾಗಿಯೂ ಸಮಾಜದಲ್ಲಿನ ಸಾಮಾಜಿಕ, ಆರ್ಥಿಕ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಮಹಿಳೆ ತನ್ನ ಕುಟುಂಬದಲ್ಲಿ ಮಾತ್ರವಲ್ಲದೆ ತನ್ನ ಸಮುದಾಯ ಮತ್ತು ಸಮಾಜದಲ್ಲೂ ಬೃಹತ್‌ ಬದಲಾವಣೆ ತರಬಹುದು.

ಆದ್ದರಿಂದ ಭೂಮಂಡಲದಲ್ಲಿ ಮಹಿಳೆಯಾಗಿ ಜನಿಸುವುದು ಆಶೀರ್ವಾದ ಎಂದು ನೆನಪಿಡುವುದೇ ಬಹುದೊಡ್ಡ ಅಂಶ. ದೊಡ್ಡ ಮತ್ತು ಪ್ರಬಲವಾದ ಕೆಲಸಗಳನ್ನು ಮಾಡಲು ದೇವರು ಮಹಿಳೆಯರಿಗೆ ಶಕ್ತಿ ಮತ್ತು ಘನತೆ, ಬುದ್ಧಿವಂತಿಕೆ ಮತ್ತುಜ್ಞಾನವನ್ನು ದಯಪಾಲಿಸಿದ್ದಾನೆ. ಸ್ತ್ರೀತ್ವದ ನಿಜವಾದ ಸಾರ ಮತ್ತು ಅವಳ ಸಕಾರಾತ್ಮಕ ಪ್ರಭಾವವು ಮುಂದಿನ ಪೀಳಿಗೆಗೆ ಪರಿಣಾಮ ಬೀರುತ್ತದೆ. ನಮ್ಮ ಸಮಾಜದ ಪ್ರತಿಯೊಂದು ವಿಭಾಗಗಳಲ್ಲೂ ನಾವು ಸಕಾರಾತ್ಮಕ ಬದಲಾವಣೆಯನ್ನು ತರಲು ನಮಗೆ ಎಲ್ಲಾ ಸಾಮರ್ಥ್ಯಗಳಿವೆ.

ಇದನ್ನು ಸಮರ್ಥ ನಾಯಕತ್ವದಲ್ಲಿ ಮುನ್ನಡೆಸುವ ಸ್ಥೈರ್ಯವನ್ನು ಮಹಿಳೆ ಹೊಂದಬೇಕು. ಪ್ರತಿಯೊಬ್ಬ ಮಹಿಳೆಯೂ ಇದನ್ನು ಪಾಲಿಸಬೇಕಾದ ಅಂಶ ಮನದಟ್ಟು ಮಾಡಬೇಕು ಎಂದು ನುಡಿದು, ಸಮಸ್ತ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಟಾಪ್ ನ್ಯೂಸ್

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ: ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Arrested: ನಟ ಸುನಿಲ್‌ ಪಾಲ್‌, ಮುಸ್ತಾಕ್‌ ಅಪಹರಣ; ಎನ್‌ಕೌಂಟರ್‌ ಮೂಲಕ ಪ್ರಮುಖ ಆರೋಪಿ ಬಂಧನ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.