ಲಂಕಾ ಕ್ರಿಕೆಟ್ ಒಡಂಬಡಿಕೆ: 18 ಆಟಗಾರರ ಪಟ್ಟಿ ಪ್ರಕಟ
Team Udayavani, Aug 22, 2021, 6:55 AM IST
ಕೊಲಂಬೊ: ರಾಷ್ಟ್ರೀಯ ಕ್ರಿಕೆಟ್ ಒಡಂಬಡಿಕೆಯ ವ್ಯಾಪ್ತಿಗೆ ಒಳಪಡುವ 18 ಆಟಗಾರರ ಪಟ್ಟಿಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದ್ದು ಈ ನೂತನ ಒಪ್ಪಂದ ಆ. ಒಂದರಿಂದಲೇ ಜಾರಿಗೆ ಬಂದಿದ್ದು, ಡಿ. 31ರ ತನಕ ಜಾರಿಯಲ್ಲಿರುತ್ತದೆ ಎಂದಿದೆ.
ತಾಂತ್ರಿಕ ಸಲಹಾ ಸಮಿತಿ ಮತ್ತು ಶ್ರೀಲಂಕಾ ಕ್ರಿಕೆಟ್ ರೂಪಿಸಿರುವ ಈ ನೂತನ ಒಪ್ಪಂದ, ಸಹಿ ಹಾಕಿದ ಆಟಗಾರರಿಗಷ್ಟೇ ಅನ್ವಯವಾಗಲಿದೆ. ಒಟ್ಟು 24 ಕ್ರಿಕೆಟಿಗರನ್ನು ಲಂಕಾ ಮಂಡಳಿ ಅಂತಿಮಗೊಳಿಸಿತ್ತು. ಇವರಲ್ಲಿ ಏಂಜೆಲೊ ಮ್ಯಾಥ್ಯೂಸ್ ಸಹಿ ಹಾಕಲು ನಿರಾಕರಿಸಿದ್ದಾರೆ. ಉಳಿದಂತೆ ದನುಷ್ಕ ಗುಣತಿಲಕ, ನಿರೋಷನ್ ಡಿಕ್ವೆಲ್ಲ, ಕುಸಲ್ ಮೆಂಡಿಸ್ ಸದ್ಯ ನಿಷೇಧದಲ್ಲಿದ್ದಾರೆ.
ದೈಹಿಕ ಕ್ಷಮತೆ, ನಾಯಕತ್ವ-ಅನುಭವ, ವೃತ್ತಿಪರತೆ-ನಡತೆ, ಭವಿಷ್ಯ-ಹೊಂದಾಣಿಕೆ, ಈ ನಾಲ್ಕು ಮಾನದಂಡಗಳ ಆಧಾರದಲ್ಲಿ ಆಟಗಾರರನ್ನು ವಿಂಗಡಿಸಲಾಗುತ್ತದೆ; ಈ ಮಾನದಂಡದಂತೆಯೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.