ಪಟ್ಲ ಭಾಗವತಿಕೆ; ಮನರಂಜಿಸಿದ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ


Team Udayavani, May 4, 2017, 4:34 PM IST

01-Mum03a.jpg

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರ ಸಾರಥ್ಯದಲ್ಲಿ ಹಾಗೂ ಪದಾಧಿಕಾರಿಗಳ ಪ್ರೋತ್ಸಾಹ, ಕಾರ್ಯಕಾರಿ ಸಮಿತಿಯ ಸದಸ್ಯರ ಉತ್ಸುಕತೆಯಿಂದ ರವೀಂದ್ರನಾಥ್‌ ಭಂಡಾರಿ ಅವರ ನೇತೃತ್ವದಲ್ಲಿ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರ ಸಂಚಾಲಕತ್ವದಲ್ಲಿ ಇತ್ತೀಚೆಗೆ ಸಂಘದ ಸಭಾಗೃಹದಲ್ಲಿ ನಡೆದ ಬಿಸುಪರ್ಬ ಸಂದರ್ಭದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ದಕ್ಷ ನಿರ್ದೇಶನದಲ್ಲಿ ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡು ಸಂಘದ ಇತಿಹಾಸದಲ್ಲಿ ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಯುವ ಪೀಳಿಗೆಯ ಹೃದಯ ಸಾಮ್ರಾಜ್ಯದಲ್ಲಿ ಗಟ್ಟಿಯಾಗಿ ತಳವೂರಿದ, ಯುವಕರಿಗೆ ಯಕ್ಷಗಾನದ ಆಸಕ್ತಿಯನ್ನು ಹುಟ್ಟಿಸಿದ ಯಕ್ಷ ಚಕ್ರೇಶ್ವರ ಬಿರುದಾಂಕಿತ ಪಟ್ಲ ಸತೀಶ್‌ ಶೆಟ್ಟಿ ಅವರು ಯಕ್ಷಗಾನಾಮೃತದ ಸವಿಯನ್ನು ಉಣಬಡಿಸಿದರು. ದೇವಿಯ ಕಾರುಣ್ಯ ನಮ್ಮೊಳಗೆ, ಎಲೆಲೆ ನಾರಿ, ಅತ್ತಿತ್ತ ನೋಡುತ್ತ, ಪಾಹಿ ಜಗನ್ಮಾತೆ ಎಂಬಿತ್ಯಾದಿ ಪದಗಳ ಸಾಲುಗಳನ್ನು ವಿವಿಧ ರಾಗಗಳಿಂದ ಹಾಡಿ ನಿರಂತರ ನಾಲ್ಕು ಗಂಟೆಗಳ ಪ್ರದರ್ಶನದಿಂದ ಸಾವಿರಕ್ಕೂ ಅಧಿಕ ಸಂಖ್ಯೆಯ ಕಲಾರಸಿಕರನ್ನು ತನ್ನತ್ತ ಸೆಳೆದೊಯ್ದು ರಾಗಮಾಲಿಕೆಯ ಹಾರಗಳಿಂದ ಬಂಧಿಸಿದ ಹಿರಿಮೆಯ ಹಾಡುಗಾರಿಕೆ ಅವರದ್ದಾಗಿತ್ತು. ಚೆಂಡೆ-ಮದ್ದಳೆಯಲ್ಲಿ ಪ್ರಶಾಂತ್‌ ಶೆಟ್ಟಿ ವಗೆನಾಡು, ಇನ್ನ ಆನಂದ ಶೆಟ್ಟಿ ಹಾಗೂ ಚಕ್ರತಾಳದಲ್ಲಿ ಶ್ಯಾಮ ಶೆಟ್ಟಿ ಅವರು ಸಹಕರಿಸಿದರು.

ಮುಮ್ಮೇಳದಲ್ಲಿ ಈಶ್ವರನಾಗಿ ಪ್ರಭಾಕರ ಎಲ್‌. ಶೆಟ್ಟಿ ಮತ್ತು ಭೈರವಿಯಾಗಿ ಲತಾ ಪಿ. ಶೆಟ್ಟಿ ಅವರು ಅಭಿನಯಿಸಿದ್ದರು. ಈ ಸತಿಪತಿಯ ಕಲಾಸಕ್ತಿಗೆ ತಲೆಬಾಗಬೇಕು. ದೇವೇಂದ್ರನಾಗಿ ಅಶೋಕ್‌ ಪಕ್ಕಳ ಅವರ ಶ್ರುತಿಬದ್ಧ ಕಾವ್ಯಮಯ ಮಾತುಗಳು, ಇದಿರು ಪಾತ್ರಧಾರಿಗಳಿಗಿತ್ತ ಪ್ರೋತ್ಸಾಹ, ಸಮಯ ಸಂದರ್ಭಕ್ಕೆ ಅನುಗುಣವಾಗಿ ಪಾತ್ರಧಾರಿಗಳ ನಿಜ ಹೆಸರನ್ನಿತ್ತು ಹಾಸ್ಯಮಯಕ್ಕೆ ಒತ್ತನ್ನಿತ್ತು ಪ್ರಾಸಬದ್ಧ ವಾಕ್ಯಗಳಿಂದ ವೃತ್ತಿಪರ ಕಲಾವಿದರಂತೆ ಮೆರೆದರು. ಕುಬೇರ ಮತ್ತು ವರುಣನಾಗಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಮತ್ತು ಸಿಎ ಐ. ಆರ್‌. ಶೆಟ್ಟಿ ಅವರು ತಾಳಬದ್ಧವಾಗಿ ಕುಣಿಯುವ ಪ್ರಯತ್ನ ಸಾಹಸಮಯವಾಗಿತ್ತು. ಅಗ್ನಿ ಮತ್ತು ವಾಯು ಆಗಿ ಅನುಷಾ ಬಿ. ಶೆಟ್ಟಿ, ಕೃತಿಕಾ ಎಂ. ಶೆಟ್ಟಿ ಅವರ ಪ್ರವೇಶದ ಕುಣಿತದ ಗತಿ, ಮಾತಿನ ರೀತಿ ಸಂದಭೋìಚಿತವಾಗಿತ್ತು. ಬೃಹಸ್ಪತಿಯಾಗಿ ಸಿಎ ಸದಾಶಿವ ಶೆಟ್ಟಿ ಅವರ ಮಿತವಾದ ಕುಣಿತಕ್ಕೆ ಮಾತಿನ ಹಿಡಿತವೂ ಭರವಸೆ ಮೂಡಿಸುವಂತಿತ್ತು.

ಕೋಲಮುನಿಯಾಗಿ ಕಾಪು ಅಶೋಕ್‌ ಶೆಟ್ಟಿ ಅವರು ಶ್ರುತಿಬದ್ಧವಾದ ಶುದ್ಧಮಾತಿನ ಮೌಲ್ಯಯುತ ಶಬ್ದಗಳ ಸರಮಾಲೆಯೊಂದಿಗೆ ದೇವೇಂದ್ರನ ಜತೆಗಿನ ಸಂಭಾಷಣೆ ಮೇರು ಕಲಾವಿದರನ್ನು ನೆನಪಿಸುವಂತಿತ್ತು. ಹುಂಡ-ಪುಂಡರಾಗಿ ಯುವ ಕಲಾವಿದರಾದ ದರ್ಶನ್‌ ಶೆಟ್ಟಿ ಮತ್ತು ಅವಕಾಶ್‌ ಶೆಟ್ಟಿ ಅವರ ರಭಸದ ಪ್ರವೇಶ, ಜೋಡಿ-ಕುಣಿತ, ಮಾತಿನ ವೈಖರಿ ಪುಂಡು ವೇಷದ ಮೆರುಗನ್ನು ಹೆಚ್ಚಿಸಿತ್ತು. ಪ್ರಥಮ ಕಂಹಾಸುರನಾಗಿ ಮುಂಡ್ಕೂರು ರತ್ನಾಕರ ಶೆಟ್ಟಿ ಅವರ ಪ್ರವೇಶದ ಗತಿ ಪಾತ್ರ ರಾಕ್ಷಸನ ಆಗಿದ್ದರೂ ರಾಜವೇಷಕ್ಕೆ ಒತ್ತು ನೀಡಿದ್ದು, ಸಮಯೋಚಿತ ಮಾತುಗಳಿಂದ ಸಭಿಕರನ್ನು ರಂಜಿಸಿದ ಚಂಡೆಯ ಬಡಿತಕ್ಕೆ ಅನುಗುಣವಾದ ಕುಣಿತ ಗಮನಾರ್ಹ.

ಎರಡನೆಯ ಶಂಕಾಸುರನಾಗಿ ಕರ್ನೂರು ಮೋಹನ್‌ ರೈ ಅವರ ಪ್ರವೇಶ ಸಂಪೂರ್ಣ ಪ್ರದರ್ಶನದ ತಿರುವಿಗೆ ಕಾರಣವಾಯಿತು. ರಕ್ತಗತವಾಗಿ ಬಂದ ಕಲೆಯನ್ನು ರಂಗಸ್ಥಳ ವಿಶಾಲವಾಗಿದ್ದರೂ ರಂಗನಡೆಗೆ ಗೌರವವಿತ್ತು, ಇತಿಮಿತಿಯ ಜಾಗದಲ್ಲೇ ಕುಣಿತಕ್ಕೆ ವಿಶೇಷ ಒತ್ತುಕೊಟ್ಟು ವಾಚಕ, ಆಂಗಿಕವಾಗಿಯೂ  ಸ್ಥಿತಪ್ರಜ್ಞೆಯುಳ್ಳವರಾಗಿ ದಣಿವರಿಯದೆ ವ್ಯಕ್ತಪಡಿಸಿದ ಕೋಪೋದ್ರಿತ ಭಾವನೆಯುಕ್ತ, ಭಕ್ತಿ ರಸಯುಕ್ತ, ಗೊಂದಲಮಯಯುಕ್ತ ಮಾತುಗಳಿಂದ ನವ ರಸನಾಯಕನಾಗಿ ಮಿಂಚಿ ಕಲಾರಸಿಕರ ನಿರೀಕ್ಷೆಗೂ ಮೀರಿ ಕೊಟ್ಟ ಅವರ ಅಭಿನಯವಂತೂ ಯಕ್ಷಗಾನದ ಸರ್ವತೋಮುಖ ಕಲಾವಿದನೆಂದು ಪ್ರತಿಪಾದಿಸಿತು. ಶುಕ್ರಾಚಾರ್ಯನಾಗಿ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಪಟ್ಟಿದ್ದಾರೆ. 

ವ್ಯಾಳಾಸುರನಾಗಿ ದಿವಾಕರ ಶೆಟ್ಟಿ ಕುರ್ಲಾ ಅವರು ತನ್ನ ಪ್ರವೇಶದಿಂದ ಹಿಡಿದು ಇತಿಮಿತಿಯ ಗಮನಾರ್ಹ ಮಾತುಗಳಿಂದ ಕುಣಿಕೆಯಿಂದ ಪ್ರೇಕ್ಷಕರ ಗಮನ ಸೆಳೆದರು. ಮಹಿಷಾಖ್ಯನಾಗಿ ರಮೇಶ್‌ ಶೆಟ್ಟಿ ಕಡಂದಲೆ ಬಣ್ಣದ ವೇಷದ ಯಕ್ಷಗಾನದ ಪರಂಪರೆಯ ಕೆಲವು ಕಲಾವಿದರನ್ನು ನೆನಪಿಸುವಂತೆ ಮಾಡಿದರು. ಮಾತಿನ ಗತ್ತುಗಾರಿಕೆಯಿಂದ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನಾರದನಾಗಿ ಸಿಎ ರಮೇಶ್‌ ಶೆಟ್ಟಿ, ಷಣ್ಮುಖನಾಗಿ ನವೀನ್‌ ಶೆಟ್ಟಿ ಇನ್ನಬಾಳಿಕೆ ಅವರು ಶಚಿದೇವಿಯಾಗಿ ಸೌಮ್ಯಾ ಶೆಟ್ಟಿ ಅವರು ತಮಗೆ ನೀಡಿದ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾದರು.

ಶ್ರೀ ದೇವಿ ಮೂಕಾಂಬಿಕೆಯಾಗಿ  ಭರವಸೆಯ ಕಲಾವಿದೆ, ಪತ್ತನಾಜೆ ತುಳುಚಿತ್ರದ ನಾಯಕಿ ರೇಷ್ಮಾ ಶೆಟ್ಟಿ ಅವರು ಪ್ರಸಂಗದ ನಾಯಕಿಯಾಗಿಯೂ ಪ್ರಸಂಗದುದ್ದಕ್ಕೂ ಕೋಶಾವೇಷದ ರೋಶದ ಕುಣಿಕೆಯಿಂದ, ಮೋಹಕ ಅಭಿನಯದಿಂದ, ಸ್ಪಷ್ಟ ಮಾತುಗಳಿಂದ ಅಚ್ಚುಕಟ್ಟಾಗಿ ತಮ್ಮ ಪ್ರದರ್ಶನದಿಂದ ಕಲಾರಸಿಕರ ಮನಗೆದ್ದರು. ಕಾಳಿಯಾಗಿ ಸಮಹಿತ ಶೆಟ್ಟಿ, ಮಂತ್ರವಾದಿಯಾಗಿ ಪ್ರಕಾಶ್‌ ಶೆಟ್ಟಿ ನಲ್ಯಗುತ್ತು, ದೇವೇಂದ್ರನ ದೂತನಾಗಿ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಪುರುಹಿತ ಮುನಿ, ಡೊಂಬರಾಟದವರಾಗಿ ಪ್ರಕಾಶ್‌ ಕುಂಠಿನಿ, ಮಹೇಶ್‌ ಶೆಟ್ಟಿ, ಕಿಶೋರ್‌ ಕುಮಾರ್‌ ಕುತ್ಯಾರ್‌ ಅವರು ಗಮನ ಸೆಳೆದರು. ಪ್ರೇತ ಹಿಡಿದ ಮಹಿಳೆಯಾಗಿ ನವೀನ್‌ ಶೆಟ್ಟಿ ಇನ್ನಬಾಳಿಕೆ, ಪತಿಯಾಗಿ ಬೆಳ್ಳಂಪಳ್ಳಿ ಬಾಲಕೃಷ್ಣ ಹೆಗ್ಡೆ ಅವರು ಪ್ರಸಂಗದಲ್ಲಿ ಬಂದ ವಿಶೇಷ ಪಾತ್ರಗಳಲ್ಲಿ ರಂಜಿಸಿದರು.
ನಿರಂತರ ನಾಲ್ಕು ವರ್ಷಗಳಿಂದ ನಾಲ್ಕು ಪ್ರಸಂಗಗಳನ್ನು ಆಡಿತೋರಿಸಿದ ಸಂಘದ ಪ್ರಯತ್ನ ಶ್ಲಾಘನೀಯ. ಆದರೂ ಯಕ್ಷಗಾನದ ಪರಂಪರೆಗೆ ನೀಡಬೇಕಾದ ಗೌರವ ಸಲ್ಲಲೇ ಬೇಕು. ಅದಕ್ಕಾಗಿ ಕಲಾವಿದರು ವೃತ್ತಿಪರ ಅಥವಾ ಹವ್ಯಾಸಿಯೇ ಆಗಿರಲಿ. ರಂಗ ನಡೆ, ರಂಗ ಮಾಹಿತಿ, ಭಾಷೆಯ ಪ್ರಜ್ಞೆಗೆ ಗಮನ ಕೊಟ್ಟು ವ್ಯವಹರಿಸಿದರೆ ಪ್ರದರ್ಶನ ಉತ್ತಮ ಗುಣಮಟ್ಟದಲ್ಲಿ ಸಾಗಲು ಸಾಧ್ಯ. ಮುಂಬಯಿಯಲ್ಲಿ ಬಂಟ ಸಮಾಜದಲ್ಲಿ ವಿಶೇಷ ಪ್ರತಿಭೆಗಳಿದ್ದು ಅವರಿಗೂ ಇಂತಹ ಸಂದರ್ಭದಲ್ಲಿ  ವೇದಿಕೆಯನ್ನು ಕಲ್ಪಿಸಿಕೊಡಬೇಕು. ಕೇವಲ ಒಂದೇ ಪ್ರದರ್ಶನವಿರಲಿ ಪಾತ್ರವಹಿಸಿದರೂ ತಮ್ಮ ಪಾತ್ರ ಚಿಕ್ಕದಿರಲಿ, ದೊಡ್ಡದಿರಲಿ ಅದಕ್ಕೆ ನ್ಯಾಯ ನೀಡುವ ಕೆಲಸ ನಮ್ಮಿಂದಾಗಬೇಕು. ಯಕ್ಷಗಾನದ ಪರಂಪರೆ ಉಳಿಸಿ-ಬೆಳೆಸುವಲ್ಲಿ ನಾವು ಟೊಂಕಕಟ್ಟಿ ನಿಂತರೆ ಅದೇ ನಾವು ಕಲಾಮಾತೆಗೆ ಸಲ್ಲಿಸುವ ಗೌರವ, ಪೂಜೆಯಾಗುತ್ತದೆ.

 ದಯಾಮಣಿ ಶೆಟ್ಟಿ ಎಕ್ಕಾರು

ಟಾಪ್ ನ್ಯೂಸ್

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.