ವರ್ಲಿ ಅಪ್ಪಾಜಿಬೀಡು ಫೌಂಡೇಶನ್‌ ರಜತ ಮಹೋತ್ಸವ


Team Udayavani, Apr 22, 2018, 1:13 PM IST

225.jpg

ಮುಂಬಯಿ: ವರ್ಲಿ ಶ್ರೀ ಅಪ್ಪಾಜಿಬೀಡು ಫೌಂಡೇಷನ್‌ ರಜತ ಮಹೋತ್ಸವ ಸಂಭ್ರಮದಲ್ಲಿರುವುದು ತುಳು-ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ರಮೇಶ್‌ ಗುರುಸ್ವಾಮಿ ಅವರು ಅಪಾರ ಅಯ್ಯಪ್ಪ ಭಕ್ತರನ್ನು  ಶಬರಿಮಲೆ ಯಾತ್ರೆ ಮಾಡಿಸುವ ಮೂಲಕ ಧರ್ಮದ ಹಾದಿಯಲ್ಲಿ ನಡೆಯುವಂತೆ ಪ್ರೇರೇಪಿಸಿದವರು.  ಬೆಳ್ಳಿಹಬ್ಬ ಸಂಭ್ರಮ ಮತ್ತು ವಾರ್ಷಿಕ ಮಹಾಪೂಜೆಯು ಅದ್ದೂರಿಯಾಗಿ ನಡೆಯಲು ಅಕ್ಷಯ ತೃತೀಯ ದಿನದಂದು ಬೆಳ್ಳಿಹಬ್ಬ ಸಂಭ್ರಮಕ್ಕೆ ಮುಹೂರ್ತ ಕಾರ್ಯ ನಡೆದಿರುವುದು ಶುಭ ಫಲದ ಸಂಕೇತವಾಗಿದೆ. ಅಯ್ಯಪ್ಪನ ಪೂಜೆಯ ಮೂಲಕ ನಮ್ಮ ಹಿಂದೂ ಧರ್ಮ ಮತ್ತು ದೇವರ ನಂಬಿಕೆಯು ಇನ್ನಷ್ಟು ಪ್ರಬಲಗೊಂಡಿರುವುದು ಸಂಸ್ಥೆಯ ಹೆಗ್ಗಳಿಕೆಯನ್ನು ಹೆಚ್ಚಿಸಿದೆ. ಶ್ರೀ ಕ್ಷೇತ್ರದ ಬೆಳ್ಳಿಹಬ್ಬ ಸಂಭ್ರಮವು ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಮಾದರಿಯಾಗಿ ನಡೆಯಲಿ ಎಂದು ಜೆರಿಮರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್‌. ಎನ್‌. ಉಡುಪ ಅವರು ನುಡಿದರು.

ವರ್ಲಿ ಅಪ್ಪಾಜಿಬೀಡು ಫೌಂಡೇಶನ್‌ನ 25 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಮತ್ತು ರಜತ ಮಹೋತ್ಸವ ಆಚರಣೆಯು ಮುಂದಿನ ಡಿ. 30ಕ್ಕೆ ಪರೇಲ್‌ನ ಕಾಮಾYರ್‌ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದ್ದು. ಆ ಪ್ರಯುಕ್ತ ಎ. 18 ರಂದು ಶ್ರೀ ಕ್ಷೇತ್ರ ವರ್ಲಿ ಅಪ್ಪಾಜಿಬೀಡಿನ ಶ್ರೀ ಸಿದ್ಧೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ರಜತ ಮಹೋತ್ಸವ ಸಂಭ್ರಮದ ಮುಹೂರ್ತ ಕಾರ್ಯಕ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅದಕ್ಕೂ ಪುಣ್ಯವಿರಬೇಕು. ಆದ್ದರಿಂದ ಈ ಪುಣ್ಯ ಕಾರ್ಯದಲ್ಲಿ ಭಕ್ತರು, ತುಳು-ಕನ್ನಡಿಗರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.

ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್‌ ಶೆಟ್ಟಿ ನಲ್ಯಗುತ್ತು ಇವರು ಮಾತನಾಡಿ, ಪ್ರತಿ ವರ್ಷ ಈ ಕ್ಷೇತ್ರದಲ್ಲಿ ನಡೆಯುವ ಅಯ್ಯಪ್ಪ ಮಹಾಪೂಜೆಯಲ್ಲಿ ಪಾಲ್ಗೊಳ್ಳುತ್ತೇನೆ. ಈ ಕ್ಷೇತ್ರದ ಧರ್ಮ ಕಾರ್ಯವು ಯುವಪೀಳಿಗೆಗೆ ದಾರಿದೀಪವಾಗಿದೆ. ಬೆಳಿºಹಬ್ಬದೊಂದಿಗೆ ಅಯ್ಯಪ್ಪ ಮಹಾಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲು ಆಯ್ದುಕೊಂಡಿರುವ ಕಾಮಾYರ್‌ ಮೈದಾನದಲ್ಲಿ ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿಯ ಸದಸ್ಯರೆಲ್ಲರೂ ಜವಾಬ್ದಾರಿಯುತವಾಗಿ ಸೇವಾನಿರತರಾಗುತ್ತೇವೆ ಎಂದು ನುಡಿದು ಬೆಳ್ಳಿಹಬ್ಬ ಸಂಭ್ರಮಕ್ಕೆ ದೇಣಿಗೆಯನ್ನು ಘೋಷಿಸಿದರು.

ರೇರೋಡ್‌ ಶ್ರೀ ಅಯ್ಯಪ್ಪ ಭಕ್ತವೃಂದದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಇವರು ಮಾತನಾಡಿ, ರೇರೋಡ್‌ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಅಪ್ಪಾಜಿಬೀಡಿನ ಸೇವಾಕರ್ತರ ಸೇವೆ ಗಣನೀಯವಾಗಿದೆ. ಮುಂದೆ ನಡೆಯಲಿರುವ ಅಪ್ಪಾಜಿಬೀಡಿನ 25 ನೇ ವಾರ್ಷಿಕ ಸಂಭ್ರಮಾಚರಣೆಗೆ ನಮ್ಮ ಸಹಕಾರ ಸದಾಯಿದೆ ಎಂದು ನುಡಿದು ತಮ್ಮ ದೇಣಿಗೆಯನ್ನು ನೀಡಿ ಶುಭಹಾರೈಸಿದರು.

ವಿದ್ಯಾವಿಹಾರ್‌ ಶ್ರೀ ಶಾಸ್ತ ಸೇವಾ ಸಮಿತಿಯ ದಿವಾಕರ ಗುರುಸ್ವಾಮಿ ಇವರು ಮಾತನಾಡಿ, ಅಪ್ಪಾಜಿಬೀಡಿನ  ಬೆಳ್ಳಿಹಬ್ಬ ಸಂಭ್ರಮವು ಅರ್ಥಪೂರ್ಣವಾಗಿ ನಡೆಯಲಿ. ಶ್ರೀ ಅಯ್ಯಪ್ಪ ಸ್ವಾಮಿಯು ಎಲ್ಲಾ ಭಕ್ತರನ್ನು ಅನುಗ್ರಹಿಸಲಿ ಎಂದು ಹಾರೈಸಿದರು. ಅಪ್ಪಾಜಿಬೀಡಿನ ಟ್ರಸ್ಟಿ ರಘುನಾಥ್‌ ಎನ್‌. ಶೆಟ್ಟಿ ಕಾಂದಿವಲಿ ಇವರು ಮಾತನಾಡಿ, ಅಯ್ಯಪ್ಪ ಮಹಾಪೂಜೆ ಮತ್ತು ಬೆಳ್ಳಿಹಬ್ಬ ಸಮಾರಂಭವು ತುಳುನಾಡಿನ ಸಂಭ್ರಮದ ಮಹೋತ್ಸವದಂತೆ ವಿಜೃಂಭಿಸಲಿ ಎಂದರು.

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಜೆ. ಶೆಟ್ಟಿ ಇವರು ಮಾತನಾಡಿ, ಮಹಿಳೆಯರೆಲ್ಲರೂ ಉತ್ಸುಕತೆಯಿಂದ ಈ ಸಂಭ್ರಮದ ಯಶಸ್ಸಿಗೆ ಸಹಕರಿಸಬೇಕು. ಎಲ್ಲಾ ಸದಸ್ಯೆಯರು ದೇಣಿಗೆ ಮತ್ತು ಸೇವೆಯನ್ನು ನೀಡಲು ಮುಂದಾಗಿದ್ದಾರೆ ಎಂದು ನುಡಿದರು. ಆಡಳಿತ ಟ್ರಸ್ಟಿ ಶಾಂಭವಿ ರಮೇಶ್‌ ಶೆಟ್ಟಿ ಇವರು ಮಾತನಾಡಿ, ಕಳೆದ 24 ವರ್ಷಗಳಿಂದ ಅಯ್ಯಪ್ಪ ದೇವರು ಅಪ್ಪಾಜಿಬೀಡಿನಲ್ಲಿ ಪೂಜೆಯನ್ನು ಸ್ವೀಕರಿಸುತ್ತಿದ್ದು, ಈ ಬಾರಿ ಪರೇಲ್‌ನ ಕಾಮಾYರ್‌ ಮೈದಾನದಲ್ಲಿ ಮಹಾಪೂಜೆಯನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ. ಕ್ಷೇತ್ರದ ಬಗ್ಗೆ ನಂಂಬಿಕೆ ಇಟ್ಟವರಿಗೆ ಎಲ್ಲರಿಗೂ ಒಳಿತಾಗಿದೆ. ಭವಿಷ್ಯದಲ್ಲೂ ದೇವರ ಅನುಗ್ರಹ ಎಲ್ಲರಿಗೂ ಇರಲಿದೆ ಎಂದರು.

ಕಾರ್ಯಕ್ರಮವನ್ನು ಟ್ರಸ್ಟ್‌ನ ಕೋಶಾಧಿಕಾರಿ ಹರೀಶ್‌ ಶೆಟ್ಟಿ ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ವಿನೋದಾ ಜೆ. ಶೆಟ್ಟಿ ವಂದಿಸಿದರು. ಮಹಿಳಾ ವಿಭಾಗದ ಸುಜಾತಾ ಎನ್‌. ಪುತ್ರನ್‌, ರೋಹಿಣಿ ಎಸ್‌. ಪೂಜಾರಿ, ವಿನೋದಾ ಜೆ. ಶೆಟ್ಟಿ ಪ್ರಾರ್ಥನೆಗೈದರು. ಮೋಹನ್‌ ಚೌಟ, ಕೇದಗೆ ಭೋಜ ಶೆಟ್ಟಿ, ಉದಯ ಶೆಟ್ಟಿ ಇವರು ಅತಿಥಿಗಳನ್ನು ಗೌರವಿಸಿದರು. ಸಭೆಯಲ್ಲಿ ಅಪ್ಪಾಜಿಬೀಡಿನ ಟ್ರಸ್ಟಿಗಳು, ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು, ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂಸ್ಥೆಯ ಸದಸ್ಯರು, ಮಾಲಾಧಾರಿಗಳು, ಟ್ರಸ್ಟಿಗಳು, ಸಂಸ್ಥೆಯ ಮೇಲಿಟ್ಟಿರುವ ಪ್ರೀತಿ, ಅಭಿಮಾನ, ಗೌರವ ಹಾಗೂ ಸಹಕಾರಕ್ಕೆ ಋಣಿಯಾಗಿದ್ದೇನೆ. ಎಲ್ಲರ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಪೂಜೆ ಮತ್ತು ವಿವಿಧ ಸೇವಾ ಕಾರ್ಯಗಳು ವಿಜೃಂಭಣೆಯಿಂದ ನಡೆಯುವಂತಾಗಿದೆ. ಇಲ್ಲಿ ಮಾಲಾಧಾರಣೆಗೈದ ಭಕ್ತರು ವಿವಿಧೆಡೆಗಳಲ್ಲಿ ನೆಲೆಸಿದರು ಕೂಡಾ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ರಜತ ಸಂಭ್ರಮಕ್ಕೂ ಎಲ್ಲರ ಸಹಕಾರ ಸದಾಯಿರಲಿ 
– ರಮೇಶ್‌ ಗುರುಸ್ವಾಮಿ (ಸ್ಥಾಪಕರು : ಅಪ್ಪಾಜಿಬೀಡು ಫೌಂಡೇಷನ್‌ ಟ್ರಸ್ಟ್‌).
ರಜತ ಮಹೋತ್ಸವವು ಬರುವ ಡಿ. 30 ರಂದು ಪರೇಲ್‌ನ ಕಾಮಾYರ್‌ ಮೈದಾನದಲ್ಲಿ ಬೆಳಗ್ಗೆ 8 ರಿಂದ ರಾತ್ರಿ 11 ರವರೆಗೆ ನಡೆಯಲಿದ್ದು, ಅಯ್ಯಪ್ಪ ಮಹಾಪೂಜೆಯು ಅದ್ದೂರಿಯಾಗಿ ನೆರವೇರಲಿದೆ. ಬೆಳಗ್ಗೆ ಭವ್ಯ ಮೆರವಣಿಗೆಯ ಬಳಿಕ, ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. ಸಂಜೆ ಧಾರ್ಮಿಕ ಸಭೆಯಲ್ಲಿ ಪುತ್ತಿಗೆ  ಮಠದ ಶ್ರೀ ಸುಗುಣೇಂದ್ರ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳ ಧರ್ಮಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಹಾದಾನಿಗಳಿಗೆ ಗೌರವ, ಗುರುಸ್ವಾಮಿಗೆ ಗುರುವಂದನೆ, ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಶ್ರೀ ಕ್ಷೇತ್ರದ ಸರ್ವ ಭಕ್ತಾದಿಗಳ ಸಹಕಾರ ಮತ್ತು ದೇವರ ಅನುಗ್ರಹದಿಂದ ಎಲ್ಲವೂ ಸುಸೂತ್ರವಾಗಿ ನೆರವೇಲಿದೆ 
– ದಿನೇಶ್‌ ಕುಲಾಲ್‌ (ಕಾರ್ಯಾಧ್ಯಕ್ಷರು : ರಜತ ಮಹೋತ್ಸವ ಸಂಭ್ರಮ).

ಅಪ್ಪಾಜಿಬೀಡು ಫೌಂಡೇಷನ್‌ನ 25 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಮತ್ತು ರಜತ ಮಹೋತ್ಸವ ಸಂಭ್ರಮಕ್ಕೆ ಸದಸ್ಯರು ಒಮ್ಮತ ಹಾಗೂ ಒಗ್ಗಟ್ಟಿನಿಂದ ಸಹಕಾರ, ಪ್ರೋತ್ಸಾಹ ನೀಡುವುದಾಗಿ ತಿಳಿಸಿರುವುದು ಸಮಿತಿಗೆ ಆನೆಬಲ ಬಂದಂತಾಗಿದೆ. ದಾನಿಗಳು, ಭಕ್ತಾಭಿಮಾನಿಗಳು ಬಹಳ  ಉತ್ಸುಕತೆಯಿಂದ ಮಹಾಪೂಜೆ ಮತ್ತು ಬೆಳ್ಳಿಹಬ್ಬಕ್ಕೆ ಸಹಕರಿಸುವ ಭರವಸೆ ನೀಡಿದ್ದಾರೆ. ಇದೆಲ್ಲ ಶ್ರೀ ಕ್ಷೇತ್ರದ ದೇವರ ಅನುಗ್ರಹ ಮತ್ತು ಆಶೀರ್ವಾದದಿಂದ ಸಾಧ್ಯವಾಗುತ್ತಿದೆ. ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗುವುದು ಒಂದು ರೀತಿಯ ಸಂಭ್ರಮವಾಗಿದೆ. ಇದರ ಯಶಸ್ಸಿಗೆ ತುಳು-ಕನ್ನಡಿಗರ ಪ್ರೋತ್ಸಾಹ, ಸಹಕಾರ ಸದಾಯಿರಲಿ 
– ಸುರೇಶ್‌ ಶೆಟ್ಟಿ ಕೇದಗೆ 
(ಅಧ್ಯಕ್ಷರು : ವರ್ಲಿ  ಅಪ್ಪಾಜಿಬೀಡು ಫೌಂಡೇಷನ್‌ ಟ್ರಸ್ಟ್‌).

ಟಾಪ್ ನ್ಯೂಸ್

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

OM BIrla

Waqf ಸಮಿತಿಯಿಂದ ದೂರ: ಇಂದು ಸ್ಪೀಕರ್‌ ಜತೆ ವಿಪಕ್ಷ ಚರ್ಚೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.