ಬಂಟರ ಭವನದಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ
Team Udayavani, Aug 15, 2017, 12:36 PM IST
ಮುಂಬಯಿ: ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಈ ಆಚರಣೆ ಯಕ್ಷ ಕಲಾವಿದರ ಸಂಭ್ರಮವಾಗಿದೆ. ಕಲಾವಿದನ ಬದುಕನ್ನು ಗೌರವಿಸುವ ಸುದಿನ ಇದಾಗಿದೆ. ಹಿಂದಿನ ಕಾಲದಲ್ಲಿ ಯಕ್ಷಗಾನ ಕಲಾವಿದರಿಗೆ ಅಧಿಕ ಗಳಿಕೆ ಇರುತ್ತಿರಲಿಲ್ಲ. ಕಲಾಸೇವೆಯೇ ಕಲಾವಿದನ ಸಂಪಾದನೆಯಾಗಿತ್ತು. ಹಣ ಮಾಡುವ ಉದ್ದೇಶ ಯಾವನೇ ಕಲಾವಿದರಿಗಿರಲಿಲ್ಲ. ಆದರೆ ದೂರದರ್ಶನ ಬಂದಾಗ ಈ ಕಲೆಯು ಯುವ ಪೀಳಿಗೆಯಿಂದ ದೂರವಾಗುವ ಭೀತಿಯಲ್ಲಿತ್ತು. ಇಂತಹ ಸಂದರ್ಭದಲ್ಲಿ ಸತೀಶ್ ಶೆಟ್ಟಿ ಪಟ್ಲ ಅವರು ತಮ್ಮ ಗಾನಸುಧೆಯಿಂದ ಯುವಪೀಳಿಗೆಯನ್ನು ತನ್ನತ್ತ ಸೆಳೆದು ಯಕ್ಷಗಾನ ಕ್ಷೇತ್ರದಲ್ಲಿ ನೂತನ ಕ್ರಾಂತಿಯನ್ನು ಮಾಡಿದ್ದಾರೆ. ಜಯ ವಿಜಯರಂತಹ ಐಕಳ ಹರೀಶ್ ಶೆಟ್ಟಿ ಮತ್ತು ಕಡಂದಲೆ ಸುರೇಶ್ ಭಂಡಾರಿ ಅಂತಹ ಮೇರುಪೋಷಕರು ಪಟ್ಲ ಫೌಂಡೇಶನ್‌ನಂತಹ ಸಂಸ್ಥೆಗೆ ಲಭಿಸಿರುವುದು ಮುಂಬಯಿಗರಿಗೆ ಹೆಮ್ಮೆಯಾಗಿದೆ. ಫೌಂಡೇಷನ್‌ನ ಯೋಜನೆಗಳ ಯಶಸ್ಸಿಗೆ ಸಹಕರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಟ್ರಸ್ಟ್ ಸಮಗ್ರ ಕಲಾವಿದರ ಆಶಾಕಿರಣವಾಗಿ ಪ್ರಕಾಶಿಸಲಿ ಎಂದು ಥಾಣೆಯ ಹೊಟೇಲ್ ಉದ್ಯಮಿ ಶಾಂತಾರಾಮ ಬಿ. ಶೆಟ್ಟಿ ಹೇಳಿದರು.
ಆ. 13ರಂದು ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಭಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮುಂಬಯಿ ಘಟಕವು ಆಯೋಜಿಸಿದ್ದ ಯಕ್ಷಧ್ರುವ ಪಟ್ಲ ಸಂಭ್ರಮ-2017ಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಶುಭಹಾರೈಸಿದರು.
ಪೊವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಶುಭಾಶಂಸನೆಗೈದರು.
ಅಭಿಮಾನ ತರುವ ವಿಷಯ
ಬಂಟರ ಸಂಘದ ಅಧ್ಯಕ್ಷ ಪ್ರಭಾಕರ್ ಎಲ್. ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಂಟರ ವೇದಿಕೆಯಲ್ಲಿ ಮತ್ತೆ ಇಂದಿಲ್ಲಿ ಕಲಾದಾನಿಗಳ, ಕಲಾವಿದರ ಸಮಾವೇಶವಾಗಿದೆ. ಯಕ್ಷಗಾನದ ರಕ್ಷಕರು, ಪೋಷಕರು ಒಂದಾಗಿ ಮತ್ತೆ ಕಲಾಪೋಷಣೆಯತ್ತ ಒಲವು ತೋರಿರುವುದು ಅಭಿಮಾನ ತರುವ ವಿಷಯವಾಗಿದೆ. ಎಲ್ಲರ ಹುಮ್ಮಸ್ಸಿನಿಂದ ನಮ್ಮಕಲೆ, ಸಂಸ್ಕೃತಿ ಯಕ್ಷಗಾನ ಉಳಿದು ಬೆಳೆಯುವಂತಾಗಲಿ. ಅಸಹಾಯಕ ಕಲಾವಿದರ ಅಗತ್ಯಗಳನ್ನು ಈ ಫೌಂಡೇಶನ್ ನಿವಾರಿಸುವಂತಾಗಲಿ ಎಂದರು.
ಅರ್ಥ ಗರ್ಭಿತ
ಬಂಟರ ಸಂಘದ ಮಾಜಿ ಅಧ್ಯಕ್ಷ ಸುಧಾಕರ ಎಸ್. ಹೆಗ್ಡೆ ಅವರು ಗೌರವ ಅತಿಥಿಯಾಗಿ ಮಾತನಾಡಿ, ಬರೇ ಕಲಾಭಿಮಾನಿ, ಕಲಾಕಾರರಿಗೆ ಮಾತ್ರವಲ್ಲ ಎಲ್ಲರಿಗೂ ಅಗತ್ಯವುಳ್ಳ ಮತ್ತು ಅರ್ಥ ಗರ್ಭಿತ ಕಾರ್ಯಕ್ರಮ ಇದಾಗಿದೆ. ಯಕ್ಷಧ್ರುವ ಸಂಸ್ಥೆ ಕಲಾವಿದರ ಭವಿಷ್ಯದ ಕಲ್ಪವೃಕ್ಷವಾಗಿ ಬೆಳೆಯಲಿ ಎಂದು ಹಾರೈಸಿದರು.
ಕಲಾ ರಕ್ಷಣೆಗೆ ನಾವೂ ಇಂದು ಒಟ್ಟಾಗಿದ್ದೇವೆ
ಕಲೆಗಾಗಿ ಮತ್ತು ಕಲಾ ರಕ್ಷಣೆಗೆ ನಾವೂ ಇಂದು ಒಟ್ಟಾಗಿದ್ದೇವೆ. ಈ ಸೇರುವಿಕೆ ಕಲಾವಿದರ ಒಳಿತಿನ ಸಂಬಂಧವಾಗಿಯೇ ಮುನ್ನಡೆಯಲಿ. ಕಲಾವಿದರು ಮತ್ತು ಕಲಾಭಿಮಾನ ಬೆಸೆಯುವ ಅವಕಾಶ ಒದಗಿಸುವ ಫೌಂಡೇಶನ್‌ನಿಂದ ಕಲಾವಿದರಿಗೆ ಸಾಕಷ್ಟು ಸಹಾಯ ಆಗಲಿ ಎಂದು ಗೌರವ ಅತಿಥಿಯಾಗಿ ಪಾಲ್ಗೊಂಡ ಉದ್ಯಮಿ ಶಿವರಾಮ ಶೆಟ್ಟಿ ಅಜೆಕಾರು ಹೇಳಿದರು.
ಯಕ್ಷಗಾನದ ಒಂದು ಬ್ರ್ಯಾಂಡ್
ಬಂಟರ ಸಂಘದ ಗೌರವ ಕೋಶಾಧಿಕಾರಿ ಸಿಎ| ಐ. ಆರ್. ಶೆಟ್ಟಿ ಅವರು ಮಾತನಾಡಿ, ಯಕ್ಷ ಸಂಭ್ರಮದ ಯಶಸ್ಸಿಗೆ ಈ ವೇದಿಕೆ ಯಲ್ಲಿನ ಗಣ್ಯಾತಿಗಣ್ಯರು ಮತ್ತು ಕಿಕ್ಕಿರಿದು ಸೇರಿದ ಸಭಿಕರೇ ಸಾಕ್ಷಿ. ಸತೀಶ್ ಪಟ್ಲ ಅಂದರೆ ಯಕ್ಷಗಾನದ ಒಂದು ಬ್ರ್ಯಾಂಡ್ ಇದ್ದಂತೆ. ಅವರ ಕಲಾವಿದರ ಸೇವೆ ಯಶಸ್ಸು ಕಾಣಲಿ ಎಂದರು.
ನಿಸ್ವಾರ್ಥ ಸೇವೆಯೂ ಇದಕ್ಕೆ ಮೂಲ
ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ ಅವರು ಮಾತನಾಡಿ, ಯುವಪೀಳಿಗೆ ಕಲೆಯ ಮಹತ್ವ ತಿಳಿಸುತ್ತಿರುವುದು ಈ ಸಭೆ ಮತ್ತು ವೇದಿಕೆ ಮೂಲಕ ತಿಳಿಯಬಹುದು. ಇದಕ್ಕೆ ಪಟ್ಲ ಸತೀಶ್ ಅವರ ಸಾಧನೆ ಬೆನ್ನೆಲುಬಾಗಿದೆ. ಐಕಳ, ಕಡಂದಲೆಯವರಂತಹ ನಿಸ್ವಾರ್ಥ ಸೇವೆಯೂ ಇದಕ್ಕೆ ಮೂಲವಾಗಿದೆ ಎಂದು ಹೇಳಿದರು.
ಕಲಾವಿದರ ಸೇವೆ ಕಲಾಮಾತೆಯ ಸೇವೆ
ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅವರು ಮಾತನಾಡಿ, ಕಲಾವಿದರ ಸೇವೆ ಕಲಾಮಾತೆಯ ಸೇವೆಯೇ ಆಗಿದೆ. ಒಬ್ಬಂಟಿಗರಿಂದ ಸಾಧ್ಯವಾಗದ್ದನ್ನು ಸತೀಶ್ ಪಟ್ಲ ಅವರು ಸಾಧಿಸಿ ತೋರಿಸಿದ್ದಾರೆ. ಇಂತಹ ಪುಣ್ಯಾದಿ ಸೇವೆಯಲ್ಲಿ ಮಗ್ನರಾಗಿ ನಮ್ಮನ್ನೂ ಕೂಡಿಸಿ ನಮಗೂ ಪುಣ್ಯವನ್ನು ಕಟ್ಟಿಕೊಳ್ಳುವ ಭಾಗ್ಯ ಒದಗಿಸಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಅವರ ಕನಸನ್ನು ನನಸಾಗಿಸೋಣ ಎಂದರು.
ಪ್ರಶಂಸನೀಯ
ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಕಲಾವಿದರ ಕಷ್ಟ ತಿಳಿದವರೇ ಇಂತಹ ಯೋಜನೆಯ ನೇತೃತ್ವ ಹೊಂದಿದ್ದು ಪ್ರಶಂಸನೀಯ. ಅನುಭವಿ ಸತೀಶ್ ಪಟ್ಲರಂತಹ ಕಲಾವಿದರಿಂದ ಮಾತ್ರ ಇಂತಹ ಕನಸು ನನಸಾಗಿಸಲು ಸಾಧ್ಯ. ಸಮ್ಮೇಳನಗಳಲ್ಲಿ ಭಾಷಣ, ಸಂಭಾಷಣೆ ಮಾಡುವುದಕ್ಕಿಂತ ಕಾರ್ಯರೂಪದಲ್ಲಿ ಯೋಜನೆ ಮುನ್ನಡೆಸಿದರೆ ಯೋಜನೆ ಅರ್ಥಪೂರ್ಣವಾಗಿ ಫಲದಾಯಕವಾಗುತ್ತದೆ. ಮುಂಬಯಿಗರು ಅದರಲ್ಲೂ ಐಕಳ, ಕಡಂದಲೆಯವರಂತಹ ಸಂಘಟಕರ ಸಾರಥ್ಯ ಎಂದರೆ ಪಟ್ಲ ಅವರ ಕನಸು ಈಡೇರಿದಂತೆಯೇ ಎಂದರು.
ತುಳುನಾಡ ಕೀರ್ತಿ ಕಿರೀಟದ ಸಂಭ್ರಮ
ಬಂಟರ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿ ಅವರು ಮಾತನಾಡಿ, ತುಳುನಾಡ ಕೀರ್ತಿ ಕಿರೀಟದ ಸಂಭ್ರಮವಿದು. ಕಲಾವಿದರ ಕಾಮಧೇನು ಸತೀಶ್ ಪಟ್ಲ ಆಗಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಅದ್ಭುತವಾದಂತಹ ಕಾರ್ಯಗಳನ್ನು ಸಾಧಿಸಲಿ ಎಂದು ನುಡಿದರು.
ಪಟ್ಲರ ಸಾಧನೆ ಸರ್ವ ಶ್ರೇಷ್ಠ
ಅನ್ನದಾತ ರಾಘು ಶೆಟ್ಟಿ ಅವರು ಮಾತನಾಡಿ, ನಾನು ಬಾಲ್ಯದಿಂದಲೇ ಭಕ್ತಿ ಪ್ರೀತಿಯಿಂದ ಕಲೆಯನ್ನು ಕಂಡವನು. ಕಲೆ, ಕಲಾವಿದರ ಕಷ್ಟಸುಖಗಳನ್ನು ತಿಳಿದವನಾಗಿದ್ದೇನೆ. ಇಂತಹ ಕಲಾವಿದರ ಸಹಾಯಕ್ಕೆ ಬೃಹತ್ ಯೋಜನೆ ರೂಪಿಸಿ ಸಾಹಸಗೈದ ಪಟ್ಲರ ಸಾಧನೆ ಸರ್ವ ಶ್ರೇಷ್ಠವಾದದ್ದು. ಇದನ್ನು ದೇವರ ಸೇವೆಯಾಗಿಸಿ ಯೋಜನೆಯ ಯಶಸ್ಸಿಗೆ ಶ್ರಮಿಸೋಣ ಎಂದರು.
ಮುಖ್ಯ ಅತಿಥಿಯಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್‌ಜತೆ ಕಾರ್ಯದರ್ಶಿ ಡಾ| ಪದ್ಮನಾಭ ವಿ. ಶೆಟ್ಟಿ, ಗೌರವ ಅತಿಥಿಗಳಾಗಿ ಸಿಎ ಶಂಕರ್ ಬಿ. ಶೆಟ್ಟಿ, ಭಿವಂಡಿ ನಗರ ಸೇವಕ ಸಂತೋಷ್ ಜಿ. ಶೆಟ್ಟಿ, ಹಿರಿಯ ಹೊಟೇಲ್ ಉದ್ಯಮಿಗಳಾದ ರಘುರಾಮ ಕೆ. ಶೆಟ್ಟಿ, ರಾಘು ಮುಂಡಪ್ಪ ಎಸ್. ಪಯ್ಯಡೆ, ದಿವಾಕರ ಶೆಟ್ಟಿ ಮುದ್ರಾಡಿ, ವಸಂತ್ ಎಚ್. ಶೆಟ್ಟಿ, ಜೆ. ಪಿ. ಶೆಟ್ಟಿ, ಸುಂದರ್ ಶೆಟ್ಟಿ ಡೊಂಬಿವಿಲಿ, ಸುರೇಶ್ ಆರ್. ಕಾಂಚನ್, ರವಿ ಶೆಟ್ಟಿ ಕಿಲ್ಪಾಡಿ, ವಿಶ್ವನಾಥ ಶೆಟ್ಟಿ ವಿರಾರ್, ಫೌಂಡೇಶನ್‌ನ ಕೇಂದ್ರ ಸಮಿತಿ ಸಲಹಾ ಮಂಡಳಿಯ ಪಟ್ಲಗುತ್ತು ಮಹಾಬಲ ಶೆಟ್ಟಿ, ಗೌರವಾಧ್ಯಕ್ಷ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ಡಾ| ಮನು ರಾವ್, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ, ಫೌಂಡೇಶನ್‌ನ ಮುಂಬಯಿ ಸಮಿತಿಯ ಉಪಾಧ್ಯಕ್ಷರಾದ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಸಂಚಾಲಕರುಗಳಾದ ಐಕಳ ಗಣೇಶ್ ವಿ. ಶೆಟ್ಟಿ, ಅಶೋಕ್ ಶೆಟ್ಟಿ ಪೆರ್ಮುದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮುಂಬಯಿ ಸಮಿತಿಯ ಉಪಾಧ್ಯಕ್ಷ ಸುರೇಶ್ ಬಿ. ಶೆಟ್ಟಿ ಮರಾಠ, ಕೋಶಾಧಿಕಾರಿ ಬಾಬು ಎಸ್. ಶೆಟ್ಟಿ ಪೆರಾರ, ಸಿಎ ಸುರೇಂದ್ರ ಶೆಟ್ಟಿ, ಜತೆ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಜೆಕಾರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಕು| ಅಮೃತಾ ಅಡಿಗ ಪ್ರಾರ್ಥನೆಗೈದರು. ಮುಂಬಯಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಗೌ| ಪ್ರ| ಕಾರ್ಯದರ್ಶಿ ಕರ್ನೂರು ಮೋಹನ್ ರೈ ಅತಿಥಿಗಳನ್ನು ಪರಿಚಯಿಸಿದರು. ಪಟ್ಲ ಸತೀಶ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ ಮತ್ತು ಕಡಂದಲೆ ಸುರೇಶ್ ಭಂಡಾರಿ ಅವರು ಅತಿಥಿಗಳನ್ನು ಗೌರವಿಸಿದರು. ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ವಂದಿಸಿದರು.
ತೆಂಕು-ಬಡಗು ತಿಟ್ಟಿನ ಕಲಾವಿದರ ಸಮಾಗಮ
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಬ್ಬರ ತಾಳ, ತೆಂಕುಬಡಗು ತಿಟ್ಟಿನ ಪ್ರಸಿದ್ಧ ಭಾಗವತರುಗಳಾದ ಪಟ್ಲ ಸತೀಶ್ ಶೆಟ್ಟಿ, ಸತ್ಯನಾರಾಯಣ ಪುಣಿಂಚಿತ್ತಾಯ, ಸುರೇಶ್ ಶೆಟ್ಟಿ, ಶಂಕರ ನಾರಾಯಣ, ಕು| ಕಾವ್ಯಶ್ರೀ ಅಜೀರು, ಕು| ಅಮೃತಾ ಅಡಿಗ ಅವರಿಂದ “ಗಾನ ವೈಭವ’ ಹಾಗೂ ಉಜಿರೆ ಅಶೋಕ್ ಭಟ್ ನಿರೂಪಣೆಯಲ್ಲಿ ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಅಕ್ಷಯ ಕುಮಾರ್ ಮಾರ್ನಾಡ್, ರಕ್ಷಿತ್ ಶೆಟ್ಟಿ ಪಡ್ರೆ, ಲೋಕೇಶ್ ಮುಚ್ಚಾರು ಕಲಾವಿದರಿಂದ “ನಾಟ್ಯ ವೈಭವ’ ನೆರೆದ ಸಾವಿರಾರು ಕಲಾಭಿಮಾನಿಗಳನ್ನು ರಂಜಿಸಿತು.
ಇದೊಂದು ಗೌಜಿ ಗದ್ದಲದ ಸಂಭ್ರಮವಲ್ಲ, ವಿಶಿಷ್ಟವಾದ ಸಂಸ್ಕೃತಿ ಪಾಲನೆಯ ಸಂಭ್ರಮ. ಈ ಕಾರ್ಯಕ್ರಮದಿಂದ ಕಲಾವಿದರ ಮನಸ್ಸುಗಳನ್ನು ಮುದಗೊಳಿಸಿ, ಯೋಚನಾ ಕನಸುಗಳನ್ನು ಯೋಜನೆ ಮೂಲಕ ಪರಿಪೂರ್ಣಗೊಳಿಸುವ ಹಂತ ತಲುಪಿದ್ದೇವೆ. ಅದಕ್ಕೆ ಕಟೀಲು ಅಮ್ಮ ಸತೀಶ್ ಪಟ್ಲರಂತಹ ಯೋಗ್ಯ ಸಾರಥಿಯನ್ನು ಕರುಣಿಸಿದ್ದಾರೆ. ಯೋಜನೆಯ ಗೌರವ ಪಟ್ಲರಿಗೆನೇ ಸಲ್ಲಬೇಕು. ತುಳು ಕನ್ನಡಿಗ ಯಕ್ಷಗಾನ ಪ್ರೇಮಿಗಳ ಪ್ರೀತಿಯ ಕಲಾವಿದನಾಗಿ ಅಶಕ್ತ ಕಲಾವಿದರ ಆಶಾಕಿರಣರಾದ ಸತೀಶ್ ಪಟ್ಲರ ಯೋಜನೆಯ ಕಲಾವಿದರಿಗಾಗಿನ ಮೊದಲ ಹಂತದ 100 ಮನೆಗಳ ನಿರ್ಮಾಣ ಮುಂಬಯಿಯ ಕಲಾಪ್ರೋತ್ಸಾಹಕರಿಂದ, ದಾನಿಗಳಿಂದ ಸಾಧ್ಯವಾಗಬಹುದೆಂಬ ಆಶಯ ನನ್ನದಾಗಿದೆ
– ಐಕಳ ಹರೀಶ್ ಶೆಟ್ಟಿ (ಗೌರವಾಧ್ಯಕ್ಷರು : ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕ)
ಯಕ್ಷಧ್ರುವ ಪಟ್ಲ ಫೌಂಡೇಶನ್ ಎಂಬ ನಕ್ಷತ್ರ ಇಂದು ತಾರಾಲೋಕದಲ್ಲಿ ವಿಜೃಂಭಿಸುವ ಧ್ರುವತಾರೆಯಾಗಿದೆ. ಪಟ್ಲ ಸಂಭ್ರಮ ಎಂಬುದು ಕಲಾಭಿಮಾನಿಗಳಿಂದ ಪಡೆದು ಕಲಾವಿದರಿಗೆ ಸಹಾಯ ಹಸ್ತ ನೀಡುವ ಸಂಭ್ರಮವಾಗಿದೆ. ಕಲಾಪೋಷಕರಿಗೆ ಸಹಕರಿಸುವ ಸಂಭ್ರಮವಾಗಿದೆ. ಇದ್ದವರಿಂದ ಪಡೆದು ಇಲ್ಲದ ನಿರಾಶ್ರಿತ, ಅಸಹಾಯಕ ಕಲಾವಿದರಿಗೆ ಹಂಚುವ ಕೆಲಸದಲ್ಲಿ ಭಾಗವಹಿಸುವುದೇ ಒಂದು ರೀತಿಯ ಪುಣ್ಯದ ಕಾರ್ಯವಾಗಿದೆ. ಯಾರಾದರೂ ಒಳ್ಳೆಯದಾಗುವುದಾದರೆ ಅಲ್ಲಿ ನಮ್ಮ ಗಳಿಕೆಯನ್ನು ವಿನಿಯೋಗಿಸುವ ದಕ್ಷ ಸೇವೆಯಲ್ಲಿ ನಿರತ ಸತೀಶ್ ಪಟ್ಲರಿಗೆ ನಮ್ಮ ಸಹಕಾರ ನೀಡೋಣ. ಕಲಿಯುಗದಲ್ಲೂÉ ಸತ್ಯವನ್ನು ಮೆರೆದು ಇಂತಹ ಫೌಂಡೇಶನ್‌ಗೆ ಅಭಯಹಸ್ತ ನೀಡಿ ಜೀವನ ಪಾವನಗೊಳಿಸೋಣ
– ಕಡಂದಲೆ ಸುರೇಶ್ ಭಂಡಾರಿ (ಅಧ್ಯಕ್ಷರು : ಯಕ್ಷಧ್ರುವ ಪಟ್ಲ ಫೌಂಡೇಷನ್ ಮುಂಬಯಿ ಘಟಕ)
ಒಂದು ಕಾಲದಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಕಲಿಸಿದ ಕಲೆ ಯಕ್ಷಗಾನವಾಗಿದೆ. ಪೌರಾಣಿಕೆ ಕಥೆ ತಿಳಿಸಿ ಜನಮಾನಸದಲ್ಲಿ ಸಂಸ್ಕೃತಿ ರೂಪಿಸುವಲ್ಲಿ ಅನನ್ಯ ಸೇವೆಗೈದ ಈ ಕಲೆ ಕಲಾವಿದರ ತ್ಯಾಗದ ಪರಿಣಾಮವಾಗಿ ಇಂದಿಗೂ ಬೆಳೆದು ನಿಂತಿದೆ. ಅವರಿಂದಲೇ ನಮ್ಮ ಸಂಸ್ಕಾರ ಸಂಸ್ಕೃತಿ ಉಳಿವು ಸಾಧ್ಯವಾಗಿದೆ. ಆದ್ದರಿಂದ ಪಾವಿತ್ರತೆಯ ಕಲೆಗೆ ಬದುಕು ಅರ್ಪಿಸಿದ ಕಲಾವಿದರ ಉಳಿವಿಗಾಗಿ ಪಣತೊಡುವ ಪಟ್ಲ ಫೌಂಡೇಶನ್‌ಗೆ ಸರ್ವರ ಸಹಯೋಗದ ಅಗತ್ಯವಿದೆ. ಭವಿಷ್ಯತ್ತಿನಲ್ಲಿ ದುಶ್ಚಟ ಮುಕ್ತ ಕಲಾವಿದರ ಸೃಷ್ಟಿಗೂ ಈ ಸಂಸ್ಥೆ ಮುಂದಾಗಲಿ. ಆವಾಗಲೇ ಸತೀಶ್ ಪಟ್ಲ ಅವರ ಉದ್ದೇಶ ಪರಿಪೂರ್ಣಗೊಳ್ಳುವುದು
– ವಿರಾರ್ ಶಂಕರ್ ಶೆಟ್ಟಿ (ಗೌರವಾಧ್ಯಕ್ಷರು: ಮೀರಾ-ಡಹಾಣೂ ಬಂಟ್ಸ್)
ಈ ಸಂಭ್ರಮದ ಯಶಸ್ಸು ನಿಜವಾಗಿಯೂ ಐಕಳ ಹರೀಶ್ ಶೆಟ್ಟಿ ಮತ್ತು ಕಡಂದಲೆ ಸುರೇಶ್ ಭಂಡಾರಿ ಅವರಿಗೆ ಸಲ್ಲುತ್ತದೆ ಅವರನ್ನು ಅಭಿನಂದಿಸಲು ನನ್ನಲ್ಲಿ ಶಬ್ದಗಳಿಲ್ಲ. ನನ್ನ ಕನಸಿನ ಯೋಜನೆಯನ್ನು ಇವರಂತಹ ಮೇಧಾವಿ ಮುಂದಾಳುಗಳ ಹಸ್ತದಿಂದ ಮುನ್ನಡೆಸಲು ಕಟೀಲು ಮಾತೆಯೇ ನನ್ನ ಪಾಲಿಗೆ ಒದಗಿಸಿದ್ದಾರೆ. ಕಲಾವಿದರ ಕಷ್ಟ-ಕಾರ್ಪಣ್ಯಗಳನ್ನು ನಾನು ತೀರಾಹತ್ತಿರದಿಂದ ಕಂಡವ. ಅವರಲ್ಲೂ ಯಕ್ಷಗಾನದ ಕೆಲವರ ಅನಾಥ ಬದುಕು ನೋಡಿ ಇಂತಹ ಸೇವಾಧರ್ಮಕ್ಕೆ ಮುಂದಾಗಿದ್ದೇನೆ. ಸಂಸ್ಕೃತಿ ಸಾರುವ ಯಕ್ಷಗಾನದಂತಹ ಕಲೆ ಮತ್ತೂಂದಿಲ್ಲ. ಆದರೆ ಇದನ್ನು ಪ್ರದರ್ಶಿಸುವ ಕಲಾವಿದರಲ್ಲಿ ಕೆಲವರಿಗೆ ಒಪ್ಪೊತ್ತಿನ ತುತ್ತಿಗೂ ಕಷ್ಟವಿದೆ. ಕಲಾವಿದರಲ್ಲಿ ತಾರತಮ್ಯ ಬೇಡ. ಕಲಾ ಸರಸ್ವತಿ ಇಂತಹ ಸೇವೆ ಮಾಡುವ ಅವಕಾಶ ನಮ್ಮೆಲ್ಲರಿಗೂ ಒದಗಿಸಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ಗೆ ದಾನಿಗಳೇ ದೇವರಾಗಿದ್ದು ಸಂಸ್ಥೆಯ ಮೂಲಕ ಕಲಾವಿದರನ್ನು ಮೇಲೆತ್ತುವಲ್ಲಿ ಸಹಾಯಹಸ್ತ ನೀಡಿ ಯೋಜನೆ ಪೂರೈಸಿ ಪುಣ್ಯ ಕಟ್ಟಿಕೊಳ್ಳೋಣ
– ಪಟ್ಲ ಸತೀಶ್ ಶೆಟ್ಟಿ (ಸಂಸ್ಥಾಪಕರು : ಯಕ್ಷಧ್ರುವ ಪಟ್ಲ ಪೌಂಡೇಷನ್ ಟ್ರಸ್ಟ್)
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.