2022ರ ಕಾಮನ್‌ವೆಲ್ತ್ ಶೂಟಿಂಗ್ ಭಾರತದಲ್ಲಿ
Team Udayavani, Jan 4, 2020, 11:59 PM IST
ಹೊಸದಿಲ್ಲಿ: 2022ರಲ್ಲಿ ಭಾರತದಲ್ಲೇ ಕಾಮನ್‌ವೆಲ್ತ್ ಶೂಟಿಂಗ್ ಕೂಟ ನಡೆಸಲು ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ (ಐಒಎ) ಕೇಂದ್ರ ಸರಕಾರ ಅನುಮತಿ ನೀಡಿದೆ. ಹಾಗೆಯೇ ಬಿಲ್ಗಾರಿಕೆ ಕೂಟ ನಡೆಸಲೂ ಅವಕಾಶ ನೀಡಿದೆ. ಇಲ್ಲಿ ಗೆದ್ದ ಪದಕಗಳು 2022ರ ಕಾಮನ್‌ವೆಲ್ತ್ ಗೇಮ್ಸ್ ಪದಕಗಳ ಪಟ್ಟಿಗೆ ಸೇರ್ಪಡೆಗೊಳ್ಳುತ್ತವೆ ಎನ್ನುವುದು ಗಮನಾರ್ಹ.
ಕಾಮನ್‌ವೆಲ್ತ್ ಶೂಟಿಂಗ್ ಕೂಟದ ಖರ್ಚನ್ನು ರಾಷ್ಟ್ರೀಯ ರೈಫಲ್ ಒಕ್ಕೂಟ (ಎನ್‌ಆರ್‌ಎಐ) ಹಾಗೂ ಬಿಲ್ಗಾರಿಕೆ ಕೂಟದ ಖರ್ಚನ್ನು ಕೇಂದ್ರ ಸರಕಾರ ಭರಿಸಲಿದೆ.
2022ರ ಕಾಮನ್‌ವೆಲ್ತ್ ಗೇಮ್ಸ್ ಬ್ರಿಟನ್‌ನಲ್ಲಿ ನಡೆಯಲಿದೆ. ಅಲ್ಲಿನ ಸ್ಪರ್ಧೆಯಿಂದ ಶೂಟಿಂಗ್ ಮತ್ತು ಬಿಲ್ಗಾರಿಕೆಯನ್ನು ಕೈಬಿಡಲಾಗಿತ್ತು. ಇದರ ವಿರುದ್ಧ ಭಾರತ ಒಲಿಂಪಿಕ್ಸ್ ಸಂಸ್ಥೆ ಮುಖ್ಯಸ್ಥ ನರೇಂದ್ರ ಬಾತ್ರಾ ಪ್ರತಿಭಟನೆ ನಡೆಸಿದ್ದರು. 2022ರ ಕಾಮನ್‌ವೆಲ್ತ್ ಕೂಟವನ್ನೇ ಬಹಿಷ್ಕರಿಸುವ ಮಾತುಗಳನ್ನಾಡಿದ್ದರು. ಆದ್ದರಿಂದಲೇ ಎರಡೂ ತಂಡಗಳ ನಡುವೆ ಸಮನ್ವಯಕ್ಕೆ ಯತ್ನಿಸಲಾಗಿತ್ತು. ಸ್ವತಃ ಕಾಮನ್‌ವೆಲ್ತ್ ಸಂಘಟನೆಯ ಮುಖ್ಯಸ್ಥರು ಭಾರತಕ್ಕೆ ಬಂದು ಮಾತುಕತೆ ನಡೆಸಿದ್ದರು. ಇದಕ್ಕೀಗ ಪರಿಹಾರ ಲಭಿಸಿದೆ. ಐಒಎ ಬಹಿಷ್ಕಾರ ನಿರ್ಧಾರ ಕೈಬಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಆಸ್ಟ್ರೇಲಿಯ ಸೋಲಿಗಿಂತ ತವರಿನ ವೈಟ್‌ವಾಶ್ ಆಘಾತಕಾರಿ: ಯುವಿ
ICC Champions Trophy: ಅಫ್ಘಾನಿಸ್ಥಾನ ವಿರುದ್ಧದ ಪಂದ್ಯಕ್ಕೆ ಇಂಗ್ಲೆಂಡ್ ಬಹಿಷ್ಕಾರ?
Jasprit Bumrah: ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ ಬುಮ್ರಾ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Budget Allocation: ಇನ್ನೆರಡು ತಿಂಗಳಲ್ಲಿ ಶೇ. 45 ಪ್ರಗತಿ ಸಾಧ್ಯವೇ?: ಆರ್.ಅಶೋಕ್
Politics Discussion: ದಿಲ್ಲಿಯಲ್ಲಿ ಜೆಡಿಎಸ್ ಶಾಸಕರು-ಡಿ.ಕೆ.ಶಿವಕುಮಾರ್ ಮುಖಾಮುಖಿ
HMP Virus: ಎಚ್‌ಎಂಪಿ ವೈರಸ್ ಭೀತಿ ಬೇಡ, ಪರೀಕ್ಷೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕಿತ್ತುಕೊಂಡಿದ್ದಲ್ಲ, ಪಕ್ಷ ಕೊಟ್ಟಿದ್ದು: ಡಿ.ಕೆ.ಸುರೇಶ್
Tumakuru: ಬಾಲ ಹಿಡಿದು ಚಿರತೆ ಸೆರೆ ಹಿಡಿದ ಯುವಕ; ಅರಣ್ಯ ಸಿಬ್ಬಂದಿ ಶಾಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.