ಹರ್ಷ ಮೂಡಿಸಿದ ಅರ್ಷದೀಪ್ ಸಿಂಗ್ : ಟೀಮ್ ಇಂಡಿಯಾ 8 ವಿಕೆಟ್ ವಿಜಯೋತ್ಸವ
Team Udayavani, Sep 28, 2022, 10:21 PM IST
ತಿರುವನಂತಪುರ: ಅರ್ಷದೀಪ್ ಸಿಂಗ್ ಮತ್ತು ದೀಪಕ್ ಚಹರ್ ಸೇರಿಕೊಂಡು ಪ್ರವಾಸಿ ದಕ್ಷಿಣ ಆಫ್ರಿಕಾ ಮೇಲೆ ಘಾತಕವಾಗಿ ಎರಗಿ ಮೊದಲ ಟಿ20 ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಗಳಾಗಿ ಮೂಡಿಬಂದರು. ಬುಧವಾರ ಇಲ್ಲಿನ “ಗ್ರೀನ್‌ಫೀಲ್ಡ್’ ಅಂಗಳದಲ್ಲಿ ನಡೆದ ಸಣ್ಣ ಮೊತ್ತದ ಮೇಲಾಟದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಜಯ ಸಾಧಿಸಿತು.
ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 106 ರನ್ ಮಾಡಿದರೆ, ಭಾರತ 16.4 ಓವರ್‌ಗಳಲ್ಲಿ 2 ವಿಕೆಟಿಗೆ 110 ರನ್ ಬಾರಿಸಿತು.
ಚೇಸಿಂಗ್ ವೇಳೆ ಭಾರತ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರನ್ನು ಬೇಗನೇ ಕಳೆದುಕೊಂಡಾಗ ದಕ್ಷಿಣ ಆಫ್ರಿಕಾ ಬೌಲರ್ ಗಳು ಕೂಡ ತಿರುಗೇಟು ನೀಡುವ ಸೂಚನೆಯೊಂದು ಕಂಡುಬಂತು. ಆದರೆ ಕೆ.ಎಲ್. ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಸೇರಿಕೊಂಡು ಯಾವುದೇ ಆತಂಕ ಎದುರಾಗದಂತೆ ನೋಡಿಕೊಂಡರು.
ನಾಯಕ ರೋಹಿತ್ ಶರ್ಮ ಖಾತೆ ತೆರಯುವ ಮೊದಲೇ ರಬಾಡ ಅವರಿಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ ಕೇವಲ 3 ರನ್ ಮಾಡಿ ನೋರ್ಜೆ ಮೋಡಿಗೆ ಸಿಲುಕಿದರು. 17 ರನ್ನಿಗೆ 2 ವಿಕೆಟ್ ಬಿತ್ತು. ಪವರ್ ಪ್ಲೇಯಲ್ಲಿ ಭಾರತಕ್ಕೆ ಗಳಿಸಲು ಸಾಧ್ಯವಾದದ್ದು 17 ರನ್ ಮಾತ್ರ.
ರಾಹುಲ್-ಸೂರ್ಯಕುಮಾರ್ ಜೋಡಿಯಿಂದ ಮುರಿಯದ 3ನೇ ವಿಕೆಟಿಗೆ 93 ರನ್ ಹರಿದು ಬಂತು. ಇವರಲ್ಲಿ ಸೂರ್ಯಕುಮಾರ್ ಆಟ ಎಂದಿನಂತೆ ಬಿರುಸಿನಿಂದ ಕೂಡಿತ್ತು. ರಾಹುಲ್ ಎಚ್ಚರಿಕೆಯ ಆರಂಭದ ಬಳಿಕ ಮುನ್ನುಗ್ಗಿ ಬಾರಿಸಿ ಅರ್ಧ ಶತಕ ಪೂರೈಸಿದರು. ಅವರ ಅಜೇಯ 51 ರನ್ 56 ಎಸೆತಗಳಿಂದ ಬಂತು (2 ಫೋರ್, 4 ಸಿಕ್ಸರ್). ಸೂರ್ಯಕುಮಾರ್ ಗಳಿಕೆ ಅಜೇಯ 50 ರನ್ (33 ಎಸೆತ, 5 ಬೌಂಡರಿ, 3 ಸಿಕ್ಸರ್).
ಸ್ಕೋರ್ ಪಟ್ಟಿ
ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್ ಬಿ ಅರ್ಷದೀಪ್ 1
ಟೆಂಬ ಬವುಮ ಬಿ ಚಹರ್ 0
ರಿಲೀ ರೋಸ್ಯೂ ಸಿ ಪಂತ್ ಬಿ ಅರ್ಷದೀಪ್ 0
ಐಡನ್ ಮಾರ್ಕ್‌ರಮ್ ಎಲ್‌ಬಿಡಬ್ಲ್ಯು ಹರ್ಷಲ್ 25
ಡೇವಿಡ್ ಮಿಲ್ಲರ್ ಬಿ ಅರ್ಷದೀಪ್ 0
ಟ್ರಿಸ್ಟನ್ ಸ್ಟಬ್ಸ್ ಸಿ ಅರ್ಷದೀಪ್ ಬಿ ಚಹರ್ 0
ವೇನ್ ಪಾರ್ನೆಲ್ ಸಿ ಯಾದವ್ ಬಿ ಅಕ್ಷರ್ 24
ಕೇಶವ್ ಮಹಾರಾಜ್ ಬಿ ಹರ್ಷಲ್ 41
ಕಾಗಿಸೊ ರಬಾಡ ಔಟಾಗದೆ 7
ಆ್ಯನ್ರಿಚ್ ನೋರ್ಜೆ ಔಟಾಗದೆ 2
ಇತರ 6
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 106
ವಿಕೆಟ್ ಪತನ: 1-1, 2-1, 3-8. 4-8, 5-9, 6-42, 7-68, 8-101.
ಬೌಲಿಂಗ್:
ದೀಪಕ್ ಚಹರ್ 4-0-24-2
ಆರ್ಷದೀಪ್ ಸಿಂಗ್ 4-0-32-3
ಆರ್. ಅಶ್ವಿನ್ 4-1-8-0
ಹರ್ಷಲ್ ಪಟೇಲ್ 4-0-26-2
ಅಕ್ಷರ್ ಪಟೇಲ್ 4-0-16-1
ಭಾರತ
ಕೆ.ಎಲ್. ರಾಹುಲ್ ಔಟಾಗದೆ 51
ರೋಹಿತ್ ಶರ್ಮ ಸಿ ಡಿ ಕಾಕ್ ಬಿ ರಬಾಡ 0
ವಿರಾಟ್ ಕೊಹ್ಲಿ ಸಿ ಡಿ ಕಾಕ್ ಬಿ ನೋರ್ಜೆ 3
ಸೂರ್ಯಕುಮಾರ್ ಔಟಾಗದೆ 50
ಇತರ 6
ಒಟ್ಟು (16.4 ಓವರ್‌ಗಳಲ್ಲಿ 2 ವಿಕೆಟಿಗೆ) 110
ವಿಕೆಟ್ ಪತನ: 1-9, 2-17.
ಬೌಲಿಂಗ್:
ಕಾಗಿಸೊ ರಬಾಡ 4-1-16-1
ವೇನ್ ಪಾರ್ನೆಲ್ 4-0-14-0
ಆ್ಯನ್ರಿಚ್ ನೋರ್ಜೆ 3-0-32-1
ತಬ್ರೇಜ್ 2.4-0-27-0
ಕೇಶವ್ ಮಹಾರಾಜ್ 3-0-21-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.