ಸಮಾಜಮುಖೀ ದಿ| ಯತೀಶ್ ಶೆಟ್ಟಿಯವರು ಎಲ್ಲರಿಗೂ ಪ್ರೇರಣೆ: ಉದಯ ಶೆಟ್ಟಿ
Team Udayavani, Jan 3, 2019, 12:03 PM IST
ಮುಂಬಯಿ: ಪ್ರಾ. ಆರೋಗ್ಯಕೇಂದ್ರ ದೊಂಡೇರಂಗಡಿ ಇಲ್ಲಿನ ಪರಿಸರದಲ್ಲಿ ಸಾಮಾಜಿಕ ಸೇವೆ ಮೂಲಕ ಜನರೊಂದಿಗೆ ಬೆರೆತು ಜನರ ಪ್ರೀತಿ ವಿಶ್ವಾಸ ಗಳಿಸಿಕೊಂಡು ಜನಾನುರಾಗಿಯಾಗಿದ್ದ ದಿವಂಗತ ಯತೀಶ್ ಶೆಟ್ಟಿ ದೊಂಡೇರಂಗಡಿ ಇವರ 9ನೇ ಪುಣ್ಯಸ್ಮರಣೆಯ ಪ್ರಯುಕ್ತ ಡಿ. 31ರಂದು ಕಣ್ಣಿನ ಉಚಿತ ತಪಾಸಣೆ, ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.
ಲಯನ್ಸ್ ಕ್ಲಬ್ ಮುನಿಯಾಲ್, ಉದಯ ಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಮುನಿಯಾಲ್, ಜೈ ಭಾರತ್ ಮಾತಾ ಸಂಘಟನೆ ಬೈರಂಪಳ್ಳಿ, ಜಿÇÉಾ ರಕ್ತನಿಧಿ ಕೇಂದ್ರ ಉಡುಪಿ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಜಿÇÉಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ನಿವಾರಣಾ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೇರಂಗಡಿ, ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೇರಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ದೊಂಡೇರಂಗಡಿ ದಿವಂಗತ ಯತೀಶ್ ಶೆಟ್ಟಿ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಇದರ ಅಧ್ಯಕ್ಷ ಉದಯ ಕೃಷ್ಣ ಶೆಟ್ಟಿ ಮುನಿಯಾಲ್ ಇವರು ನೆರವೇರಿಸಿ ಮಾತನಾಡಿ, ದಿವಂಗತ ಯತೀಶ್ ಶೆಟ್ಟಿಯವರು ಜೀವನದುದ್ದಕ್ಕೂ ಸ್ವಾರ್ಥಕ್ಕಾಗಿ ಬದುಕದೆ ಸಮಾಜಕ್ಕಾಗಿ ಬದುಕಿ ತೋರಿಸಿದವರಾಗಿ¨ªಾರೆ. ಅವರ ಸಮಾಜಮುಖೀ ಚಿಂತನೆ ಎಲ್ಲರಿಗೂ ಪ್ರೇರಣೆಯಾಗಿದೆ. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ ಇಂತಹ ಕಾರ್ಯಕ್ರಮಗಳ ಮೂಲಕ ಅವರನ್ನು ನೆನಪಿಸುವ ಕಾರ್ಯ ಅಭಿನಂದನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಂದ್ರಿಕಾ ಕಿಣಿ, ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ| ವೀಣಾ, ಪ್ರಸಾದ್ ನೇತ್ರಾಲಯದ ಡಾ| ರಶ್ಮಿ, ಮಧುಕರ್, ಜೈ ಭಾರತ್ ಮಾತಾ ಸಂಘಟನೆಯ ಶ್ರೀಧರ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅರುಣ್ ಹೆಗ್ಡೆ, ಭೋಜ ಪೂಜಾರಿ, ಪ್ರಾಧ್ಯಾಪಕ ಸದಾನಂದ ನಾಯಕ್, ರಾಘವ ದೇವಾಡಿಗ, ಶಂಕರ್ ಶೆಟ್ಟಿ, ಅರವಿಂದ್ ಹೆಗ್ಡೆ, ಸತೀಶ್ ಪೂಜಾರಿ, ಉಮೇಶ್ ಶೆಟ್ಟಿ, ಜಗದೀಶ್ ಹೆಗ್ಡೆ, ಅಶೋಕ್ ಕುಮಾರ್, ಸಂಪತ್, ರವೀಂದ್ರ ನಾಯಕ್, ಪ್ರಸನ್ನ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಲಯನ್ ಗೋಪಿನಾಥ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಅಖೀಲೇಷಾ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.