Cricket: ರಣಜಿ ಪಂದ್ಯ ಆಡಲು ಮೈದಾನಕ್ಕೆ ಆಗಮಿಸಿದ ಒಂದೇ ರಾಜ್ಯದ ಎರಡು ತಂಡಗಳು! ಕಾರಣವೇನು?
Team Udayavani, Jan 6, 2024, 4:57 PM IST
ಪಾಟ್ನಾ: ಒಂದೇ ರಾಜ್ಯದ ಎರಡು ತಂಡಗಳು ರಣಜಿ ಟ್ರೋಫಿಯ ಪಂದ್ಯವನ್ನು ಆಡಲು ಮೈದಾನಕ್ಕೆ ಆಗಮಿಸಿರುವ ಘಟನೆ ಪಾಟ್ನಾದ ಮೊಯಿನ್-ಉಲ್-ಹಕ್ ಸ್ಟೇಡಿಯಂನಲ್ಲಿ ಶನಿವಾರ ನಡೆದಿದ್ದು, ಇದರಿಂದ ಪಂದ್ಯ ಆರಂಭಕ್ಕೂ ಮುನ್ನ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಹಲವು ವರ್ಷಗಳ ಬಳಿಕ ಬಿಹಾರ ರಣಜಿ ಟ್ರೋಫಿ ನಡೆಸುವ ಜವಬ್ದಾರಿಯನ್ನು ವಹಿಸಿಕೊಂಡಿದೆ. ಶನಿವಾರ ತನ್ನ ಮೊದಲ ಪಂದ್ಯವನ್ನು ಮುಂಬಯಿ ವಿರುದ್ಧ ಆಡಲು ಬಿಹಾರ ತಂಡ ಸಿದ್ದವಾಗಿತ್ತು. ಆದರೆ ಪಂದ್ಯವನ್ನು ಆಡಲು ಬಿಹಾರದ ಎರಡು ತಂಡಗಳು ಪಾಟ್ನಾದ ಮೊಯಿನ್-ಉಲ್-ಹಕ್ ಸ್ಟೇಡಿಯಂಗೆ ಬಂದಿರುವುದು ಗೊಂದಲಕ್ಕೆ ಕಾರಣವಾಗಿದೆ.
ಕಳೆದ ಕೆಲ ವರ್ಷಗಳಿಂದ ಬಿಹಾರ ಕ್ರಿಕೆಟ್ ಸಂಸ್ಥೆಯಲ್ಲಿ (ಬಿಸಿಎ) ಆಂತರಿಕ ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯ ರಾಜ್ಯದ ರಣಜಿ ತಂಡದ ಘೋಷಣೆಯಲ್ಲಿ ಎದ್ದು ಕಂಡಿದೆ.
ಬಿಸಿಎ ಅಧ್ಯಕ್ಷ ರಾಕೇಶ್ ತಿವಾರಿ ಒಂದು ತಂಡವನ್ನು ಘೋಷಿಸಿದರೆ, ಈಗಾಗಲೇ ಉಚ್ಛಾಟಿತಗೊಂಡಿರುವ ಕಾರ್ಯದರ್ಶಿ ಅಮಿತ್ ಕುಮಾರ್ ಮತ್ತೊಂದು ತಂಡವನ್ನು ಘೋಷಿಸಿದ್ದಾರೆ. ಈ ಕಾರಣದಿಂದ ಎರಡೂ ತಂಡಗಳು ಶನಿವಾರ ಮೈದಾನದ ಹೊರಗೆ ಬಂದಿದೆ. ಆದರೆ ಪೊಲೀಸರು ಕಟ್ಟುನಿಟ್ಟಾಗಿ ಕಾರ್ಯದರ್ಶಿ ಆಯ್ಕೆ ಮಾಡಿರುವ ತಂಡವನ್ನು ಬಸ್‌ನಲ್ಲಿ ಕೂರಿಸಿ, ತೆರಳುವಂತೆ ಹೇಳಿದ್ದಾರೆ. ಬಿಸಿಎ ಅಧ್ಯಕ್ಷ ರಾಕೇಶ್ ತಿವಾರಿ ಅವರ ಪಟ್ಟಿಯಲ್ಲಿರುವ ಆಟಗಾರರು ಪಂದ್ಯದಲ್ಲಿ ಭಾಗವಹಿಸಿದ್ದಾರೆ.
ಇದಾದ ಕೆಲ ಸಮಯದ ಬಳಿಕ ಅಪರಿಚಿತ ವ್ಯಕ್ತಿಗಳು ಬಿಸಿಎಯ ಒಎಸ್ ಡಿ ಮನೋಜ್ ಕುಮಾರ್ ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಅವರ ತಲೆಗೆ ಗಾಯವಾಗಿದೆ. ಈ ಸಂಬಂಧ ಆರೋಪಿಗಳ ಹುಡಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಧ್ಯಕ್ಷರ ತಂಡದ ಪಟ್ಟಿ – ಕ್ಯಾಪ್ಟನ್: ಅಶುತೋಷ್ ಅಮನ್, ಹಿಮಾಂಶು ಸಿಂಗ್, ರವಿಶಂಕರ್, ರಿಷಭ್ ರಾಜ್, ನವಾಜ್ ಖಾನ್, ವಿಪುಲ್ ಕೃಷ್ಣ, ಆಕಾಶ್ ರಾಜ್, ಬಲ್ಜೀತ್ ಸಿಂಗ್ ಬಿಹಾರಿ, ಸರ್ಮಾನ್ ನಿಗ್ರೋಧ್, ವೀರ್ ಪ್ರತಾಪ್ ಸಿಂಗ್, ಸಕಿಬುಲ್ ಗನಿ (ಉಪನಾಯಕ), ವಿಪಿನ್ ಸೌರಭ್ (ವಿಕೆಟ್ ಕೀಪರ್), ಬಾಬುಲ್ ಕುಮಾರ್, ಸಚಿನ್ ಕುಮಾರ್ ಸಿಂಗ್, ವೈಭವ್ ಸೂರ್ಯವಂಶಿ.
ಕಾರ್ಯದರ್ಶಿಗಳ ತಂಡದ ಪಟ್ಟಿ – ಕ್ಯಾಪ್ಟನ್: ಇಂದ್ರಜಿತ್ ಕುಮಾರ್, ಶಶಿ ಆನಂದ್, ಲಖನ್ ರಾಜಾ, ಯಶಸ್ವಿ ರಿಷಬ್, ಪ್ರತೀಕ್ ಕುಮಾರ್, ವಿಕ್ರಾಂತ್ ಸಿಂಗ್, ಹಿಮಾಂಶು ಹರಿ, ಶಶಿ ಶೇಖರ್, ವೇದಾಂತ್ ಯಾದವ್, ಅಭಿನವ್ ಕುಮಾರ್, ಕಮಲೇಶ್ ಕುಮಾರ್ ಸಿಂಗ್, ವಿಶ್ವಜೀತ್ ಗೋಪಾಲ, ಪ್ರಶಾಂತ್ ಶ್ರೀವಾಸ್ತವ, ದೀಪಕ್ ರಾಜಾ, ಅಪೋರ್ ಆನಂದ್ (ಉಪನಾಯಕ), ವಿಕಾಶ್ ರಂಜನ್ (ವಿಕೆಟ್ ಕೀಪರ್), ಶಶಿಮ್ ರಾಥೋಡ್, ಸಮರ್ ಕುದರಿ, ಕುಮಾರ್ ಮೃದುಲ್, ಕುಮಾರ್ ರಜನೀಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.