ಮೊದಲ ಟೆಸ್ಟ್ ಸಿಕ್ಸರ್‌ಗೆ ತುಂಬಿತು 123 ವರ್ಷ
Team Udayavani, Jan 15, 2021, 6:34 AM IST
ಅಡಿಲೇಡ್: ಎಲ್ಲರೂ ಭಾರತ-ಆಸ್ಟ್ರೇಲಿಯ ನಡುವಿನ ಬ್ರಿಸ್ಬೇನ್ ಟೆಸ್ಟ್ ಪಂದ್ಯದ ಗುಂಗಿನಲ್ಲಿ ಮುಳುಗಿರುವಾಗ ಇದೇ ಕಾಂಗರೂ ನಾಡಿನಲ್ಲಿ ಸರಿಯಾಗಿ 123 ವರ್ಷಗಳ ಹಿಂದೆ ವಿಸ್ಮಯವೊಂದು ಗೋಚರಿಸಿದ್ದನ್ನು ನೆನಪಿಸಿಕೊಳ್ಳುವುದು ಸೂಕ್ತವೆನಿಸುತ್ತದೆ. 1898ರ ಜ. 14ರಂದು ಟೆಸ್ಟ್ ಇತಿಹಾಸದ ಪ್ರಪ್ರಥಮ ಸಿಕ್ಸರ್ ಅಡಿಲೇಡ್ ಅಂಗಳದಲ್ಲಿ ಸಿಡಿದಿತ್ತು. ಇದನ್ನು ಬಾರಿಸಿದವರು ಆಸೀಸ್ ಬ್ಯಾಟ್ಸ್ ಮನ್ ಜೋ ಡಾರ್ಲಿಂಗ್.
ಅದು ಪ್ರವಾಸಿ ಇಂಗ್ಲೆಂಡ್ ಎದುರಿನ ಸರಣಿಯ 5ನೇ ಹಾಗೂ ಅಂತಿಮ ಪಂದ್ಯ. ಇದರಲ್ಲಿ ಡಾರ್ಲಿಂಗ್ ಈ ಸಾಧನೆಗೈದರು. ಅರ್ಥಾತ್, ಟೆಸ್ಟ್ ಕ್ರಿಕೆಟ್ ಆರಂಭಗೊಂಡು 21 ವರ್ಷಗಳ ಬಳಿಕ ಮೊದಲ ಸಿಕ್ಸರ್ ಸಿಡಿಯಲ್ಪಟ್ಟಿತ್ತು!
ಸ್ವಾರಸ್ಯವೆಂದರೆ, ಅಂದು ಸಿಕ್ಸರ್‌ಗೆ ಲಭಿಸುತ್ತಿದ್ದುದು ಐದೇ ರನ್. ಮುಂದೆ ನಿಯಮ ಬದಲಾಯಿತು, 6 ರನ್ ನಿಗದಿಯಾಯಿತು. ಜೋ ಡಾರ್ಲಿಂಗ್ ಆಸ್ಟ್ರೇಲಿಯದ ಯಶಸ್ವಿ ನಾಯಕ ಹಾಗೂ ಪ್ರತಿಭಾನ್ವಿತ ಎಡಗೈ ಆಟಗಾರನಾಗಿದ್ದರು. ಇದೇ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಅವರಿಂದ ಮತ್ತೂಂದು ದಾಖಲೆ ನಿರ್ಮಾಣಗೊಂಡಿತ್ತು. ಟೆಸ್ಟ್ ಇತಿಹಾಸದಲ್ಲಿ ಶತಕ ಬಾರಿಸಿದ ಮೊದಲ ಎಡಗೈ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಡಾರ್ಲಿಂಗ್ ಪಾತ್ರರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Border-Gavaskar Trophy ಆರಂಭಕ್ಕೆ ಮುನ್ನ ಗಂಭೀರ್- ರಿಕಿ ಪಾಂಟಿಂಗ್ ವಾಗ್ಯುದ್ಧ
INDvsSA: ಸೆಂಚುರಿಯನ್‌ನಲ್ಲೂ ಕ್ವಿಕ್, ಬೌನ್ಸಿ ಟ್ರ್ಯಾಕ್?: ಸುಧಾರಿಸಬೇಕಿದೆ ಬ್ಯಾಟಿಂಗ್
Ranji Trophy: ಯುಪಿ ಎದುರಾಳಿ; ಕರ್ನಾಟಕಕ್ಕೆ ನಾಕೌಟ್ ಒತ್ತಡ
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.