ಪಾದಾರ್ಪಣೆ ಪಂದ್ಯದಲ್ಲೇ ಭರ್ಜರಿ ಶತಕ; ಟೀಮ್ ಇಂಡಿಯಾದ ಹೊಸ ಭರವಸೆ
Team Udayavani, Oct 4, 2018, 2:44 PM IST
ರಾಜ್‌ಕೋಟ್: ಇಲ್ಲಿನ “ಎಸ್‌ಎಸ್‌ಸಿಎ ಮೈದಾನ’ದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಎದುರಿನ 2 ಪಂದ್ಯಗಳ ಕಿರು ಟೆಸ್ಟ್ ಸರಣಿಯ ಮೊದಲ ಪಂದ್ಯ ದಲ್ಲಿ ಭಾರತದ ಯುವ ಆಟಗಾರ ಪೃಥ್ವಿ ಶಾ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.
ಟೆಸ್ಟ್ ಪಾದಾರ್ಪಣೆ ಪಂದ್ಯವನ್ನಾಡುತ್ತಿರುವ ಮುಂಬೈನ 18ರ ಹರೆಯದ ಪೃಥ್ವಿ ಶಾ ಅವರು ಭರ್ಜರಿ ಸ್ಫೋಟಕ ಶತಕ ಸಿಡಿಸುವ ಮೂಲಕ ಹೊಸ ಭರವಸೆಯ ಪ್ರತಿಭೆಯಾಗಿ ಮೂಡಿ ಬಂದಿದ್ದಾರೆ.
ಟಾಸ್‌ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು, ಆರಂಭಿಕ ಆಘಾತ ಅನುಭವಿಸಿಯೂ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿತು.
ಆರಂಭಿಕನಾಗಿ ಇಳಿದ ಎಲ್.ರಾಹುಲ್ ಅವರು ಬೇಗನೆ ನಿರ್ಗಮಿಸಿದ ಹೊರತಾಗಿಯೂ ಎದೆಗುಂದದ ಪೃಥ್ವಿ ಶಾ ಅವರು ಭರ್ಜರಿ 134 ರನ್ ಸಿಡಿಸಿ ಔಟಾದರು. 154 ಎಸೆತ ಎದುರಿಸಿದ್ದ ಅವರು 19 ಬೌಂಡರಿಗಳನ್ನು ಸಿಡಿಸಿದರು.
ಆರಂಭಿಕ ರಾಹುಲ್ ಶೂನ್ಯಕ್ಕೆ ನಿರ್ಗಮಿಸಿದರು. ಪೃಥ್ವಿ ಅವರಿಗೆ ಸಾಥ್ ನೀಡಿದ ಚೇತೇಶ್ವರ್ ಪೂಜಾರಾ 86 ರನ್‌ಗಳಿಸಿ ಔಟಾದರು.
ಕೊಹ್ಲಿ ಮತ್ತು ರೆಹಾನೆ ಅವರು ಕ್ರೀಸ್‌ನಲ್ಲಿದ್ದಾರೆ.ಭಾರತ ತಂಡ 3 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿದೆ.
ಪೃಥ್ವಿ ಶಾ ಹೊಸ ಭರವಸೆ
ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಇನ್ನಿಂಗ್ಸ್‌ನ ಮೊದಲ ಎಸೆತ ಎದುರಿಸುವ ಸದಾವಕಾಶ ಪೃಥ್ವಿ ಅವರಿಗೆ ಒಲಿದು ಬಂದಿತು. ಈ ಹಿಂದೆ ಪಾದಾರ್ಪಣ ಪಂದ್ಯದಲ್ಲಿ ಮೊದಲ ಎಸೆತ ಎದುರಿಸಿದ ದಾಖಲೆ ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಝ, ಬಾಂಗ್ಲಾದ ತಮೀಮ್ ಇಕ್‌ಬಾಲ್ ಮತ್ತು ಪಾಕ್‌ನ ಇಮ್ರಾನ್ ಪರ್‌ಹಾತ್ ಅವರ ಹೆಸರಿನಲ್ಲಿತ್ತು.
ಸಚಿನ್ ತೆಂಡುಲ್ಕರ್ ಅವರ ಬಳಿಕ ಸಣ್ಣ ವಯಸ್ಸಿನಲ್ಲಿ ಶತಕ ಸಿಡಿಸಿದ ಹೆಗ್ಗಳಿಕೆಗೆ ಪೃಥ್ವಿ ಶಾ ಭಾಜನರಾದರು.
ಪೃಥ್ವಿ ಶಾ ಅವರು ಅಂತರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ 293 ನೇ ಆಟಗಾರರಾಗಿದ್ದಾರೆ. ಶಾ ಅವರು 56 ಎಸೆತಗಳಲ್ಲಿ 50 ರನ್‌ಗಳಿಸಿದರೆ , 99 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.