ಈ ಪದಕಕ್ಕಾಗಿ ದಶಕದಿಂದ ಕಾಯುತ್ತಿದ್ದೆ: ಅವಾರೆ
Team Udayavani, Apr 13, 2018, 6:05 AM IST
ಗೋಲ್ಡ್‌ಕೋಸ್ಟ್:”ಈ ಪದಕಕ್ಕಾಗಿ ನಾನು 10 ವರ್ಷಗಳಿಂದ ಕಾಯುತ್ತಿದ್ದೆ, ಈ ಕ್ಷಣವನ್ನು ಬಣ್ಣಿಸಲಾಗದು’ ಎಂಬುದಾಗಿ ರಾಹುಲ್ ಅವಾರೆ ಬಹಳ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.
“ನಾನು 2010 ಹಾಗೂ 2014ರ ಗೇಮ್ಸ್‌ಗಳಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲನಾಗಿದ್ದೆ. ಕೊನೆಗೂ ನನ್ನ ಕನಸು ನನಸಾಗಿದೆ. ಯಾವುದೇ ಅಭ್ಯಾಸ ನೀಡದೆ ಕುಸ್ತಿ ತಂಡವನ್ನು ಗೋಲ್ಡ್‌ಕೋಸ್ಟ್‌ಗೆ ಕಳುಹಿಸಲಾಗಿತ್ತು. ಹೀಗಾಗಿ ಈ ಸಾಧನೆ ನನ್ನ ಪಾಲಿಗೆ ಹೆಚ್ಚುವರಿ ಸಂತಸ ಕೊಟ್ಟಿದೆ. ನನ್ನ ಕುಟುಂಬದವರ ಕನಸನ್ನೂ ನನಸಾಗಿಸಿದ್ದೇನೆ…’ ಎಂದು ಕಾಮನ್ವೆಲ್ತ್ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರದ ಒಡೆಯನಾಗಿ ಮೆರೆದ ರಾಹುಲ್ ಹೇಳಿದರು.
“ಇಂದಿನ ಸ್ಪರ್ಧೆಗಳ ವೇಳೆ ನಾನು ಸ್ವಲ್ಪ ಸಮಯ ಕಾಲು ನೋವನ್ನು ಅನುಭವಿಸಿದೆ. ಆದರೀಗ ಈ ನೋವು ಮಾಯವಾಗಿದೆ. ಈ ಚಿನ್ನದ ಪದಕವನ್ನು ಗುರು ಆಗಿದ್ದ ಹರಿಶ್ಚಂದ್ರ ಬಿರಾಜಾªರ್ ಅವರಿಗೆ ಅರ್ಪಿಸುತ್ತಿದ್ದೇನೆ. ಅವರೂ ಗೇಮ್ಸ್‌ನಲ್ಲಿ ಬಂಗಾರ ಜಯಿಸಿದ್ದರು. 2011ರಲ್ಲಿ ಅವರು ಇಹಲೋಕ ತ್ಯಜಿಸಿದರು’ ಎಂಬುದಾಗಿ ರಾಹುಲ್ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.