ಪಟ್ಲ ಫೌಂಡೇಶನ್ ಟ್ರಸ್ಟ್ ಗುಜರಾತ್ ಘಟಕ ಸೇವಾರ್ಪಣೆ
Team Udayavani, Nov 3, 2017, 2:35 PM IST
ಮುಂಬಯಿ: ಯಕ್ಷಗಾನ ಉಳಿಸುವ ಸೇವೆ ಪುಣ್ಯದ ಕೆಲಸವಾಗಿದೆ. ಪಟ್ಲ ಅವರ ಚಿಂತನೆ ಗಮನೀಯ ಮತ್ತು ಗಣನೀಯವಾಗಿದೆ. ಕಲೆ-ಕಲಾವಿದರ ಉಳಿವಿಗಾಗಿ ಈತನಕ ಇಂತಹ ಕೆಲಸ ಮಾಡಿದವರು ಯಾರೂ ಇಲ್ಲ. ಇನ್ನು ಮಾಡುವವರೂ ಬರಲಿಕ್ಕಿಲ್ಲ. ಇಂತಹ ಸಾಹಸಮಯ ಕೆಲಸಕ್ಕೆ ಇಳಿದ ಸತೀಶ್ ಪಟ್ಲರಿಗೆ ಶ್ರೀ ಕಟೀಲು ಮಾತೆ ಸದಾ ಹರಸಲಿ ಎಂದು ತುಳು ಸಂಘ ಬರೋಡ ಇದರ ಗೌರವಾಧ್ಯಕ್ಷ ಹಾಗೂ ಕಲ್ಲಾಡಿ ಕೊರಗ ಶೆಟ್ಟಿ ಮತ್ತು ವಿಟuಲ ಶೆಟ್ಟಿ ಪ್ರತಿಷ್ಠಾನ ಇರಾ ಮಂಗಳೂರು ಇದರ ಅಧ್ಯಕ್ಷ ಎಸ್. ಜಯರಾಮ ಶೆಟ್ಟಿ ಬರೋಡ ಅವರು ನುಡಿದರು.
ನ. 2ರಂದು ಬರೋಡದ ಗುಜರಾತ್ ರಿಫೈನರಿ ಟೌನ್‌ಶಿಪ್‌ನ ಕಮ್ಯೂನಿಟಿ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಗುಜರಾತ್ ರಾಜ್ಯ ಘಟಕವನ್ನು ಉದ್ಘಾಟಿಸಿ, ಟ್ರಸ್ಟ್‌ನ ಸಂಸ್ಥಾಪಕಾಧ್ಯಕ್ಷ, ಯಕ್ಷಚಕ್ರೇಶ್ವರ ಸತೀಶ್ ಶೆಟ್ಟಿ ಪಟ್ಲ ಅವರನ್ನು ಸಮ್ಮಾನಿಸಿ ಮಾತನಾಡಿದ ಅವರು, ಇದೊಂದು ಅಪೂರ್ವ ಕಾರ್ಯಕ್ರಮವಾಗಿ ಪಟ್ಲ ಫೌಂಡೇಷನ್ ಗುಜರಾತ್ ಘಟಕವು ಭವಿಷ್ಯದಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಸ್ಥೆಯ ಧ್ಯೇಯೋದ್ದೇಶಗಳಿಗೆ ಸದಾ ಸ್ಪಂದಿಸುತ್ತಿರಲಿ. ಕಲೆ-ಕಲಾವಿದರನ್ನು ಉಳಿಸಿ-ಬೆಳೆಸುವುದು ಪುಣ್ಯದ ಕಾರ್ಯವಾಗಿದೆ. ಈ ಪುಣ್ಯದ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಗುಜರಾತ್ ಬಿಲ್ಲವರ ಸಂಘದ ಸ್ಥಾಪಕ ರೂವಾರಿ ಪ್ರಸಕ್ತ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ಅವರು ಮಾತನಾಡಿ, ಯಾವುದೇ ಕಲಾವಿದನ ಬದುಕು ತ್ಯಾಗಮಯವಾಗಿ ಇರುತ್ತದೆ. ಕಲಾವಿದರ ರಕ್ಷಣೆಯೇ ಕಲಾರಾಧನೆ. ಆದರಲ್ಲೂ ಯಕ್ಷಗಾನ ದೀರ್ಘಾವಧಿ ನಟನ ಧಾರ್ಮಿಕ ಹಿನ್ನಲೆಯ ಪ್ರಸಂಗಗಳನ್ನು ಅರ್ಥಪೂರ್ಣವಾಗಿ ಅಭಿನಯಿಸುವ ಕಲಾವಿದರನ್ನು ರಕ್ಷಿಸಿ ಪೋಷಿಸುವ ಯೋಜನೆಗೆ ಸ್ಪಂದಿಸುವ ಪಟ್ಲ ಫೌಂಡೇಶನ್‌ನ ಸೇವೆ ಸಾಕಾರಗೊಳ್ಳಲಿ ಎಂದು ಅಭಿಪ್ರಾಯಿಸಿದರು.
ಗೌರವ ಅತಿಥಿಗಳಾಗಿ ಉದ್ಯಮಿಗಳಾದ ರಾಧಾಕೃಷ್ಣ ಶೆಟ್ಟಿ ಸೂರತ್, ರಾಮಚಂದ್ರ ವಿ. ಶೆಟ್ಟಿ ಸೂರತ್, ಅಪ್ಪು ಶೆಟ್ಟಿ ಅಹ್ಮದಾಬಾದ್, ಬಾಲಕೃಷ್ಣ ಶೆಟ್ಟಿ ಬರೋಡ, ರವಿನಾಥ್ ಶೆಟ್ಟಿ, ಶಂಕರ್ ಶೆಟ್ಟಿ ಅಂಕ್ಲೇಶ್ವರ್, ಮನೋಜ್ ಸಿ. ಪೂಜಾರಿ ಸೂರತ್, ಡಾ| ಶರ್ಮಿಳಾ ಎಂ. ಜೈನ್ ಬರೋಡ, ಸೂರತ್‌ನ ಹೆಸರಾಂತ ಸಮಾಜ ಸೇವಕ, ಹೊಟೇಲ್ ಉದ್ಯಮಿ ಶಿವರಾಮ ಶೆಟ್ಟಿ ಸೂರತ್, ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಟ್ರಸ್ಟ್‌ನ ಗುಜರಾತ್ ಘಟಕದ ಅಧ್ಯಕ್ಷ ಅಜಿತ್ ಶೆಟ್ಟಿ ಅಂಕ್ಲೇಶ್ವರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಮಾತನಾಡಿ ಟ್ರಸ್ಟ್‌ನ ಸಿದ್ಧಿ-ಸಾಧನೆಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.
ಕೇಂದ್ರ ಕಚೇರಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಇದೊಂದು ಸಾಧನೀಯ ಹೆಜ್ಜೆಯಾಗಿದೆ. ಕಲೆಯ ಜತೆಗೆ ಕಲಾಕಾರರನ್ನು ಉಳಿಸಿ ಬೆಳೆಸುವ ಬೃಹತ್ ಯೋಜನೆಗೆ ಕಲಾಭಿಮಾನಿಗಳ ಸಹಯೋಗ ಅಗತ್ಯ ಎಂದರು.
ಗುಜರಾತ್ ಘಟಕದ ಪ್ರಧಾನ ಸಂಘಟಕ ಹಾಗೂ ತುಳು ಸಂಘ ಬರೋಡ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಸ್ವಾಗತಿಸಿ ಕರ್ನಾಟಕದ ಗಂಡು ಕಲೆ ಯಕ್ಷಗಾನ ನಮ್ಮೆಲ್ಲರ ಹಿರಿಮೆಯಾಗಿದೆ. ಇದರ ಉಳಿವು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಸತೀಶ್ ಪಟ್ಲ ಅವರ ಸೇವೆ ಅನುಪಮ. ನಾವೆಲ್ಲರೂ ಒಗ್ಗೂಡಿ ಅವರ ಕನಸನ್ನು ನನಸಾಗಿಸೋಣ ಎಂದು ನುಡಿದರು.
ಕಾರ್ಯಕ್ರಮದಲ್ಲಿ ವಾಸು ಪಿ. ಸುವರ್ಣ, ಎಸ್. ಕೆ. ಹಳೆಯಂಗಡಿ, ಮದನ್‌ಕುಮಾರ್ ಗೌಡ, ಬಾಲಕೃಷ್ಣ ಎ. ಶೆಟ್ಟಿ, ಇಂದುದಾಸ್ ಶೆಟ್ಟಿ, ಕುಶಲ್ ಶೆಟ್ಟಿ, ರಂಜನಿ ಪ್ರವೀಣ್ ಶೆಟ್ಟಿ ಸೂರತ್, ರಾಧಾಕೃಷ್ಣ ಮೂಲ್ಯ, ಶಾಂತಾರಾಮ ಶೆಟ್ಟಿ ಸೂರತ್ ಮತ್ತಿತರ ಗಣ್ಯರು, ಟ್ರಸ್ಟ್‌ನ ಅಹ್ಮದಾಬಾದ್, ಬರೋಡಾ, ಸೂರತ್, ಅಂಕ್ಲೇಶ್ವರ್ ವಿಭಾಗಗಳ ಮುಖ್ಯಸ್ಥರು, ತುಳು ಸಂಘ ಬರೋಡಾ ಮತ್ತು ಕರ್ನಾಟಕ ಸಮಾಜ ಗುಜರಾತ್ ರಿಫೈನರಿ ಬರೋಡಾ, ಇನ್ನಿತರ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.
ಕು| ವೈಷ್ಣವಿ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮದ ಮುನ್ನ ಸಾಕ್ಷÂಚಿತ್ರದ ಮೂಲಕ ಯಕ್ಷಧ್ರುವ ಸಂಸ್ಥೆಯ ಕಾರ್ಯಸಾಧನೆಗಳನ್ನು ಪ್ರದರ್ಶಿಸಲಾಯಿತು. ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ವಿಶಾಲ್ ಶಾಂತ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಪಟ್ಲ ಸತೀಶ್ ಶೆಟ್ಟಿ ಅವರ ಪ್ರಧಾನ ಭಾಗವತಿಕೆಯಲ್ಲಿ “ಶನೀಶ್ವರ ಮಹಾತೆ¾’ ಯಕ್ಷಗಾನ ಪ್ರದರ್ಶನಗೊಂಡಿತು.
ಅಶಕ್ತ ಕಲಾವಿದರಿಗೆ ಆಶಾಕಿರಣ ವಾಗುವ ದೃಷ್ಟಿಯಿಂದ ಟ್ರಸ್ಟ್‌ನ್ನು ಸ್ಥಾಪಿಸಲಾಗಿದೆ. ಕಲಾವಿದರಿಗೆ ಆರೋಗ್ಯನಿಧಿಯಂತಹ ಸೇವಾ ಯೋಜನೆಯನ್ನು ವಿಸ್ತರಿಸುವ ಸಂಕಲ್ಪವನ್ನು ಟ್ರಸ್ಟ್ ಹೊಂದಿದೆ. ಯಕ್ಷಗಾನ ಕಲಾವಿದರು ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ತಪಾಸಣೆ, ಟ್ರಸ್ಟಿನ ಸದಸ್ಯರಿಂದ ಹಾಗೂ ಯûಾಭಿಮಾನಿಗಳಿಂದ ರಕ್ತದಾನ ಶಿಬಿರವನ್ನು ಟ್ರಸ್ಟ್ ನಡೆಸಿದೆ. ಯಕ್ಷಧ್ರುವ ಸಂಸ್ಥೆಯ ಮೂಲಕ ಶೀಘ್ರವೇ ಯಕ್ಷಕಲಾ ಗ್ರಾಮ ರೂಪಿಸುವ ಭವ್ಯ ಯೋಜನೆ ನಮ್ಮದಾಗಿದೆ. ಕಲಾವಿದರಿಗೆ ವಿಮಾ ಯೋಜನೆ, ಅವರ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹ, ವೈದ್ಯಕೀಯ ನೆರವು ಸೇರಿದಂತೆ ಈಗಾಗಲೇ ಕೋಟ್ಯಾಂತರ ರೂ. ಗಳನ್ನು ಸಂಸ್ಥೆಯು ವ್ಯಯಿಸಿದೆ. ಕಲಾವಿದರಿಂದ ಕಲಾವಿದರಿಗಾಗಿ ಹುಟ್ಟಿಕೊಂಡು ಈ ಸಂಸ್ಥೆಗೆ ಎಲ್ಲರ ಸಹಕಾರ ಆಗತ್ಯವಾಗಿದೆ
– ಪಟ್ಲ ಸತೀಶ್ ಶೆಟ್ಟಿ (ಸಂಸ್ಥಾಪಕಾಧ್ಯಕ್ಷ: ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.