ಜಗತ್ತಿನ ಸ್ವರ್ಗ ಥೈಲ್ಯಾಂಡ್
Team Udayavani, Nov 28, 2020, 4:26 PM IST
ಸಿಂಗಾರವೆಂಬ ಸೀರೆಯನ್ನುಟ್ಟು, ಬಂಗಾರವೆಂಬ ಬಳೆಯನ್ನು ತೊಟ್ಟು, ನರ್ತಕಿಯೆಂಬ ನತ್ತನ್ನಿಟ್ಟು, ಚೆಲುವೆ ಚಂದುಳ್ಳಿಯಾಗಿ ಕೈಬೀಸಿ ಕರೆಯುವ ದೇಶ ಥೈಲ್ಯಾಂಡ್.
ಜಗತ್ತಿನ ಪುಟ್ಟ ದ್ವೀಪ ರಾಷ್ಟ್ರ ಥೈಲ್ಯಾಂಡ್ ಪ್ರಕೃತಿದತ್ತವಾದ ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ದೇಶ ಮುನ್ನಡೆಯುತ್ತಿರುವುದು, ಇಲ್ಲಿನ ಜನರು ಜೀವನ ನಡೆಸುತ್ತಿರುವುದು ಪ್ರವಾಸೋದ್ಯಮದಿಂದಲೇ ಎಂಬುದು ಇಲ್ಲಿನ ಅಚ್ಚರಿಯ ವಿಚಾರ. ಹೀಗಾಗಿ ಇಲ್ಲಿ ಪ್ರವಾಸಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವಿಮಾನ ನಿಲ್ದಾಣ, ಅಂಗಡಿ ಮಳಿಗೆಗಳಲ್ಲಿ ಪ್ರವಾಸಿಗರಿಗೆ ಕೈಮುಗಿದು ಸ್ವಾಗತಿಸಲಾಗುತ್ತದೆ ಮತ್ತು ಅದೇ ರೀತಿ ಬೀಳ್ಕೊಡಲಾಗುತ್ತದೆ.
ವಿಶ್ವದ ಮೂಲೆಮೂಲೆಯಿಂದಲೂ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಥೈಲ್ಯಾಂಡ್‌ನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಜತೆಗೆ ಉದ್ಯೋಗ, ಜೀವನವನ್ನು ರೂಪಿಸಲು ಯೋಗ್ಯ ದೇಶವಾಗಿದೆ.
ಸ್ವತ್ಛತೆ ಇಲ್ಲಿ ಎದ್ದು ಕಾಣುವ ವಿಚಾರ. ರಸ್ತೆ, ಹೆದ್ದಾರಿ ಸ್ವತ್ಛತೆ ಕಾರ್ಯ ಮೆಚ್ಚುವಂತಿದೆ. ಟ್ರಾಫಿಕ್ ಜಾಮ್ ಕಾಣ ಸಿಗುವುದೇ ಇಲ್ಲ. ಇಲ್ಲಿ ಹೆದ್ದಾರಿ ನಿರ್ಮಾಣ ಕಾರ್ಯ ಅದೇ ರೀತಿ ಮಾಡಲಾಗಿದೆ. ಇಲ್ಲಿ ಎಂಜಿನಿಯರಿಂಗ್ ಪರಿಣತಿ ಎದ್ದು ಕಾಣುತ್ತದೆ.
ದೇಶದ ಕೇಂದ್ರಬಿಂದು ಬ್ಯಾಂಕಾಕ್ ಅತ್ಯಂತ ಸಮೃದ್ಧಿಯನ್ನು ಹೊಂದಿದ ನಗರ. ಇಲ್ಲಿ ಭಾರತೀಯ ಆಚಾರ, ವಿಚಾರಗಳಿಗೆ ಮನ್ನಣೆ ನೀಡುವುದರ ಜತೆಗೆ ಧರ್ಮ, ಸಂಪ್ರದಾಯ, ಹಬ್ಬಹರಿದಿನಗಳ ಆಚರಣೆಗೂ ಹೆಚ್ಚಿನ ಅವಕಾಶವಿದೆ.
ಕನ್ನಡಿಗರ ಹೃದಯ ಶ್ರೀಮಂತಿಕೆಗೆ ಇಲ್ಲಿನ ಜನ ಗೌರವ ನೀಡುತ್ತಾರೆ. ಕನ್ನಡ ನಾಡುನುಡಿ, ನಿತ್ಯಹರಿದ್ವರ್ಣ ಕಾಡುಗಳು, ಗಂಧದ ಮರ, ರಾಜಮಹಾರಾಜರ ಇತಿಹಾಸ, ಶಿಲ್ಪಕಲೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕ ರಾಜ್ಯದ ಬಗ್ಗೆ ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ವಿಶೇಷ.
ಅತ್ಯಂತ ಸುಸಂಸ್ಕೃತ, ಸರಳ ಜೀವನ ನಡೆಸುವ ಇಲ್ಲಿನ ಜನರು, ಕನ್ನಡಿಗರೊಂದಿಗೆ ಸಹೋದರತ್ವ ಭಾವನೆಯಿಂದ ಬೆರೆತುಕೊಳ್ಳುತ್ತಾರೆ. ಹಬ್ಬಗಳಲ್ಲಿಯೂ ಸಹಭಾಗಿಯಾಗುತ್ತಾರೆ. ದೇವರು, ಪೂಜೆ, ಪುನಸ್ಕಾರಗಳನ್ನು ಗೌರವಿಸುತ್ತಾರೆ.
ಚಿಯಾಂಗ್ ಮಾಯಿ
ಥೈಲ್ಯಾಂಡ್‌ನಲ್ಲಿ ಪ್ರಸಿದ್ಧ ಪ್ರವಾಸಿ ತಾಣ. ಇದು ಥೈಲ್ಯಾಂಡ್‌ನ ಅತ್ಯಂತ ದೊಡ್ಡ ಮತ್ತು ಸುಂದರವಾದ ನಗರ. ಇಲ್ಲಿ ಅತಿ ಹೆಚ್ಚು ಪರ್ವತಗಳಿವೆ. ಬ್ಯಾಂಕಾಂಕ್‌ನಿಂದ ಸುಮಾರು 700 ಕಿ.ಮೀ. ದೂರದಲ್ಲಿದೆ. ಇಲ್ಲಿ ಅತ್ಯುದ್ಭುತ ಗೋಡೆಗಳು, ಸ್ಮಾರಕ, ಪ್ರತಿಮೆಗಳು ಕಾಣಸಿಗುತ್ತವೆ. ಹೆಚ್ಚಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ತಾಣವಾಗಿದೆ.
ಚಿಯಾಂಗ್ ರೈ
ಉತ್ತರ ಥೈಲ್ಯಾಂಡ್ ಪರ್ವತಗಳ ನಡುವೆ ಇರುವ ಚಿಯಾಂಗ್ ರೈ ಆಕರ್ಷಕ ತಾಣ. ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ, ಸುಂದರ ದೃಶ್ಯಗಳು, ಪ್ರಶಾಂತ, ರೋಮಾಂಚನಕಾರಿ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿರುವ ಚಿಯಾಂಗ್ ರಾಯ್ ಕ್ಲಾಕ್ ಟವರ್, ಭವ್ಯವಾದ 9 ಶ್ರೇಣಿಯ ವಾಟ್ ಹುವಾಯಿ ಪಿಯಾ ಕುಂಗ್ ದೇವಾಲಯ ರಚನೆ ಅತ್ಯದ್ಭುತವಾಗಿದೆ. ಇಲ್ಲಿರುವ ಸಿಂಘಾ ಪಾರ್ಕ್, ಮೇ ಕೋಕ್ ನದಿ ಹಾಗೂ ಸುಂದರ ಶಿಖರಗಳಲ್ಲಿ ಒಂದಾಗಿರುವ ದೋಯಿ ಮಾಸಲೋಂಗ್ ಕೂಡ ಇಲ್ಲಿದೆ. ಇಲ್ಲಿ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ.
ವಾಟ್ ರೊಂಗ್ ಖುನ್
ವೈಟ್ ಟೆಂಪಲ್ ಎಂದು ಕರೆಯಲ್ಪಡುವ ವಾಟ್ ರೊಂಗ್ ಖುನ್ ಥೈಲ್ಯಾಂಡ್‌ನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ. ಇದು ಚಿಯಾಂಗ್ ರಾಯ್‌ನ ಹೆಗ್ಗುರುತು. ಬೌದ್ಧ ಮೌಲ್ಯಗಳನ್ನು ಒಳಗೊಂಡ ಇಲ್ಲಿ ಬೌದ್ಧ ಧರ್ಮದ ಶಿಕ್ಷಣ, ಬುದ್ಧನ ಬೋಧನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ದೇವಾಲಯದಲ್ಲಿ ಬಳಸಿರುವ ಗಾಜಿನ ಮೇಲೆ ಸೂರ್ಯನ ಬೆಳಕು ಬಿದ್ದಾಗ ಕಾಣುವ ದೃಶ್ಯ ನಯನಮನೋಹರವಾಗಿರುತ್ತದೆ.
– ಲಕ್ಷ್ಮೀ, ಅಂಕಲಗಿಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Naxalites; ಶರಣಾಗತಿ ಪ್ಯಾಕೇಜ್ ಬೆಚ್ಚಿಬೀಳಿಸಿದೆ: ಸುನಿಲ್ ಕುಮಾರ್ ತೀವ್ರ ಆಕ್ರೋಶ
ಸುಲೈಮಾನ್ ಮನೆಗೆ ಸ್ಪೀಕರ್ ಯು.ಟಿ.ಖಾದರ್ ಭೇಟಿ; ಎಸ್ಪಿ, ಡಿವೈಎಸ್ಪಿ, ಮನೆಯವರ ಜೊತೆ ಸಮಾಲೋಚನೆ
Raichur; ಜೆಸ್ಕಾಂ ಜೆ.ಇ ಹುಲಿರಾಜ ಮನೆ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.