ಐಸಿಸಿ ಟಿ20 ವಿಶ್ವಕಪ್ಗೆ 100 ದಿನ: ಕೌಂಟ್ಡೌನ್ ಆರಂಭ
Team Udayavani, Jul 8, 2022, 11:45 PM IST
ಕೌಂಟ್ಡೌನ್ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯ ತಂಡದ ನಾಯಕ ಆರನ್ ಫಿಂಚ್.
ಮೆಲ್ಬರ್ನ್: ಆಸ್ಟ್ರೇಲಿಯ ಆತಿಥ್ಯದಲ್ಲಿ ವರ್ಷಾಂತ್ಯ ನಡೆಯುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಇನ್ನು ಉಳಿದಿರುವುದು ಭರ್ತಿ 100 ದಿನ.
ಈ ಸಂದರ್ಭ, ಶುಕ್ರವಾರ ಮೆಲ್ಬರ್ನ್ ನಲ್ಲಿ “ಕೌಂಟ್ ಡೌನ್’ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಯಿತು. ಜತೆಗೆ ಟಿ20 ವಿಶ್ವಕಪ್ ಟ್ರೋಫಿಯ ವಿಶ್ವ ಪರ್ಯಟನೆಗೂ ಚಾಲನೆ ನೀಡಲಾಯಿತು.
ಹಾಲಿ ಟಿ20 ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ತಂಡದ ನಾಯಕ ಆರನ್ ಫಿಂಚ್, ಶೇನ್ ವಾಟ್ಸನ್, ವಕಾರ್ ಯೂನಿಸ್, ಮಾರ್ನೆ ಮಾರ್ಕೆಲ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿಶ್ವಕಪ್ ಟ್ರೋಫಿ 4 ಖಂಡಗಳ, 13 ದೇಶಗಳ ಒಟ್ಟು 35 ಕೇಂದ್ರಗಳಲ್ಲಿ ಪ್ರದರ್ಶಿಸಲ್ಪಡಲಿದೆ. ಫಿಜಿ, ಫಿನ್ಲಂಡ್, ಜರ್ಮನಿ, ಘಾನಾ, ಇಂಡೋನೇಷ್ಯಾ, ಜಪಾನ್ , ನಮೀಬಿಯಾ, ನೇಪಾಲ, ಸಿಂಗಾಪುರದಲ್ಲೂ ಈ ಟ್ರೋಫಿ ಸಂಚರಿಸಲಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.