England Lions ವಿರುದ್ಧ 2ನೇ ಚತುರ್ದಿನ ಪಂದ್ಯ: ‘ಎ’ ತಂಡಕ್ಕೆ ರಿಂಕು
Team Udayavani, Jan 24, 2024, 5:40 AM IST
ಹೊಸದಿಲ್ಲಿ: ಸೀಮಿತ ಓವರ್ಗಳ ಸ್ಪೆಷಲಿಸ್ಟ್ ಆಟಗಾರ ರಿಂಕು ಸಿಂಗ್ ಅವರನ್ನು ಭಾರತ “ಎ’ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರವಾಸಿ ಇಂಗ್ಲೆಂಡ್ ಲಯನ್ಸ್ ವಿರುದ್ಧ ಆಡಲಾಗುವ 2ನೇ ಚತುರ್ದಿನ ಪಂದ್ಯಕ್ಕಾಗಿ ಪ್ರಕಟಿಸಲಾದ ತಂಡದಲ್ಲಿ ರಿಂಕು ಕಾಣಿಸಿಕೊಂಡಿದ್ದಾರೆ.
ಬಿಗ್ ಹಿಟ್ಟರ್ ಖ್ಯಾತಿಯ ಎಡಗೈ ಬ್ಯಾಟರ್ ರಿಂಕು ಸಿಂಗ್ ಟಿ20 ಸ್ಪೆಷಲಿಸ್ಟ್ ಆಟಗಾರ. ಕಳೆದ ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಏಕದಿನದಲ್ಲೂ ಅವಕಾಶ ಪಡೆದರು. 2 ಪಂದ್ಯಗಳಲ್ಲಿ ಕ್ರಮವಾಗಿ 17 ಮತ್ತು 38 ರನ್ ಮಾಡಿದರು.
ಈ ಪಂದ್ಯ ಬುಧವಾರ ಅಹ್ಮದಾಬಾದ್ನಲ್ಲಿ ಆರಂಭ ವಾಗಲಿದೆ. ಮೊದಲ ಚತುರ್ದಿನ ಪಂದ್ಯ ಡ್ರಾಗೊಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.