ಸೆ. 14ರಿಂದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ತಿರುಗಾಟ ಪ್ರಾರಂಭ
Team Udayavani, Sep 14, 2018, 4:52 PM IST
ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಿತ ಶ್ರೀ ಗುರು ನಾರಾಯಣ ಯಕ್ಷಗಾನ ಮಂಡಳಿಯು ಮುಂಬಯಿ ಮಹಾನಗರ ಮತ್ತು ಉಪನಗರಗಳಲ್ಲಿ ಯಕ್ಷಗಾನಗಳನ್ನು ಪ್ರದರ್ಶಿಸಿ ಅಭಿಮಾನಿಗಳ ಮನಗೆದ್ದಿದ್ದು, 2000 ನೇ ವರ್ಷದ ಸಾಲಿನ ಕರ್ನಾಟಕ ಜನಪದ ಮತ್ತು ಯಕ್ಷಗಾನ ಪ್ರಶಸ್ತಿ, 2009 ನೇ ಸಾಲಿನ ಶ್ರೀ ವಿಶ್ವೇಶ ಪ್ರಶಸ್ತಿ ಪುರಸ್ಕೃತ ಮಂಡಳಿಯ ವಾರ್ಷಿಕ ತಿರುಗಾಟವನ್ನು ಪ್ರಾರಂಭಿಸಲಿದೆ.
ಸೆ. 14ರಂದು ಸಂಜೆ 7 ಕ್ಕೆ ಐಸಿ ಕಾಲನಿ ಬೊರಿವಲಿ ಇಲ್ಲಿ ಭಸ್ಮಾಸುರ ಮೋಹಿನಿ, ಅ. 17ರಂದು ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಶ್ರೀ ದೇವಿ ಮಹಾತೆ¾, ಅ. 20ರಂದು ಸಂಜೆ 5 ರಿಂದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಶ್ವೇತ ಕುಮಾರ ಚರಿತ್ರೆ, ಅ. 21ರಂದು ಸಂಜೆ 5.30 ಕ್ಕೆ ಅಪ್ಪಯ್ಯ ಬೀಡು ಧರ್ಮಸ್ಥಾನ ವರ್ಲಿ ಇಲ್ಲಿ ನೂತನ ಪ್ರಸಂಗ, ನ. 25 ರಂದು ಸಂಜೆ 5 ಕ್ಕೆ ಬೋವಿ ಸಮಾಜದ ವತಿಯಿಂದ ಬಿಲ್ಲವ ಭವನದಲ್ಲಿ ವಿದ್ಯುನ್ಮತಿ ಕಲ್ಯಾಣ, ಡಿ. 1 ರಂದು ರಾತ್ರಿ 9 ರಿಂದ ಪಾಟ್ಲದೇವಿ ಅಯ್ಯಪ್ಪ ಭಕ್ತವೃಂದ ದಹಿಸರ್ ವತಿಯಿಂದ ಶ್ರೀ ಶಬರಿಮಲೆ ಅಯ್ಯಪ್ಪ, ಡಿ. 2ರಂದು ಸಂಜೆ 5.30 ಕ್ಕೆ ಎಂ ಎಚ್‌ಬಿ ಕಾಲನಿ ಬೊರಿವಲಿ ಪಶ್ಚಿಮ ಇಲ್ಲಿ ನೂತನ ಪ್ರಸಂಗ.
ಡಿ. 8ರಂದು ಮಧ್ಯಾಹ್ನ 1.30ಕ್ಕೆ ಶನಿ ಪೂಜಾ ಸಮಿತಿ ಭಿವಂಡಿ ಇಲ್ಲಿ ನೂತನ ಪ್ರಸಂಗ, ಡಿ. 16ರಂದು ಸಂಜೆ 5.30ರಿಂದ ಶ್ರೀ ಅಯ್ಯಪ್ಪ ಭಕ್ತ ವೃಂದ ನಲಸೋಪರದಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ, ಡಿ. 23 ರಂದು ಸಂಜೆ 5.30ಕ್ಕೆ ಶ್ರೀ ಮಹಾಲಕ್ಷಿ¾à ಅಯ್ಯಪ್ಪ ಸೇವಾ ಸಂಸ್ಥಾ, ಮಾಜಿವಾಡಾ, ಥಾಣೆ ಇಲ್ಲಿ ನೂತನ ಪ್ರಸಂಗ , ಡಿ. 26ರಂದು ಸಂಜೆ 5.30 ಕ್ಕೆ ಭಿವಂಡಿ ಅಯ್ಯಪ್ಪ ಸೇವಾ ಸಮಿತಿ ಇಲ್ಲಿ ನೂತನ ಪ್ರಸಂಗ, ಡಿ. 29 ರಂದು ರಾತ್ರಿ 9ರಿಂದ ಮಣಿಕಂಠ ಸೇವಾ ಸಮಿತಿ, ಹನುಮಾನ್ ನಗರ ಇಲ್ಲಿ ನೂತನ ಪ್ರಸಂಗ, ಡಿ. 25ರಂದು ಸಂಜೆ 5.30ರಿಂದ ಸಹಕಾರ್‌ವಾಡಿ ಗೋರೆಗಾಂವ್ ಇಲ್ಲಿ ನೂತನ ಪ್ರಸಂಗ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗುರು ನಾರಾಯಣ ಯಕ್ಷಗಾನ ಮಂಡಳಿಯ ಕಾರ್ಯಾಧ್ಯಕ್ಷ ದಯಾನಂದ ಆರ್. ಪೂಜಾರಿ, ಮತ್ತು ಗೌರವ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ಹಾಗೂ ಬಿಲ್ಲವರ ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ್ ಎಸ್. ಕೋಟ್ಯಾನ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಕ್ಕರೆ ನಾಡಿನಲ್ಲಿ ಸಿಹಿ ಕ್ಷಣ : ಮಂಡ್ಯದಲ್ಲಿ ಕನ್ನಡತಿಯ ಇಟಲಿ ಕೃತಿ ಬಿಡುಗಡೆ
ಮನಮುಟ್ಟಿದ ನೃತ್ಯ; ಇಂದಿನ ಜಗತ್ತಿನಲ್ಲಿ ಅರ್ಧನಾರೀಶ್ವರನ ಪ್ರಸ್ತುತಿ
Desi Swara: ಜರ್ಮನಿಯಲ್ಲಿ ಮಕ್ಕಳಿಂದ ಪುಣ್ಯಕೋಟಿ ನೆರಳಿನಾಟ ವಿಭಿನ್ನ ಪ್ರದರ್ಶನ
Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು
ಬ್ರಿಟನ್‌ನ “ಅನಿವಾಸಿ.ಕಾಂ’ ಸಾಹಿತ್ಯ ಜಾಲಜಗುಲಿಗೆ ದಶಮಾನೋತ್ಸವ
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.