2 nd test; ಇಂಗ್ಲೆಂಡ್ ಗೆಲುವಿಗೆ 399 ರನ್ ಸವಾಲು ನೀಡಿದ ಭಾರತ
Team Udayavani, Feb 4, 2024, 10:46 PM IST
ವಿಶಾಖಪಟ್ಟಣ: ಶುಭ್‌ಮನ್ ಗಿಲ್ ಅವರ ಅಮೋಘ ಶತಕದಿಂದಾಗಿ ಭಾರತ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 255 ರನ್ನಿಗೆ ಆಲೌಟಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್ ಮುನ್ನಡೆ ಪಡೆದಿದ್ದ ಭಾರತ ಇಂಗ್ಲೆಂಡ್ ಗೆಲುವಿಗೆ 399 ರನ್ ಗಳಿಸುವ ಗುರಿಯನ್ನು ನೀಡಿದೆ.
ಮೊದಲ ಟೆಸ್ಟ್‌ನಂತೆ ಈ ಪಂದ್ಯ ದಲ್ಲೂ ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಗಿಲ್ ಅವರ ಶತಕದಿಂದಾಗಿ ಭಾರತ ಸ್ವಲ್ಪಮಟ್ಟಿಗೆ ಉತ್ತಮ ಮೊತ್ತ ಪೇರಿಸುವಂತಾಯಿತು. ಇಲ್ಲದಿದ್ದರೆ ಇನ್ನಷ್ಟು ಕುಸಿಯುವುದು ಖಚಿತವಾಗಿತ್ತು. ಆಕ್ರಮಣಕಾರಿ ಆಟಕ್ಕೆ ಮಹತ್ವ ನೀಡುತ್ತಿರುವ ಇಂಗ್ಲೆಂಡ್ ತಂಡ ಈ ಮೊತ್ತವನ್ನು ಬೆನ್ನಟ್ಟುವ ಸಾಧ್ಯತೆಯನ್ನು ತೆರೆದಿಟ್ಟಿದೆ.
ನಿರೀಕ್ಷೆಯಂತೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬಿರುಸಿನ ಆಟ ಆರಂಭಿಸಿದ ಇಂಗ್ಲೆಂಡ್ ತಂಡವು ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡಿದ್ದು 67 ರನ್ ಗಳಿಸಿದೆ. ಬೆನ್ ಡಕೆಟ್ ಅವರ ವಿಕೆಟನ್ನು ಅಶ್ವಿನ್ ಹಾರಿಸಿದ್ದಾರೆ. ಜಾಕ್ ಕ್ರಾಲಿ (29) ಮತ್ತು ರೇಹಾನ್ ಅಹ್ಮದ್ 9 ರನ್ನುಗಳಿಂದ ಆಡುತ್ತಿದ್ದಾರೆ. ದಾಖಲೆಯ ಗೆಲುವು ದಾಖಲಿಸಲು ಇಂಗ್ಲೆಂಡ್ ಇನ್ನೂ 332 ರನ್ ಗಳಿಸಬೇಕಾಗಿದೆ. ಎರಡು ವರ್ಷಗಳ ಹಿಂದೆ ಬಾಂಗ್ಲಾದೇಶದಲ್ಲಿ ವೆಸ್ಟ್ ಇಂಡೀಸ 395 ರನ್ ಗಳಿಸಿ ಜಯ ಸಾಧಿಸಿದ್ದು ಏಷ್ಯಾದಲ್ಲಿ ಚೇಸ್‌ನಲ್ಲಿ ದಾಖಲೆ ಗೆಲುವು ಆಗಿದೆ.
ಮೊದಲ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ಹಿನ್ನಡೆ ಸಾಧಿಸಿದ್ದರೂ ಅಮೋಘ ಗೆಲುವು ದಾಖಲಿಸಿದ್ದ ಇಂಗ್ಲೆಂಡ್ ತಂಡವೂ ಇಲ್ಲಿಯೂ ಜಯಭೇರಿ ಬಾರಿಸಿ ಸರಣಿಯನ್ನು 2-0ಕ್ಕೇರಿಸಲು ಪ್ರಯತ್ನಿಸುವ ಸಾಧ್ಯತೆಯಿದೆ. ಜವಾಬ್ದಾರಿಯಿಂದ ಆಡಿದರೆ ಗೆಲುವು ದಾಖಲಿಸುವ ಅವಕಾಶವೂ ಇದೆ.
ಟೀ ಬಳಿಕ ಕುಸಿತ
ಟೀ ವಿರಾಮದ ವೇಳೆ ಭಾರತ ಆರು ವಿಕೆಟಿಗೆ 227 ರನ್ ಗಳಿಸಿತ್ತು. ಆಬಳಿಕ ತಂಡ 14.3 ಓವರ್ ಆಡಿದ್ದು ಕೇವಲ 28 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಅಶ್ವಿನ್, ಬುಮ್ರಾ ಯಾವುದೇ ಹೋರಾಟ ನೀಡದೇ ವಿಕೆಟ್ ಒಪ್ಪಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸಿದ್ದರೆ ಉಳಿದ ಯಾವುದೇ ಆಟಗಾರ 40 ರನ್ ಮೊತ್ತ ದಾಟಿರಲಿಲ್ಲ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಗಿಲ್ ಶತಕ ಬಾರಿಸಿದ್ದರೆ ಅಕ್ಷರ್ ಪಟೇಲ್ 45 ರನ್ ಗಳಿಸಿದ್ದು ಗರಿಷ್ಠ ಮೊತ್ತವಾಗಿತ್ತು.
ಎರಡು ಬಾರಿ ಔಟಾಗುವ ಅಪಾಯದಿಂದ ಪಾರಾಗಿದ್ದ ಗಿಲ್ ಅವರು 147 ಎಸೆತ ಎದುರಿಸಿದ್ದು 11 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 104 ರನ್ ಹೊಡೆದರು. ಇದು ಅವರ ಬಾಳ್ವೆಯ ಮೂರನೇ ಶತಕವಾಗಿದೆ. ಅವರು ಅಕ್ಷರ್ ಪಟೇಲ್ ಜತೆ ಐದನೇ ವಿಕೆಟಿಗೆ 89 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು.
ಬಿಗು ದಾಳಿ ಸಂಘಟಿಸಿದ ಟಾಮ್ ಹಾರ್ಟ್ಲಿ 77 ರನ್ನಿಗೆ 4 ವಿಕೆಟ್ ಕಿತ್ತರು. ರೇಹಾನ್ ಅಹ್ಮದ್ 88 ರನ್ನಿಗೆ 3 ಮತ್ತು ಆ್ಯಂಡರ್ಸನ್ 29 ರನ್ನಿಗೆ 2 ವಿಕೆಟ್ ಪಡೆದರು.
ಎಚ್ಚರಿಕೆಯ ಬಳಿಕ ಗಿಲ್ ಶತಕ!
ವಿಶಾಖಪಟ್ಟಣ: ಶುಭಮನ್ ಗಿಲ್ 104 ರನ್ ಗಳಿಸುವ ಮೂಲಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ! ಒಂದು ವೇಳೆ ಅವರು ವಿಫಲವಾಗಿದ್ದರೆ, ಮುಂದಿನ ಟೆಸ್ಟ್‌ಗೆ ಆಯ್ಕೆಯಾಗುತ್ತಿರಲಿಲ್ಲ! ವಿಶಾಖಪಟ್ಟಣ ಟೆಸ್ಟ್ ನಿಮಗೆ ಕಡೆಯ ಅವಕಾಶ, ಇಲ್ಲಿ ವಿಫಲವಾದರೆ ಸ್ಥಾನ ಕಳೆದುಕೊಳ್ಳುತ್ತೀರಿ ಎಂದು ತಂಡ ಆಡಳಿತ ಮಂಡಳಿ ಅವರಿಗೆ ಎಚ್ಚರಿಕೆ ನೀಡಿತ್ತೆಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಕಳೆದ 9 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 153 ರನ್ ಗಳಿಸಿ, ತೀರಾ ಕಳಪೆ ಫಾರ್ಮ್ನಲ್ಲಿದ್ದರು. ಅವರು ಶತಕ ಗಳಿಸದೇ 11 ತಿಂಗಳು ಕಳೆದಿದ್ದವು. ಅದೇ ಪ್ರತಿಭಾವಂತರ ದಂಡು ಸ್ಥಾನಕ್ಕಾಗಿ ಕಾದು ಕುಳಿತಿದೆ. ಇವನ್ನೆಲ್ಲ ಪರಿಗಣಿಸಿಯೇ ಆಡಳಿತ ಮಂಡಳಿ ಅವರಿಗೆ ಎಚ್ಚರಿಕೆ ನೀಡಿತ್ತು. ಅಂತಹ ಹೊತ್ತಿನಲ್ಲಿ ಅವರು ಶತಕ ಬಾರಿಸಿದ್ದಾರೆ.
ಸ್ಕೋರ್ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್ 396
ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್ 253
ಭಾರತ ದ್ವಿತೀಯ ಇನ್ನಿಂಗ್ಸ್
ಯಶಸ್ವಿ ಜೈಸ್ವಾಲ್ ಸಿ ರೂಟ್ ಬಿ ಆ್ಯಂಡರ್ಸನ್ 17
ರೋಹಿತ್ ಶರ್ಮ ಬಿ ಆ್ಯಂಡರ್ಸನ್ 13
ಶುಭ್‌ಮನ್ ಗಿಲ್ ಸಿ ಫೋಕ್ಸ್ ಬಿ ಬಶೀರ್ 104
ಶ್ರೇಯಸ್ ಅಯ್ಯರ್ ಸಿ ಸ್ಟೋಕ್ಸ್ ಬಿ ಹಾರ್ಟ್ಲಿ 29
ರಜತ್ ಪಾಟಿದಾರ್ ಸಿ ಫೋಕ್ಸ್ ಬಿ ಅಹ್ಮದ್ 9
ಅಕ್ಷರ್ ಪಟೇಲ್ ಎಲ್‌ಬಿಡಬ್ಲ್ಯು ಬಿ ಹಾರ್ಟ್ಲಿ 45
ಶ್ರೀಕರ್ ಭರತ್ ಸಿ ಸ್ಟೋಕ್ಸ್ ಬಿ ಅಹ್ಮದ್ 6
ಆರ್. ಅಶ್ವಿನ್ ಸಿ ಫೋಕ್ಸ್ ಬಿ ಅಹ್ಮದ್ 29
ಕುಲದೀಪ್ ಯಾದವ್ ಸಿ ಡಕೆಟ್ ಬಿ ಹಾರ್ಟ್ಲಿ 0
ಜಸ್‌ಪ್ರೀತ್ ಬುಮ್ರಾ ಸಿ ಬೇರ್‌ಸ್ಟೋ ಬಿ ಹಾರ್ಟ್ಲಿ 0
ಮುಕೇಶ್ ಕುಮಾರ್ ಔಟಾಗದೆ 0
ಇತರ: 3
ಒಟ್ಟು (ಆಲೌಟ್) 255
ವಿಕೆಟ್ ಪತನ: 1-29, 2-30, 3-111, 4-122, 5-211, 6-220, 7-228, 8-229, 9-255
ಬೌಲಿಂಗ್:
ಜೇಮ್ಸ್ ಆ್ಯಂಡರ್ಸನ್ 10-1-29-2
ಶೋಯಿಬ್ ಬಶೀರ್ 15-0-58-1
ರೇಹಾನ್ ಅಹ್ಮದ್ 24.3-5-88-3
ಜೋ ರೂಟ್ 2-1-1-0
ಟಾಮ್ ಹಾರ್ಟ್ಲಿ 27-3-77-4
ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್
ಜಾಕ್ ಕ್ರಾಲಿ ಬ್ಯಾಟಿಂಗ್ 29
ಬೆನ್ ಡಕೆಟ್ ಸಿ ಭರತ್ ಬಿ ಅಶ್ವಿನ್ 28
ರೇಹಾನ್ ಅಹ್ಮದ್ ಬ್ಯಾಟಿಂಗ್ 9
ಇತರ:
ಒಟ್ಟು (ಒಂದು ವಿಕೆಟಿಗೆ) 67
ವಿಕೆಟ್ ಪತನ: 1-50
ಬೌಲಿಂಗ್:
ಜಸ್‌ಪ್ರೀತ್ ಬುಮ್ರಾ 5-1-9-0
ಮುಕೇಶ್ ಕುಮಾರ್ 2-0-19-0
ಕುಲದೀಪ್ ಯಾದವ್ 4-0-21-0
ಆರ್. ಅಶ್ವಿನ್ 2-0-8-1
ಅಕ್ಷರ್ ಪಟೇಲ್ 1-0-10-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.