ಇಂದಿನಿಂದ ಏಷ್ಯಾ ಕಪ್‌ ಕಾಳಗ


Team Udayavani, Sep 15, 2018, 6:00 AM IST

ap9142018000162a.jpg

ದುಬಾೖ: ಇದು ಏಶ್ಯ ಖಂಡದ ಕ್ರಿಕೆಟ್‌ ರಾಷ್ಟ್ರಗಳಿಗಷ್ಟೇ ಮೀಸಲಾದ ಏಕದಿನ “ವಿಶ್ವಕಪ್‌’ ಕ್ರಿಕೆಟ್‌, ಹೆಸರು-“ಏಶ್ಯ ಕಪ್‌ ಟೂರ್ನಿ’. ಶನಿವಾರದಿಂದ ಅರಬ್‌ ನಾಡಿನಲ್ಲಿ ಈ ಕ್ರಿಕೆಟ್‌ ಹಬ್ಬ ಗರಿಗೆದರಲಿದೆ. ಇದು ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯ 14ನೇ ಆವೃತ್ತಿ. ಹಾಲಿ ಚಾಂಪಿಯನ್‌ ಭಾರತ ಸೇರಿದಂತೆ ಒಟ್ಟು 6 ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಈ 6 ತಂಡಗಳನ್ನು 2 ವಿಭಾಗಗಳಾಗಿ ವಿಂಗಡಿಸಲಾಗಿದೆ. ಲೀಗ್‌ನಲ್ಲಿ ಪ್ರತಿಯೊಂದು ತಂಡಕ್ಕೂ 2 ಪಂದ್ಯಗಳಿರುತ್ತವೆ. ಇಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು “ಸೂಪರ್‌ ಫೋರ್‌’ ಹಂತದಲ್ಲಿ ಸೆಣಸಲಿವೆ. ಇಲ್ಲಿನ ಅಗ್ರ ತಂಡಗಳೆರಡು ಸೆ. 28ರ ಫೈನಲ್‌ನಲ್ಲಿ ಮುಖಾಮುಖೀಯಾಗಲಿವೆ. ಪಾಕಿಸ್ಥಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಮತ್ತು ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಹಾಂಕಾಂಗ್‌ ಇಲ್ಲಿ ಸೆಣಸಲಿರುವ ಉಳಿದ 5 ತಂಡಗಳು.

ಶನಿವಾರದ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ-ಬಾಂಗ್ಲಾದೇಶ ಮುಖಾಮುಖೀಯಾಗಲಿವೆ.

ಭಾರತ-ಪಾಕ್‌ ತ್ರಿಬಲ್‌ ಧಮಾಕಾ?
ಈ ಪಂದ್ಯಾವಳಿಯ ವೈಶಿಷ್ಟéವೆಂದರೆ ಭಾರತ-ಪಾಕಿಸ್ಥಾನ ತಂಡಗಳ ಮುಖಾಮುಖೀ. ಕೇವಲ ತಟಸ್ಥ ಕೇಂದ್ರಗಳಲ್ಲಿ, ಇಂಥ ದೊಡ್ಡ ಮಟ್ಟದ ಕೂಟಗಳಲ್ಲಷ್ಟೇ ಈ ಸಾಂಪ್ರದಾಯಕ ಎದುರಾಳಿಗಳು ಮುಖಾಮುಖೀ ಆಗುವುದರಿಂದ ಎರಡೂ ಕಡೆಯ ಕ್ರಿಕೆಟ್‌ ಅಭಿಮಾನಿಗಳ ಪಾಲಿಗೆ ಇದೊಂದು ಸಂಭ್ರಮ. ಈ ಕೂಟ ದುಬಾೖ ಹಾಗೂ ಅಬುದಾಭಿಯಲ್ಲಿ ನಡೆಯುವುದರಿಂದ, ಇಲ್ಲಿ ಎರಡೂ ನಾಡಿನ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿರುವುದರಿಂದ ಸಹಜವಾಗಿಯೇ ಭಾರತ-ಪಾಕಿಸ್ಥಾನ ಪಂದ್ಯದ ರೋಚಕತೆ ಹೆಚ್ಚು.

ಭಾರತ-ಪಾಕಿಸ್ಥಾನ ಒಂದೇ ವಿಭಾಗದಲ್ಲಿದ್ದು, ಸೆ. 19ರ ಬುಧವಾರ ಮುಖಾಮುಖೀಯಾಗಲಿವೆ. ಎರಡೂ ತಂಡಗಳು “ಸೂಪರ್‌ ಫೋರ್‌’ ಹಂತಕ್ಕೇರುವುದು ಬಹುತೇಕ ಖಚಿತವಾದ್ದರಿಂದ ಇಲ್ಲಿ ಮತ್ತೂಮ್ಮೆ ಎದುರಾಗಲಿವೆ. ಫೈನಲ್‌ಗೆ ಲಗ್ಗೆ ಇರಿಸಿದರೆ “ತ್ರಿಬಲ್‌ ಧಮಾಕಾ!’.

ಏಶ್ಯ ಕಪ್‌ ಇತಿಹಾಸವನ್ನು ಅವಲೋಕಿಸಿದರೆ ಅಲ್ಲಿ ಭಾರತ, ಶ್ರೀಲಂಕಾ ತಂಡಗಳ ಪಾರಮ್ಯವೇ ಎದ್ದು ಕಾಣುತ್ತದೆ. ಈವರೆಗಿನ 13 ಕೂಟಗಳಲ್ಲಿ ಭಾರತ ಸರ್ವಾಧಿಕ 6 ಸಲ, ಶ್ರೀಲಂಕಾ 5 ಸಲ ಚಾಂಪಿಯನ್‌ ಆಗಿ ಹೊರಹೊಮ್ಮಿವೆ. ಬಲಿಷ್ಠ ಪಾಕಿಸ್ಥಾನ ಗೆದ್ದದ್ದು 2 ಸಲ ಮಾತ್ರ. ಉಳಿದ ಯಾವುದೇ ತಂಡಗಳು ಏಶ್ಯ ಕಪ್‌ ಗೆದ್ದಿಲ್ಲ.

ಮತ್ತೆ 50 ಓವರ್‌ ಮಾದರಿ
1984ರಲ್ಲಿ ಶಾರ್ಜಾದಲ್ಲಿ ಏಕದಿನ ಮಾದರಿಯೊಂದಿಗೆ ಮೊದಲ್ಗೊಂಡ ಏಶ್ಯ ಕಪ್‌ ಪಂದ್ಯಾವಳಿ, ನಿರಂತರ 12 ಆವೃತ್ತಿಗಳಲ್ಲಿ ಇದೇ ರೀತಿ ಸಾಗಿ ಬಂದಿತ್ತು. ಆದರೆ ಕಳೆದ ಸಲ (2016) ಟಿ20 ವಿಶ್ವಕಪ್‌ ಕೂಟದ ಹಿನ್ನೆಲೆಯಲ್ಲಿ ಇದನ್ನು ಟಿ20 ಮಾದರಿಯಲ್ಲಿ ಆಡಲಾಗಿತ್ತು. ಈ ಬಾರಿ ಮತ್ತೆ 50 ಓವರ್‌ಗಳ ಟೂರ್ನಿಯಾಗಿ ಮಾರ್ಪಟ್ಟಿದೆ.

ಭಾರತವೂ ಫೇವರಿಟ್‌
ಈ ಬಾರಿಯ ಫೇವರಿಟ್‌ ತಂಡ ಯಾವುದು ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳನ್ನು ಕಾಡುವುದು ಸಹಜ. ಮೊನ್ನೆಯಷ್ಟೇ ಇಂಗ್ಲೆಂಡ್‌ ನೆಲದಲ್ಲಿ 1-4 ಅಂತರದಿಂದ ಟೆಸ್ಟ್‌ ಸರಣಿ ಸೋತು ಬಂದ ಭಾರತವಿಲ್ಲಿ ರೋಹಿತ್‌ ಶರ್ಮ ಸಾರಥ್ಯದಲ್ಲಿ ಕಣಕ್ಕಿಳಿಯಲಿದೆ. ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದರೂ “ಲಿಮಿಟೆಡ್‌ ಓವರ್‌ ಮ್ಯಾಚಸ್‌’ ಎಂದೊಡನೆ ಭಾರತದ ಆಟಗಾರರು ದಿಗ್ಗನೆ ಎದ್ದು ಕುಳಿತುಕೊಳ್ಳುತ್ತಾರೆ! ಅವರ ಮನಃಸ್ಥಿತಿ ಸಂಪೂರ್ಣ ಬದಲಾಗಿರುತ್ತದೆ. ಹೊಸತೊಂದು ಜೋಶ್‌ ಕಂಡುಬರುತ್ತದೆ. ಏಕೆಂದರೆ, ಟೀಮ್‌ ಇಂಡಿಯಾದ ಈಗಿನ ಬಹುತೇಕ ಆಟಗಾರರು ಟಿ20 “ತಳಿ’ಗಳಾದ್ದರಿಂದ ಹೊಡಿ-ಬಡಿ ಆಟಕ್ಕೆ ಸದಾ ಮುಂದು. ಹೀಗಾಗಿ ಇಂಗ್ಲೆಂಡ್‌ ವಿರುದ್ಧದ ಸೋಲು ಟೀಮ್‌ ಇಂಡಿಯಾದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲಿಕ್ಕಿಲ್ಲ ಎಂಬುದೊಂದು ಲೆಕ್ಕಾಚಾರ.

ಆದರೆ ಮುಂದಿನ ವರ್ಷ ಇಂಗ್ಲೆಂಡಿನಲ್ಲೇ ಏಕದಿನ ವಿಶ್ವಕಪ್‌ ನಡೆಯುವುದರಿಂದ ಭಾರತದ ಪಾಲಿಗೆ ಏಶ್ಯ ಕಪ್‌ ಅತ್ಯಂತ ಮಹತ್ವದ್ದಾಗಿದೆ. ತಂಡದ ಕಾಂಬಿನೇಶನ್‌ ಸಹಿತ ಇನ್ನಿತರ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಇದೊಂದು ವೇದಿಕೆ.ಮಂಗಳವಾರ ಹಾಂಕಾಂಗ್‌ ವಿರುದ್ಧ ಭಾರತ ತನ್ನ ಮೊದಲ ಪಂದ್ಯ ಆಡಲಿದೆ. ಮರುದಿನವೇ ಪಾಕಿಸ್ಥಾನ ಎದುರು ಕಣಕ್ಕಿಳಿಯಬೇಕಿದೆ!

ಏಶ್ಯ ಕಪ್‌ನಲ್ಲಿ ಈವರೆಗೆ ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡದ ಪಾಕಿಸ್ಥಾನ ಅತ್ಯಂತ ಅಪಾಯಕಾರಿ ತಂಡವಾಗಿ ಗೋಚರಿಸುತ್ತಿದೆ. ಬಾಂಗ್ಲಾದೇಶ ಕೂಡ ಏಕದಿನ ದಿನಕ್ಕೆ ಹೇಳಿಮಾಡಿಸಿದ ತಂಡ. ಶ್ರೀಲಂಕಾ ಮಾತ್ರ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿಲ್ಲ. ಲಂಕೆಗಿಂತ ಅಫ್ಘಾನಿಸ್ಥಾನವೇ ಹೆಚ್ಚು ಪ್ರಬಲವಾಗಿ ಕಾಣುತ್ತಿದೆ. ಹಾಂಕಾಂಗ್‌ ಲೆಕ್ಕದ ಭಾರ್ತಿಗೆ ಮಾತ್ರ.

ಏಶ್ಯ ಕಪ್‌ ತಂಡಗಳು
ಭಾರತ:
ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಕೆ.ಎಲ್‌. ರಾಹುಲ್‌, ಅಂಬಾಟಿ ರಾಯುಡು, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಶಾದೂìಲ್‌ ಠಾಕೂರ್‌, ದಿನೇಶ್‌ ಕಾರ್ತಿಕ್‌, ಖಲೀಲ್‌ ಅಹ್ಮದ್‌.

ಪಾಕಿಸ್ಥಾನ: ಸಫ‌ìರಾಜ್‌ ಅಹ್ಮದ್‌ (ನಾಯಕ), ಫ‌ಕಾರ್‌ ಜಮಾನ್‌, ಶಾನ್‌ ಮಸೂದ್‌, ಬಾಬರ್‌ ಆಜಂ, ಹ್ಯಾರಿಸ್‌ ಸೊಹೈಲ್‌, ಇಮಾಮ್‌ ಉಲ್‌ ಹಕ್‌, ಆಸಿಫ್ ಅಲಿ, ಶಾದಾಬ್‌ ಖಾನ್‌, ಮೊಹಮ್ಮದ್‌ ನವಾಜ್‌, ಫಾಹಿಮ್‌ ಅಶ್ರಮ್‌, ಹಸನ್‌ ಅಲಿ, ಮೊಹಮ್ಮದ್‌ ಆಮಿರ್‌, ಶೋಯಿಬ್‌ ಮಲಿಕ್‌, ಜುನೇದ್‌ ಖಾನ್‌, ಉಸ್ಮಾನ್‌ ಖಾನ್‌, ಶಹೀನ್‌ ಅಫ್ರಿದಿ.

ಬಾಂಗ್ಲಾದೇಶ: ಮಶ್ರಫೆ ಮೊರ್ತಜ (ನಾಯಕ), ತಮಿಮ್‌ ಇಕ್ಬಾಲ್‌, ಲಿಟ್ಟನ್‌ ಕುಮಾರ್‌ ದಾಸ್‌, ಮುಶ್ಫಿಕರ್‌ ರಹೀಂ, ಮಹಮದುಲ್ಲ ರಿಯಾದ್‌, ಮೊಮಿನುಲ್‌ ಹಕ್‌, ಅರಿಫ‌ುಲ್‌ ಹಕ್‌, ಮೊಹಮ್ಮದ್‌ ಮಿಥುನ್‌, ಮುಸ್ತಫಿಜುರ್‌ ರೆಹಮಾನ್‌, ರಬೆಲ್‌ ಹೊಸೇನ್‌, ಮೆಹಿದಿ ಹಸನ್‌ ಮಿರಾಜ್‌, ಮೊಸದೆಕ್‌ ಹೊಸೇನ್‌, ನಜ್ಮುಲ್‌ ಇಸ್ಲಾಮ್‌, ನಜ್ಮುಲ್‌ ಹೊಸೇನ್‌, ಅಬು ಹೈದರ್‌ ರೋನಿ.

ಶ್ರೀಲಂಕಾ: ಏಂಜೆಲೊ ಮ್ಯಾಥ್ಯೂಸ್‌ (ನಾಯಕ), ಕುಸಲ್‌ ಪೆರೆರ, ಕುಸಲ್‌ ಮೆಂಡಿಸ್‌, ಉಪುಲ್‌ ತರಂಗ, ತಿಸರ ಪೆರೆರ, ನಿರೋಷನ್‌ ಡಿಕ್ವೆಲ್ಲ, ಧನಂಜಯ ಡಿ’ಸಿಲ್ವ, ದಸುನ್‌ ಶಣಕ, ಕಸುನ್‌ ರಜಿತ, ಅಖೀಲ ಧನಂಜಯ, ಅಮಿಲ ಅಪೋನ್ಸೊ, ಲಸಿತ ಮಾಲಿಂಗ, ದುಸ್ಮಂತ ಚಮೀರ, ದಿಲುÅವಾನ್‌ ಪೆರೆರ, ಶೆಹಾನ್‌ ಜಯಸೂರ್ಯ.

ಅಫ್ಘಾನಿಸ್ಥಾನ: ಅಸYರ್‌ ಅಫ್ಘಾನ್‌ (ನಾಯಕ), ಮೊಹಮ್ಮದ್‌ ಶೆಹಜಾದ್‌, ಇನ್ಸಾನುಲ್ಲ ಜನತ್‌, ಹಸ್ಮತುಲ್ಲ ಶಾಹಿದಿ, ನಜೀಬುಲ್ಲ ಜದ್ರಾನ್‌, ಮುನಿರ್‌ ಅಹ್ಮದ್‌, ಜಾವೇದ್‌ ಅಹ್ಮದಿ, ಮೊಹಮ್ಮದ್‌ ನಬಿ, ರಹಮತ್‌ ಷಾ. ಗುಲ್ಬದನ್‌ ನೈಬ್‌, ಸಮಿಯುಲ್ಲ ಶೇನ್ವರಿ, ಶರಾಫ‌ುದ್ದೀನ್‌ ಅಶ್ರಫ್, ರಶೀದ್‌ ಖಾನ್‌, ಮುಜೀಬ್‌ ಜದ್ರಾನ್‌, ಅಫ್ತಾಬ್‌ ಆಲಂ, ಯಾಸ್ಮಿನ್‌ ಅಹ್ಮದ್‌ಜಾಯ್‌, ಸಯ್ಯದ್‌ ಶಿರ್ಜಾದ್‌.

ಹಾಂಕಾಂಗ್‌: ಅಂಶುಮನ್‌ ರಥ್‌ (ನಾಯಕ), ಐಜಾಜ್‌ ಖಾನ್‌, ಬಾಬರ್‌ ಹಯಾತ್‌, ಕ್ಯಾಮರಾನ್‌ ಮೆಕ್ಯುಲ್ಸನ್‌, ಕ್ರಿಸ್ಟೋಫ‌ರ್‌ ಚಾರ್ಟರ್‌, ಎಹಸಾನ್‌ ಖಾನ್‌, ಎಹಸಾನ್‌ ನವಾಜ್‌, ಅರ್ಷದ್‌ ಮೊಹಮ್ಮದ್‌, ಕಿಂಚಿತ್‌ ಷಾ, ನದೀಮ್‌ ಅಹ್ಮದ್‌, ರಾಗ್‌ ಕಪೂರ್‌, ಸ್ಕಾಟ್‌ ಮೆಕೇನಿ, ತನ್ವೀರ್‌ ಅಹ್ಮದ್‌, ತನ್ವೀರ್‌ ಅಫ‌jಲ್‌, ವಕಾಸ್‌ ಖಾನ್‌, ಅಫ್ತಾಬ್‌ ಹುಸೇನ್‌.

ಏಶ್ಯ ಕಪ್‌: ಲೀಗ್‌ ಪಂದ್ಯಗಳ ವೇಳಾಪಟ್ಟಿ
ದಿನಾಂಕ    ಪಂದ್ಯ    ಸ್ಥಳ    ಆರಂಭ

ಸೆ. 15 (ಶನಿವಾರ)    ಬಾಂಗ್ಲಾದೇಶ-ಶ್ರೀಲಂಕಾ    ದುಬಾೖ    ಸಂಜೆ 5.00
ಸೆ. 16 (ರವಿವಾರ)    ಪಾಕಿಸ್ಥಾನ-ಹಾಂಕಾಂಗ್‌    ದುಬಾೖ    ಸಂಜೆ 5.00
ಸೆ. 17 (ಸೋಮವಾರ)    ಶ್ರೀಲಂಕಾ-ಅಫ್ಘಾನಿಸ್ಥಾನ    ಅಬುಧಾಬಿ    ಸಂಜೆ 5.00
ಸೆ. 18 (ಮಂಗಳವಾರ)    ಭಾರತ-ಹಾಂಕಾಂಗ್‌    ದುಬಾೖ    ಸಂಜೆ 5.00
ಸೆ. 19 (ಬುಧವಾರ)    ಭಾರತ-ಪಾಕಿಸ್ಥಾನ    ದುಬಾೖ    ಸಂಜೆ 5.00
ಸೆ. 20 (ಗುರುವಾರ)    ಬಾಂಗ್ಲಾದೇಶ-ಅಫ್ಘಾನಿಸ್ಥಾನ    ಅಬುಧಾಬಿ    ಸಂಜೆ 5.00
 ಸಮಯ: ಭಾರತೀಯ ಕಾಲಮಾನ
 ನೇರ ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

ಗ್ರೂಪ್‌ “ಎ’
ಭಾರತ
ಪಾಕಿಸ್ಥಾನ
ಹಾಂಕಾಂಗ್‌

ಗ್ರೂಪ್‌ “ಬಿ’
ಬಾಂಗ್ಲಾದೇಶ
ಶ್ರೀಲಂಕಾ
ಅಫ್ಘಾನಿಸ್ಥಾನ

ಏಶ್ಯ ಕಪ್‌ ವಿಜೇತರು
ವರ್ಷ    ಚಾಂಪಿಯನ್ಸ್‌    ರನ್ನರ್‌ ಅಪ್‌

1984    ಭಾರತ    ಶ್ರೀಲಂಕಾ
1986    ಶ್ರೀಲಂಕಾ    ಪಾಕಿಸ್ಥಾನ
1988    ಭಾರತ    ಶ್ರೀಲಂಕಾ
1990    ಭಾರತ    ಶ್ರೀಲಂಕಾ
1995    ಭಾರತ    ಶ್ರೀಲಂಕಾ
1997    ಶ್ರೀಲಂಕಾ    ಭಾರತ
2000    ಪಾಕಿಸ್ಥಾನ    ಶ್ರೀಲಂಕಾ
2004    ಶ್ರೀಲಂಕಾ    ಭಾರತ
2008    ಶ್ರೀಲಂಕಾ    ಭಾರತ
2010    ಭಾರತ    ಶ್ರೀಲಂಕಾ
2012    ಪಾಕಿಸ್ಥಾನ    ಬಾಂಗ್ಲಾದೇಶ
2014    ಶ್ರೀಲಂಕಾ    ಪಾಕಿಸ್ಥಾನ
2016    ಭಾರತ    ಬಾಂಗ್ಲಾದೇಶ

ಏಶ್ಯ ಕಪ್‌ ಚಾಂಪಿಯನ್ಸ್‌
ಭಾರತ: 06
ಶ್ರೀಲಂಕಾ: 05
ಪಾಕಿಸ್ಥಾನ: 02

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.