ಯಕ್ಷಪ್ರಿಯ ಬಳಗ ಮೀರಾ ಭಾಯಂದರ್ ವತಿಯಿಂದ ಸಾಧಕರಿಗೆ ಸಮ್ಮಾನ
Team Udayavani, Apr 21, 2019, 12:24 PM IST
ಮುಂಬಯಿ: ಯಕ್ಷಪ್ರಿಯ ಬಳಗ ಮೀರಾ ಭಾಯಂದರ್ ಇದರ 4ನೇ ವಾರ್ಷಿಕೋತ್ಸವ ಮತ್ತು ಸಮ್ಮಾನ ಸಮಾರಂಭವು ಎ. 15 ರಂದು ಸಂಜೆ ಮೀರಾರೋಡ್ ಪೂರ್ವದ, ಸಾಯಿಬಾಬಾ ನಗರದಲ್ಲಿರುವ ಸೈಂಟ್ ಥಾಮಸ್ ಚರ್ಚ್ ಸಭಾಗೃಹದಲ್ಲಿ ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್ ನಲಸೋಪರ ಇದರ ಅಧ್ಯಕ್ಷ ಶಶಿಧರ ಕೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ರಾಜೇಶ್ ಶೆಟ್ಟಿ
ಕಾಪು, ಸುರೇಶ್ ಇರ್ವತ್ತೂರು ಮಲಾಡ್ ಮತ್ತು ಗುಣಕಾಂತ್ ಶೆಟ್ಟಿ
ಕರ್ಜೆ ಇವರನ್ನು ಗಣ್ಯರ ಸಮ್ಮುಖಶಾಲು ಹೊದೆಸಿ. ಫಲಪುಷ್ಪ, ಸ್ಮರಣಿಕೆ
ಯನ್ನಿತ್ತು ಸಮ್ಮಾನಿಸಲಾಯಿತು.
ಪೂರ್ಣಿಮಾ ಎಂ. ಪೂಜಾರಿ, ವಿನೋದಾ ಕೊಠಾರಿ, ಸುಂದರಿ ಆರ್.
ಕೋಟ್ಯಾನ್ ಅವರು ಸಮ್ಮಾನ ಪತ್ರವಾಚಿಸಿದರು. ಸ್ಥಾಪಕ ಯಕ್ಷಗುರು ನಾಗೇಶ ಕುಮಾರ್ ಪೊಳಲಿ ಸ್ವಾಗತಿಸಿದರು. ನಟ ಜಿ. ಕೆ. ಕೆಂಚನೆಕೆರೆ ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ರವೀಂದ್ರ ಶೆಟ್ಟಿ, ಕೊಟ್ರಾಪಾಡಿಗುತ್ತು ವಂದಿಸಿದರು.
ವೇದಿಕೆಯಲ್ಲಿ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನ ಮೀರಾ ರೋಡಿನ ಪ್ರಧಾನ ಆರ್ಚಕ ಸಾಂತಿಂಜ ಜನಾರ್ದನ ಭಟ್, ದಹಿಸರ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಆರ್ಚಕರಾದ ಶಂಕರಗುರು ಭಟ್, ಗುರು ಶಂಕರ ಭಟ್, ವಸಾಯಿ ಕರ್ನಾಟಕ ಸಂಘ ಅಧ್ಯಕ್ಷ ಪಾಂಡು ಎಲ…. ಶೆಟ್ಟಿ, ಮೀರಾ ಡಹಾಣು ಬಂಟ್ಸ್ ಗೌರವಾಧ್ಯಕ್ಷ ಡಾ| ವಿರಾರ್ ಶಂಕರ್ ಶೆಟ್ಟಿ, ಬಂಟ್ಸ್ ಸಂಘ ವಸಾಯಿ ಡಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ, ವಸಾಯಿ ಕರ್ನಾಟಕ ಸಂಘದ ಸಲಹೆಗಾರ ಒ. ಪಿ. ಪೂಜಾರಿ, ವಸಾಯಿ ಮಣಿಕಂಠ ಸೇವಾ ಸಮಿತಿಯ ಗೌರವಾಧ್ಯಕ್ಷ ಕರ್ನೂರು ಶಂಕರ ಆಳ್ವ, ಬಿಲ್ಲವರ ಅಸೋಸಿಯೇಶನ್ ನಲಸೋಪರ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಬೊಂಟ್ರ, ಬಿಲ್ಲವರ ಅಸೋಸಿಯೇಶನ್ ಮೀರಾರೋಡು ಸ್ಥಳೀಯ ಸಮಿತಿಯ ಜತೆ ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಕಲಾ ಪೋಷಕ ಗಣೇಶ ಸುವರ್ಣ, ಶೇಖರ ಪೂಜಾರಿ ಮುರಳೀಧರ ಮಂಚಿತ್ತಾಯ, ಭಾಗವತ ಗಣೇಶ್ ಮಯ್ಯ ವರ್ಕಾಡಿ, ಬಿಲ್ಲವರ ಅಸೋಸಿಯೇಶನ್ ಮೀರಾರೋಡು ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಸುಂದರ ಎ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷ ಗುರು ನಾಗೇಶ್ ಕುಮಾರ್ ಪೊಳಲಿ ಅವರ ನಿರ್ದೇಶನದಲ್ಲಿ ಯಕ್ಷ ಪ್ರಿಯ ಬಳಗದ ಕಲಾವಿದ ರಿಂದ ಬಬ್ರುವಾಹನ ಕಾಳಗ ಮತ್ತು ಅಗ್ರಪೂಜೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಕಲಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ: ರಮೇಶ್ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.