2021ರ ಐಪಿಎಲ್ ಹರಾಜು ರದ್ದು?
Team Udayavani, Aug 10, 2020, 6:01 PM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮುಂದಿನ ವರ್ಷದ ಐಪಿಎಲ್‌ಗೆಂದು ಯೋಜಿಸಲಾಗಿದ್ದ “ಮೆಗಾ ಹರಾಜು’ ಪ್ರಕ್ರಿಯೆಯನ್ನು ಬಿಸಿಸಿಐ ಬಹುತೇಕ ರದ್ದುಗೊಳಿಸಲಿದೆ ಎಂದು ತಿಳಿದು ಬಂದಿದೆ. ಎರಡು ಐಪಿಎಲ್ ಪಂದ್ಯಾವಳಿಗಳ ನಡುವೆ ಕೆಲವೇ ತಿಂಗಳ ಅಂತರ ಇರುವುದೇ ಇದಕ್ಕೆ ಮುಖ್ಯ ಕಾರಣ.
2020ರ ಐಪಿಎಲ್ ಸೆ. 19ರಿಂದ ಮೊದಲ್ಗೊಂಡು ನ. 10ರ ತನಕ ಯುಎಇಯಲ್ಲಿ ಸಾಗಲಿದೆ. ಎಲ್ಲವೂ ಯೋಜನೆಯಂತೆ ನಡೆದರೆ 2021ರ ಐಪಿಎಲ್ ಎಂದಿನಂತೆ ಮಾರ್ಚ್ ತಿಂಗಳಲ್ಲಿ ಆರಂಭವಾಗಬೇಕಿದೆ. ಆಗ ಎರಡು ಐಪಿಎಲ್ ಕೂಟಗಳ ನಡುವೆ ನಾಲ್ಕು ತಿಂಗಳ ಅಂತರವಷ್ಟೇ ಇರುವುದರಿಂದ “ಮೆಗಾ ಆಕ್ಷನ್’ಗೆ ಸಿದ್ಧತೆ ಸಾಲದು ಎಂಬುದಾಗಿ ಬಿಸಿಸಿಐ ತೀರ್ಮಾನಿಸಿದೆ ಎನ್ನಲಾಗಿದೆ. ಆಗ ಫ್ರಾಂಚೈಸಿಗಳು ಈಗಿನ ಆಟಗಾರರನ್ನೇ ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯವಾಗುತ್ತದೆ.
ಅಲ್ಲದೇ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಆಗಮಿಸಿ ಎಲ್ಲ ಮೂರು ಮಾದರಿಗಳ ಸರಣಿಯನ್ನು ಆಡುವ ಕಾರ್ಯಕ್ರಮವಿದೆ. ಇದೊಂದು ಸುದೀರ್ಘ ಸರಣಿ. ಇದರಿಂದ ಐಪಿಎಲ್ ಹರಾಜಿಗೆ ಸೂಕ್ತ ಯೋಜನೆಗಳನ್ನು ರೂಪಿಸಲು ಸಾಧ್ಯವಾಗದು ಎಂಬುದು ಇನ್ನೊಂದು ಕಾರಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
T20; ಸಂಜು, ತಿಲಕ್ ಶತಕ ವೈಭವ: ದಕ್ಷಿಣ ಆಫ್ರಿಕಾದಲ್ಲಿ ಭಾರತ ಸರಣಿ ವಿಕ್ರಮ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.