ಭಾಂಡೂಪ್‌ನಲ್ಲಿ ರಂಜಿಸಿದ ವೀರಮಣಿ ತಾಳಮದ್ದಳೆ
Team Udayavani, Jul 19, 2017, 3:56 PM IST
ಯಕ್ಷಮಿತ್ರರು ಭಾಂಡೂಪ್ ನಾಡಿನ ಕಲಾ ಪ್ರಕಾರಗಳನ್ನು ಉತ್ತೇಜಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿದೆ. ಅದರಲ್ಲೂ ಯಕ್ಷಗಾನ, ತಾಳಮದ್ದಳೆ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಅವರ ಸರಣಿ ಯಕ್ಷಗಾನ ತಾಳಮದ್ದಳೆಯ ಅಂಗವಾಗಿ “ವೀರಮಣಿ’ ತಾಳಮದ್ದಳೆಯು ಇತ್ತೀಚೆಗೆ ಭಾಂಡೂಪ್‌ನ ಶ್ರೀ ನಿತ್ಯಾನಂದ ಮಂದಿರದ ಸಭಾಂಗಣದಲ್ಲಿ ಆಯೋಜಿಸಿ ತಾಳಮದ್ದಳೆಯ ಅಭಿಮಾನಿಗಳನ್ನು ರಂಜಿಸುವಲ್ಲಿ ಯಕ್ಷಮಿತ್ರರು ಭಾಂಡೂಪ್ ಯಶಸ್ವಿಯಾದರು.
ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರ್ಚಕ ಸುಭಾಶ್ ಭಟ್, ಬಿಲ್ಲವರ ಅಸೋಸಿಯೇಶನ್ ಭಾಂಡೂಪ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಎಂ. ಬಿ. ಸನಿಲ್, ಭಾಂಡೂಪ್ ಶ್ರೀ ಶನಿಮಂದಿರದ ಸೀತಾರಾಮ ಜಿ. ಕರ್ಕೇರ, ಹಿರಿಯರಾದ ಸದಾನಂದ ಅಮೀನ್, ಯಕ್ಷಮಿತ್ರರು ಭಾಂಡೂಪ್‌ನ ಜನಾದìನ ಪೂಜಾರಿ, ವಾಸು ಎಸ್. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕಲಾವಿದ ವೇಣುಗೋಪಾಲ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅತಿಥಿಗಳನ್ನು ಅಭಿನಂದಿಸಿ ಗೌವಿಸಿದರು.
ಇದೇ ಸಂದರ್ಭದಲ್ಲಿ ನಡೆದ ವೀರಮಣಿ ತಾಳಮದ್ದಳೆಯಲ್ಲಿ ಕಾವ್ಯಶ್ರೀ ಆಜೇರು ಅವರ ಇಂಪಾದ ಹಾಡು ಗಾರಿಕೆಯು ಯಕ್ಷಕಲಾಭಿಮಾನಿಗಳನ್ನು ಆಶ್ಚರ್ಯಗೊಳಿಸಿತು. ಎಳೆಯ ಹರೆಯದಲ್ಲೇ ಉತ್ತಮ ಕಂಠದಿಂದ ಪ್ರಸಿದ್ಧಿಯನ್ನು ಹೊಂದಿರುವ ಅವರು ಯಕ್ಷಗಾನ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉತ್ತಮ ಸಾಧನೆಗಳನ್ನು ಮಾಡಲಿ ದ್ದಾರೆ ಎಂಬುವುದನ್ನು ನಿರೂಪಿಸಿದರು. ಚೆಂಡೆ-ಮದ್ದಳೆಯಲ್ಲಿ ಕಟೀಲು ಮೇಳದ ಪ್ರಸಿದ್ಧ ಹಿಮ್ಮೇಳ ಕಲಾವಿದ ಪ್ರಶಾಂತ್ ಶೆಟ್ಟಿ ವಗೆನಾಡು, ಶ್ರೀಪತಿ ನಾಯಕ್ ಆಜೇರು ತಮ್ಮಲ್ಲಿರುವ ಪ್ರತಿಭಾ ಶಕ್ತಿಯನ್ನು ಪ್ರದರ್ಶಿಸಿದರು.
ಅರ್ಥಗಾರಿಕೆಯಲ್ಲಿ ವೀರಮಣಿಯಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಅವರ ಮಾತುಗಾರಿಕೆಯ ಗತ್ತು, ಆ ಶೈಲಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿತು. ಮೊದಲ ಭಾಗದ ಹನುಮಂತನಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ, ದ್ವಿತೀಯ ಹನುಮಂತನಾಗಿ ಹರೀಶ್ ಬಳಂತಿಮೊಗರು, ಈಶ್ವರನಾಗಿ ಪಕಳಕುಂಜ ಶ್ಯಾಮ್ ಭಟ್, ಶತ್ರುಘ್ನನಾಗಿ ಶೇಣಿ ವೇಣುಗೋಪಾಲ್ ಭಟ್ ಅವರು ತಮ್ಮ ಪಾತ್ರಗಳಿಗೆ ಜೀವತುಂಬುವಲ್ಲಿ ಯಶಸ್ವಿಯಾದರು. ದಿನೇಶ್ ಶೆಟ್ಟಿ ವಿಕ್ರೋಲಿ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸುರಿಯುತ್ತಿದ್ದ ಮಳೆಯ ನಡುವೆಯೂ ಕಲಾಭಿಮಾನಿಗಳು ವಿವಿಧ ಉಪನಗರಗಳಿಂದ ಆಗಮಿಸಿ ಕಲಾವಿದರನ್ನು ಹುರಿದುಂಬಿಸಿದರು. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದಾಗ ಮಾತ್ರ ನಾಡಿನ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳು ಉಳಿಯಲು ಸಾಧ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
Desi Swara@150: ಪೊಲೇಂಡ್ ಕನ್ನಡಿಗರು ಸಂಘದ ಅದ್ದೂರಿ ಉದ್ಘಾಟನೆ
Desi Swara@150: ನವವಿಂಶತಿ ನೃತ್ಯ ಹಬ್ಬದಲ್ಲಿ ದ್ವಿದಳದ ಸತ್ರಿಯ ಪ್ರದರ್ಶನ
MUST WATCH
ಹೊಸ ಸೇರ್ಪಡೆ
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.