ಯಂಗ್‌ಮೆನ್ಸ್‌ ಎಜುಕೇಶನ್‌ ಸೊಸೈಟಿಯ 72ನೇ ವಾರ್ಷಿಕೋತ್ಸವ


Team Udayavani, Sep 14, 2017, 11:56 AM IST

13-Mum02a.jpg

ಮುಂಬಯಿ: ಪ್ರತಿ  ಮಕ್ಕಳಲ್ಲೂ ಭೇದ-ಭಾವಕ್ಕಿಂತ ಸಖೀಭಾವ ರೂಢಿಸುವ ಕೆಲಸ ಪಾಲಕರಿಂದಲೇ ಆಗಬೇಕು. ಮಕ್ಕಳಲ್ಲಿ  ಸಾಮಾಜಿಕ ಕಳಕಳಿಯ ಹುಮ್ಮಸ್ಸು ಹೆಚ್ಚಿಸಬೇಕು. ಆ ಮೂಲಕ ರಾಷ್ಟ್ರದ ಮತ್ತು ಸ್ವಭವಿಷ್ಯ ರೂಪಿಸುವ ವಾಸ್ತವಿಕತೆ ಮಕ್ಕಳಲ್ಲಿ ತನ್ನಿಂದ ತಾನೇ ಹುಟ್ಟುತ್ತದೆ. ಮಕ್ಕಳು ಸದಾ ಧನಾತ್ಮಕ ಚಿಂತನೆ ಮೈಗೂಡಿಸಿಕೊಳ್ಳಬೇಕು ಅವಾಗಲೇ  ಜೀವನಗುರಿ ನಿರ್ದಿಷ್ಟವಾಗಿ ತಲುಪುತ್ತದೆ. ಈ ಬಗ್ಗೆ ಅವರಲ್ಲಿ ಭರವಸೆಯ ಅರಿವು ಹೆಚ್ಚಿಸುವ ಅಗತ್ಯವಿದೆೆ ಎಂದು ಶುಭದಾ ಆಂಗ್ಲ ಮಾಧ್ಯಮ ವಿದ್ಯಾಲಯ ನಾವುಂದ ಕುಂದಾಪುರ ಇದರ ಸಂಸ್ಥಾಪಕ ಡಾ| ಎನ್‌. ಕೆ. ಬಿಲ್ಲವ  ಹೇಳಿದರು.

ಸೆ. 9 ರಂದು ಮಾಟುಂಗಾ ಮೈಸೂರು ಅಸೋಸಿಯೇಶನ್‌ ಮುಂಬಯಿ ಸಭಾಗೃಹದಲ್ಲಿ ಮಹಾನಗರದಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಯಂಗ್‌ಮೆನ್ಸ್‌ ಎಜುಕೇಶನ್‌ ಸೊಸೈಟಿಯ 72ನೇ ವರ್ಧಂತ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿ ಪಾಲ್ಗೊಂಡು ಅವರು ಮಾತನಾಡಿ ಶುಭಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡ  ಸಾಹಿತಿ ಡಾ| ಜಿ. ಡಿ. ಜೋಶಿ ಅವರು ಮಾತನಾಡಿ, ನನ್ನ ಅದೆಷ್ಟೋ ವಿದ್ಯಾರ್ಥಿಗಳು ಹಗಲಲ್ಲಿ ದುಡಿದು ರಾತ್ರಿಶಾಲೆಗಳಲ್ಲಿ ಓದಿ ಅಪಾರ ಪರಿಶ್ರಮದಿಂದ ಸುಶಿಕ್ಷಿತರಾಗಿದ್ದಾರೆ. ಅವರ್ಯಾರೂ ಶ್ರೀಮಂತರಾಗುವ ಕನಸು ಎಂದೂ ಕಂಡವರಲ್ಲ. ಬರೇ ಹಸಿವು ನಿಭಾಯಿಸಲು ಬಂದವರು. ಇಂದು ಅದೆಷ್ಟೋ ಮಂದಿ ಮಾಲಕರಾಗಿ ಇಷ್ಟೆತ್ತರಕ್ಕೆ ಬೆಳೆದು ಬದುಕು ಕಟ್ಟಿದ್ದಾರೆ ಎನ್ನುವ ಅಭಿಮಾನ ನನ್ನ ಶಿಕ್ಷಕ ಸೇವೆಗೆ ಸಂದ ಗೌರವವಾಗಿದೆ. ಪ್ರಭಾ ಕೂಡಾ ನನ್ನ ವಿದ್ಯಾರ್ಥಿನಿಯಾಗಿದ್ದು  ಇಷ್ಟೆತ್ತರಕ್ಕೆ ಬೆಳೆದರೂ ಇಂದಿಗೂ ಶಿಷ್ಯೆಯಾಗಿ ನನ್ನೊಂದಿರುವುದು  ಅಭಿಮಾನವೆನಿಸುತ್ತಿದೆ. ಆಕೆಗೆ “ಗೊಂಚಲು’ ಕೃತಿ ರೂಪಿಸುವಲ್ಲಿ ನಾನು ಪ್ರೇರೇಪಿಸಿದ್ದೇನೆ. ಕೃತಿ ನನ್ನ ಹಸ್ತದಿಂದಲೇ ಅನಾವರಣಗೊಳಿಸುವ ಬಗ್ಗೆ ಕಾಳಜಿ ತೋರಿದ  ಈ ಸಂಸ್ಥೆಯ ಸೇವೆ ಅಭಿನಂದನೀಯ ಎಂದರು.

ಯಂಗ್‌ಮೆನ್ಸ್‌ ಶಿಕ್ಷಣ ಸೊಸೈಟಿಯ ಅಧ್ಯಕ್ಷ ಎನ್‌. ಪಿ. ಸುವರ್ಣ ಅವರು  ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರಿಯಾಶೀಲಾ ಮಕ್ಕಳ ಪೋಷಣೆಯು ಶೈಕ್ಷಣಿಕ ಜ್ಞಾನೋ ದಯದಿಂದಲೇ ಸಾಧ್ಯ. ಇಲ್ಲಿ ಭಾಷೆ ಗಿಂತಲೂ ಶಿಕ್ಷಣ ಮೌಲ್ಯವೇ ಮಹತ್ವದ್ದು. ನಮ್ಮ ಸಂಸ್ಥೆಯು ಇದನ್ನೇ ಧ್ಯೇಯವಾಗಿರಿಸಿ ಮಕ್ಕ ಳನ್ನು ಪ್ರೋತ್ಸಾಹಿಸಿ ಸುತ್ತಾ ಬಂದಿದೆ. ಶೈಕ್ಷಣಿಕ ಪ್ರೋತ್ಸಾಹದಿಂದ  ಪ್ರತಿಭಾನ್ವಿತರ ಗುರುತುವಿಕೆ ಸಾಧ್ಯವಾಗಿದ್ದು,  ಶಿಕ್ಷಣ ಪ್ರೇಮಿಗಳು ಸಹಕರಿಸಿ ಮಕ್ಕಳಲ್ಲಿ ಸಂತೃಪ್ತಿಯ ಮನೋಭಾವ ಬೆಳೆಸಿರಿ. ನನ್ನ ಗೆಳೆಯರ ಬಳಗವೂ ಎಂದಿಗೂ ಪ್ರೋತ್ಸಾಹಿಸಿದ್ದಾರೆ. ಈ ಕಾರ್ಯಕ್ರಮವೂ ತಮ್ಮೆಲ್ಲರ ಸಹಕಾರದಿಂದಲೇ ಮೂಡಿ ಬರಲು ಸಾಧ್ಯವಾಗಿದೆ ಎಂದು ನುಡಿದರು.

ಸಮಾರಂಭದಲ್ಲಿ ಉಪಸ್ಥಿತ ಅವರು ಪ್ರಭಾ ಎನ್‌. ಪಿ ಸುವರ್ಣ ರಚಿತ “ಗೊಂಚಲು’ ಕೃತಿ ಬಿಡುಗಡೆಗೊಳಿಸಿದರು. ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು.ರಾಧಾಕೃಷ್ಣ ನೃತ್ಯ ಅಕಾಡೆಮಿ ಮೀರಾರೋಡ್‌ ಇದರ ಕಲಾವಿದರು ಪ್ರಾರ್ಥನೆಗೈದರು. ಪ್ರಭಾ ಸುವರ್ಣ ಶ್ಲೋಕ ಪಠಿಸಿದರು.

ಸೊಸೈಟಿಯ ಉಪಾಧ್ಯಕ್ಷ ಆನಂದ ಎ. ಶೆಟ್ಟಿ ಸ್ವಾಗತಿಸಿದರು. ಚಿತ್ರಾಪು ಕೆ. ಎಂ. ಕೋಟ್ಯಾನ್‌ ಅತಿಥಿಗಳನ್ನು ಪರಿಚಯಗೈದರು. ಗೌರವ  ಕೋಶಾಧಿಕಾರಿ ಶೇಖರ್‌ ಎನ್‌. ಸುವರ್ಣ ಪ್ರತಿಭಾ ಪುರಸ್ಕೃತರ ಯಾದಿ ವಾಚಿಸಿದರು. ವಸಂತ್‌ ಎನ್‌. ಸುವರ್ಣ ಡೊಂಬಿವಲಿ ಅವರು ಕಾರ್ಯಕ್ರಮ ನಿರೂಪಿಸಿದರು. ಗೌರವ  ಪ್ರಧಾನ  ಕಾರ್ಯದರ್ಶಿ ಪಿ. ಎನ್‌. ಶೆಟ್ಟಿಗಾರ್‌ ವಂದಿಸಿದರು. ರಾಧಾಕೃಷ್ಣ ನƒತ್ಯ ಅಕಾಡೆಮಿಯ ಕಲಾವಿದರು ನಾಟ್ಯಗುರು ಸುಕನ್ಯಾ ಭಟ್‌ ನಿರ್ದೇಶನದಲ್ಲಿ ನೃತ್ಯವೈಭವ ಪ್ರಸ್ತುತಪಡಿಸಿದರು.  

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸರಣ ಘಟಕಕ್ಕೆ ಗ್ರಹಣ!

ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

death

Kinnigoli: ಔಷಧ ಸಿಂಪಡಿಸುವಾಗ ಕುಸಿದು ಬಿದ್ದು ಕೃಷಿಕ ಸಾವು

4

Uppinangady: ತೆಂಗಿನಮರದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

11

Mangaluru: ಗಾಂಜಾ ಮಾರಾಟ; ಇಬ್ಬರ ಬಂಧನ

1-cid

CID; ಸತತ 2 ಗಂಟೆಗಳ ಕಾಲ ಸಚಿನ್‌ ಕುಟುಂಬಸ್ಥರ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.