ವಿಶ್ವ ತುಳು ಆಯನೋದಲ್ಲಿ ರಂಜಿಸಿದ ಶಶಿಪ್ರಭಾ ಪರಿಣಯ ಯಕ್ಷಗಾನ
Team Udayavani, Jan 3, 2017, 4:55 PM IST
ಇಂದಿನ ಕಂಪ್ಯೂಟರೀಕೃತ ಯುಗದಲ್ಲೂ ಯಕ್ಷ ಗಾನ ಕ್ಷೇತ್ರದಲ್ಲಿ ಮುಂಬಯಿ ತುಳು-ಕನ್ನಡಿಗರ ಸೇವೆ ಅಪಾರವಾಗಿದೆ. ಇಲ್ಲಿ ಯಕ್ಷಗಾನ ಕ್ಷೇತ್ರದಲ್ಲೇ ಅಪಾರ ಸಾಧನೆಯನ್ನು ಮಾಡಿದ ಕಲಾವಿದರು ಹಲವಾರು ಮಂದಿ ಇದ್ದಾರೆ. ಗಂಡುಕಲೆ ಎಂದೇ ಬಿಂಬಿತವಾಗಿರುವ ಯಕ್ಷಗಾನದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರು ಕೂಡಾ ತಾವೇನೂ ಪುರುಷರಿಗಿಂತ ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಥಾಣೆಯ ಸ್ತ್ರೀ ಶಕ್ತಿ ಮಹಿಳಾ ಮಂಡಳಿಯು ಇದಕ್ಕೆ ನಿದರ್ಶನವಾಗಿದೆ ಎಂದು ಹೇಳಬಹುದು.
ಯಕ್ಷಗಾನ ಕ್ಷೇತ್ರದಲ್ಲಿ ಇಲ್ಲಿನ ಸದಸ್ಯೆಯರು ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರತಿಭಾವಂತ ಕಲಾವಿದೆಯರು ಈ ಮಂಡಳಿಯಲ್ಲಿದ್ದಾರೆ. ಇತ್ತೀಚೆಗೆ ಬದಿಯಡ್ಕದಲ್ಲಿ ಜರಗಿದ “ವಿಶ್ವ ಆಯನೋ’ ಸಂದರ್ಭದಲ್ಲಿ ಉಷಾ ಪಿ. ಹೆಗ್ಡೆ ಅವರ ಮುಂದಾಳತ್ವದ ಸ್ತ್ರೀ ಶಕ್ತಿ ಮಹಿಳಾ ಮಂಡಳಿ ಥಾಣೆ ಇದರ ಮಹಿಳಾ ಸದಸ್ಯೆಯರಿಂದ ಶಶಿಪ್ರಭಾ ಪರಿಣಯ ತುಳು
ಯಕ್ಷಗಾನ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಯಕ್ಷಗಾನದ ಹಿಮ್ಮೇಳದಲ್ಲಿ ಭಾಗವತರಾಗಿ ಮನೋಹರ ಬಲ್ಲಾಳ್ ಅಡ್ಲಾ, ಚೆಂಡೆಯಲ್ಲಿ ಶ್ರೀಧರ ಹೆಡಮಲೆ, ಮದ್ದಳೆಯಲ್ಲಿ ಲಕ್ಷ್ಮೀಶ ಬೆಂಗ್ರೂಡಿ, ಚಕ್ರತಾಳದಲ್ಲಿ ಜಯರಾಮ ಪಾಠಾಳಿ ಪಡುಮಲೆ ಅವರು ಪಾಲ್ಗೊಂಡಿದ್ದರು. ವೇಷಭೂಷಣದಲ್ಲಿ ಶ್ರೀ ಶೈಲ ಕಲಾಕೇಂದ್ರ ಬದಿಯಡ್ಕ, ಸುಧೀರ್ ಕುಮಾರ್ ರೈ ಮುಳ್ಳೇರಿಯಾ ಹಾಗೂ ನಿರ್ದೇಶನದಲ್ಲಿ ಕಟೀಲು ಸದಾನಂದ ಶೆಟ್ಟಿ ಅವರು ಸಹಕರಿಸಿದರು.
ಪಾತ್ರವರ್ಗದಲ್ಲಿ ವಸುಂಧರಾ ಶೆಟ್ಟಿ, ಅಶ್ವಿತಾ ಅಮೀನ್, ಶಾಂತಿ ಶೆಟ್ಟಿ, ವೇದಾ ಶೆಟ್ಟಿ, ಪೂರ್ಣಿಮಾ ಅಮೀನ್, ಶೋಭಾ ಶೆಟ್ಟಿ, ಸಾವಿತ್ರಿ ಶೆಟ್ಟಿ ಅವರು ಪಾಲ್ಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಅವರು ಸಂಘದ ಅಧ್ಯಕ್ಷೆ ಉಷಾ ಪಿ. ಶೆಟ್ಟಿ ಅವರನ್ನು ಅಭಿನಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.