![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jan 27, 2018, 11:52 AM IST
ಜೊಹಾನ್ಸ್‌ಬರ್ಗ್: “ಅಪಾಯ ಕಾರಿ ಪಿಚ್’ ಮೇಲೆ ದ್ವಿತೀಯ ಸರದಿಯಲ್ಲಿ ಉತ್ತಮ ಮಟ್ಟದ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ, ಜೊಹಾನ್ಸ್ ಬರ್ಗ್ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ 241 ರನ್ನುಗಳ ಗೆಲುವಿನ ಗುರಿ ನೀಡಿದೆ. ಇದನ್ನು ಬೆನ್ನಟ್ಟಿಕೊಂಡು ಹೋಗಿರುವ ಡು ಪ್ಲೆಸಿಸ್ ಪಡೆ 3ನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 17 ರನ್ ಗಳಿಸಿದೆ. ಪಂದ್ಯ ಕುತೂಹಲ ಘಟ್ಟ ತಲುಪಿದ್ದು, ಟೀಮ್ ಇಂಡಿಯಾ ವಿಜ ಯೋತ್ಸವ ಆಚರಿಸೀತೇ ಎಂಬ ಕುತೂಹಲ ತೀವ್ರಗೊಂಡಿದೆ. ಪಂದ್ಯವಿನ್ನೂ 2 ದಿನ ಗಳನ್ನು ಕಾಣಲಿಕ್ಕಿದೆ.
ಪಂದ್ಯ ಅನುಮಾನ?
ವಾಂಡರರ್ ಪಿಚ್ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸುರಕ್ಷಿತವಲ್ಲ ಎಂದು ಅಭಿ ಪ್ರಾಯಕ್ಕೆ ಬರಲಾಗಿದ್ದು, ಕೊನೆಯ ಹಂತದಲ್ಲಿ ಬುಮ್ರಾ ಎಸೆತವೊಂದು ಡೀನ್ ಎಲ್ಗರ್ ಹೆಲ್ಮೆಟ್‌ಗೆ ಬಂದಪ್ಪಳಿಸಿದ ಬಳಿಕ ಆಟಗಾರರೆಲ್ಲ ಮೈದಾನ ತೊರೆದ ಘಟನೆ ಸಂಭವಿಸಿತು. ಅಷ್ಟರಲ್ಲಿ ಮಳೆ ಆರಂಭವಾದ್ದರಿಂದ ದಿನದಾಟವನ್ನು ಕೊನೆ ಗೊಳಿಸಲಾಯಿತು. ವಿಪರೀತ ಬೌನ್ಸ್ ಪಡೆಯುತ್ತಿರುವ ವಾಂಡರರ್ ಟ್ರ್ಯಾಕ್‌ನಲ್ಲಿ ಬ್ಯಾಟಿಂಗ್ ನಡೆಸುವುದು ಅಪಾಯ ಕಾರಿಯಾಗಿ ಪರಿಣಮಿಸಿದ್ದರಿಂದ ಈ ಪಂದ್ಯ ಮುಂದುವರಿಯುವುದು ಅನುಮಾನ ಎಂದೂ ಹೇಳಲಾಗುತ್ತಿದೆ.
ಭಾರತದ ದ್ವಿತೀಯ ಸರದಿಯಲ್ಲಿ ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಎಚ್ಚರಿಕೆಯ ಬ್ಯಾಟಿಂಗ್ ಮೂಲಕ 40ರ ಗಡಿ ದಾಟಿದರು. ಭುವನೇಶ್ವರ್ ಮತ್ತೂಮ್ಮೆ ಅನುಭವಿ ಬ್ಯಾಟ್ಸ್‌ಮನ್‌ನಂತೆ ಆಡಿ 76 ಎಸೆತ ಎದುರಿಸಿ 33 ರನ್ ಹೊಡೆದರು (2 ಬೌಂಡರಿ). ಮೊಹಮ್ಮದ್ ಶಮಿ ಅವರದು ಆಕ್ರಮಣಕಾರಿ ಆಟವಾಗಿತ್ತು. ಅವರು 28 ಎಸೆತಗಳಿಂದ 27 ರನ್ನುಗಳ ಕೊಡುಗೆ ಸಲ್ಲಿಸಿದರು (2 ಸಿಕ್ಸರ್, 1 ಬೌಂಡರಿ). ಮೊದಲ ಸರದಿಯಲ್ಲಿ ವಿಫಲರಾಗಿದ್ದ ರಹಾನೆ ಈ ಬಾರಿ ತಂಡದ ರಕ್ಷಣೆಗೆ ನಿಂತು 68 ಎಸೆತಗಳಿಂದ ಸರ್ವಾಧಿಕ 48 ರನ್ ಬಾರಿಸಿದರು. ಇದರಲ್ಲಿ 6 ಬೌಂಡರಿ ಸೇರಿತ್ತು. ಕೊಹ್ಲಿ 79 ಎಸೆತ ಎದುರಿಸಿ 41 ರನ್ ಮಾಡಿದರು (6 ಬೌಂಡರಿ).
ಮೊದಲ ಓವರಿನಲ್ಲೇ ಪತನ
ಒಂದಕ್ಕೆ 49 ರನ್ ಮಾಡಿದ ಲ್ಲಿಂದ ಶುಕ್ರವಾರದ ಆಟ ಮುಂದುವರಿಸಿದ ಭಾರತ, ಎರಡೇ ರನ್ ಸೇರಿಸುವಷ್ಟರಲ್ಲಿ ರಾಹುಲ್ ಅವರನ್ನು ಕಳೆದು ಕೊಂಡಿತು. ದಿನದ ಮೊದಲ ಓವರಿನ ಅಂತಿಮ ಎಸೆತದಲ್ಲಿ ಫಿಲಾಂಡರ್ ಈ ವಿಕೆಟ್ ಹಾರಿಸಿದರು. ರಾಹುಲ್ ಗಳಿಕೆ ಹಿಂದಿನ ದಿನದಷ್ಟೇ ಇತ್ತು (16). ಅನಂತರ ಬಂದ ಪೂಜಾರ ಕೂಡ ಕ್ರೀಸ್ ಆಕ್ರಮಿಸಿಕೊಳ್ಳಲು ವಿಫಲರಾದರು. ಕೇವಲ ಒಂದು ರನ್ ಮಾಡಿ ಫಿಲಾಂಡರ್ ಬಲೆಗೆ ಬಿದ್ದರು.
4ನೇ ವಿಕೆಟಿಗೆ ಜತೆಗೂಡಿದ ವಿಜಯ್ ಮತ್ತು ಕೊಹ್ಲಿ ಈ ಕುಸಿತಕ್ಕೆ ತಡೆಯೊಡ್ಡು ವಲ್ಲಿ ಸಾಮಾನ್ಯ ಯಶಸ್ಸು ಕಂಡರು. ಇನ್ನೇನು ಲಂಚ್‌ಗೆ ತೆರಳಬೇಕೆನ್ನುವಷ್ಟರಲ್ಲಿ ಕ್ರೀಸ್ ಆಕ್ರಮಿಸಿಕೊಂಡಿದ್ದ ವಿಜಯ್ ಅವರನ್ನು ರಬಾಡ ಬೌಲ್ಡ್ ಮಾಡಿದರು. ವಿಜಯ್ ಗಳಿಕೆ 25 ರನ್. 127 ಎಸೆತ ಎದುರಿಸಿದ ಅವರು ಒಂದೇ ಬೌಂಡರಿ ಹೊಡೆದಿದ್ದರು. ಭೋಜನ ವಿರಾಮದ ಬಳಿಕ ಕೊಹ್ಲಿ-ರಹಾನೆ ತಂಡದ ರಕ್ಷಣೆಯಲ್ಲಿ ತೊಡಗಿದರು.
ಸ್ಕೋರ್‌ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್ 187
ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ 194
ಭಾರತ ದ್ವಿತೀಯ ಇನ್ನಿಂಗ್ಸ್
ಮುರಳಿ ವಿಜಯ್ ಬಿ ರಬಾಡ 25
ಪಾರ್ಥಿವ್ ಪಟೇಲ್ ಸಿ ಮಾರ್ಕ್‌ರಮ್ ಬಿ ಫಿಲಾಂಡರ್ 16
ಕೆ.ಎಲ್. ರಾಹುಲ್ ಸಿ ಡು ಪ್ಲೆಸಿಸ್ ಬಿ ಫಿಲಾಂಡರ್ 16
ಚೇತೇಶ್ವರ್ ಪೂಜಾರ ಸಿ ಡು ಪ್ಲೆಸಿಸ್ ಬಿ ಮಾರ್ಕೆಲ್ 1
ವಿರಾಟ್ ಕೊಹ್ಲಿ ಬಿ ರಬಾಡ 41
ಅಜಿಂಕ್ಯ ರಹಾನೆ ಸಿ ಡಿ ಕಾಕ್ ಬಿ ಮಾರ್ಕೆಲ್ 48
ಹಾರ್ದಿಕ್ ಪಾಂಡ್ಯ ಸಿ ಮತ್ತು ಬಿ ರಬಾಡ 4
ಭುವನೇಶ್ವರ್ ಕುಮಾರ್ ಸಿ ಡಿಕಾಕ್ ಬಿ ಮಾರ್ಕೆಲ್ 33
ಮೊಹಮ್ಮದ್ ಶಮಿ ಸಿ ಡಿ ವಿಲಿಯರ್ ಬಿ ಎನ್‌ಗಿಡಿ 27
ಇಶಾಂತ್ ಶರ್ಮ ಔಟಾಗದೆ 7
ಜಸ್‌ಪ್ರೀತ್ ಬುಮ್ರಾ ಸಿ ರಬಾಡ ಬಿ ಫಿಲಾಂಡರ್ 0
ಇತರ 29
ಒಟ್ಟು (ಆಲೌಟ್) 247
ವಿಕೆಟ್ ಪತನ: 1-17, 2-51, 3-57, 4-100, 5-134, 6-148, 7-203, 8-238, 9-240
ಬೌಲಿಂಗ್:
ವೆರ್ನನ್ ಫಿಲಾಂಡರ್ 21.1-5-61-3
ಕಾಗಿಸೊ ರಬಾಡ 23-5-69-3
ಮಾರ್ನೆ ಮಾರ್ಕೆಲ್ 21-6-47-3
ಲುಂಗಿಸಾನಿ ಎನ್‌ಗಿಡಿ 12-2-38-1
ಆ್ಯಂಡಿಲ್ ಫೆಲುಕ್ವಾಯೊ 3-0-15-0
ದಕ್ಷಿಣ ಆಫ್ರಿಕಾ ದ್ವಿತೀಯ ಇನ್ನಿಂಗ್ಸ್ (ಗುರಿ: 241 ರನ್)
ಐಡನ್ ಮಾರ್ಕ್‌ರಮ್ ಸಿ ಪಟೇಲ್ ಬಿ ಶಮಿ 4
ಡೀನ್ ಎಲ್ಗರ್ ಬ್ಯಾಟಿಂಗ್ 11
ಹಾಶಿಮ್ ಆಮ್ಲ ಬ್ಯಾಟಿಂಗ್ 2
ಇತರ 0
ಒಟ್ಟು (ಒಂದು ವಿಕೆಟಿಗೆ) 17
ವಿಕೆಟ್ ಪತನ: 1-5.
ಬೌಲಿಂಗ್:
ಭುವನೇಶ್ವರ್ ಕುಮಾರ್ 4-0-8-0
ಮೊಹಮ್ಮದ್ ಶಮಿ 4-1-7-1
ಜಸ್‌ಪ್ರೀತ್ ಬುಮ್ರಾ 0.3-0-2-0
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.