ಯಂಗ್‌ಮೆನ್ಸ್ ಎಜುಕೇಶನ್ ಸೊಸೈಟಿ: 73ನೇ ವಾರ್ಷಿಕೋತ್ಸವ ಸಂಭ್ರಮ
Team Udayavani, Aug 28, 2018, 5:21 PM IST
ಮುಂಬಯಿ: ಸ್ವಾತ್ರಂತ್ರÂ ಪೂರ್ವದಲ್ಲೇ ಸ್ಥಾಪಿತ ಈ ಸೊಸೈಟಿಯ ಸ್ಥಾಪಕರ ದೂರದೃಷ್ಟಿಯನ್ನು ಮೊದಲಾಗಿ ಅಭಿನಂದಿಸಬೇಕು. ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದು ಈವರೆಗೆ ಮುನ್ನಡೆಸಿದ ಮಹಾನ್ ವ್ಯಕ್ತಿಗಳ ಸಾಧನೆ ಅನುಪಮವಾಗಿದೆ. ಸಂಸ್ಥೆಯನ್ನು ಕ್ರಮಬದ್ಧವಾಗಿ ಮರ್ಯಾದೆ, ಶಿಸ್ತುಗಳಿಂದ ಮುನ್ನಡೆಸಿ ಸಾವಿರಾರು ಜನರ ಪಾಲಿನ ಆಶಾಕಿರಣವಾದ ಈ ಸಂಸ್ಥೆಯ ಸೇವೆ ಅಭಿನಂದನೀಯ. ಅಂದು ಏನೂ ಸೌಲಭ್ಯಗಳಿಲ್ಲದ ದಿನಗಳಲ್ಲಿ ಒಂದು ಸಂಸ್ಥೆಯನ್ನು ಕಟ್ಟಿ ಮುನ್ನಡೆಸಲು ಕಷ್ಟವಿತ್ತು. ಅದರೂ ಕಲಿಸುವ ಮತ್ತು ಕಲಿಯುವ ಆಸಕ್ತಿಯಿತ್ತು. ಇಂದು ಎಲ್ಲಾ ಸೌಲತ್ತುಗಳು ಇದ್ದರೂ ಕಲಿಕೆಯ ಬೇಧಭಾವ, ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳುವ ಧಾವಂತದಲ್ಲಿ ಎಲ್ಲವನ್ನೂ ಮರೆಯುತ್ತಿರುವುದು ಶೋಚನೀಯ ಎಂದು ಅಜಂತಾ ಕ್ಯಾಟರರ್, ಒರಿಯೆಂಟಲ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ಇದರ ನಿರ್ದೇಶಕ ಜಯರಾಮ ಬಿ. ಶೆಟ್ಟಿ ಇನ್ನಾ ಅಭಿಪ್ರಾಯಿಸಿದರು.
ಆ. 25 ರಂದು ಸಂಜೆ ಮಾಟುಂಗಾ ಪೂರ್ವದ ಮೈಸೂರು ಅಸೋಸಿಯೇಶನ್ ಮುಂಬಯಿ ಸಭಾಗೃಹದಲ್ಲಿ ನಡೆದ ಸುಮಾರು ಏಳುವರೆ ದಶಕಗಳಿಂದ ಸೇವಾನಿರತ ತುಳುಕನ್ನಡಿಗರ ಸಂಚಾಲಕತ್ವದ ಶಿಕ್ಷಣ ಸಂಸ್ಥೆ ಯಂಗ್‌ಮೆನ್ಸ್ ಎಜ್ಯುಕೇಶನ್ ಸೊಸೈಟಿಯ 73ನೇ ರ್ವಾಕೋತ್ಸವ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊರನಾಡ ಮುಂಬಯಿಯಲ್ಲಾದರೂ ಕನ್ನಡ ಉಳಿಯುತ್ತಿದ್ದರೂ ಕರುನಾಡಲ್ಲೇ ಕನ್ನಡ ಮಾಯವಾಗುತ್ತದೆ ಎಂದರೂ ತಪ್ಪಾಗಲಾರದು.ಆದರೆ ಹೊರನಾಡಿನಲ್ಲಿ ಕನ್ನಡತನ ಅರಳಿಸಿ, ಕನ್ನಡದ ಸುವಾಸನೆಯನ್ನು ಎಲ್ಲೆಡೆ ಪಸರಿಸಿದ ಈ ಸಂಸ್ಥೆಯ ಕನ್ನಡಾಭಿಮಾನ ನಿಜಕ್ಕೂ ಐತಿಹಾಸಿಕವಾದುದು ಎಂದು ನುಡಿದರು.
ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಎನ್. ಪಿ. ಸುವರ್ಣ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಕ್ಲಾಸಿಕ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುರೇಶ್ ಆರ್. ಕಾಂಚನ್ ಮತ್ತು ರಿಸರ್ವೇಶನ್ ಸಿನೆಮಾದ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದು ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಶುಭಹಾರೈಸಿದರು. ಜಯರಾಮ ಶೆಟ್ಟಿ ಅವರು ಕಾದಂಬರಿಕಾರ ಪ್ರದೀಪ್‌ಕುಮಾರ್ ಮಂಗಳೂರು ರಚಿತ, ಎನ್. ಪಿ. ಸುವರ್ಣ ಸಂಪಾದಕೀಯದ ಧಾರ್ಮಿಕ ದರ್ಪಣ ಕೃತಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ರಷ್ಯಾದಲ್ಲಿ ಇತ್ತೀಚೆಗೆ “ಏಯಾ ಪೆಸಿಫಿಕ್ ಅಚೀವರ್ ಅವಾರ್ಡ್’ ಪುರಸ್ಕಾರಕ್ಕೆ ಪಾತ್ರರಾದ ಎನ್. ಪಿ. ಸುವರ್ಣ ಮತ್ತು ಪ್ರಭಾ ಎನ್. ಸುವರ್ಣ ದಂಪತಿ, ಯಾಕುಬ್ ಖಾದರ್ ಗುಲ್ವಾಡಿ ಮತ್ತು ಫರಾ ದಂಪತಿ, ಮಕ್ಕಳಾದ ಫರೀಮಾ ಮತ್ತು ಫಾತಿಮಾ ಅವರನ್ನೊಳಗೊಂಡು ಹಾಗೂ ಪ್ರದೀಪ್‌ಕುಮಾರ್ ಮಂಗಳೂರು ಅವರನ್ನು ಯಂಗ್‌ಮೆನ್ಸ್ ಸಂಸ್ಥೆ ಪರವಾಗಿ, ಬಿ. ಕೆ. ಮಾಧವ ರಾವ್ ಅವರನ್ನು ಕಥಾಬಿಂದು ಪ್ರಕಾಶನ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.
ನಿಷ್ಠಾವಂತ ಶಿಕ್ಷಣ ಪ್ರೇಮಿಗಳ ಸಹಯೋಗದೊಂದಿಗೆ ಈ ಸಂಸ್ಥೆಯನ್ನು ಈ ಮಟ್ಟಿಗೆ ಬೆಳೆಸಿ ಉಳಿಸಿದ್ದೇವೆ. ಆದರೆ ಜಾಗತೀಕರಣದ ಬದಲಾವಣೆಯಿಂದ ಕನ್ನಡದ ವ್ಯಾಮೋಹ ಮರೆಯಾಗುವ ಕಾಲ ಘಟ್ಟದಲ್ಲಿ ಬದಲಾವಣೆಗಳು ಸರ್ವೇ ಸಾಮಾನ್ಯ. ಅದಕ್ಕೆ ತಕ್ಕಂತೆ ಸಂಸ್ಥೆಗಳೂ ಬದಲಾಗುವುದು ಅನೀವಾರ್ಯ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಎನ್. ಪಿ. ಸುವರ್ಣ ತಿಳಿಸಿದರು.
ಗಣೇಶ್ ಶ್ರೀಯಾನ್, ಎನ್. ಎಚ್ ಬಾಗ್ವಾಡಿ, ರಾಜು ಶ್ರೀಯಾನ್, ಡಾ| ರವಿರಾಜ್ ಸುವರ್ಣ ಮೀರಾರೋಡ್, ಸದಾನಂದ್ ಅಂಚನ್ ಥಾಣೆ, ಓಂದಾಸ್ ಕಣ್ಣಂಗಾರ್, ಸುಧಾಕರ್ ಸಿ. ಪೂಜಾರಿ, ಕರುಣಾಕರ್ ಹೆಜ್ಮಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾ ಎನ್. ಸುವರ್ಣ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಆನಂದ ಎ. ಶೆಟ್ಟಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪಿ. ಎನ್. ಶೆಟ್ಟಿಗಾರ್ ಮತ್ತು ಚಿತ್ರಾಪು ಕೆ. ಎಂ. ಕೋಟ್ಯಾನ್ ಸಮ್ಮಾನಿತರು, ಅತಿಥಿಗಳನ್ನು ಪರಿಚಯಿಸಿದರು.
ಗೌರವ ಕೋಶಾಧಿಕಾರಿ ಶೇಖರ್ ಎನ್. ಸುವರ್ಣ ಪ್ರತಿಭಾ ಪುರಸ್ಕೃತರ ಯಾದಿಯನ್ನು ವಾಚಿಸಿದರು. ವಸಂತ್ ಎನ್. ಸುವರ್ಣ ಡೊಂಬಿವಲಿ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಿಖೀಲ್ ಮಂಜೂ ನಿರ್ದೇಶನ ಮತ್ತು ನಟನೆಯ, ಯಾಕುಬ್ ಖಾದರ್ ಗುಲ್ವಾಡಿ ನಿರ್ಮಾ ಪಕತ್ವದ ರಾಷ್ಟ್ರ ಪ್ರಶಸ್ತಿ ವಿಜೇತ ಕನ್ನಡ ಚಲನಚಿತ್ರ “ರಿಸರ್ವೆàಶನ್’ ಪ್ರದರ್ಶಿಸಲ್ಪಟ್ಟಿತು.
ಮುಂಬಯಿ ಮಹಾನಗರದಲ್ಲಿನ ಅದೆಷ್ಟೋ ಶ್ರೀಮಂತರೆಣಿಸಿದ ಗಣ್ಯರು ಯಂಗ್‌ಮೆನ್ಸ್ ಸೊಸೈಟಿಯಲ್ಲೇ ಕಲಿತವರಾಗಿದ್ದಾರೆ. ಆದರೆ ಇಂದು ಅವರ್ಯಾರೂ ಕಾಣುತ್ತಿಲ್ಲ. ಕಾರಣ ಕೋಟಿಗಟ್ಟಲೆ ಹಣ ಆಸ್ತಿ ಇರುತ್ತಿದ್ದರೆ ಎಲ್ಲರೂ ಹುದ್ದೆಯನ್ನಲಂಕರಿಸಲು ಬರುತ್ತಿದ್ದರು. ಆದರೂ ವಿದ್ಯಾರ್ಜನೆಯೊಂದಿಗೆ ಈ ಸಂಸ್ಥೆ ಮುನ್ನಡೆಸಿ ಉಳಿಸಬೇಕೆಂಬ ಪ್ರಸಕ್ತ ಪದಾಧಿಕಾರಿಗಳ ಆಶಯವೇ ಅವರ ದೊಡ್ಡತನವಾಗಿದೆ. ಗೌಜಿ ಗದ್ದಲ, ಸಂಭ್ರಮ, ಆಡಂಬರ ಇರುತ್ತಿದ್ದರೆ ಎಲ್ಲರೂ ಇರ್ತಾರೆೆ. ಸುಮಾರು 73 ವರ್ಷಗಳಿಂದ ಈ ಸಂಸ್ಥೆ ಸಾವಿರಾರು ಮಂದಿಗೆ ಶೈಕ್ಷಣಿಕ ನೆರಳು ಕೊಟ್ಟು ಹಣ್ಣು ಹಂಪಲು ನೀಡಿದೆ. ಆದರೆ ಇದನ್ನು ಫಲಾನುಭವಿಸಿದವರು ಮರೆತಿರುವುದು ವಿಪರ್ಯಾಸವೇ ಸರಿ. ಆದರೂ ಈ ಸಂಸ್ಥೆಯ ಹೆಸರಿನಂತೆ ಯಂಗ್‌ಮೆನ್ಸ್ ಎಂದೂ ಓಲ್ಡ್ ಮೆನ್ಸ್ ಆಗದಿರಲಿ.
ಸುರೇಶ್ ಕಾಂಚನ್,
ನಿರ್ದೇಶಕರು : ಕ್ಲಾಸಿಕ್ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್
ಚಿತ್ರ-ವರದಿ : ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Madikeri: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.