ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಗುಜರಾತ್‌ ಘಟಕ ವಾರ್ಷಿಕೋತ್ಸವ


Team Udayavani, Nov 6, 2018, 3:18 PM IST

0411mum03.jpg

ಅಂಕ್ಲೇಶ್ವರ: ದುಡಿಮೆಯ ಮೂಲಕ ಜೀವನ ಕಂಡುಕೊಳ್ಳಲು ಶತಮಾನದಿಂದ ಗುಜರಾತ್‌ನಲ್ಲಿ ನೆಲೆಯಾದ ತುಳು ಕನ್ನಡಿಗರು ಸಾಮರಸ್ಯದ ಬಾಳಿನ ಪ್ರತೀಕ. ಜೀವನ ನಿರ್ವಹಣೆಗೆ ಇಲ್ಲಿಗೆ ಬಂದಿದ್ದರೂ, ಸೇವೆಯಲ್ಲಿ ತೊಡಗಿರುವ ತುಳು-ಕನ್ನಡಿಗರು ಎಲ್ಲರಿಗೂ ಪ್ರೇರಣೆ ಎಂದು ಗುಜರಾತ್‌  ಕ್ರೀಡಾ ಮತ್ತು  ಸಾರಿಗೆ ಸಚಿವ ಈಶ್ವರ್‌ಸಿಂಹ್‌ ಪಾಟೇಲ್‌ ತಿಳಿಸಿದರು.

ನ. 3ರಂದು ಅಪರಾಹ್ನ ಅಂಕ್ಲೇಶ್ವರದ ಮಾ ಶಾರದ ಭವನ ಪುರಭವನದ ಸಭಾಗೃಹದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಗುಜರಾತ್‌ ಘಟಕದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತುಳು-ಕನ್ನಡಿಗರ ಪ್ರತಿಯೊಂದು ಕಾರ್ಯಕ್ರಮಗಳಿಗೆ  ಪ್ರೋತ್ಸಾಹ ಸಿಗಲಿದೆ ಎಂದು ಭರವಸೆ ನೀಡಿದರು.

ಬಿಳಿ ಪಂಚೆ ತೊಟ್ಟು, ಮುಟ್ಟಾಲೆ ಧರಿಸಿದ್ದ‌ ಸಚಿವ ಈಶ್ವರ್‌ಸಿಂಹ್‌ ಪಾಟೇಲ್‌ ಅವರನ್ನು ತುಳು ಸಂಸ್ಕೃತಿ ಬಿಂಬಿಸುವ, ತುಳುವ ಶಾಲು ಹೊದೆಸಿ, ಹಣೆಗೆ ಕುಂಕುಮ ಹಚ್ಚಿ, ಹಿಂಗಾರ, ಅಡಿಕೆ, ವೀಳ್ಯದೆಲೆ, ಕುಂಕುಮ, ಪುಷ್ಪವನ್ನೊಳಗೊಂಡ  ತಾಮ್ರದ ಬಟ್ಟಲು ನೀಡಿ  ಗೌರವಿಸಲಾಯಿತು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಗುಜರಾತ್‌ ಘಟಕದ ಅಧ್ಯಕ್ಷ ಅಜಿತ್‌ ಎಸ್‌. ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಅಂಕ್ಲೇಶ್ವರ  ನಗರಪಾಲಿಕಾ ಉಪಾಧ್ಯಕ್ಷ ನಿಲೇಶ್‌ ಪಾಟೇಲ್‌, ಮುನಿಯಾಲ್‌ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಟ್ರಸ್ಟಿ ಉದಯ ಶೆಟ್ಟಿ ಮುನಿಯಾಲ್‌, ಬಂಟ್ಸ್‌ ಸಂಘ ಮುಂಬಯಿ ಇದರ ಉನ್ನತ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಕಿಶೋರ್‌ ಕುಮಾರ್‌ ಕುತ್ಯಾರ್‌, ಬಂಟ್ಸ್‌ ಸಂಘ ಮುಂಬಯಿ ಇದರ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಕರ್ನಾಟಕ ಸಮಾಜ ಸೂರತ್‌ ಅಧ್ಯಕ್ಷ ಮನೋಜ್‌ ಸಿ. ಪೂಜಾರಿ, ಉದ್ಯಮಿಗಳಾದ ಬಾಬುಭಾಯಿ ಪಾಟೇಲ್‌, ರಾಮಕೃಷ್ಣ ಗಂಭೀರ್‌, ಹರೀಶ್‌ ಬಿ. ಶೆಟ್ಟಿ, ಸಂದೀಪ್‌ ಭಾç  ಪಾಟೇಲ್‌, ಕೇತನ್‌ ಮೋದಿ, ಹಸನ್ಮುಖ್‌ ಪಾಟೇಲ್‌, ಜಯಂತ್‌ ಶೆಟ್ಟಿ ಸೂರತ್‌, ದಯಾನಂದ್‌ ಸಾಲ್ಯಾನ್‌ ಬರೋಡಾ, ಉದಯ ಸಿ. ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಂಗಳೂರು ಸಂಸ್ಥಾಪಕಾಧ್ಯಕ್ಷ ಸತೀಶ್‌ ಶೆಟ್ಟಿ ಪಟ್ಲ, ಮಹಾಬಲ ಶೆಟ್ಟಿ ಪಟ್ಲಗುತ್ತು, ಪುರುಷೋತ್ತಮ ಭಂಡಾರಿ, ಸಿಎ ಸುಧೇಶ್‌ ರೈ, ಗುಜರಾತ್‌ ಘಟಕದ ಗೌರವಾಧ್ಯಕ್ಷ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷ ಹರೀಶ್‌ ಪೂಜಾರಿ, ಪ್ರಧಾನ ಕಾರ್ಯದರ್ಶಿ ವಿಶಾಲ್‌ ಶಾಂತಾ, ತುಳು ಸಂಘ ಅಂಕ್ಲೇಶ್ವರ ಅಧ್ಯಕ್ಷ ಶಂಕರ್‌ ಕೆ. ಶೆಟ್ಟಿ, ಗೌರವಾಧ್ಯಕ್ಷ ರವಿನಾಥ್‌ ವಿ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಶೋಕ್‌ ಸಿ. ಶೆಟ್ಟಿ, ಕೋಶಾಧಿಕಾರಿ ಶಂಕರ್‌ ಆರ್‌. ಶೆಟ್ಟಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಂಕರ್‌ ಕೆ. ಶೆಟ್ಟಿ ಮತ್ತು ಪ್ರೇಮಾ ಶಂಕರ್‌, ರವಿನಾಥ್‌ ವಿ. ಶೆಟ್ಟಿ ಮತ್ತು ಭಾರತೀ ರವಿನಾಥ್‌, ಅಜಿತ್‌ ಎಸ್‌. ಶೆಟ್ಟಿ ಮತ್ತು ಪ್ರಜುತಾ ಅಜಿತ್‌ ದಂಪತಿಗಳು ಶ್ರೀ ಮಹಾತ್‌ ಶ್ರೀ ಮನಮೋಹನ್‌ ದಾಸ್‌ಜಿ ಗುಮನ್‌ದೇವ್‌ ಪಿತಾದೀಸ್‌ ಅವರ ಪಾದಪೂಜೈಗದು ಗುರುವಂದನೆ ಸಲ್ಲಿಸಿದರು. ಸಂಸ್ಥೆಯ ತೆರೆಮರೆಯ ಪ್ರಧಾನ ರೂವರಿ, ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್‌ ಬಿ. ಶೆಟ್ಟಿ ಮತ್ತು ಸತೀಶ್‌ ಶೆಟ್ಟಿ ಪಟ್ಲ ಅವರನ್ನು ಸಚಿವ ಈಶ್ವರ್‌ಸಿಂಹ್‌ ಪಾಟೇಲ್‌ ಅವರು ವಿಶೇಷವಾಗಿ ಸಮ್ಮಾನಿಸಿ ಗೌರವಿಸಿದರು.

ಆಶೀರ್ವಚನ ನೀಡಿದ ಶ್ರೀ ಮಹಾತ್‌ ಶ್ರೀ ಮನಮೋಹನ್‌ ದಾಸ್‌ಜಿ ಗುಮನ್‌ದೇವ್‌ ಪಿತಾದೀಸ್‌ ಅವರು, ನಾನು ತುಳುವಿನ ಅರ್ಥವನ್ನು ತಿಳಿಯಲಾರೆ, ಆದರೆ ನಿಮ್ಮ ಭಾಷಾಪ್ರಿಯತೆ, ಸಂಸ್ಕೃತಿಯ ಒಲುಮೆ, ಶಿಸ್ತುಬದ್ಧ ಸಂಘಟನೆ, ಆತಿಥ್ಯ ಗೌರವದಿಂದ ಧನ್ಯನಾದೆ. ನಿಷ್ಠೆಯ ಕರ್ಮವನ್ನು ತಿಳಿಸಿ, ಉಳಿಸಿ ಬೆಳೆಸಿದವರಲ್ಲಿ ಕರ್ನಾಟಕದವರು  ಪ್ರಧಾನರು. ಭಾಷೆಯಿಂದ ಭಗವಂತನನ್ನು ಆಧಾರಿಸಿಕೊಳ್ಳಬಹುದು ಎನ್ನುವುದಕ್ಕೆ ಇದೊಂದು ಕಾರ್ಯಕ್ರಮ ಸಾಕ್ಷಿಯಾಗಿದೆ. ಭಾಷೆ ಜತೆಗೆ ಸಂಸ್ಕೃತಿ ಮತ್ತು ಭಾವನೆಗಳನ್ನು ಮೈಗೂಡಿ ಮಾನವತಾವಾದಿಗಳಾಗಿ ಬಾಳಿರಿ. ಭಕ್ತಿಯ ಶಕ್ತಿಯಿಂದ ನಾವು ಬೆಳೆದು ಸರ್ವರಿಗೂ ಪ್ರೇರಕರಾಗೋಣ ಎಂದ‌ು ನುಡಿದರು.

ರಂಜನಿ ಪಿ. ಶೆಟ್ಟಿ ಸೂರತ್‌, ಶಿವಪ್ರಸಾದ್‌ ಶೆಟ್ಟಿ, ಶಶಿ ಶೆಟ್ಟಿ ಸಂತೋಷ್‌ ಕ್ಯಾಟರರ್, ಅಶ್ವಿ‌ತ್‌ ಶೆಟ್ಟಿ, ಜಯಪ್ರಕಾಶ್‌ ಕಣಂತೂರು ಸಹಿತ ಗಣ್ಯರನ್ನು ಗೌರವಿಸಲಾಯಿತು. ನವೀನ್‌ ಶೆಟ್ಟಿ ಎಡೆ¾àರ್‌ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು. ಕಿರಣ್‌ ಪಾಟೇಲ್‌ ಅತಿಥಿಗಳನ್ನು ಪರಿಚಯಿಸಿದರು. ಫೌಂಡೇಶನ್‌ನ ಪದಾಧಿಕಾರಿಗಳು ಅತಿಥಿಗಳನ್ನು ಗೌರವಿಸಿದರು. ಕರ್ನೂರು ಮೋಹನ್‌ ರೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.  ಉಪಾಧ್ಯಕ್ಷ ಹರೀಶ್‌ ಪೂಜಾರಿ ವಂದಿಸಿದರು. ಫೌಂಡೇಶನ್‌ನ ಸದಸ್ಯರನೇಕರು ಸೇರಿದಂತೆ ಅಪಾರ ಸಂಖ್ಯೆಯ ಕಲಾಭಿಮಾನಿಗಳು ಗುಜರಾತ್‌ ರಾಜ್ಯದಾದ್ಯಂತ ಆಗಮಿಸಿದ್ದರು. ತನ್ಮಯ ಗುರೂಜಿ ನಿರ್ದೇಶನದ ಸ್ವರಸಪ್ತ ಬಳಗದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಸಿದ್ಧ ಯಕ್ಷಗಾನ ಕಲಾವಿದರು ಸತೀಶ್‌ ಶೆಟ್ಟಿ ಪಟ್ಲ ಭಾಗವತಿಕೆಯಲ್ಲಿ “ಕನಕಾಂಗಿ ಕಲ್ಯಾಣ’ ಯಕ್ಷಗಾನ ಪ್ರದರ್ಶಿಸಿದರು. 

ಕಲಾಭಿಮಾನಿಗಳ ಪ್ರೋತ್ಸಾಹವೇ ನನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ. ಯಕ್ಷಗಾನ ಕಲಾವಿದರಿಗೆ ನೆರವಾಗಿ ಈ ಸಂಸ್ಥೆ ಶ್ರಮಿಸಲಿದೆ. ಕಲೆ-ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಸದಾ ನಮ್ಮೊಂದಿಗಿರಲಿ.
– ಸತೀಶ್‌ ಶೆಟ್ಟಿ ಪಟ್ಲ, ಸ್ಥಾಪಕಾಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಷನ್‌

ಯಕ್ಷಗಾನ ಆರಾಧಕರ ಸೇರುವಿಕೆಯಿಂದ ಯಕ್ಷಲೋಕ ಸೃಷ್ಟಿಯಾಗಿದೆ. ಇದಕ್ಕೆ ಸತೀಶ್‌ ಶೆಟ್ಟಿ ಪಟ್ಲರ ಅಭಿಮಾನವೂ ಕಾರಣ. ಇಂತಹ ಏಕತಾ ಮನೋಧರ್ಮದಿಂದ  ನಾವೆಲ್ಲರೂ ಒಗ್ಗೂಡುತ್ತಾ   ಕಲೆ-ಕಲಾವಿದರ ಅಭಿವೃದ್ಧಿಗೆ  ಸಹಕರಿಸೋಣ.
– ಅಜಿತ್‌ ಶೆಟ್ಟಿ,  ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಗುಜರಾತ್‌ ಘಟಕ

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-putthige-2

State Formation: ಶ್ರೀ ಕೃಷ್ಣ ಬೃಂದಾವನ ಹೂಸ್ಟನ್ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

Desi Swara: ಇಟಲಿಯಲ್ಲಿ ದೀಪಾವಳಿ ಬೆಳಕು!

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.