![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
Team Udayavani, Jan 29, 2025, 11:38 PM IST
ಡೆಹ್ರಾಡೂನ್: ಇಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಗೇಮ್ಸ್‌ನಲ್ಲಿ ರಾಜ್ಯದ 14 ವರ್ಷದ ಈಜು ತಾರೆ, ಕಳೆದ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಪ್ರತಿನಿಧಿಸಿದ್ದ ಧೀನಿಧಿ ದೇಸಿಂಘು 3 ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಜತೆಗೆ ಮಹಿಳೆಯರ 200 ಮೀ. ಫ್ರೀಸ್ಟೆ „ಲ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
200 ಮೀ. ಫ್ರೀಸ್ಟೆ „ಲ್, 100 ಮೀ. ಬಟರ್‌ಫ್ಲೈ ಮತ್ತು 4×100 ಮೀ. ಫ್ರೀಸ್ಟೆ „ಲ್ ರಿಲೇಯಲ್ಲಿ ಧೀನಿಧಿ ಬಂಗಾರ ಗೆದ್ದರು. ಮೊದಲನೇ ದಿನ ಕರ್ನಾಟಕ 5 ಚಿನ್ನ, 2 ಬೆಳ್ಳಿ ಜಯಿಸಿದ್ದು, ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮಹಿಳಾ 200 ಮೀ. ಫ್ರೀಸ್ಟೆ „ಲ್‌ನಲ್ಲಿ ದೀನಿಧಿ ದೇಸಿಂಘು 2:03.24 ನಿಮಿಷದಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ಸಹಿತ ಚಿನ್ನ ಗೆದ್ದರು. ಕರ್ನಾಟಕದವರೇ ಆದ ಹಾಶಿಕಾ ರಾಮಚಂದ್ರ (2:07.08) ಅವರ 2022ರ ದಾಖಲೆ ಪತನಗೊಂಡಿತು.
ಪುರುಷರ 200 ಮೀ. ಫ್ರೀಸ್ಟೆ „ಲ್ ನಲ್ಲಿ ರಾಜ್ಯದ ಶ್ರೀಹರಿ ನಟರಾಜ್ (1:50.57) ಚಿನ್ನ ಗೆದ್ದರು. ಅನೀಶ್ ಗೌಡ (1:52.42) ಅವರಿಗೆ ಬೆಳ್ಳಿ ಒಲಿಯಿತು. ಮಹಿಳೆಯರ 100 ಮೀ. ಬಟರ್‌ಫ್ಲೆ „ನಲ್ಲಿ ದೇಸಿಂಘು ಚಿನ್ನ (1:03.62), ನೈಶಾ ಶೆಟ್ಟಿ (1:04.81) ಬೆಳ್ಳಿ ಜಯಿಸಿದರು. ಪುರುಷರ 4×100 ಮೀ.ಫ್ರೀಸ್ಟೆ „ಲ್‌ನಲ್ಲಿ ರಾಜ್ಯಕ್ಕೆ ಬಂಗಾರ ಒಲಿಯಿತು.
You seem to have an Ad Blocker on.
To continue reading, please turn it off or whitelist Udayavani.