ಯುಎಸ್ ಓಪನ್ ಪುರುಷರ ಸಿಂಗಲ್ಸ್: ಕಾರ್ಲೋಸ್ ಅಲ್ಕರಾಝ್ ನ್ಯೂಯಾರ್ಕ್ ರಾಜ
ಕ್ಯಾಸ್ಪರ್ ರೂಡ್ ವಿರುದ್ಧ 6-4, 2-6, 7-6 (7-1), 6-3 ಗೆಲುವು; ಪ್ರಥಮ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ
Team Udayavani, Sep 12, 2022, 11:23 PM IST
ನ್ಯೂಯಾರ್ಕ್: ಸ್ಪೇನ್ ಎಂದೊಡನೆ ಟೆನಿಸ್ ಪ್ರೇಮಿಗಳಿಗೆ ನೆನಪಿಗೆ ಬರುವುದು ರಫೆಲ್ ನಡಾಲ್. ಈ ಬಾರಿಯ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಕೂಟದಲ್ಲೂ ನಡಾಲ್ ನೆಚ್ಚಿನ ಆಟಗಾರನಾಗಿದ್ದರು. ಆದರೆ ಬೇಗನೇ ಹೊರಬಿದ್ದರು. ನಡಾಲ್ ನಿರ್ಗಮಿಸಿದರೇನಂತೆ, ಸ್ಪೇನ್‌ನಿಂದ ನಾನಿದ್ದೇನೆ ಎಂದು ಸಾರತೊಡಗಿದ 19 ವರ್ಷದ ಕಾರ್ಲೋಸ್ ಅಲ್ಕರಾಝ್ ಯುಎಸ್ ಓಪನ್ ಪ್ರಶಸ್ತಿಯನ್ನೆತ್ತಿ ಹೊಸ ಇತಿಹಾಸವನ್ನೇ ಬರೆದರು.
ಫೈನಲ್ ಹಣಾಹಣಿಯಲ್ಲಿ ಕಾರ್ಲೋಸ್ ಅಲ್ಕರಾಝ್ 6-4, 2-6, 7-6 (7 -1), 6-3 ಅಂತರದಿಂದ ನಾರ್ವೆಯ ಕ್ಯಾಸ್ಪರ್ ರೂಡ್ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಈ ವರ್ಷದ ಎರಡೂ ಗ್ರ್ಯಾಮ್‌ಸ್ಲಾಮ್ ಫೈನಲ್‌ಗಳಲ್ಲಿ ರೂಡ್‌ಗೆ ಪ್ರಶಸ್ತಿಯ “ರೋಡ್’ ಮುಚ್ಚಲ್ಪಟ್ಟಿತು. ಕಳೆದ ಫ್ರೆಂಚ್ ಓಪನ್ ಪಂದ್ಯಾವಳಿಯಲ್ಲೂ ಅವರು ಪ್ರಶಸ್ತಿ ಸುತ್ತು ತಲುಪಿದ್ದರು. ಅಲ್ಲಿ ರಫೆಲ್ ನಡಾಲ್‌ಗೆ ಶರಣಾಗಿ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಇಲ್ಲಿ ಸ್ಪೇನ್‌ನ ಯುವ ಆಟಗಾರನ ಬಲೆಗೆ ಬಿದ್ದರು.
ಒತ್ತಡದಲ್ಲಿ ಒಲಿದ ಗೆಲುವು
ಈ ವರ್ಷ ಎರಡು ಮಾಸ್ಟರ್-1000 ಪ್ರಶಸ್ತಿ ಜಯಿಸಿದ ಸಾಧನೆ ಕಾರ್ಲೋಸ್ ಅಲ್ಕರಾಝ್ ಅವರದಾಗಿತ್ತು. ಆದರೆ ಯುಎಸ್ ಓಪನ್‌ಗೂ ಮೊದಲು ನಡೆದ ಮಾಂಟ್ರಿಯಲ್ ಕೂಟದ ಮೊದಲ ಸುತ್ತಿನಲ್ಲೇ ಅನುಭವಿಸಿದ ಸೋಲು, ಸಿನ್ಸಿನಾಟಿ ಮಾಸ್ಟರ್ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾದ ಸೋಲು ಅಲ್ಕರಾಝ್ ಅವರ ಆತ್ಮವಿ ಶ್ವಾಸವನ್ನು ಕುಸಿಯುವಂತೆ ಮಾಡಿದ್ದು ಸುಳ್ಳಲ್ಲ. ಅಲ್ಲದೇ ಫೈನಲ್‌ಗೂ ಹಿಂದಿನ 3 ಪಂದ್ಯಗಳಲ್ಲಿ ಸತತ 5 ಸೆಟ್‌ಗಳ ಹೋರಾಟವನ್ನು ಅವರು ನಡೆಸಿದ್ದರು.
ನಂಬರ್ ವನ್ ರ್‍ಯಾಂಕಿಂಗ್
ಯುಎಸ್ ಓಪನ್ ಗೆಲುವಿನೊಂದಿಗೆ ಕಾರ್ಲೋಸ್ ಅಲ್ಕರಾಝ್ ಇನ್ನೊಂದು ಹೆಗ್ಗಳಿಕೆಗೂ ಪಾತ್ರರಾದರು. ಅವರೀಗ ವಿಶ್ವದ ನಂಬರ್ ವನ್ ಟೆನಿಸಿಗನೆಂಬ ಗೌರವಕ್ಕೆ ಭಾಜನರಾಗಿದ್ದಾರೆ. ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಈ ಸ್ಥಾನದಿಂದ ಕೆಳಗಿಳಿದರು. 1973ರಲ್ಲಿ ಎಟಿಪಿ ರ್‍ಯಾಂಕಿಂಗ್ ಆರಂಭವಾದಂದಿನಿಂದ ನಂ.1 ಆಟಗಾರನೆನಿಸಿದ ವಿಶ್ವದ ಕಿರಿಯ ಟೆನಿಸಿಗನೆಂಬುದು ಅಲ್ಕರಾಝ್ ಹಿರಿಮೆ.
ಜೆಕ್ ಜೋಡಿಗೆ ಡಬಲ್ಸ್ ಪ್ರಶಸ್ತಿ
ಜೆಕ್ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ- ಕ್ರೆಜಿಕೋವಾ ಯುಎಸ್ ಓಪನ್ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ. ಅದೃಷ್ಟದ ಸಂಪೂರ್ಣ ಬೆಂಬಲ ಪಡೆದ ಇವರು ಆತಿಥೇಯ ಅಮೆರಿಕದ ಕ್ಯಾಟಿ ಮೆಕ್‌ನಾಲಿ-ಟಯ್ಲರ್ ಟೌನ್ಸೆಂಡ್ ವಿರುದ್ಧ 3-6, 7-5, 6-1 ಅಂತರದ ಗೆಲುವು ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
Ahmed Shehzad: ಭಾರತ-ಪಾಕ್ ಗಡಿಯಲ್ಲಿ ಕ್ರಿಕೆಟ್ ಸ್ಟೇಡಿಯಂಗೆ ಸಲಹೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.