60 ಮೀ.ಓಟದಲ್ಲಿ ಅಜ್ಜ-ಅಜ್ಜಿ ವಿಶ್ವದಾಖಲೆ; ಅಥ್ಲೆಟಿಕ್ಸ್ ಸಾಧನೆ
Team Udayavani, Mar 21, 2018, 11:22 AM IST
ನ್ಯೂಯಾರ್ಕ್: ಇನ್ನೂ ಐವತ್ತಾಗಿರುವುದಿಲ್ಲ. ಅಷ್ಟರಲ್ಲಿ ಮಂಡಿ ನೋವು, ಸೊಂಟ ನೋವು ಎಂದು ಆಸ್ಪತ್ರೆಗೆಲ್ಲ ಅಲೆದಾಡಿ ಸಾವಿರಾರು ರೂ. ಖರ್ಚು ಮಾಡುವ ಅದೆಷ್ಟೋ ಮಂದಿಯನ್ನು ನೋಡಿದ್ದೇವೆ. ಆದರೆ ಇಲ್ಲಿರುವ ಸುದ್ದಿಯನ್ನು ಓದಿದರೆ ನೀವು ಅಚ್ಚರಿಗೊಳಗಾಗುವುದು ಖಚಿತ! ಹೌದು, 102 ವರ್ಷದ ಅಜ್ಜಿ, 100 ವರ್ಷದ ಅಜ್ಜ ಅಮೆರಿಕದಲ್ಲಿ ನಡೆದ ಮಾಸ್ಟರ್ ಅಥ್ಲೆಟಿಕ್ಸ್ ಒಳಾಂಗಣ ಕೂಟದ ಪ್ರತ್ಯೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಓಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮಿಂಚಿನಂತೆ ಓಡಿ ಎಲ್ಲರನ್ನು ಅಚ್ಚರಿಗೆ ದೂಡಿರುವ ಇವರಿಬ್ಬರು ಮಾಧ್ಯಮಗಳಲ್ಲಿ , ಸಾಮಾಜಿಕ ಜಾಲತಾಣ ಗಳಲ್ಲಿ ಬಾರೀ ಚರ್ಚೆಗೆ ಕಾರಣವಾಗಿದ್ದಾರೆ.
ಏನಿದು ಕೂಟದ ವಿಶೇಷತೆ?: ಯುಎಸ್‌ಎ ಟ್ರ್ಯಾಕ್ ಅಂಡ್ ಫೀಲ್ಡ್ ಮಾಸ್ಟರ್ ಒಳಾಂಗಣ ಚಾಂಪಿಯನ್‌ಶಿಪ್ ಇದಾಗಿತ್ತು. 60 ಮೀ. ಓಟದ ಸವಾಲು ಇದಾಗಿತ್ತು. ಮೊದಲು ಮಹಿಳಾ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಆಗ ಎಲ್ಲರ ಕಣ್ಣು ಹಾಕಿನ್ಸ್ ರತ್ತ ಹರಿಯಿತು. ಏಕೆಂದರೆ 100 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರ ವಿಭಾಗದಲ್ಲೂ ಅತೀ ಹೆಚ್ಚು ವಯಸ್ಸಿನ (102 ವರ್ಷ) ಹಿರಿಯಜ್ಜಿಯೊಬ್ಬರು ಓಡುವುದನ್ನು ಕಣ್ತುಂಬಿಕೊಳ್ಳುವ ತವಕ ನೆರೆದಿದ್ದವರದಾಗಿತ್ತು. ಕೊನೆಗೂ ಅಜ್ಜಿ ಓಡಿದರು. 60 ಮೀ. ದೂರವನ್ನು ಕೇವಲ 24.79 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿದರು.
ಅಷ್ಟೇ ಅಲ್ಲ ಈ ಕೂಟದಲ್ಲಿ ಪಾಲ್ಗೊಂಡ ಅತೀ ಕಿರಿಯ ವಯಸ್ಸಿನ ಮಹಿಳೆ ಎನ್ನುವ ದಾಖಲೆಯನ್ನೂ ಮಾಡಿದರು. ನನಗೆ ಜೀವನದಲ್ಲಿ ಉನ್ನತವಾಗಿರುವುದನ್ನು ಏನನ್ನಾದರೂ ಸಾಧಿಸಬೇಕು ಎನ್ನುವ ಕನಸಿತ್ತು. ಅದನ್ನು ಸಾಧಿಸಿರುವ ಆನಂದವಿದೆ ಎಂದು ಕೂಟದ ಬಳಿಕ ಹಾಕಿನ್ಸ್ ಪ್ರತಿಕ್ರಿಯಿಸಿದ್ದಾರೆ.
ಪುರುಷರ 100 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಅಮೆರಿಕದ ಒರ್ವಿಲೆ ರೋಜರ್ 60 ಮೀ. ಓಟವನ್ನು 19.13 ಸೆಕೆಂಡ್ಸ್‌ನಲ್ಲಿ ಪೂರೈಸಿದರು. ರೊಜರ್ ಗೆ ಸದ್ಯ ಭರ್ತಿ 100 ವರ್ಷ. ವಿಶ್ವ ಯುದ್ಧ ಸಂದರ್ಭದಲ್ಲಿ ವಿಮಾನದ ಪೈಲೆಟ್ ಆಗಿ ಸೇವೆ ಸಲ್ಲಿಸಿದ್ದರಂತೆ. ನಿವೃತ್ತಿ ಬಳಿಕ ಸುಮ್ಮನೆ ಮನೆಯಲ್ಲಿ ಕುಳಿತಿರುವುದನ್ನು ಅವರು ಇಷ್ಟಪಡಲಿಲ್ಲ. ಏನಾದರೂ ಕ್ರೀಯಾ ಶೀಲರಾಗಿ ಇರಬೇಕೆಂದು ಬಯಸಿದರು. ಉತ್ಸಾಹಿ ಯುವಕರಂತೆ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಂಡು 100ರ ಇಳಿವಯಸ್ಸಿನಲ್ಲೂ ಜೀವನ ಖುಷಿಯನ್ನು ಅನುಭವಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.