ಯಕ್ಷ ಕಲೆಗೆ ಧಾರ್ಮಿಕ ಕ್ಷೇತ್ರಗಳ ಕೊಡುಗೆ ಅಪಾರ: ಪ್ರವೀಣ್ ಶೆಟ್ಟಿ ಪುತ್ತೂರು
Team Udayavani, Mar 5, 2022, 11:55 AM IST
ಪುಣೆ: ಶ್ರೀ ದೇವರ ಸನ್ನಿಧಾನವಿರುವ ಪವಿತ್ರ ಪುಣ್ಯಕ್ಷೇತ್ರಗಳು ಧಾರ್ಮಿಕ ಆಚರಣೆಗಳೊಂದಿಗೆ ನಮ್ಮ ಕಲೆ, ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಭಕ್ತರನ್ನು ತನ್ನತ್ತ ಸೆಳೆಯುವ ಶ್ರದ್ಧಾ ಕೇಂದ್ರಗಳಾಗಿವೆ. ತುಳುನಾಡಿನ ಅದೆಷ್ಟೋ ಕ್ಷೇತ್ರಗಳು ಕರಾವಳಿಯ ಗಂಡು ಕಲೆ ಯಕ್ಷಗಾನವನ್ನು ಪೋಷಿಸಿ ಬೆಳೆಸುತ್ತಿವೆ. ಹಾಗೆಯೇ ಕೆಲವು ಮಹಾ ಕ್ಷೇತ್ರಗಳ ಯಕ್ಷಗಾನ ಮೇಳಗಳು ಮೇಳೈಸುತ್ತಿವೆ. ಯಕ್ಷಗಾನ ಮನೋರಂಜನೆ ಜತೆಗೆ ದೇಶದ ವಿವಿಧ ಕ್ಷೇತ್ರಗಳ ಚರಿತ್ರೆಯನ್ನು ದಾಖಲಿಸುವ ಕಲೆ. ಸಂಸ್ಕೃತಿ, ಸಂಸ್ಕಾರ, ಸಾಮಾಜಿಕ ಆಗು-ಹೋಗುಗಳ ಬಗ್ಗೆ ಮನವರಿಕೆ ಮಾಡುವ ಕಲೆಯಾಗಿದೆ. ಕಲೆಯ ಅಭಿಮಾನದಿಂದ ಪುಣೆಯಲ್ಲಿ ಈ ಯಕ್ಷಗಾನ ಮಂಡಳಿಯನ್ನು ಸ್ಥಾಪಿಸಿದ್ದೇವೆ. ಯಕ್ಷಗಾನ ಇನ್ನಷ್ಟು ಬೆಳೆಯಬೇಕು, ಯುವ ಜನತೆ ಈ ಕಲೆ ಬಗ್ಗೆ ಆಕರ್ಷಿತರಾಗಬೇಕು. ಅದಕ್ಕಾಗಿ ಹೆಚ್ಚೆಚ್ಚು ಯಕ್ಷಗಾನ ಪ್ರದರ್ಶನಗಳು ನಡೆಯಬೇಕು ಎಂಬುವುದೇ ನಮ್ಮ ಆಶಯ ಎಂದು ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸಂಸ್ಥಾಪಕ, ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ತಿಳಿಸಿದರು.
ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾ. 1ರಂದು ಶಿವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಆಯೋಜಿಸಲಾಗಿದ್ದ ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಯಕ್ಷಗಾನ ಪ್ರದರ್ಶನ ಸಂದರ್ಭ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಯಕ್ಷಗಾನ ಕಲೆಗೆ ಧಾರ್ಮಿಕ ಕ್ಷೇತ್ರಗಳ ಕೊಡುಗೆ ಅಪಾರವಾಗಿದೆ. ಪುಣೆಯ ಪುಣ್ಯಕ್ಷೇತ್ರವಾದ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕೂಡಾ ಯಕ್ಷಗಾನದ ಮೇಲಿನ ಅಭಿಮಾನದಿಂದ ಹಲವಾರು ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸುತ್ತಿದೆ. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಮಾಡಿದ ಸಮ್ಮಾನಕ್ಕೆ ಋಣಿಯಾಗಿದ್ದೇನೆ. ಸಿ. ಕೆ. ಪ್ರಶಾಂತ್ ಮುಂದಾಳತ್ವದಲ್ಲಿ ಶಿವ ಮೆಚ್ಚಿನ ಕಣ್ಣಪ್ಪೆ ಯಕ್ಷಗಾನವು ಕಲಾಭಿಮಾನಿಗಳ ಮನ ಮುಟ್ಟಿದೆ. ಇಲ್ಲಿನ ಅಪಾರ ಭಕ್ತರು ಮತ್ತು ಕಲಾಭಿಮಾನಿಗಳ ಸಮ್ಮಿಲನ ಖುಷಿ ತಂದಿದೆ. ಈ ಕ್ಷೇತ್ರ ಇನ್ನಷ್ಟು ಬೆಳೆಯಲಿ, ಯಕ್ಷಗಾನ ಕಲಾವಿದರ ಬಾಳಿಗೆ ಮಂದಿರವು ಬೆಳಕಾಗಲಿ ಎಂದರು.
ಊರಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಶಿವ ಮೆಚ್ಚಿನ ಕಣ್ಣಪ್ಪೆ ತುಳು ಯಕ್ಷಗಾನವು ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅವರ ವ್ಯವಸ್ಥಾಪಕತ್ವದಲ್ಲಿ ಪ್ರದರ್ಶನಗೊಂಡಿತು. ಯಕ್ಷಗಾನದ ಮಧ್ಯಾಂತರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವತಿಯಿಂದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ, ಯಕ್ಷಕಲಾ ಪೋಷಕ, ಸಮಾಜ ಸೇವಕ ಪ್ರವೀಣ್ ಶೆಟ್ಟಿ ಪುತ್ತೂರು ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗೌರವಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಹರೀಶ್ ಭಟ್, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುಭಾಶ್ ಶೆಟ್ಟಿ ಮತ್ತು ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಕ್ಷಗಾನದ ಮುಮ್ಮೇಳ ಮತ್ತು ಹಿಮ್ಮೇಳದ ಕಲಾವಿದರನ್ನು ಸಂಘದ ಸದಸ್ಯರು ಸತ್ಕರಿಸಿದರು. ಪುಷ್ಪರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಯಕ್ಷಗಾನದಲ್ಲಿ ಭಾಗವತರಾಗಿ ಯುವ ಭಾಗವತ ಭರತ್‌ರಾಜ್ ಶೆಟ್ಟಿ, ಮದ್ದಳೆಯಲ್ಲಿ ಆನಂದ್ ಶೆಟ್ಟಿ ಇನ್ನ, ಚೆಂಡೆಯಲ್ಲಿ ಪ್ರವೀಣ್ ಶೆಟ್ಟಿ, ಚಕ್ರತಾಳದಲ್ಲಿ ಕುಶರಾಜ್ ಸಹಕರಿಸಿದರು. ಕಲಾವಿದರಾಗಿ ಯಕ್ಷಗಾನ, ರಂಗಭೂಮಿ ಕಲಾವಿದ, ಟಿವಿ ಕಾರ್ಯಕ್ರಮ ನಿರೂಪಕ ಸಿ. ಕೆ. ಪ್ರಶಾಂತ್ ಸಾರಥ್ಯದಲ್ಲಿ ವಿಶ್ವನಾಥ್ ಪದು¾ಂಜ, ರವಿ ಭಂಡಾರಿ, ರಾಜೇಶ್ ಅರುವ, ಹರಿಪ್ರಸಾದ್ ಸಿದ್ದಕಟ್ಟೆ, ಮಿಥುನ್ ಪಂಜ, ವಿನಯ ಭಟ್ ಚಿಗುರುಪಾದೆ ಹಾಗೂ ಇನ್ನಿತರ ಉದಯೋನ್ಮುಖ ಕಲಾವಿದರು ಪಾಲ್ಗೊಂಡಿದ್ದರು. ವೇಷಭೂಷಣದಲ್ಲಿ ನಂದಿನಿ ಆರ್ಟ್ಸ್ನ ಮನೋಜ್ ಹೆಜ್ಮಾಡಿ, ಪ್ರಭಾಕರ ಕುಂದರ್, ಸುನಿಲ್ ದೇವಾಡಿಗ ಸಹಕರಿಸಿದರು.
ಪುಣೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಸದಸ್ಯ ನಾಗಿರುವ ನನಗೆ ಪುಣೆಯ ಕಲಾಭಿ ಮಾನಿಗಳ ಬಗ್ಗೆ ಅಪಾರ ಪ್ರೀತಿಯಿದೆ. ಈಗ ಊರಿನಲ್ಲಿ ಬಿಡುವಿಲ್ಲದಷ್ಟು ಕಾರ್ಯಕ್ರಮಗಳ ನಡುವೆ ಪುಣೆಯ ಈ ಯಕ್ಷಗಾನ ಪ್ರದರ್ಶನಕ್ಕೆ ನಾವೆಲ್ಲರೂ ಬಂದಿದ್ದೇವೆ. ಇದಕ್ಕೆ ಕಾರಣ ಪ್ರವೀಣ್ ಶೆಟ್ಟಿಯವರ ಹೃದಯವಂತಿಕೆ. ನಮ್ಮ ಕಷ್ಟ ಕಾಲದಲ್ಲೂ ವಿಚಾರಿಸಿ ನೆರವು ನೀಡುವಂತಹ ವ್ಯಕ್ತಿತ್ವ ಅವರದ್ದು. ಕಲಾವಿದರ ಬಗ್ಗೆ ಅವರಿಗೆ ಇರುವ ಕಳಕಳಿ ಮತ್ತು ಯಕ್ಷಗಾನದ ಮೇಲಿರುವ ಪ್ರೀತಿಯನ್ನು ನಾವೆಂದೂ ಮರೆಯುವುದಿಲ್ಲ. ನಾನು ಕೂಡಾ ಪುಣೆಯ ಮಂಡಳಿಯ ಕಲಾವಿದ ಎನ್ನಲು ಹೆಮ್ಮೆಯಾಗುತ್ತಿದೆ. ಯಕ್ಷಗಾನಕ್ಕೆ ಕಲಾಭಿಮಾನಿಗಳ ಸಹಕಾರ ಸದಾಯಿರಲಿ.–ಸಿ. ಕೆ. ಪ್ರಶಾಂತ್‌ಯಕ್ಷಗಾನ, ರಂಗಭೂಮಿ ಕಲಾವಿದರು
ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.