![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 1, 2019, 12:06 PM IST
ಮುಂಬಯಿ: ಪಡುಬಿದ್ರೆ ಬೆಂಗ್ರೆಯ ರಮೇಶ ಗುರುಸ್ವಾಮಿ ಅವರು 25 ವರ್ಷಗಳ ಹಿಂದೆ ಅಪ್ಪಾಜಿ ಬೀಡು ಮಧುಸೂದನ ಮಿಲ್ ಕಂಪೌಂಡ್ ಪಿ. ಬಿ. ಮಾರ್ಗ ವರ್ಲಿ ಇಲ್ಲಿ ಸ್ಥಾಪಿಸಿದ ಶ್ರೀ ಅಪ್ಪಾಜಿ ಬೀಡು ಫೌಂಡೇಶನ್‌ನ ಶ್ರೀ ಅಯ್ಯಪ್ಪ ಸ್ವಾಮಿ ಮಂಡಲ ಪೂಜೆ, ಬೆಳ್ಳಿ ಹಬ್ಬ ಸಂಭ್ರಮದ ಶೋಭಾಯಾತ್ರೆಯು ಡಿ. 30ರಂದು ಬೆಳಗ್ಗೆ ದಾದರ್ ಪಶ್ಚಿಮದ ಪರೇಲ್ ಕಾಮಾYರ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು.
ಮುಂಜಾನೆ ಶ್ರೀ ಅಪ್ಪಾಜಿ ಬೀಡು ಕ್ಷೇತ್ರದಲ್ಲಿ ಗಣಹೋಮ ನಡೆಯಿತು. ನಂತರ ಶ್ರೀ ಕೃಷ್ಣ ವಿಠಲ ಪ್ರತಿಷ್ಠಾನ, ಮುಂಬಯಿ ಸ್ಥಾಪಕರಾದ ವಿದ್ವಾನ್ ವಿಶ್ವನಾಥ ಭಟ್ ಇವರ ಪ್ರಾರ್ಥನೆಯೊಂದಿಗೆ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರು ಅಪ್ಪಾಜಿ ಬೀಡುವಿನಿಂದ ಕಾಮಾYರ್ ಮೈದಾನದವರೆಗೆ ನಡೆದ ಶೋಭಾ ಯಾತ್ರೆಗೆ ಚಾಲನೆ ನೀಡಿ, ಗೌರವ ಸ್ವೀಕರಿಸಿ ಮಾತನಾಡಿ, ಹಿಂದೂ ಧರ್ಮದ ಉಳಿವಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿವೆ. ಇಂತಹ ಧಾರ್ಮಿಕ ಕಾರ್ಯಗಳು ಹೆಚ್ಚಿನ ಮಟ್ಟದಲ್ಲಿ ನಡೆದಾಗ ಧಾರ್ಮಿಕ ಜಾಗೃತಿ ಉಂಟಾಗಲು ಸಾಧ್ಯವಿದೆ. ಅಯ್ಯಪ್ಪ ಸ್ವಾಮಿಯ ಆರಾಧನೆಯಿಂದ ಜನರಲ್ಲಿ ಸುಖ ಶಾಂತಿ ಮೂಡಲಿ ಎಂದು ನುಡಿದು ದಿನ ಪೂರ್ತಿ ನಡೆಯಲಿರುವ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.
ಬಳಿಕ ಅಪ್ಪಾಜಿ ಬೀಡುವಿನಿಂದ ಕಾಮಾYರ್ ಮೈದಾನದವರೆಗೆ ರಮೇಶ್ ಗುರುಸ್ವಾಮಿ ಯವರ ನೇತೃತ್ವದಲ್ಲಿ ದಿನೇಶ್ ಕೋಟ್ಯಾನ್ ಮತ್ತು ಬಳಗದ ಚೆಂಡೆ ವಾದ್ಯಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಿತು.
ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್‌ನ ಟ್ರಷ್ಟಿಗಳಾದ ಶ್ರೀಮತಿ ಶಾಂಭವಿ ಆರ್. ಶೆಟ್ಟಿ, ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್. ಶೆಟ್ಟಿ, ಸುಧಾಕರ ಎನ್. ಶೆಟ್ಟಿ, ಪುಷ್ಪರಾಜ್ ಎಸ್. ಶೆಟ್ಟಿ, ರತ್ನಾಕರ ಆರ್. ಶೆಟ್ಟಿ, ಮೊಹನ್ ಟಿ. ಚೌಟ, ಟ್ರಸ್ಟಿ ಹಾಗೂ ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಬಿ. ದಿನೇಶ್ ಜಿ. ಕುಲಾಲ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸುರೇಶ್ ಎಸ್. ಶೆಟ್ಟಿ ಕೇದಗೆ, ಟ್ರಸ್ಟಿ, ಪ್ರಧಾನ ಕಾರ್ಯದರ್ಶಿ ವಸಂತ ಕೆ. ಪೂಜಾರಿ, ಕೋಶಾಧಿಕಾರಿ ಹರೀಶ್ ಶೆಟ್ಟಿ ನಲ್ಲೂರು, ಉಪಾಧ್ಯಕ್ಷರಾದ ಸಂತೋಷ್ ವಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಭರತ್ ಶೆಟ್ಟಿ ಅತ್ತೂರು, ಜೊತೆ ಕೋಶಾಧಿಕಾರಿ ನೀಮಾ ರಾಜೇಶ್ ಶೆಟ್ಟಿ, ಸಮಿತಿಯ ಸದಸ್ಯರುಗಳಾದ ಉದಯ ಶೆಟ್ಟಿ ಟಾಟಾ, ಬಾಲಚಂದ್ರ ಡಿ. ಶೆಟ್ಟಿ, ಪಾರ್ಥಸಾರತಿ ಆರ್. ಶೆಟ್ಟಿ, ಸನತ್ ಕುಮಾರ್ ಶೆಟ್ಟಿ, ಗಣೇಶ್ ಸಾಲ್ಯಾನ್, ಪದ್ಮನಾಭ ಶೆಟ್ಟಿ, ಜಯಕರ ಶೆಟ್ಟಿ, ಶೇಖರ್ ಶೆಟ್ಟಿ, ಸತೀಶ್ ಪೂಜಾರಿ, ಗಣೇಶ್ ಶೆಟ್ಟಿ, ಸತೀಶ್ ಶೆಟ್ಟಿ, ರಾಜೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ವಿಜಯ ಶೆಟ್ಟಿ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಸಲಹೆಗಾರರಾದ ಅರುಣ್ ಆಳ್ವ ಕಾಂತಾಡಿಗುತ್ತು, ಭೋಜ ಎಸ್. ಶೆಟ್ಟಿ ಕೇದಗೆ, ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ…, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ, ಕಾರ್ಯದರ್ಶಿ ವಿನೋದಾ ಜೆ. ಶೆಟ್ಟಿ, ಕೋಶಾಧಿಕಾರಿ ರೋಹಿಣಿ ಎಸ್. ಪೂಜಾರಿ, ಉಪ ಕಾರ್ಯಾಧ್ಯಕ್ಷೆ ವಿಜಯಶ್ರೀ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ದಿವ್ಯಾ ಪಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸುಜಾತ ಎನ್. ಪುತ್ರನ್, ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ನಿರ್ಮಲಾ ಕೆ. ಶೆಟ್ಟಿ, ಪ್ರಜ್ಞಾ ಎಸ್. ಶೆಟ್ಟಿ, ರಮಾ ಎಸ್. ಶೆಟ್ಟಿ, ರಾಣಿ ಆರ್. ಶೆಟ್ಟಿ, ರಾಗಿಣಿ ಆರ್. ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ಸುಮಿತ್ರಾ ಪಿ. ಶೆಟ್ಟಿ, ಶೋಭಾ ವಿ. ಶೆಟ್ಟಿ, ಸಲಹೆಗಾರರಾದ ಲೀಲಾ ಎಸ್. ಶೆಟ್ಟಿ, ಉಷಾ ಬಿ. ಶೆಟ್ಟಿ, ಯಶೋದಾ ಎಸ್. ಶೆಟ್ಟಿ, ಕವಿತಾ ಜಿ. ಶೆಟ್ಟಿ, ಅರ್ಪಿತಾ ಪಿ. ಶೆಟ್ಟಿ, ವಿಶೇಷ ಆಮಂತ್ರಿತರು ಹಾಗೂ ಅಪ್ಪಾಜಿ ಬೀಡು ಫೌಂಡೇಶನಿನ ಹೆಚ್ಚಿನ ಸದಸ್ಯರುಗಳು, ಪರಿವಾರದವರು ಹಾಗೂ ಭಕ್ತರು ಅಪಾರ ಬಹಳ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾಮಾYರ್ ಮೈದಾನದಲ್ಲಿ ಅಶೋಕ ಕೊಡ್ಯಡ್ಕ ಅವರು ಅಲಂಕರಿಸಿದ ಅಯ್ಯಪ್ಪ ಸ್ವಾಮಿಯ ಭವ್ಯ ಮಂಟಪದಲ್ಲಿ ಪೂಜಾ ವಿಧಿಯು ನೆರವೇರಿದ್ದು ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ಈಶ್ವರ ಐಲ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.