ಎಂಟು ವರ್ಷಗಳ ಬಳಿಕ ಭಾರತದ ಸೆಮಿಫೈನಲ್ ನಂಟು
Team Udayavani, Nov 17, 2018, 6:00 AM IST
ಪ್ರೊವಿಡೆನ್ಸ್ (ಗಯಾನಾ): ಹ್ಯಾಟ್ರಿಕ್ ಗೆಲುವಿನೊಂದಿಗೆ ಭಾರತದ ವನಿತಾ ತಂಡ 2010ರ ಬಳಿಕ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ. ಗುರುವಾರ ರಾತ್ರಿಯ “ಬಿ’ ವಿಭಾಗದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗ ಐರ್ಲೆಂಡಿಗೆ 52 ರನ್ ಸೋಲುಣಿಸುವ ಮೂಲಕ ಈ ಸಾಧನೆಗೈದಿತು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಮಿಥಾಲಿ ರಾಜ್ ಅವರ ಸತತ 2ನೇ ಅರ್ಧ ಶತಕದ ನೆರವಿನಿಂದ 6 ವಿಕೆಟಿಗೆ 146 ರನ್ ಗಳಿಸಿತು. ಅನನುಭವಿ ಐರ್ಲೆಂಡ್ 8 ವಿಕೆಟಿಗೆ 98 ರನ್ನನ್ನಷ್ಟೇ ಗಳಿಸಿತು. ಇದು ಪ್ರಸಕ್ತ ಕೂಟದಲ್ಲಿ ಕೌರ್ ಪಡೆಯ ಹ್ಯಾಟ್ರಿಕ್ ಗೆಲುವಾಗಿದ್ದು, ವಿಶ್ವಕಪ್ ಇತಿಹಾಸದಲ್ಲಿ ಭಾರತ ಕಾಣುತ್ತಿರುವ 3ನೇ ಸೆಮಿಫೈನಲ್ ಆಗಿದೆ. ಐರಿಷ್ ವನಿತೆಯರು ಸತತ 3ನೇ ಸೋಲುಂಡು ಹೊರಬಿದ್ದರು.
ಭಾರತದ ಜಯದೊಂದಿಗೆ “ಬಿ’ ವಿಭಾಗದ ಉಳಿದೆರಡು ತಂಡಗಳಾದ ನ್ಯೂಜಿಲ್ಯಾಂಡ್ ಮತ್ತು ಪಾಕಿಸ್ಥಾನ ಕೂಡ ಕೂಟದಿಂದ ನಿರ್ಗಮಿಸಿದವು.
ಇಂದು ಆಸೀಸ್ ಎದುರಾಳಿ
ಶನಿವಾರ ರಾತ್ರಿ ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯವನ್ನು ಎದುರಿಸಲಿದೆ. ಈ ಎರಡೂ ತಂಡಗಳು ಅಜೇಯವಾಗಿ ನಾಕೌಟ್ ತಲುಪಿವೆ. ಇದರ ಫಲಿತಾಂಶ “ಬಿ’ ವಿಭಾಗದ ಅಗ್ರಸ್ಥಾನಿಯನ್ನು ನಿರ್ಧರಿಸಲಿದೆ.
ಭಾರತ ಮತ್ತು ಆಸ್ಟ್ರೇಲಿಯ 3 ಜಯದೊಂದಿಗೆ 6 ಅಂಕಗಳನ್ನು ಹೊಂದಿವೆ. ಆದರೆ ರನ್‌ರೇಟ್‌ನಲ್ಲಿ ಕಾಂಗರೂ ಪಡೆಯೇ ಮುಂದಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಭಾರತ ತನ್ನ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ದೌರ್ಬಲ್ಯಗಳನ್ನು ಹೊಡೆದೋಡಿಸಬೇಕಾದ ಅಗತ್ಯವಿದೆ. ದೊಡ್ಡ ಮೊತ್ತ ಗಳಿಸುವ ಮೂಲಕ ಬ್ಯಾಟಿಂಗ್‌ನಲ್ಲೂ ಸುಧಾರಣೆ ಕಾಣಬೇಕಿದೆ.
ರಾಧಾ, ದೀಪ್ತಿ ಕಡಿವಾಣ
ಐರಿಷ್ ಆರಂಭಿಕರು ಮೊದಲ 5 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿ 27 ರನ್ ಒಟ್ಟುಗೂಡಿಸಿದರು. 6ನೇ ಓವರ್ ಎಸೆಯಲು ಬಂದ ದೀಪ್ತಿ ಶರ್ಮ ತಮ್ಮ ಮೊದಲ ಎಸೆತದಲ್ಲೇ ಲೆವಿಸ್ (9) ವಿಕೆಟ್ ಹಾರಿಸಿದರು. 15ನೇ ಓವರ್ ತನಕ ಎರಡೇ ವಿಕೆಟ್ ಕಳೆದುಕೊಂಡರೂ ರನ್‌ರೇಟ್‌ನಲ್ಲಿ ಐರ್ಲೆಂಡ್ ಬಹಳ ಹಿಂದಿತ್ತು. ರಾಧಾ ಯಾದವ್ (25ಕ್ಕೆ 3), ದೀಪ್ತಿ ಶರ್ಮ (15ಕ್ಕೆ 2) ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಹರ್ಮನ್‌ಪ್ರೀತ್ ಕೌರ್ ಮತ್ತು ಪೂನಂ ಯಾದವ್ 4 ಓವರ್‌ಗಳ ಪೂರ್ತಿ ಕೋಟಾದಲ್ಲಿ ಬರೀ 10 ಹಾಗೂ 14 ರನ್ ನೀಡಿ ಒಂದೊಂದು ವಿಕೆಟ್ ಕಿತ್ತರು.
ಐರ್ಲೆಂಡ್ ಸರದಿಯಲ್ಲಿ ಎರಡಂಕೆಯ ಸ್ಕೋರ್ ದಾಖಲಿಸಿದವರು ಶಿಲ್ಲಿಂಗ್ಟನ್ (23) ಮತ್ತು ಜಾಯ್ಸ (33) ಮಾತ್ರ.
ಸಂಕ್ಷಿಪ್ತ ಸ್ಕೋರ್: ಭಾರತ-6 ವಿಕೆಟಿಗೆ 145 (ಮಿಥಾಲಿ 51, ಮಂಧನಾ 33, ಜೆಮಿಮಾ 18, ಗಾರ್ತ್ 22ಕ್ಕೆ 2). ಐರ್ಲೆಂಡ್-8 ವಿಕೆಟಿಗೆ 93 (ಜಾಯ್ಸ 33, ಶಿಲ್ಲಿಂಗ್ಟನ್ 23, ರಾಧಾ 25ಕ್ಕೆ 3, ದೀಪ್ತಿ 15ಕ್ಕೆ 2). ಪಂದ್ಯಶ್ರೇಷ್ಠ: ಮಿಥಾಲಿ ರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.