ಇಂದು 2ನೇ ಟಿ20: ಐಪಿಎಲ್ ಸ್ಟಾರ್‌ಗಳಿಗೆ ಬ್ಯಾಟಿಂಗ್ ಸವಾಲು
ಪಾಂಡ್ಯ ಪಡೆಯ ಮೇಲೆ ಒತ್ತಡ, ಹೊಸ ಹುರುಪಿನಲ್ಲಿ ವಿಂಡೀಸ್
Team Udayavani, Aug 6, 2023, 6:30 AM IST
ಪ್ರೊವಿಡೆನ್ಸ್ (ಗಯಾನಾ): ಐಪಿಎಲ್ ಸ್ಟಾರ್ ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾಕ್ಕೆ ರವಿವಾರ ರಾತ್ರಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತೂಂದು ಅಗ್ನಿಪರೀಕ್ಷೆ ಎದುರಾಗಲಿದೆ. ಗುರುವಾರದ ಮೊದಲ ಮುಖಾ ಮುಖಿಯನ್ನು ಕೇವಲ 4 ರನ್ನಿನಿಂದ ಕಳೆದುಕೊಂಡ ಹಾರ್ದಿಕ್ ಪಾಂಡ್ಯ ಪಡೆ ಇಲ್ಲಿ ಬ್ಯಾಟಿಂಗ್ ಸುಧಾರಣೆಗೆ ಒತ್ತು ನೀಡಿ ಹೋರಾಟವನ್ನು ಸಂಘ ಟಿಸಬೇಕಿದೆ. ಇನ್ನೊಂದೆಡೆ ವಿಂಡೀಸ್ ಗೆಲುವಿನ ಉಮೇದಿನಲ್ಲಿದ್ದು, ದ್ವಿತೀಯ ಪಂದ್ಯಕ್ಕೂ ಇದನ್ನು ವಿಸ್ತರಿಸುವ ಯೋಜನೆಯಲ್ಲಿದೆ.
ಗೆಲುವಿನ ಫಲಿತಾಂಶ ಮತ್ತೆ ವೆಸ್ಟ್ ಇಂಡೀಸ್ ಪರವಾದರೆ ಸರಣಿಗೆ ಮರಳುವುದು ಟೀಮ್ ಇಂಡಿಯಾಕ್ಕೆ ಸುಲಭವಲ್ಲ. ಆಗ ಮುಂದಿನ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಒತ್ತಡ ಎದುರಾಗುತ್ತದೆ. ಹೀಗಾಗಿ ರವಿವಾರದ ಪಂದ್ಯವನ್ನು ಗೆದ್ದು ತಲೆಭಾರ ಇಳಿಸಿಕೊಳ್ಳುವುದು ಒಳ್ಳೆಯದು.
ಇಲ್ಲಿಯೇ ನಡೆಯಲಿದೆ ವಿಶ್ವಕಪ್
ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀ ಸನ್ನು 149ಕ್ಕೆ ಹಿಡಿದು ನಿಲ್ಲಿಸಿದಾಗ ಭಾರತ ಗೆಲ್ಲಬಹುದೆಂದೇ ಭಾವಿಸಲಾಗಿತ್ತು. ಆದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೈಕೊಟ್ಟಿತು. ಪವರ್ ಪ್ಲೇ ಮತ್ತು ಡೆತ್ ಓವರ್‌ಗಳೆರಡರಲ್ಲೂ ನಿರೀಕ್ಷಿತ ರನ್ ಬರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮ ಹೊರತುಪಡಿಸಿದರೆ ಉಳಿದವರಿಂದ ದೊಡ್ಡ ಮೊತ್ತ ಸಂದಾಯವಾಗಲಿಲ್ಲ. 3 ಸಿಕ್ಸರ್ ಸಿಡಿಸಿ ಮಿಂಚಿದ ಎಡಗೈ ಬ್ಯಾಟರ್ ತಿಲಕ್ ಪಾಲಿಗೆ ಇದು ಚೊಚ್ಚಲ ಟಿ20 ಪಂದ್ಯ ಎಂಬುದನ್ನು ಮರೆಯುವಂತಿಲ್ಲ.
ಇಶಾನ್ ಕಿಶನ್, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ ಕ್ರೀಸ್ ಆಕ್ರಮಿಸಿಕೊಳ್ಳುವ ತುರ್ತು ಅಗತ್ಯವಿದೆ. ಇವರೆಲ್ಲರೂ ಒಂದೊಳ್ಳೆ ಬ್ಯಾಟಿಂಗ್ ಪ್ರದರ್ಶನ ನೀಡಿ ಮುಂದಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಹೆಚ್ಚಿನ ಆತ್ಮವಿಶ್ವಾಸ ಸಂಪಾದಿಸಬಹುದು. ಹಾಗೆಯೇ ಮುಂಬರುವ ಏಕದಿನ ವಿಶ್ವಕಪ್ ಪಂದ್ಯಾವಳಿಗೂ ಆಯ್ಕೆ ಸುಗಮಗೊಳ್ಳಲಿದೆ.
ಮುಂದಿನ ವರ್ಷದ ಟಿ20 ವಿಶ್ವಕಪ್ ಪಂದ್ಯಾಳಿಯ ದೃಷ್ಟಿಯಿಂದಲೂ ಈ ಸರಣಿ ಮಹತ್ವದ್ದಾಗಿದೆ. 2024ರ ವಿಶ್ವಕಪ್ ನಡೆಯುವುದೇ ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ಎಂಬುದನ್ನು ಮರೆಯುವಂತಿಲ್ಲ.
ನಿಂತು ಆಡುವವರು ಬೇಕು
ಭಾರತ ತಂಡ ಟಿ20 ಕ್ರಿಕೆಟಿಗೆ ಹೇಳಿ ಮಾಡಿಸಿದಂತಿದೆ ಎಂಬುದನ್ನು ಒಪ್ಪಲೇ ಬೇಕು. ಆದರೆ ಒಬ್ಬರಾದರೂ ನಿಂತು ಆಡುವವರ ಅಗತ್ಯವಿದೆ. ಇಲ್ಲಿ ಎಲ್ಲರೂ ಮುನ್ನುಗ್ಗಿ ಬಾರಿಸುವವರೇ ಆಗಿದ್ದಾರೆ. ಮೊದಲ ಪಂದ್ಯವನ್ನೇ ಗಮನಿಸಿ, ಡೆತ್ ಓವರ್‌ಗಳಲ್ಲಿ ಭಾರತ 5 ವಿಕೆಟ್‌ಗಳನ್ನು ಕಳೆದುಕೊಂಡು ಪೇಚಾಡಿತು. 15 ಓವರ್ ಮುಕ್ತಾಯಕ್ಕೆ 4ಕ್ಕೆ 113 ರನ್ ಮಾಡಿದ್ದ ಭಾರತಕ್ಕೆ ಗೆಲುವು ಅಸಾಧ್ಯವಾದುದೇನೂ ಆಗಿರಲಿಲ್ಲ. ಆದರೆ ಮುಂದಿನ 5 ಓವರ್‌ಗಳಲ್ಲಿ 5 ವಿಕೆಟ್ ಹಾರಿ ಹೋಯಿತು. ಪಾಂಡ್ಯ ಮತ್ತು ಸ್ಯಾಮ್ಸನ್ ಒಂದೇ ಓವರ್‌ನಲ್ಲಿ ಔಟಾಗಿ ತೆರಳಿದ್ದೇ ಪಂದ್ಯದ ಟರ್ನಿಂಗ್ ಪಾಯಿಂಟ್ ಎನಿಸಿತು. ಕೊನೆಯ ಓವರ್‌ನಲ್ಲಿ ಮತ್ತೆರಡು ವಿಕೆಟ್ ಬಿತ್ತು.
ಅಂತಿಮ ಓವರ್‌ನಲ್ಲಿ 10 ರನ್ ತೆಗೆಯುವುದು, ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವುದು ಈಗಿನ ಹೊಡಿಬಡಿ ಜಮಾನಾದಲ್ಲಿ ದೊಡ್ಡ ಸವಾಲೇ ಅಲ್ಲ. ಆದರೆ ಕೊನೆಯಲ್ಲಿ ಒಬ್ಬರಾದರೂ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಕ್ರೀಸ್‌ನಲ್ಲಿರಬೇಕು ಎಂಬ ಪಾಠವನ್ನು ಈ ಪಂದ್ಯ ಭಾರತಕ್ಕೆ ಕಲಿಸಿ ಕೊಟ್ಟಿದೆ.
ವೆಸ್ಟ್ ಇಂಡೀಸ್ ಆರಂಭ ಕೂಡ ಅಬ್ಬರದಿಂದ ಕೂಡಿರಲಿಲ್ಲ. ನಡುವಲ್ಲಿ ನಿಕೋಲಸ್ ಪೂರಣ್ ಮತ್ತು ನಾಯಕ ರೋವ¾ನ್ ಪೊವೆಲ್ ನಿಂತು ಆಡಿದ ಪರಿಣಾಮ ವಿಂಡೀಸ್ ಸ್ಕೋರ್‌ಬೋರ್ಡ್ ಬೆಳೆಯಿತು. ಹೆಟ್‌ಮೈರ್ ಸಿಡಿದು ನಿಂತಿದ್ದರೆ ಇನ್ನಷ್ಟು ದೊಡ್ಡ ಮೊತ್ತ ದಾಖಲಾಗುತ್ತಿತ್ತು.
ಅನನುಭವಿ ಸ್ಟ್ರೈಕ್ ಬೌಲರ್
ಭಾರತದ ಒಟ್ಟಾರೆ ಬೌಲಿಂಗ್ ಓಕೆ. ಆದರೆ ಸ್ಟ್ರೈಕ್ ಬೌಲರ್ ತೀರಾ ಅನನು ಭವಿಗಳು. ಅರ್ಷದೀಪ್ ಅವರದು “ವರ್ಕ್ ಇನ್ ಪ್ರೋಗ್ರೆಸ್’ ಸ್ಥಿತಿ. ಮುಕೇಶ್ ಕುಮಾರ್ ಪದಾರ್ಪಣೆ ಮಾಡಿ ದ್ದಷ್ಟೇ. ಗ್ರಹಚಾರವೆಂದರೆ, ಇವರಿಗೆ ಅಂತಿಮ ಎಸೆತದಲ್ಲಿ ಸಿಕ್ಸರ್ ಬಾರಿಸಬೇಕಾದ ಸನ್ನಿವೇಶ ಎದುರಾ ದದ್ದು! ಆವೇಶ್ ಖಾನ್, ಉಮ್ರಾನ್ ಮಲಿಕ್ ಭಾರೀ ಅಪಾಯಕಾರಿಗಳೇನಲ್ಲ.
ವೇಗಕ್ಕಿಂತ ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗೇ ಹೆಚ್ಚು ಘಾತಕ. ಅದರಲ್ಲೂ ಕುಲದೀಪ್ ಅವರ ಚೈನಾಮನ್ ಎಸೆತಗಳು ಕೆರಿಬಿಯನ್ನರ ಪಾಲಿಗೆ ಕಗ್ಗಂಟಾಗುತ್ತಲೇ ಇದೆ. ಚಹಲ್ ತಮ್ಮ ಮೊದಲ ಓವರ್‌ನಲ್ಲೇ ವಿಂಡೀಸ್ ಆರಂಭಿಕರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದ್ದರು. ಇವರೊಂದಿಗೆ ಅಕ್ಷರ್ ಪಟೇಲ್ ಕೂಡ ಅಪಾಯಕಾರಿಯಾಗಿ ಗೋಚರಿಸಿದರೆ ವಿಂಡೀಸ್ ಬ್ಯಾಟಿಂಗ್‌ಗೆ ಕಡಿವಾಣ ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
World Test Championship: ದಕ್ಷಿಣ ಆಫ್ರಿಕಾ ಫೈನಲ್ ಪ್ರವೇಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri; ಜಾತ್ರೋತ್ಸವದ ವೇಳೆ ಗುಂಪು ಸಂಘರ್ಷ: ಕಟ್ಟೆಮಾಡು ಗ್ರಾಮದಲ್ಲಿ ನಿಷೇಧಾಜ್ಞೆ
Udupi: ಗೀತಾರ್ಥ ಚಿಂತನೆ-140: ಮಕ್ಕಳಲ್ಲಿ “ಇಗೋ’ ಏರಿಕೆ, ಪಾಲಕರಲ್ಲಿ ಗೌರವ ಇಳಿಕೆ
Kasaragod; ಬಸ್-ಕಾರು ಢಿಕ್ಕಿ: ಇಬ್ಬರ ಸಾವು
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.